
aamir khan kiran rao relation : ಆಮೀರ್ ಖಾನ್ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಅವರು ಈಗ ಮೂರನೇ ಮದುವೆ ಆಗ್ತಿದ್ದಾರೆ ಅಂತಾ ಹಲವು ವರದಿಗಳು ಹೇಳ್ತಿವೆ. 2024ರಿಂದಲೂ ಈ ಸುದ್ದಿ ಇದೆ. ಆದ್ರೆ ಅವರ ಮೊದಲ ಹೆಂಡತಿಯ ಜೊತೆಗಿನ ಸಂಬಂಧವು ಈಗಲೂ ಚೆನ್ನಾಗಿದೆ. ಮೊದಲ ಪತ್ನಿಯಿಂದ ಪಡೆದ ಮಗಳ ಮದುವೆಯನ್ನು ಕೂಡ ಇಬ್ಬರೂ ತುಂಬಾ ಚೆನ್ನಾಗಿ ಮಾಡಿದ್ದರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಅವರ ಎರಡನೇ ಹೆಂಡತಿ ಕಿರಣ್ ರಾವ್ ಈಗ ಡೈರೆಕ್ಷನ್ ಲೈನ್‌ನಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಿರ್ದೇಶನದಲ್ಲಿ ಬಂದ 'ಲಾಪತಾ ಲೇಡೀಸ್' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಆಮೀರ್ ಖಾನ್ ಜೊತೆ ಮದುವೆ ವಿಚಾರ ಬಂದಾಗ ತಮ್ಮ ಪೋಷಕರ ಚಿಂತೆ ಬಗ್ಗೆ ಕಿರಣ್ ರಾವ್ ಹೇಳಿಕೊಂಡಿದ್ದಾರೆ.
ಆಮೀರ್ ಖಾನ್ ಚಿತ್ರಗಳ 10 ಅದ್ಭುತ ಡೈಲಾಗ್‌ಗಳು! ಹಲವರು ಪಾಲಿಗೆ ದಾರಿದೀಪ ಆಗಿವೆ!
ಭಾರತದಲ್ಲಿ 20 ವರ್ಷದಿಂದ ಸಂಭಾವನೆ ಪಡೆಯದೇ ನಟಿಸುತ್ತಿರುವ ಸೂಪರ್‌ಸ್ಟಾರ್ ನಟ ಯಾರು?
ಮಗನ ಸಿನಿಮಾ ಹಿಟ್ ಆದ್ರೆ ಸಿಗರೇಟ್ ಬಿಡ್ತೀನಿ ಎಂದ ಆಮೀರ್ ಖಾನ್: ಚಾಲೆಂಜ್‌ನಲ್ಲಿ ಗೆಲ್ತಾರಾ ಮಿಸ್ಟರ್ ಪರ್ಫೆಕ್ಟ್?
ಮೊದಲ ಪತ್ನಿ ರೀನಾ ದತ್ತಾ ಅವರನ್ನು 1986ರಲ್ಲಿ ಮದುವೆಯಾದ ಅಮಿರ್ ಖಾನ್ 2002ರಲ್ಲಿ ವಿಚ್ಚೇದನ ಪಡೆದರು. ಮೊದಲ ಪತ್ನಿಯಿಂದ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪತ್ನಿ ಕಿರಣ್ ರಾವ್ ಅವರನ್ನು 2005ರಲ್ಲಿ ಮದುವೆಯಾಗಿ 2021ರಲ್ಲಿ ವಿಚ್ಚೇದನ ಪಡೆದರು. 2011ರಲ್ಲಿ ಸರೋಗಸಿ ಮೂಲಕ ಅಜಾದ್ ಖಾನ್ ರಾವ್ ಎಂಬ ಮಗನನ್ನು ಪಡೆದರು. ವಿಚ್ಚೇದನ ಪಡೆದ ನಂತರವೂ ಇಬ್ಬರು ಪತ್ನಿಯರ ಜೊತೆಗೆ ಅಮಿರ್ ಚೆನ್ನಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.