ಭಾರತದ ಟಾಪ್​ 10 ಚಿತ್ರಗಳ ಪಟ್ಟಿ ಬಿಡುಗಡೆ: ಬಾಲಿವುಡ್​ಗೆ ಬಿಗ್​ ಶಾಕ್​!

By Suvarna News  |  First Published Jan 16, 2023, 11:30 AM IST

2002ರ ಟಾಪ್​ 10 ಚಿತ್ರಗಳ ವರದಿ ಬಿಡುಗಡೆಯಾಗಿದ್ದು, ಬಾಲಿವುಡ್​ಗೆ ಭಾರಿ ಆಘಾತ ನೀಡುತ್ತಿದೆ. ಹಾಗಿದ್ದರೆ ಅಸಲಿಗೆ ಆಗಿದ್ದೇನು?
 


ಬಾಲಿವುಡ್​ ಬರುವ ಏಪ್ರಿಲ್​ ವೇಳೆಗೆ ಭಾರಿ ದಿವಾಳಿಯಾಗುತ್ತದೆ ಎಂದು ನಟಿ ತನುಶ್ರೀ ದತ್ತಾ ಈಚೆಗೆ ಭವಿಷ್ಯ ನುಡಿದಿದ್ದರು. ಅದರ ಬೆನ್ನಲ್ಲೇ ಬಾಲಿವುಡ್​ಗೆ ಭಾರಿ ಶಾಕ್​ ನೀಡುವ ವರದಿಯೊಂದು ಬಹಿರಂಗಗೊಂಡಿದೆ. ಅದೇನೆಂದರೆ 2022ರ ವಿವಿಧ ಭಾಷೆಗಳ ಟಾಪ್​ 10 ಚಿತ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಅದರಲ್ಲಿ ಬಾಲಿವುಡ್​ ಟಾಪ್​ 5 ಯಲ್ಲಿ ಸ್ಥಾನ ಗಳಿಸಿಕೊಳ್ಳುವಲ್ಲಿ ವಿಫಲವಾಗಿದೆ. 6ನೇ ಸ್ಥಾನಕ್ಕೆ ಬಾಲಿವುಡ್​ ಕುಸಿದಿದ್ದು, ದೊಡ್ಡ ಹೊಡೆತ ಬಿದ್ದಿದೆ. ಬಾಲಿವುಡ್​ ದಿಗ್ಗಜರು ಭಾರಿ ಹೋಪ್ಸ್​ ಇಟ್ಟುಕೊಂಡಿದ್ದ ಬ್ರಹ್ಮಾಸ್ತ್ರ (Brahmastra) ಚಿತ್ರ ಆರನೇ ಸ್ಥಾನ ಪಡೆದುಕೊಂಡಿದ್ದು, ಅಷ್ಟಕ್ಕೇ ಬಾಲಿವುಡ್​ ಮಂದಿ ತೃಪ್ತಿ ಪಡೆದುಕೊಳ್ಳುವಂತಾಗಿದೆ. ಈ ವರದಿಯನ್ನು ನೋಡಿದ ಬಾಲಿವುಡ್​ (Bollywood) ಕ್ಷೇತ್ರಕ್ಕೆ ಆಘಾತವಾಗಿದೆ.  

ಕನ್ನಡ, ತೆಲುಗು, ತಮಿಳಿನಲ್ಲಿ ತಯಾರಾದ ಚಲನಚಿತ್ರಗಳು, 2022ರಲ್ಲಿ ಟಾಪ್​ 5 ಸ್ಥಾನ ಗಳಿಸಿದೆ.  ಟಾಪ್ 5ನಲ್ಲಿ  RRR, ಕೆಜಿಎಫ್​-2 (KGF 2), ಅವತಾರ್: ದಿ ವೇ ಆಫ್ ವಾಟರ್, ಕಾಂತಾರ (Kantara) ಮತ್ತು ಪೊನ್ನಿಯಿನ್ ಸೆಲ್ವನ್ ಟಾಪ್​-5 ಚಿತ್ರ (Top 5 films) ಆಗಿ ಮಿಂಚಿವೆ. 2022ರಲ್ಲಿ ಹಿಂದಿ ಗಲ್ಲಾಪೆಟ್ಟಿಗೆಯು (Box office) ಅಂದಾಜು ಮೌಲ್ಯ 3,500 ಕೋಟಿ. 2019 ರಲ್ಲಿ ಇದು 4,800 ಕೋಟಿ ರೂಪಾಯಿಗಳಿದ್ದವು.  ಹಿಂದಿ ಡಬ್ಬಿಂಗ್ ಮಾಡಿದ ದಕ್ಷಿಣ ಚಲನಚಿತ್ರಗಳ ಆದಾಯದ ಪಾಲು ಮಾತ್ರ ಏರಿಕೆ ಆಗಿದೆ.  2019 ರಲ್ಲಿ 5% ಇದ್ದ ಆದಾಯವು 2022ರಲ್ಲಿ  32% ಕ್ಕೆ ಏರಿದೆ. 

Tap to resize

Latest Videos

'ಮೀ ಟೂ' ನಟಿ ತನುಶ್ರೀ ನುಡಿದ ಬಾಲಿವುಡ್​ನ ಭಯಾನಕ ಭವಿಷ್ಯ!

ಇದರ ಕುರಿತು ಈಗ ಭಾರಿ ವಿಮರ್ಶೆ ಶುರುವಾಗಿದೆ.  ಟಾಪ್​ ಸ್ಟುಡಿಯೋ ಒಂದರ ಪ್ರಚಾರಕರು ಹೇಳುವಂತೆ ಹೆಚ್ಚಿನ ನಿರ್ದೇಶಕರಿಗೆ ಜನಸಾಮಾನ್ಯರಿಗೆ ಏನು ಬೇಕು ಎಂಬ ಪ್ರಜ್ಞೆ ಇಲ್ಲ.  ಪಾಶ್ಚಿಮಾತ್ಯ ಸಿನಿಮಾ(Western Cinema) ಗಳಿಂದ  ಅತಿಯಾಗಿ ಪ್ರಭಾವಿತರಾಗಿ ಕಾರ್ಯ ನಿರ್ವಹಿಸುತ್ತಿರುವ ಪರಿಣಾಮ ಇದು.  ಇದು ಒಂದೆಡೆಯಾದರೆ ಚಿತ್ರರಂಗದಲ್ಲಿ ಭ್ರಷ್ಟಾಚಾರವು ಅತಿರೇಕವಾಗಿದೆ. ಮಾರ್ಕೆಟಿಂಗ್ ಏಜೆನ್ಸಿಗಳು ಮತ್ತು OTT ಅಧಿಕಾರಿಗಳು ಎಲ್ಲರೂ ಕಿಕ್‌ಬ್ಯಾಕ್ ತೆಗೆದುಕೊಳ್ಳುತ್ತಾರೆ ಎನ್ನುತ್ತಾರೆ ಅವರು.  ವಿಮರ್ಶೆಗಳನ್ನು ಖರೀದಿಸಲಾಗುತ್ತದೆ ಎಂಬ ವಾದವೂ ಇದೇ ಸಮಯದಲ್ಲಿ ಕೇಳಿಬರುತ್ತಿದೆ.  ಸಾರ್ವಜನಿಕರು ಆಸಕ್ತಿಯನ್ನು ಕಳೆದುಕೊಳ್ಳುವಾಗ ಪ್ರತಿಯೊಬ್ಬರೂ ಹಣವನ್ನು ಗಳಿಸುವತ್ತ ನೋಡುತ್ತಿರುವ ಕಾರಣ, ಬಾಲಿವುಡ್​ಗೆ ಈ ಗತಿ ಬಂದಿದೆ ಎನ್ನಲಾಗುತ್ತಿದೆ. 

ಬಹು ನಿರೀಕ್ಷೆ ಇಟ್ಟುಕೊಂಡಿದ್ದ  ಲಾಲ್ ಸಿಂಗ್ ಚಡ್ಡಾ (ಅಮೀರ್ ಖಾನ್-Amir Khan), ರಕ್ಷಾ ಬಂಧನ (ಅಕ್ಷಯ್ ಕುಮಾರ್-Akshay Kumar), ಸರ್ಕಸ್ (ರಣವೀರ್ ಸಿಂಗ್- Ranveer Singh) ಮತ್ತು ಸಾಮ್ರಾಟ್‌ನಂತಹ ಚಲನಚಿತ್ರಗಳನ್ನು ಜನರು ತಿರಸ್ಕರಿಸಿದ್ದಾರೆ ಎಂದರೆ ಬಾಲಿವುಡ್​ನ ಚಿತ್ರಗಳ ಬಗ್ಗೆ ಜನರಿಗೆ ಎಷ್ಟು ಆಸಕ್ತಿ ಕಡಿಮೆಯಾಗಿದೆ ಎನ್ನುವುದು ತಿಳಿಯುತ್ತದೆ ಎಂದು ಓರ್ಮ್ಯಾಕ್ಸ್ ಮೀಡಿಯಾವನ್ನು ನಡೆಸುತ್ತಿರುವ ಶೈಲೇಶ್ ಕಪೂರ್ ಹೇಳುತ್ತಾರೆ. ನೀವು ಜಾಹೀರಾತುಗಳು, ಜಾಹೀರಾತು ಫಲಕಗಳು ಅಥವಾ  ಸಾರ್ವಜನಿಕ ಸಂಪರ್ಕಗಳನ್ನು ಖರೀದಿಸಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಕರೆತರುವ ದಿನಗಳು ಕಳೆದುಹೋಗಿವೆ. ಇದನ್ನು ಬಾಲಿವುಡ್​ ಮಂದಿ ಅರ್ಥ ಮಾಡಿಕೊಳ್ಳಬೇಕಿದೆ ಎನ್ನುತ್ತಾರೆ ಅವರು. 

ಆಸ್ಕರ್​ ರೇಸ್​ನಲ್ಲಿ ದಿ ಕಾಶ್ಮೀರ್ ಫೈಲ್ಸ್: 'Propaganda' ಎಂದವರಿಗೆ ಕಪಾಳಮೋಕ್ಷ

ಇನ್ನು ಕನ್ನಡದಲ್ಲಿ ಅತಿ ಹೆಚ್ಚು ಗಳಿಕೆ ಕಂಡಿರುವ ಟಾಪ್​ -5 ಚಿತ್ರದ ಬಗ್ಗೆ ಹೇಳುವುದಾದರೆ,  ಕೆಜಿಎಫ್ ಚಾಪ್ಟರ್​ 2, 1278 ಕೋಟಿ ರೂ. ಸಂಗ್ರಹಿಸಿದ್ದರೆ,  ಕಾಂತಾರ (Kantara)  404.33 ಕೋಟಿ ರೂ, ವಿಕ್ರಾಂತ್ ರೋಣ,  126.65 ಕೋಟಿ ರೂ, 777 ಚಾರ್ಲಿ,  108.60 ಕೋಟಿ ರೂ. ಹಾಗೂ  ಜೇಮ್ಸ್ ,  94.20 ಕೋಟಿ ರೂಪಾಯಿಗಳನ್ನು ಗಳಿಸಿದೆ. 

click me!