
ರಾಯಚೂರು (ಫೆ.6) ದೇವರ ಮೇಲಿನ ಭಕ್ತಿಯಿಂದಲೋ, ಹರಕೆ ತೀರಿಸಲೋ ಭಕ್ತರು ಕಾಶಿ, ಅಯೋಧ್ಯೆ, ಶ್ರೀಶೈಲ ಫಂಡರಾಪುರಕ್ಕೆ ವಾರ, ತಿಂಗಳ ಕಾಲ ಪಾದಯಾತ್ರೆ ಮಾಡಿ ದರ್ಶನ ಪಡೆಯುವುದು ನೋಡಿದ್ದೀರಿ. ಆದರೆ ಇಲ್ಲೊಬ್ಬ ಅಭಿಮಾನಿ ನಟ ದರ್ಶನ ಹುಟ್ಟು ಹಬ್ಬದ ಹಿನ್ನೆಲೆ ನೆಚ್ಚಿನ ನಟನ ನಿವಾಸಕ್ಕೆ ಹುಟ್ಟೂರಿನಿಂದ ಪಾದಯಾತ್ರೆ ಹೊರಟಿದ್ದಾನೆ.
ಹೌದು, ಇದೇ ಫೆ.16ರಂದು ದರ್ಶನ ಹುಟ್ಟು ಹಬ್ಬ. ಪ್ರತಿವರ್ಷ ಅಭಿಮಾನಿಗಳಿಂದ ಅದ್ದೂರಿಯಾಗಿ ಹಬ್ಬದಂತೆ ಆಚರಿಸಲಾಗುತ್ತದೆ. ಹುಟ್ಟು ಹಬ್ಬ ಫೆ.16ರಂದು. ಆದರೆ ತಿಂಗಳ ಮೊದಲೇ ಸಿದ್ಧತೆಗಳು ನಡೆಯುತ್ತವೆ. ಈ ಬಾರಿ ಹುಟ್ಟುಹಬ್ಬದ ಜೊತೆಗೆ ಕಾಟೇರಾ ಸಿನಿಮಾ ಸಕ್ಸಸ್ ಸೇರಿ ದೊಡ್ಡ ಹಬ್ಬವೇ ಆಗಲಿದೆ. ಇನ್ನೇನು ಕೇವಲ 7ದಿನಗಳಷ್ಟೇ ಬಾಕಿ ಉಳಿದಿವೆ. ಈಗಾಗಲೇ ದರ್ಶನ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಹರಿದುಬರಲಿದ್ದದಾರೆ. ಕೆಲವು ಅಭಿಮಾನಿಗಳು ದರ್ಶನ್ ಮೇಲಿನ ಅಭಿಮಾನದಿಂದ ಕಾಲ್ನಡಿಗೆಯಲ್ಲಿ ದೂರದ ಊರುಗಳಿಂದ ಬೆಂಗಳೂರಿನತ್ತ ಬರುತಿದ್ದಾರೆ.
ದರ್ಶನ್ ಮುಂದಿನ ಸಿನಿಮಾ 'ಡೆವಿಲ್ ದಿ ಹೀರೋ'ಗೆ ಕರಾವಳಿ ಬೆಡಗಿ ನಾಯಕಿ!
ನಟ ದರ್ಶನ್‌ರ ಕಟ್ಟಾ ಅಭಿಮಾನಿಯಾಗಿರುವ ಭದ್ರಿ(ವೀರಭದ್ರಪ್ಪ) ಪಾದಯಾತ್ರೆ ಪಾದಯಾತ್ರೆ ಆರಂಭಿಸಿದ್ದಾರೆ. ಗುರುಗುಂಟಾ ಅಮರೇಶ್ವರ ದೇವರಿಗೆ ವಿಶೇಷ ಸಲ್ಲಿಸಿ ಪಾದಯಾತ್ರೆ ಆರಂಭಿಸಿರುವ ಅಭಿಮಾನಿ. ಹುಟ್ಟುಹಬ್ಬದ ದಿನದಂದು ದರ್ಶನ್‌ರ ನಿವಾಸಕ್ಕೆ ತೆರಳಿ ಶುಭಕೋರಲಿರುವ ಅಭಿಮಾನಿ. ಭದ್ರಿ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಗೌಡೂರು ಗ್ರಾಮದವರಾಗಿದ್ದಾರೆ. ವೀರಭದ್ರಪ್ಪ ಒಬ್ಬ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ. ನಟ ದರ್ಶನ್‌ರ ಬಗ್ಗೆ ಎಲ್ಲಿಲ್ಲದ ಅಭಿಮಾನ. ಈ ಅಭಿಮಾನದಿಂದಲೇ ಈ ಬಾರಿ ಪಾದಯಾತ್ರೆ ಮಾಡಿ ದರ್ಶನ್ ಹುಟ್ಟಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಪಾದಯಾತ್ರೆ ಆರಂಭಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.