ಆಮೀರ್ ಖಾನ್ ತಾಯಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು

By Shruthi KrishnaFirst Published Oct 31, 2022, 3:15 PM IST
Highlights

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ತಾಯಿ ಜೀನತ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ತಮ್ಮ ನಿವಾಸ ಪಂಚಗಮಿಯಲ್ಲಿ ಹೃದಯಾಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ತಾಯಿ ಜೀನತ್ ಹುಸೇನ್ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈನ ತಮ್ಮ ನಿವಾಸ ಪಂಚಗಮಿಯಲ್ಲಿ ಹೃದಯಾಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ತಕ್ಷಣ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಮೀರ್ ಖಾನ್ ಕೂಡ ಆಸ್ಪತ್ರೆಯಲ್ಲೇ ತಾಯಿ ಜೊತೆ ಇದ್ದು ಆರೈಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಆಮೀರ್ ಖಾನ್ ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ತಾಯಿಯ ಅನಾರೋಗ್ಯದ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸದಂತೆ ಆಮೀರ್ ಕುಟುಂಬ ನಿರ್ಧರಿಸಿದೆಯಂತೆ. ಹಾಗಾಗಿ ಈ ಮಾಹಿತಿ ಎಲ್ಲಿಯೂ ಅಧಿಕೃತವಾಗಿ ರಿವೀಲ್ ಆಗಿಲ್ಲ. 

ಸದ್ಯ ಜೀನತ್ ಹುಸೇನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದವರು ಅಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ.  ಆಮೀರ್ ಖಾನ್ ತಾಯಿ ಬೇಗ ಗುಣುಖರಾಗಲಿ ಎಂದು ಅಭಿಮಾನಿಗಳು ಹಾಗೂ ಸಿನಿ ಗಣ್ಯರು ಪ್ರಾರ್ಥಿಸುತ್ತಿದ್ದಾರೆ. ಸಿನಿಮಾ ಸೋಲಿನಿಲ್ಲಿದ್ದ ಆಮೀರ್ ಖಾನ್ ಅವರಿಗೆ ತಾಯಿಯ ಈ ಘಟನೆ ಮತ್ತಷ್ಟು ಶಾಕ್ ನೀಡಿದೆ. ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲಿನ ಬಳಿಕ ಆಮೀರ್ ಖಾನ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರೀಯರಾಗಿಲ್ಲ. 

ಹಿಂದುಗಳ ಭಾವನೆಗಳಿಗೆ ಮತ್ತೆ ಧಕ್ಕೆ, ಅಮೀರ್‌ ಖಾನ್‌ ಜಾಹೀರಾತಿಗೆ ವಿವಾದದ ಕಿಡಿ!

ಕಾಫಿ ವಿತ್ ಕರಣ್ ಶೋನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಆಮೀರ್ ಖಾನ್ ತನ್ನ ಕುಟುಂಬದ ಜೊತೆ ಹೆಚ್ಚು ಸಮಯ ಕಳೆದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು. ಇನ್ನು ಸಿನಿಮಾಗಳಿಗೆ ಅಮ್ಮನ ವಿಮರ್ಶೆ ತುಂಬಾ ಮುಖ್ಯ ಎಂದು ಹೇಳಿದ್ದರು. ಯಾವುದೇ ಸಿನಿಮಾ ಬಿಡುಗಡೆಯ ಮೊದಲು ಯಾವಾಗಲೂ ತಾಯಿಯ ಅಭಿಪ್ರಾಯವನ್ನು ತಿಳಿಯುತ್ತೇನೆ ಎಂದು ಆಮೀರ್ ಖಾನ್ ಹೇಳಿದ್ದರು.
 
ಇನ್ನು ಜೂನ್ ತಿಂಗಳಲ್ಲಿ ಆಮೀರ್ ಖಾನ್ ತನ್ನ ತಾಯಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ಆಮೀರ್ ಖಾನ್ ಇಡೀ ಕುಟುಂಬ ಭಾಗಿಯಾಗಿತ್ತು.  ಆಮೀರ್ ಖಾನ್ ಇಬ್ಬರೂ ಮಾಜಿ ಪತ್ನಿಯರು ಹಾಗೂಮಕ್ಕಳು ಸಹ ಭಾಗಿಯಾಗಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. 

ಆಮೀರ್ ಖಾನ್ ಪುತ್ರಿಯ ಎಂಗೇಜ್ಮೆಂಟ್; ರಿಂಗ್ ಹಾಕಿ, ಲಿಪ್ ಕಿಸ್ ಮಾಡಿ ಪ್ರಪೋಸ್ ಮಾಡಿದ ನುಪೂರ್, ವಿಡಿಯೋ ವೈರಲ್

ಇನ್ನು ಆಮೀರ್ ಖಾನ್ ಸಿನಿಮಾ ವಿಚಾರಕ್ಕೆ ಬರುವುದಾರೆ ಕೊನೆಯದಾಗಿ ಲಾಲ್ ಸಿಂಗ್ ಚಡ್ಡಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲು ಸೋತಿದೆ.ಈ ಸಿನಿಮಾ ಬಳಿಕ ಆಮೀರ್ ಯಾವುದೇ ಹೊಸ ಚಿತ್ರ ಅನೌನ್ಸ್ ಮಾಡಿಲ್ಲ. ಹಾಗಾಗಿ ಆಮೀರ್ ಮುಂದಿನ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. 

click me!