ಮೊಣಕಾಲಿನಲ್ಲೇ ತಿರುಪತಿ ಮೆಟ್ಟಿಲು ಹತ್ತಿದ್ದ ಜಾಹ್ನವಿ, ವಿಡಿಯೋ ಹಂಚಿಕೊಂಡ ಒರಿ!

Published : Mar 22, 2024, 03:19 PM ISTUpdated : Mar 25, 2024, 10:44 AM IST
ಮೊಣಕಾಲಿನಲ್ಲೇ ತಿರುಪತಿ ಮೆಟ್ಟಿಲು ಹತ್ತಿದ್ದ ಜಾಹ್ನವಿ, ವಿಡಿಯೋ ಹಂಚಿಕೊಂಡ ಒರಿ!

ಸಾರಾಂಶ

ಬಾಲಿವುಡ್ ನಟಿ ಜಾಹ್ನವಿ ಕಪೂರ್ , ಜಾಹ್ನವಿ ಬಾಯ್‌ಫ್ರೆಂಡ್ ಹಾಗೂ ಒರಿ ಇತ್ತೀಚಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಆದರೆ ತಿರುಪತಿ ದರ್ಶನ ಪಡೆಯಲು ಇವರು ಮೊಣಕಾಲಿನಲ್ಲೇ ಮೆಟ್ಟಿಲು ಹತ್ತಿ ತೆರಳಿದ್ದರು. ಈ ಕುರಿತ ವಿಡಿಯೋವನ್ನು ಒರಿ ಹಂಚಿಕೊಂಡಿದ್ದಾರೆ.  

ತಿರುಪತಿ(ಮಾ.22) ದಕ್ಷಿಣ ಭಾರತದ ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಕ್ಷೇತ್ರವಾಗಿರುವ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಸೆಲೆಬ್ರೆಟಿಗಳು, ಗಣ್ಯರು, ಉದ್ಯಮಿಗಳು ಭೇಟಿ ನೀಡುತ್ತಿರುವುದು ಹೊಸದೇನಲ್ಲ. ಇತ್ತೀಚೆಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್, ತಮ್ಮ ಬಾಯ್‌ಫ್ರೆಂಡ್ ಹಾಗೂ ಒರಿ ಜೊತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಮೂವರು ಬಾಲಾಜಿ ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಈ ಭೇಟಿಯ ವಿಡಿಯೋವನ್ನು ಒರಿ ಪೋಸ್ಟ್ ಮಾಡಿದ್ದಾರೆ. ವಿಶೇಷ ಅಂದರೆ ಜಾಹ್ನಾವಿ ಕಪೂರ್, ಆಕೆಯ ಬಾಯ್‌ಫ್ರೆಂಡ್ ಹಾಗೂ ಒರಿ ಮೊಣಕಾಲಿನ ಮೂಲಕ ಮೆಟ್ಟಿಲಗಳನ್ನು ಹತ್ತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಜಾಹ್ನವಿ ಕಪೂರ್ , ತಮ್ಮ ಬಾಯ್‌ಫ್ರೆಂಡ್ ಎಂದೇ ಗುರುತಿಸಿಕೊಂಡಿರುವ ಶಿಖರ್ ಪಹಾರಿಯಾ ಹಾಗೂ ಒರಿ ಜೊತೆಯಾಗಿ ಮಾರ್ಚ್ 6 ರಂದು ತಿರುಪತಿ ದೇವಸ್ಥಾನಕ್ಕೆ ಬೇಟಿ ನೀಡಿದ್ದರು. ಜಾಹ್ನವಿ ತಾಯಿ, ನಟಿ ಶ್ರೀದೇವಿ ತಿರುಪತಿ ಬಾಲಾಜಿಯ ಭಕ್ತರಾಗಿದ್ದರು. ದಕ್ಷಿಣ ಭಾರತದ ನಟಿ ಶ್ರೀದೇವಿ ಅತೀ ಹೆಚ್ಚು ಬಾರಿ ತಿರುಪತಿ ಬಾಲಾಜಿ ದರ್ಶನ ಪಡೆದಿದ್ದಾರೆ. ಮಾರ್ಚ್ 6 ರಂದು ಜಾಹ್ನವಿ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ನಾನೇ ಬಾಲಿವುಡ್‌ನ ಸೆಕ್ಸಿಯಸ್ಟ್‌ ನಟಿ ಎಂದ ಲೇಡಿ ಸೂಪರ್ ಸ್ಟಾರ್ ಮಗಳು!

ದೇವಸ್ಥಾನಕ್ಕೆ ಬೇಟಿ ನೀಡಿದ ಈ ವಿಡಿಯೋವನ್ನು ಒರಿ ಹಂಚಿಕೊಂಡಿದ್ದಾರೆ. ಸತತ 3 ಗಂಟೆಗಳ ಕಾಲ ಮೆಟ್ಟಿಲುಗಳನ್ನು ಹತ್ತಿ ಮೂವರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಜಾಹ್ನವಿ ಮೊಣಕಾಲಿನಲ್ಲಿ ಸರಾಗವಾಗಿ ಮೆಟ್ಟಿಲು ಹತ್ತಿದರೆ, ಒರಿ ಹಾಗೂ ಶಿಖರ್ ಪ್ರಯಾಸದಿಂದ ಮೆಟ್ಟಿಲು ಹತ್ತಿದ್ದಾರೆ. ಮೊಣಕಾಲಿನಲ್ಲೇ ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದಿದ್ದಾರೆ.

ಜಾಹ್ನವಿ ಕಪೂರ್ ತಮ್ಮ 27ನೇ ಹುಟ್ಟು ಹಬ್ಬ ಆಚರಿಸಿಕೊಳ್ಳಲು ಆಪ್ತರಾದ ಶಿಖರ್ ಪಹಾರಿಯಾ ಹಾಗೂ ಒರಿಗೆ ಆಮಂತ್ರಣ ನೀಡಲಾಗಿತ್ತು. ಹುಟ್ಟುಹಬ್ಬ, ಕೇಕ್ ಕತ್ತರಿಸುವುದು, ಪಾರ್ಟಿ ಬದಲು ಜಾಹ್ನವಿ ವಿಶೇಷವಾಗಿ ಪ್ಲಾನ್ ಮಾಡಿದ್ದರು. ಆಧ್ಯಾತ್ಮಿಕವಾಗಿ ಜಾಹ್ನವಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಬಯಸಿದ್ದರು. ಈ ಪಯಣದಲ್ಲಿ ಶಿಖರ್ ಹಾಗೂ ಒರಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿತ್ತು. ಕೇಳುವಾಗ ಸುಲಭ ಎಂದನಿಸಬಹುದು. ಆದರೆ ಅಷ್ಟು ಸುಲಭದ ಮಾತಲ್ಲ. ಕಾರಣ ಸಮುದ್ರಮಟ್ಟದಿಂದ ಬರೋಬ್ಬರಿ 3000 ಅಡಿ ಎತ್ತರದಲ್ಲಿರುವ ಈ ದೇವಸ್ಥಾನವನ್ನು ಮೆಟ್ಟಿಲುಗಳ ಮೂಲಕ ಹತ್ತಲು ನಿರ್ಧರಿಸಲಾಗಿತ್ತು. ದೇವಸ್ಥಾನಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರ ದರ್ಶನ ಪಡೆದು ಪುನೀತರಾಗಿದ್ದೇವೆ ಎಂದು ಒರಿ ಹೇಳಿಕೊಂಡಿದ್ದಾರೆ.

ಮಗಳ ಬಾಯ್‌ಫ್ರೆಂಡ್ ಜೊತೆ ಫೋಸ್ ನೀಡಲು ನಿರಾಕರಿಸಿದ ಬೋನಿ ಕಪೂರ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!