ಬಾಲಯ್ಯ-ಊರ್ವಶಿ ಡ್ಯಾನ್ಸ್‌ ಮೇಕಿಂಗ್ ವಿಡಿಯೋ ನೋಡಿ ಮುದುಕನ ಕೈಯಲ್ಲಿ ದ್ರಾಕ್ಷಿ ಎಂದ ನೆಟ್ಟಿಗರು

By Mahmad Rafik  |  First Published Jan 8, 2025, 7:54 PM IST

ಸೌತ್ ಸ್ಟಾರ್ ನಂದಮೂರಿ ಬಾಲಕೃಷ್ಣ ಮತ್ತು ಊರ್ವಶಿ ರೌಟೇಲಾ ಅಭಿನಯದ 'ಡಾಕು ಮಹಾರಾಜ' ಚಿತ್ರದ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಇಬ್ಬರ ರೋಮ್ಯಾಂಟಿಕ್ ಅಭಿನಯ ನೋಡಿ ಅಭಿಮಾನಿಗಳು ಗರಂ ಆಗಿದ್ದಾರೆ. ರಜಿನಿಕಾಂತ್ ಅವರನ್ನು ನೋಡಿ ಕಲಿಯಿರಿ ಎಂದು ಕಮೆಂಟ್ ಮಾಡಿದ್ದಾರೆ.


ಮುಂಬೈ: ನಂದಮೂರಿ ಬಾಲಕೃಷ್ಣ (Nandamuri Balakrishna) ಮತ್ತು ಊರ್ವಶಿ ರೌತೆಲಾ (Urvashi Rautela) ನಟನೆಯ ನಾಗ ವಾಮ್ಸಿ ನಿರ್ಮಾಣದ 'ಡಾಕು ಮಹಾರಾಜ'  ಸದ್ಯ ಟ್ರೆಂಡಿಂಗ್‌ನಲ್ಲಿದೆ. ಆದರೆ 64 ವರ್ಷದ ನಂದಮೂರಿ ಬಾಲಕೃಷ್ಣ ಮತ್ತು 30 ವರ್ಷದ ಊರ್ವಶಿ ರೌತೆಲಾ ಕೆಮಿಸ್ಟ್ರಿಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಡಾಕು ಮಹಾರಾಜ' ಸಿನಿಮಾದ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದು, ಇದು ಡ್ಯಾನ್ಸ್ ಅಲ್ಲ, ನಟಿ ಮೇಲಿನ ಹಲ್ಲೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ತಮಗಿಂತ 34 ವರ್ಷ ಚಿಕ್ಕವಳಾಗಿರುವ ನಟಿ ಜೊತೆ ಬಾಲಯ್ಯ ಈ ರೀತಿಯಾಗಿ ಡ್ಯಾನ್ಸ್ ಮಾಡಲು ಒಪ್ಪಿಕೊಳ್ಳಬಾರದಿತ್ತು ಎಂದು ಅಭಿಮಾನಿಗಳೇ ಬೇಸರ ಹೊರ ಹಾಕಿದ್ದಾರೆ. 

ಈ ಎಲ್ಲಾ ಬೆಳವಣಿಗೆ ನಡುವೆ ಹಾಡಿನ ಮೇಕಿಂಗ್ ವಿಡಿಯೋ ವೈರಲ್ ಆಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ ಊರ್ವಶಿಗೆ ಬಾಲಯ್ಯ ಅಂಟಿಕೊಂಡಿರೋದನ್ನು ಗಮನಿಸಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು, ಮುದುಕನಿಗೆ ದ್ರಾಕ್ಷಿ ಸಿಕ್ಕಿದೆ ಎಂದು ಕಮೆಂಟ್ ಮಾಡಿದ್ದಾರೆ. ನಂದಮೂರಿ ಬಾಲಕೃಷ್ಣ ಅವರಿಗೆ ಈ ವಯಸ್ಸಲ್ಲಿ ಇಂಥ ಪಾತ್ರಗಳು ಯಾಕೆ? ಜೀವನದ ಪೂರ್ಣ ಖುಷಿ ಇವರು ಅನುಭವಿಸುತ್ತಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. 

Tap to resize

Latest Videos

ಊರ್ವಶಿ ರೌತೆಲಾ ಸುರಸುಂದರಿಯಾದ್ರೂ ಬಾಲಿವುಡ್‌ನಲ್ಲಿ ಅವಕಾಶಗಳು ಸಿಗುತ್ತಿಲ್ಲ  ಯಾಕೆ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಅವಕಾಶಗಳು ಕಡಿಮೆಯಾದ ಹಿನ್ನೆಲೆ ಊರ್ವಶಿ ಮುದುಕನ  ಜೊತೆ ನಟಿಸಲು ಒಪ್ಪಿಕೊಂಡಿರಹುದು ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಇದೇ ವೇಳೆ ಕೆಲವರು ಜೈಲರ್ ಸಿನಿಮಾದಲ್ಲಿ ರಜಿನಿಕಾಂತ್ ಮತ್ತು ತಮ್ಮನ್ನಾ ಭಾಟಿಯಾ ಜೊತೆಯಾಗಿ 'ಕಾವಲಯ್ಯ' ಹಾಡಿನಲ್ಲಿ ನಟಿಸಿದ್ರೂ ಅಸಭ್ಯವಾಗಿ ಇರಲಿಲ್ಲ. ರಜಿನಿಕಾಂತ್ ಅವರನ್ನು ನೋಡಿ ನಂದಮೂರಿ ಬಾಲಕೃಷ್ಣ ಕಲಿತುಕೊಳ್ಳಬೇಕಿದೆ. ವಯಸ್ಸಿಗೆ ತಕ್ಕಂತೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅಭಿಮಾನಿಗಳು ಬಾಲಯ್ಯ ಅವರಿಗೆಮ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್, ಕನ್ನಡತಿ ಪೂಜಾ ಹೆಗ್ಡೆ ರಹಸ್ಯ ಬಿಚ್ಚಿಟ್ಟ ನಂದಮೂರಿ ಬಾಲಕೃಷ್ಣ!

'ಡಾಕು ಮಹಾರಾಜ' ಯಾವಾಗ ತೆರೆಗೆ?
ನಿರ್ದೇಶಕ ಕೆ.ಎಸ್. ರವೀಂದ್ರ ಅವರ 'ಡಕು ಮಹಾರಾಜ' ಚಿತ್ರ ಜನವರಿ 12 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ನಾಗ ವಾಮ್ಸಿ ಮತ್ತು ಸಾಯಿ ಸೌಜನ್ಯ ಸಿನಿಮಾವನ್ನು ನಿರ್ಮಿಸಿದ್ದಾರೆ. ನಂದಮೂರಿ ಬಾಲಕೃಷ್ಣ ನಾಯಕರಾಗಿ, ಅಂದರೆ 'ಡಕು ಮಹಾರಾಜ'ನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್, ಪ್ರಜ್ಞಾ ಜೈಸ್ವಾಲ್, ಬಾಬಿ ಡಿಯೋಲ್, ರಿಷಿ, ಚಾಂದನಿ ಚೌಧರಿ, ಜೀವನ್ ಕುಮಾರ್, ಸತ್ಯ ಅಕೇಲಾ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಇದೇನು ಈ ವಯಸ್ಸಲ್ಲಿ ಬಾಲಯ್ಯನ ಅವತಾರ! ದಬಿಡಿ ದಿಬಿಡಿ ಹಾಡು ಹಿಗ್ಗಾಮಗ್ಗಾ ಟ್ರೋಲು

click me!