viral video : ಫ್ಯಾನ್ಸ್ ಮುಟ್ಟಿದ್ದಕ್ಕೆ ಹೇಮಾ ಮಾಲಿನಿ ಅಸಮಾಧಾನ...ಅಭಿಮಾನಿಗಳು ನೋಡಿದ್ದೆ ಬೇರೆ..

By Roopa Hegde  |  First Published Aug 22, 2024, 11:16 AM IST

ಬಾಲಿವುಡ್ ಹಿರಿಯ ನಟಿ ಹಾಗೂ ರಾಜಕಾರಣಿ ಹೇಮಾ ಮಾಲಿನಿ ವಿಡಿಯೋ ಒಂದು ವೈರಲ್ ಆಗಿದೆ. ಅಭಿಮಾನಿ ಜೊತೆ ಹೇಮಾ ನಡೆದುಕೊಳ್ಳುವ ರೀತಿ ನೆಟ್ಟಿಗರಿಗೆ ಇಷ್ಟವಾಗಿಲ್ಲ. ವೈರಲ್ ವಿಡಿಯೋದಲ್ಲಿ ಹೇಮಾ ಜೊತೆ ಅಲ್ಲಿ ನಡೆದ ಇನ್ನೊಂದು ವಿಷ್ಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಟ್ರೋಲರ್. 
 


ಡ್ರೀಮ್ ಗರ್ಲ್ ಹೇಮಾ ಮಾಲಿನಿ (Dream Girl Hema Malini) ಗೆ 75 ವರ್ಷವಾದ್ರೂ ಇಪ್ಪತ್ತರ ಹುಡುಗಿಯನ್ನು ನಾಚಿಸುವ ಸೌಂದರ್ಯ ಹೊಂದಿದ್ದಾರೆ. ಅವರನ್ನು ನೋಡ್ತಿದ್ದಂತೆ ಒಂದು ಫೋಟೋ, ಸೆಲ್ಫಿ ತೆಗೆಸಿಕೊಳ್ಳಬೇಕೆಂಬ ಆಸೆ ಚಿಗುರೋದು ಸಹಜ. ಅಭಿಮಾನಿ (fan) ಗಳು ದೂರದಿಂದ ಫೋಟೋಕ್ಕೆ ಫೋಸ್ ನೀಡಿದ್ರೆ ಕಲಾವಿದರಿಗೆ ಸಮಸ್ಯೆ ಇಲ್ಲ. ಅವರು ಹತ್ತಿರ ಬಂದ್ರೆ ಕಷ್ಟಕ್ಕೆ ಒಳಗಾಗ್ತಾರೆ. ಅನೇಕ ಕಲಾವಿದರು ಇದೇ ಕಾರಣಕ್ಕೆ ಅಭಿಮಾನಿಗಳ ಜೊತೆ ಸೆಲ್ಫಿ, ಫೋಟೋವನ್ನು ನಿರಾಕರಿಸ್ತಾರೆ. ಈ ಬಾರಿ ಹೇಮಾ ಮಾಲಿನಿ ಅಭಿಮಾನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಟ್ರೋಲ್ (troll) ಆಗಿದ್ದಾರೆ. ಅಭಿಮಾನಿಯನ್ನು ಅಸ್ಪಶ್ಯರಂತೆ ನೋಡಿದ ಹೇಮಾ ವಿಡಿಯೋ ವೈರಲ್ (video viral) ಆಗಿದೆ. ಫ್ಯಾನ್ಸ್ ಹೇಮಾ ಮಾಲಿನಿಗೆ ಬೆಂಬಲ ನೀಡಿದ್ರೆ ನೆಟ್ಟಿಗರು ಹೇಮಾ ವರ್ತನೆಯನ್ನು ಖಂಡಿಸಿದ್ದಾರೆ.

ಇಸ್ಕಾನ್ ನಲ್ಲಿ ನಡೆದ ಭಜನಾ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಹೇಮಾ ಪಾಲ್ಗೊಂಡಿದ್ದರು. ಅನುಪ್ ಜಲೋಟಾ, ನಿತಿನ್ ಮುಖೇಶ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈವೆಂಟ್‌ನಲ್ಲಿ, ಭಜನ್ ಗಾಯಕ ಅನುಪ್ ಜಲೋಟಾ ಅವರೊಂದಿಗೆ ಹೇಮಾ ಫೋಸೋ ಕ್ಲಿಕ್ಕಿಸುತ್ತಿದ್ದಾಗ  ಅಭಿಮಾನಿಯೊಬ್ಬರು ಬಂದು ಹೇಮಾ ಬಳಿ ನಿಂತಿದ್ದಾರೆ. ಹೇಮಾ ಭುಜದ ಮೇಲೆ ಕೈ ಇಡಲು ಮುಂದಾಗ್ತಾರೆ. ತಕ್ಷಣ ಅಭಿಮಾನಿ ಕೈ ತೆಗೆದು ದೂರ ನಿಲ್ಲುವ ಹೇಮಾ, ಟಚ್ ಮಾಡದಂತೆ ಮಹಿಳೆಗೆ ತಾಕೀತು ಮಾಡ್ತಾರೆ. ಈ ವಿಡಿಯೋದಲ್ಲಿ ಮಹಿಳೆಯನ್ನು ವ್ಯಕ್ತಿಯೊಬ್ಬ ತಳ್ಳುತ್ತಿದ್ದಾನೆ. ಅನೇಕ ಬಳಕೆದಾರರು ಈ ವಿಷ್ಯವನ್ನೂ ಗಮನಿಸಿದ್ದಾರೆ. ಹೇಮಾ ಮಾಲಿನಿಗೆ ಮಹಿಳಾ ಅಭಿಮಾನಿ ಟಚ್ ಮಾಡಿದ್ರೆ ಸಹಿಸೋದು ಕಷ್ಟವಾಯ್ತು. ಆದ್ರೆ ಮಹಿಳೆಯನ್ನು ತಳ್ಳಲು ಬಂದ ವ್ಯಕ್ತಿ ಎಲ್ಲಿ ಟಚ್ ಮಾಡಿದ್ದಾನೆ ಗಮನಿಸಿದ್ದೀರಾ ಎಂದು ಕೆಲ ನೆಟ್ಟಿಗರು ಕೇಳಿದ್ದಾರೆ.

Tap to resize

Latest Videos

ಕಲರ್ಸ್ ಕನ್ನಡದ ಈ ಸೀರಿಯಲ್ ಮುಕ್ತಾಯ, ಅತ್ಯುತ್ತಮ ನಟನೆಯ ಆ್ಯಕ್ಟರ್ಸ್ ಇರೋ ಕಥೆ ಮುಗೀಬಾರದು ಅಂತಿದ್ದಾರೆ ಫ್ಯಾನ್ಸ್..!

ವಿಡಿಯೋ ಪ್ರಕಾರ, ಹೇಮಾ ಮಾಲಿನಿಯಿಂದ ಅಭಿಮಾನಿಯನ್ನು ದೂರ ತಳ್ಳಲು ಬಂದ ವ್ಯಕ್ತಿ, ಮಹಿಳೆ ಚೆಸ್ಟ್ ಟಚ್ ಮಾಡ್ತಾನೆ. ಹೇಮಾ ಮಾಲಿನಿ ವರ್ತನೆ ಜೊತೆ ಇದು ಕೂಡ ಅನೇಕ ನೆಟ್ಟಿಗರ ಕೋಪವನ್ನು ಹೆಚ್ಚಿಸಿದೆ. ಜಯಾ ಬಚನ್ ಮತ್ತು ಹೇಮಾ ಮಾಲಿನಿ ಅತ್ಯಂತ ಮುಂಗೋಪದ ಮಹಿಳಾ ಸೆಲೆಬ್ರಿಟಿಗಳು, ಅವರ ಬಳಿ ಯಾಕೆ ಜನರು ಫೋಟೋ ತೆಗೆಸಿಕೊಳ್ಳಲು ಹೋಗ್ತಾರೆ. ಇದು ಅಭಿಮಾನಿಗಳ ತಪ್ಪು ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ. 

ಚುನಾವಣೆ ಸಮಯದಲ್ಲಿ ಮನೆ ಮನೆಗೆ ಬಂದು ವೋಟು ಕೇಳುವ ಇವರು ಈಗ್ಯಾಕೆ ಹೀಗೆ ಮಾಡ್ತಾರೆ. ಇಂಥ ಕೋಪಿಷ್ಠ ಸೆಲೆಬ್ರಿಟಿ ಬಳಿ ಯಾರೂ ಹೋಗ್ಬಾರದು ಎಂದು ಅನೇಕರು ಹೇಳಿದ್ದಾರೆ. ಹೇಮಾ ಮಾಲಿನಿ ಮಹಿಳಾ ಅಭಿಮಾನಿ ಜೊತೆ ಅನ್ ಕಂಫರ್ಟ್ ಆಗಿದ್ದಾರೆ, ಅದೇ ಅನುಪ್ ಜಲೋಟಾ ಜೊತೆ ಕಂಫರ್ಟ್ ಆಗಿದ್ದಾರೆ ಎಂದು ಹೇಮಾ ಮಾಲಿಯನ್ನು ಅನೇಕರು ಟ್ರೋಲ್ ಮಾಡಿದ್ದಾರೆ.

ಇನ್ನು ಹೇಮಾ ಮಾಲಿನಿ ಅಭಿಮಾನಿಗಳು ತಮ್ಮ ಕನಸಿನ ರಾಣಿ ಪರ ಬ್ಯಾಟ್ ಬೀಸಿದ್ದಾರೆ. ಹೇಮಾ ಮಾಲಿನಿ ಮಾಡಿದ್ದು ಸರಿ ಇದೆ. ಪ್ರತಿಯೊಬ್ಬರಿಗೂ ವೈಯಕ್ತಿಕ ಜಾಗವಿರುತ್ತದೆ. ಯಾವುದೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಟಚ್ ಮಾಡೋದು ಸಭ್ಯತೆ ಅಲ್ಲ. ಸೆಲೆಬ್ರಿಟಿಗಳನ್ನು ಟಚ್ ಮಾಡುವ ಮುನ್ನ ಅವರ ಒಪ್ಪಿಗೆಪಡೆಯಬೇಕು. ಯಾವುದೋ ವ್ಯಕ್ತಿ ಬಂದು ನಿಮ್ಮನ್ನು ಸ್ಪರ್ಶಿಸಿದ್ರೆ ನೀವು ಸುಮ್ಮನಿರ್ತೀರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.  ಹೇಮಾ ಮಾಲಿನಿ ಸಾಮಾನ್ಯರಂತೆ ವರ್ತಿಸಿದ್ದಾರೆ. ಅದನ್ನು ಅತಿಶಯೋಕ್ತಿಗೊಳಿಸುವ ಅಗತ್ಯವಿಲ್ಲ ಎಂದಿದ್ದಾರೆ. 

ಆಂಕರ್ ಅನುಶ್ರೀ ಮುಂದೆ ಉಪೇಂದ್ರ ಸಿನಿಮಾದ 3 ಹೀರೋಯಿನ್ ಪಾತ್ರಗಳ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ಉಪ್ಪಿ!

ಹೇಮಾ ಮಾಲಿನಿ ಬೆಂಬಲಕ್ಕೆ ನಟಿ ಮಲಿಷ್ಕಾ ಬಂದಿದ್ದಾರೆ. ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಅವರು, ಇಚ್ಛೆಗೆ ವಿರುದ್ಧವಾಗಿ ಜನರನ್ನು ಮುಟ್ಟಬೇಡಿ ಎಂದು ಬರೆದುಕೊಂಡಿದ್ದಾರೆ. ತೆರೆ ಮೇಲೆ ನಾವು ಅವರನ್ನು ಹೇಗೆ ನೋಡಿರಲಿ, ರಿಯಲ್ ಲೈಫ್ ನಲ್ಲಿ ಅವರು ಅಪರಿಚಿತ ವ್ಯಕ್ತಿ ಸ್ಪರ್ಶಿಸಿದ್ರೂ ಅಸಹಜತೆ ಅನುಭವಿಸಬಾರದು ಎಂಬುದು ಸರಿಯಲ್ಲ ಎಂದಿದ್ದಾರೆ.  
 

click me!