ಕ್ಯಾಮೆರಾ ಎದುರು ಒಂದೊಂದೇ ಡ್ರೆಸ್​ ತೆಗೆದ ನಟಿ ಉರ್ಫಿ ಜಾವೇದ್​! ಬೇರೆಯವರಿಗೂ ಏನಾದ್ರೂ ಉಳಿಸಿ ಎಂದ ನೆಟ್ಟಿಗರು

By Suvarna News  |  First Published Jan 8, 2025, 6:25 PM IST

ಬಟ್ಟೆಗಳಿಂದಲೇ ಫೇಮಸ್​  ಆಗಿರುವ ನಟಿ ಉರ್ಫಿ ಜಾವೇದ್​ ಇದೀಗ ಕ್ಯಾಮೆರಾ ಎದುರೇ ಒಂದೊಂದೇ ಬಟ್ಟೆ ತೆಗೆದಿದ್ದಾರೆ. ನಟಿಯ ಹೊಸ ವೇಷಕ್ಕೆ ನೆಟ್ಟಿಗರು ಏನೆಲ್ಲಾ ಹೇಳಿದ್ರು ನೋಡಿ...
 


ಉರ್ಫಿ ಜಾವೇದ್‌ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡುವ ನಟಿ ಈಕೆ.  ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ.  ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿಯ ವಿಚಿತ್ರ ವೇಷ ಮಾತ್ರ ಮುಂದುವರೆದೇ ಇದೆ. ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್​ ಚೆಸ್ಟ್​ ಎಂದು ಹೇಳುವ ಡಿಜಿಟಲ್​ ಬೋರ್ಡ್​ ಹಾಕಿಕೊಂಡು ಸುತ್ತಾಡಿದ್ದ ಉರ್ಫಿ ಕೊನೆಗೆ ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡಿದ್ದರು.  ಉಡ ಅವರ ಮೈಮೇಲೆ ಹರಿದಾಡುವಂತೆ ಕಾಣುವ ವಿಡಿಯೋ ಶೇರ್‌ ಮಾಡಿದ್ದರು. 

ಇದೀಗ ಡ್ರೆಸ್​ ಮೇಲೆ ಡ್ರೆಸ್​ ಹಾಕಿಕೊಂಡು ಕ್ಯಾಮೆರಾ ಎದುರಿಗೆ ಒಂದೊಂದೇ ಬಟ್ಟೆಯನ್ನು ಕಳಚಿದ್ದಾರೆ. ಕೊನೆಯಲ್ಲಿ ಸುಂದರವಾಗಿರುವ ಕಪ್ಪು ಡ್ರೆಸ್​ ಮೇಲೆ ಕಾಣಿಸಿಕೊಂಡಿರುವ ನಟಿ ಇಷ್ಟೇ ಸಾಕು ಬಿಡಿ ಎಂದಿದ್ದಾರೆ. ಇದರ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ವೈರಲ್​ ಆಗುತ್ತಿದೆ. ಒಂದು ಶಬ್ದದಲ್ಲಿ ನಟಿಯನ್ನು ವರ್ಣಿಸಿ ಎಂದು ಕ್ಯಾಪ್ಷನ್​ ಕೊಡಲಾಗಿದ್ದು, ಇದಕ್ಕೆ  ಥರಹೇವಾರಿ ರೀತಿಯಲ್ಲಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಕ್ವೀನ್​, ಬ್ಯೂಟಿ, ಹಾಟಿ ಎಂದೆಲ್ಲಾ ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಮತ್ತೆ ಕೆಲವರು ಎಲ್ಲಾ ಕ್ರಿಯೆಟಿವಿಟಿ ನೀವೇ ಮಾಡಿದ್ರೆ ಬೇರೆ ನಟಿಯರು ಏನು ಮಾಡಬೇಕು, ಅವರಿಗೂ ಏನಾದ್ರೂ ಉಳಿಸಿ ಎನ್ನುತ್ತಿದ್ದಾರೆ. 

Tap to resize

Latest Videos

ತುಂಡುಡುಗೆ ಖ್ಯಾತಿಯ ಉರ್ಫಿ ಜಾವೇದ್​ ಮದುವೆ ದಿನ ಹಾಕೋ ಬಟ್ಟೆ ಹೇಗಿರುತ್ತೆ? ಅವರ ಆಸೆ ಹೀಗಿದೆ ಕೇಳಿ...

ಅಷ್ಟಕ್ಕೂ ಇಂಥ ಚಿತ್ರ-ವಿಚಿತ್ರ ಡ್ರೆಸ್​ ತಾವು ಏಕೆ ಧರಿಸುವುದು ಎಂಬ ಬಗ್ಗೆ ಕೆಲ ದಿನಗಳ ಹಿಂದಷ್ಟೇ ನಟಿ ಮಾತನಾಡಿದ್ದರು. 'ನಾನು ಏನೇ ಮಾಡಿದರೂ ಅದು ನನ್ನ ಸಲುವಾಗಿ. ನಾನು ಯಾರನ್ನೂ ಮೆಚ್ಚಿಸಬೇಕಿಲ್ಲ. ಯಾವುದೇ ಹೆಣ್ಣುಮಕ್ಕಳನ್ನು ಮೆಚ್ಚಿಸುವ ಉದ್ದೇಶವೂ ನನಗೆ ಇಲ್ಲ, ಯಾವುದೇ ಮಹಿಳೆಯರನ್ನು ಸಬಲೀಕರಣ ಮಾಡುವ ಉದ್ದೇಶವೂ ಇಲ್ಲ. ನಾನು ಇದನ್ನು ಫೇಮಸ್ ಆಗಲು ಮತ್ತು ಶ್ರೀಮಂತೆ ಆಗುವುದಕ್ಕಾಗಿ ಮಾಡುತ್ತಿದ್ದೇನೆ. ಅದನ್ನು ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ. ಯಾರು ಏನೇ ಹೇಳಿದರೂ ಅದಕ್ಕೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನನ್ನು ನೋಡಿ ಯಾರೂ ಮೆಚ್ಚಿಕೊಳ್ಳಬೇಕಾದದ್ದೂ ಇಲ್ಲ' ಎಂದಿದ್ದರು ಉರ್ಫಿ.

ಹೆಚ್ಚು ಹಣ ಬಂದ ತಕ್ಷಣ ಏನು ಮಾಡುವಿರಿ ಎನ್ನುವ ಪ್ರಶ್ನೆಗೆ ಉರ್ಫಿ, ನಾನು ರಾಯ್ಸ್ರಾಯ್ ಕಾರು ಖರೀದಿ ಮಾಡುತ್ತೇನೆ. ಇದು ನನ್ನ ಆಸೆ ಎಂದಿದ್ದರು. ಇದೇ ವೇಳೆ, ನಾನು ಹಣವನ್ನು ತುಂಬಾ ಇಷ್ಟಪಡುತ್ತೇನೆ. ಹಣ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿಯೂ ಹಣಕ್ಕಿಂತ ಮುಖ್ಯವಾದದ್ದು ಏನೂ ಇಲ್ಲ. ಹಣ ಇದ್ದರೆ ಸುಖ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಅದು ಸುಳ್ಳು. ಹಣ ಇದ್ದರೆ ಸುಖವನ್ನೂ ಪಡೆದುಕೊಳ್ಳಬಹುದು. ಜೀವನದಲ್ಲಿ ಏನುಬೇಕಾದರೂ ಮಾಡಬಹುದು. ಹಣವೇ ಮುಖ್ಯ. ಹಣವೇ ಜೀವನ. ಹಣದಿಂದ ಎಲ್ಲವೂ ಸಾಧ್ಯ ಎಂದಿದ್ದರು ನಟಿ. ಹಣ ಇದ್ದರೆ ಮಾತ್ರ ಜನರು ನಿಮ್ಮ ಜೊತೆ ಇರುತ್ತಾರೆ. ನಿಮ್ಮ ಸುತ್ತಲಿನ ಜನರನ್ನು ಖುಷಿಯಾಗಿ ಇಡಲು ಸಾಧ್ಯವಾಗುವುದು ಹಣದಿಂದ ಮಾತ್ರ. ಹಣ ಇಲ್ಲದಿದ್ದರೆ ಈ ಜೀವನದಲ್ಲಿ ಏನೂ ಇಲ್ಲ ಎನ್ನುವುದು ಉರ್ಫಿಯ ಮಾತು.

ಹಣವೇ ಜೀವನ, ಹಣವೇ ಸರ್ವಸ್ವ, ಹಣವೊಂದಿದ್ದರೆ... ಎನ್ನುತ್ತಲೇ ಬಟ್ಟೆಯ ಗುಟ್ಟನ್ನೂ ರಟ್ಟು ಮಾಡಿದ ಉರ್ಫಿ
 

click me!