ನೂಪುರ್, ಅಮೀರ್ ಮತ್ತು ನಟಿ ಸುಶ್ಮಿತಾ ಸೇನ್ ಸೇರಿದಂತೆ ಹಲವಾರು ನಟರ ವೈಯಕ್ತಿಕ ತರಬೇತುದಾರರಾಗಿದ್ದರು. ಅಷ್ಟೆ ಅಲ್ಲದೆ ಫಿಟ್ನೆಸ್ ನಲ್ಲೂ ಫೈಟಿಂಗ್ನಲ್ಲೂ ಪಂಟರ್ ಅಮೀರ್ ಅಳಿಯ 2014ರಲ್ಲಿ ತೈವಾನ್ 70.3 ಹಾಫ್ ಐರನ್ಮ್ಯಾನ್ ಟ್ರೈಯಥ್ಲಾನ್ನಲ್ಲಿ ಭಾಗವಹಿಸಿದ್ದರು.
ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಬಹುಕಾಲದ ಗೆಳೆಯ ನೂಪುರ್ ಶಿಖರೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಹಜವಾಗೆ ಅಮೀರ್ ಮಗಳು ಮದುವೆ ಆಗ್ತಿರೋ ಹುಡುಗ ಯಾರು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಇರಾ ಖಾನ್ ಕೈ ಹಿಡಿಯುತ್ತಿರುವ ನೂಪುರ್ ಶಿಖರೆ ಪುಣೆ ಮೂಲದ ಕ್ರೀಡಾಪಟು ಮತ್ತು ಫಿಟ್ನೆಸ್ ತರಬೇತುದಾರ.
1985ರಲ್ಲಿ ರಾಜೇಂದ್ರ ಮತ್ತು ಪ್ರೀತಮ್ ಶಿಖರೆ ದಂಪತಿಗೆ ಜನಿಸಿದ ನೂಪುರ್ ಕಾಲೇಜಿಗಾಗಿ ಮುಂಬೈಗೆ ತೆರಳುವ ಮೊದಲು ತನ್ನ ಸ್ವಂತ ಊರಿನಿಂದ ಶಾಲಾ ಶಿಕ್ಷಣವನ್ನು ಪಡೆದರು. ನಂತರ ಕಾಮರ್ಸ್ ಅಂಡ್ ಎಕನಾಮಿಕ್ಸ್ ನಲ್ಲಿ ಪದವಿ ಪಡೆದರು.ಮೊದಲು ಫಿಟ್ನೆಸ್ ಉತ್ಸಾಹಿಯಾಗಿದ್ದ ನೂಪುರ್, ನಂತರ ಕ್ರೀಡಾಪಟು ಮತ್ತು ತರಬೇತುದಾರರಾಗಿ ಕೆರಿಯರ್ ಪ್ರಾರಂಭಿಸಿದರು.2009ರಲ್ಲಿ ಫಿಟ್ನೆಸಿಸಂ ಎಂಬ ಸಮರ ಕಲೆಗಳ ತರಬೇತಿ ಅಕಾಡೆಮಿಯನ್ನು ಸ್ಥಾಪಿಸಿದರು, ಅಲ್ಲಿ ಅವರು ಕಾಪೊಯೈರಾವನ್ನು ಕಲಿಸಿದರು.
ಲೆಜೆಂಡ್ ಈಸ್ ಬ್ಯಾಕ್, ವಿಕ್ಟರಿ ಗ್ಯಾರಂಟಿ; ಸೈಂಧವ ಟ್ರೈಲರ್ ನೋಡಿ ಪ್ರೇಕ್ಷಕರು ಫಿದಾ!
ನೂಪುರ್, ಅಮೀರ್ ಮತ್ತು ನಟಿ ಸುಶ್ಮಿತಾ ಸೇನ್ ಸೇರಿದಂತೆ ಹಲವಾರು ನಟರ ವೈಯಕ್ತಿಕ ತರಬೇತುದಾರರಾಗಿದ್ದರು. ಅಷ್ಟೆ ಅಲ್ಲದೆ ಫಿಟ್ನೆಸ್ ನಲ್ಲೂ ಫೈಟಿಂಗ್ನಲ್ಲೂ ಪಂಟರ್ ಅಮೀರ್ ಅಳಿಯ 2014ರಲ್ಲಿ ತೈವಾನ್ 70.3 ಹಾಫ್ ಐರನ್ಮ್ಯಾನ್ ಟ್ರೈಯಥ್ಲಾನ್ನಲ್ಲಿ ಭಾಗವಹಿಸಿದ್ದರು. 2016 ಐರನ್ಮ್ಯಾನ್ ಟ್ರಯಥ್ಲಾನ್ ಅನ್ನು ಸಹ ಮುಗಿಸಿದರು. ನಂತರದ ವರ್ಷ ನೆಟ್ಫ್ಲಿಕ್ಸ್ ಶೋ ಅಲ್ಟಿಮೇಟ್ ಬೀಸ್ಟ್ಮಾಸ್ಟರ್ನಲ್ಲಿ ಭಾಗವಹಿಸಿದ್ದರು. 2018ರಲ್ಲಿ ಡಿಸ್ನಿ ಇಂಡಿಯಾ ಟಿವಿ ಶೋ ಅಲ್ಲಾದೀನ್ - ಎಕ್ಸ್ಪೀರಿಯೆನ್ಸ್ ದಿ ಮ್ಯಾಜಿಕ್ಗೆ ಫೈಟ್ ಮಾಸ್ಟರ್ ಆಗಿ ಕೆಲಸ ಮಾಡಿದ್ದರು.
ನಿನ್ನ ಲೈಫೂ ಹಲ್ವಾದಂತೇ ತಳ ಹಿಡಿದು ಹೋಗಲಿದೆ; ಭವಿಷ್ಯವಾಣಿ ಪುಷ್ಪಾ ಪಾಲಿಗೆ ನಿಜ ಆಗಿಬಿಡುತ್ತಾ?!
ನೂಪುರ್ ಮೊದಲ ಬಾರಿಗೆ 2019ರಲ್ಲಿ ಬೋಲ್ಡ್ ಫೋಟೋಶೂಟ್ನಿಂದ ಹೆಚ್ಚು ಸುದ್ದಿಯಾದರು. ಈ ಫೋಟೋಗಳಲ್ಲಿ ನೂಪುರ್ ಸಾಂತಾ ಕ್ಲಾಸ್ ಟೋಪಿಯನ್ನು ಹೊರತುಪಡಿಸಿ ಮತ್ತೆ ಏನನ್ನೂ ಧರಿಸಿರಲ್ಲಿಲ್ಲ. ಇನ್ನು ನೂಪುರ್ ಮತ್ತು ಇರಾ ಅವರು 2021ರಲ್ಲಿ ಮೊದಲ ಬಾರಿಗೆ ಒಟ್ಟಿಗೆ ಫೋಟೋಗಳನ್ನು Instagram ನಲ್ಲಿ ಪೋಸ್ಟ್ ಮಾಡಿದಾಗ ತಮ್ಮ ಸಂಬಂಧವನ್ನು ಸಾರ್ವಜನಿಕಗೊಳಿಸಿದರು. ನೂಪುರ್ ಅದೇ ವರ್ಷ ಐರನ್ಮ್ಯಾನ್ ಓಟದ ಅಂತಿಮ ಸಾಲಿನಲ್ಲಿ ಇರಾಗೆ ಪ್ರಪೋಸ್ ಮಾಡಿದರು. ಜೋಡಿ ಕಳೆದ ವರ್ಷ ಅದ್ಧೂರಿ ನಿಶ್ಚಿತಾರ್ಥವನ್ನು ಮಾಡಿಕೊಂಡರು. ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಕುಂಟುತ್ತ ರಾಮಾಚಾರಿ ಮನೆಗೆ ಬಂದ ಕಿಟ್ಟಿ; ಚಾರು ಮೈ-ಕೈ ಮುಟ್ಟಲು ಕಿಟ್ಟಿಗೆ ಶಾಕ್!