Salman Khan And Director fight: ಸಲ್ಮಾನ್ ಖಾನ್ ಕೋಪದಲ್ಲಿ ಒಬ್ಬ ಸಿನಿಮಾ ನಿರ್ದೇಶಕರಿಗೆ ಹೊಡೆದಿದ್ರು! ಅಪ್ಪ ಸಲೀಂ ಖಾನ್ ಹೇಳಿದ್ರು ಸಲ್ಮಾನ್ ಕ್ಷಮೆ ಕೇಳಿದ್ದು ಹೇಗೆ ಅಂತ. ಯಾವ ನಿರ್ದೇಶಕ, ಏನಾಯ್ತು ಅಂತ ತಿಳ್ಕೊಳ್ಳಿ.
ಮುಂಬೈ: ಬಾಲಿವುಡ್ನ ಸೂಪರ್ಸ್ಟಾರ್ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದಿಂದಲೇ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳ ಜೊತೆ ಅವರ ಜಗಳಗಳು ಸುದ್ದಿಯಾಗಿವೆ. ಕೆಲ ವರದಿಗಳ ಪ್ರಕಾರ, ಐಶ್ವರ್ಯಾ ರೈ ತಮ್ಮ ಮೇಲೆ ಸಲ್ಮಾನ್ ಹಲ್ಲೆ ಮಾಡಿದ್ದರಿಂದಲೇ ಬ್ರೇಕಪ್ ಮಾಡಿಕೊಂಡರು ಎಂಬ ಮಾತಿದೆ. ಸಲ್ಮಾನ್ ಖಾನ್ ತುಂಬಾ ಕೋಪಿಷ್ಟ ಎಂಬ ಮಾತುಗಳನ್ನು ಅವರ ಅತ್ಯಾಪ್ತರು ಹೇಳುತ್ತಾರೆ. ಒಮ್ಮೆ ಸಲ್ಮಾನ್ ಖಾನ್ ಕೋಪದಲ್ಲಿ ಸಿನಿಮಾ ನಿರ್ದೇಶಕ ಸುಭಾಷ್ ಘೈಗೆ ಎಲ್ಲರ ಮುಂದೆ ಹೊಡೆದಿದ್ರಂತೆ. ಆದ್ರೆ, ಸಲ್ಮಾನ್ಗೆ ತಮ್ಮ ತಪ್ಪಿನ ಅರಿವಾಯ್ತು, ಕ್ಷಮೆ ಕೇಳಿದ್ದರು. ಆದರೆ ಸುಭಾಷ್ ಘೈ ಮೇಲೆ ಹೊಡಿದಿದ್ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಘಟನೆ ಬಗ್ಗೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಹೇಳಿದ್ದಾರೆ.
ಜಗಳ ಆದ ಮಾರನೇ ದಿನ ನಾನು ಟೀ ಕುಡಿಯುತ್ತಿದ್ದಾಗ ಮಗ ಸಲ್ಮಾನ್ ಖಾನ್ ನನ್ನ ಬಳಿಗೆ ಬಂದು ಏನಾಯ್ತು ಅಂತ ಹೇಳಿದ. ನಾನು ಎಲ್ಲವನ್ನೂ ಕೇಳಿದೆ, ನಿನ್ನ ತಪ್ಪು ಅಂತ ಗೊತ್ತಾ ಎಂದು ಹೇಳಿದೆ. ಸಲ್ಮಾನ್ ಸಹ ತನ್ನ ತಪ್ಪನ್ನು ಒಪ್ಪಿಕೊಂಡ. ತಪ್ಪಾಯ್ತು, ಆ ಸಂದರ್ಭದಲ್ಲಿ ಕುಡಿದಿದ್ದೆ ಅಂತಂದ. ಫೋನ್ ಮಾಡಿ ಸುಭಾಷ್ಗೆ ಕ್ಷಮೆ ಕೇಳು ಎಂದು ಹೇಳಿದೆ. ತಪ್ಪನ್ನು ತಿಳಿದುಕೊಂಡ ಸಲ್ಮಾನ್ ಖಾನ್ ಕರೆ ಮಾಡಿ ಸುಭಾಷ್ ಘೈ ಬಳಿ ಕ್ಷೆಮ ಕೇಳಿದ ಎಂದು ಸಲೀಂ ಖಾನ್ ಹೇಳಿದ್ದಾರೆ.
ಸಲ್ಮಾನ್ ಖಾನ್ ಹೇಳಿದ್ದೇನು?
ಕೆಲ ವರ್ಷಗಳ ಹಿಂದೆ ಸಲ್ಮಾನ್ ಕೂಡ ಸುಭಾಷ್ಗೆ ಹೊಡೆದಿದ್ದು ನಿಜ ಅಂತ ಒಪ್ಪಿಕೊಂಡಿದ್ರು. ತುಂಬಾ ಪಶ್ಚಾತ್ತಾಪ ಆಯ್ತು ಅಂತ ಹೇಳಿದ್ರು. ಆದ್ರೆ, ಎದುರು ಕಡೆಯವರು ನನ್ನ ಕಾಲರ್ ಹಿಡಿದು, ಬೈದು, ನನ್ನ ಶೂ ಮೇಲೆ ಮೂತ್ರ ಮಾಡಿದ್ರು ಅಂತ ಹೇಳಿದ್ರು. ಆದ್ರೂ ಮಾರನೇ ದಿನ ಫೋನ್ ಮಾಡಿ ಕ್ಷಮೆ ಕೇಳಿದ್ದೆ ಅಂತಂದ್ರು. ಈ ಘಟನೆ ಆದ್ಮೇಲೂ ಸುಭಾಷ್ ಘೈ ಮತ್ತು ಸಲ್ಮಾನ್ ಖಾನ್ ಒಳ್ಳೆ ಫ್ರೆಂಡ್ಸ್ ಆಗಿದ್ದಾರೆ. ಸಲ್ಮಾನ್ ಖಾನ್ ಕೊನೆಯ ಬಾರಿ 'ಟೈಗರ್ 3' ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು. 2025ರ ಈದ್‌ಗೆ 'ಸಿಕಂದರ್' ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಲಾಗಿದೆ. 'ಕಿಕ್ 2', 'ಟೈಗರ್ ವರ್ಸಸ್ ಪಠಾಣ್' ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.
ಇದನ್ನೂ ಓದಿ: ತುಂಡುಡುಗೆ ತೊಡಲೂ ರಿಸ್ಟ್ರಿಕ್ಟ್ ಮಾಡ್ತಿದ್ನಂತೆ ಸಲ್ಮಾನ್ ಖಾನ್, ಬ್ರೇಕ್ ಅಪ್ ಬಗ್ಗೆ ಓಪನ್ ಆದ ಸಂಗೀತಾ ಬಿಜಲಾನಿ
ಸಲ್ಮಾನ್ ಮನೆಗೆ ಬುಲೆಟ್ ಪ್ರೂಫ್ ಗ್ಲಾಸ್
ಮುಂಬೈನ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ಸ್ ನಿವಾಸದ ಬಾಲ್ಕನಿಗೆ ಸಲ್ಮಾನ್ ಖಾನ್ ಬುಲೆಟ್‌ಪ್ರೂಫ್ ಗ್ಲಾಸ್ ಅಳವಡಿಕೆ ಮಾಡಿದ್ದಾರೆ. ಜೀವ ಬೆದರಿಕೆಗಳ ನಂತರ ಈ ರೀತಿಯ ಸುರಕ್ಷಾ ಕ್ರಮಗಳನ್ನು ಸಲ್ಮಾನ್ ಖಾನ್ ತೆಗೆದುಕೊಂಡಿದ್ದಾರೆ. ಗಾಜು ಅಳವಡಿಕೆ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ದುಬೈನಿಂದ ಆಮದು ಮಾಡಿಕೊಂಡ ಬುಲೆಟ್‌ಪ್ರೂಫ್ ನಿಸ್ಸಾನ್ ಪೆಟ್ರೋಲ್ SUV ಕಾರ್‌ನಲ್ಲಿ ಸಲ್ಮಾನ್ ಖಾನ್ ಮನೆಯಿಂದ ಹೊರಗೆ ತೆರಳುತ್ತಾರೆ.
ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್ ಬೆದರಿಕೆಯ 8 ತಿಂಗಳ ಬಳಿಕ ಸಲ್ಮಾನ್ ಖಾನ್ ಮನೆಗೆ ಬುಲೆಟ್‌ಪ್ರೂಫ್ ಗಾಜು ಅಳವಡಿಕೆ