
ಎಸ್. ಜಾನಕಿಯವರ ನಿಧನವನ್ನು ತಮ್ಮ ನಷ್ಟವನ್ನು ವೈಯಕ್ತಿಕ ನಷ್ಟ ಎಂದಿರುವ ಪಿ. ಸುಶೀಲಾ, ಆ ಬಗ್ಗೆ ತಮ್ಮ ನೋವು ವ್ಯಕ್ತಪಪಡಿಸಿದ್ದಾರೆ. '50 ವರ್ಷಗಳಿಗೂ ಹೆಚ್ಚು ಕಾಲ ನನ್ನೊಂದಿಗೆ ಒಡನಾಟ ಹೊಂದಿದ್ದ ನನ್ನ ಆತ್ಮೀಯ ಸ್ನೇಹಿತೆ ಜಾನಕಿಯವರ ಹಠಾತ್ ನಿಧನದ ಬಗ್ಗೆ ದುಃಖವಾಗುತ್ತಿದೆ. ಅವರು ಇನ್ನಿಲ್ಲ ಎಂದು ನಂಬುವುದು ತುಂಬಾ ಕಷ್ಟ" ಎಂದು ಪಿ. ಸುಶೀಲಾ ಸಾಮಾಜಿಕ ಮಾಧ್ಯಮ ವೀಡಿಯೊ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
ಸಹೋದರಿಯನ್ನು ಕಳೆದುಕೊಂಡಿದ್ದೇನೆ
ಮತ್ತೊಂದು ಸಂದೇಶದಲ್ಲಿ, ಸುಶೀಲಾ ಆ ದಿನವನ್ನು ತಮ್ಮ ಜೀವನದ ಅತ್ಯಂತ ದುಃಖಕರ ದಿನಗಳಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. "ನಾನು ಒಬ್ಬ ಪ್ರಸಿದ್ಧ ಸಹೋದ್ಯೋಗಿಯನ್ನು ಮಾತ್ರವಲ್ಲದೆ ನನ್ನ ನಿಜವಾದ ಸ್ನೇಹಿತೆ ಮತ್ತು ಸಹೋದರಿಯನ್ನು ಕಳೆದುಕೊಂಡಿದ್ದೇನೆ. ನಾವಿಬ್ಬರೂ ಸುಮಾರು ಐದು ದಶಕಗಳನ್ನು ಸಂಗೀತದಲ್ಲಿ ಒಟ್ಟಿಗೆ ಕಳೆದಿದ್ದೇವೆ, ಅನೇಕ ಭಾಷೆಗಳಲ್ಲಿ ಲೆಕ್ಕವಿಲ್ಲದಷ್ಟು ಹಾಡುಗಳನ್ನು ಹಾಡಿದ್ದೇವೆ" ಎಂದು ಅವರು ಹೇಳಿದರು.
ಅವರಿಗೆ ಸರಿಸಾಟಿಯಾಗುವವರು ಯಾರೂ ಇಲ್ಲ. ದುರದೃಷ್ಟವಶಾತ್, ಇಂದು ಅವರ ಸಾಮರ್ಥ್ಯದ ಗಾಯಕರು ನಮ್ಮಲ್ಲಿಲ್ಲ" ಎಂದು ಅವರು ಹೇಳಿದರು. , "'ಸಿಂಗಾರವಲೆ ದೇವ'ವನ್ನು ಅವರು ಹಾಡಿದ ರೀತಿಯಲ್ಲಿ ಬೇರೆ ಯಾರೂ ಹಾಡಲು ಸಾಧ್ಯವಿಲ್ಲ. ಆ ಹಾಡು ಅವರನ್ನು ಹಿನ್ನೆಲೆ ಗಾಯನದ ಉತ್ತುಂಗಕ್ಕೆ ಕೊಂಡೊಯ್ದಿತು" ಎಂದು ಹಿರಿಯ ಗಾಯಕಿ ಪಿ. ಸುಶೀಲಾ ಹೇಳಿದರು.
ನಮ್ಮ ಮಧ್ಯೆ ಜಗಳ ತಂದಿಟ್ರು
ಇದ್ದಷ್ಟು ದಿನವೂ ನಮ್ಮನ್ನು ಅನೇಕರು ಟಾರ್ಗೆಟ್ ಮಾಡಿದ್ದರು. ನನ್ನ ಮೇಲೆ ಆಕೆಗೆ ಹೇಳಿ, ಆಕೆಯ ಮೇಲೆ ನನಗೆ ಹೇಳಿ ನಮ್ಮ ಮಧ್ಯೆ ಜಗಳ ತಂದಿಟ್ಟು ತಮಾಷೆ ನೋಡಿದ್ರು. ಈಗ ಅವ್ರು ತಂಪಾಗಿರ್ಲಿ. ಇದೆಲ್ಲಾ ಮಾಡಿ ಅವರೆಲ್ಲ ಏನು ಸಾಧಿಸಿದ್ರು? ಆಕೆಗೆ ಸಾವೇ ಇಲ್ಲ. ದೇವರ ಬಳಿಗೆ ಹೋಗಿದ್ದಾಳೆ. ಯಾರಿಗೂ ಈ ಅದೃಷ್ಟ ಸಿಗಲ್ಲ. ಜನ ಪುಣ್ಯ ಮಾಡಿದ್ದಕ್ಕೆ ಆಕೆಯ ಸುಮಧುರ ದನಿ ಕೇಳುವ ಅವಕಾಶ ಸಿಕ್ತು" ಎಂದು ಪಿ. ಸುಶೀಲ ಮಾತನಾಡಿದ್ದಾರೆ.
ಎಸ್. ಜಾನಕಿ ಹಾಗೂ ಪಿ. ಸುಶೀಲ ಇಬ್ಬರೂ ಸೇರಿ ಒಂದೇ ಹಾಡು ಹಾಡಿರುವ ಸಾಕಷ್ಟು ಉದಾಹರಣೆಗಳಿವೆ. ಕನ್ನಡದಲ್ಲಿ 'ಚದುರಂಗ' ಚಿತ್ರದ 'ಮಮತೆಯ ತೋಟದ ಮಲ್ಲಿಗೆಯೆ' ಹಾಡು, 'ಚಕ್ರವ್ಯೂಹ' ಚಿತ್ರದ 'ನಿಜ ಹೇಳುವೆನು ಅಮ್ಮ ನಿನ್ನ ಕಂಡರೆ ಪ್ರೀತಿ', ಸೇರಿದಂತೆ, ಸಾಕಷ್ಟು ಹಾಡಿಗೆ ಈ ಇಬ್ಬರೂ ಧ್ವನಿಯಾಗಿದ್ದರು.
ಜಾನಕಿ ಇಲ್ಲದೆ ಸಂಗೀತ ಜಗತ್ತನ್ನು ಊಹಿಸಿಕೊಳ್ಳುವುದು ಅಸಾಧ್ಯ.. ಜಾನಕಮ್ಮನಂತಹ ಮಹಾನ್ ಗಾಯಕಿಯ ಧ್ವನಿಯನ್ನು ಕೇಳುವ ಭಾಗ್ಯವನ್ನು ಪಡೆಯುವ ಮೂಲಕ ಈ ಪೀಳಿಗೆಗೆ ಸಾಕಷ್ಟು ಪುಣ್ಯ ಸಿಕ್ಕಿ.. ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅವರು ಹಾಡಿದ ಸಾವಿರಾರು ಅಮರ ಹಾಡುಗಳು ಹಾಗೇ ಇರುತ್ತದೆ.. ಈ ಜಗತ್ತು ಇರುವವರೆಗೆ ಜಾನಕಿಗೆ ಸಾವಿಲ್ಲ' ಎಂದು ತಮ್ಮ ಸಹಗಾಯಕಿ ಎಸ್ ಜಾನಕಿ ಬಗ್ಗೆ ಪಿ ಸುಶೀಲಾ ಅವರು ಮನದುಂಬಿ ಮಾತನ್ನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.