ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!

Published : Dec 08, 2025, 04:28 PM IST
Divya Khosla Kumar

ಸಾರಾಂಶ

ದಿವ್ಯಾ ಖೋಸ್ಲಾ ಕುಮಾ‌ರ್ ಮತ್ತು ಭೂಷಣ್ ಕುಮಾರ್ ಅವರ ದಾಂಪತ್ಯಕ್ಕೆ ಸಂಬಂಧಿಸಿ ಆಗಾಗ ವಿಚ್ಛೇಧನದ ಸುದ್ದಿಗಳು ಹರಿದಾಡುತ್ತವೆ. ಇಷ್ಟು ದಿನ ಯಾವುದೇ ವದಂತಿಗಳಿಗೆ ಕಿವಿಗೊಡದೇ ತಮ್ಮ ಕೆಸಲವನ್ನು ತಾವು ಮಾಡಿಕೊಂಡಿದ್ದ ದಿವ್ಯಾ ಖೋಸ್ಲಾ ಕುಮಾರ್ ಈ ಬಾರಿ ಮೌನ ಮುರಿದಿದ್ದಾರೆ, ಈ ಬಗ್ಗೆ ಮಾತನಾಡಿದ್ದಾರೆ.

ಡಿವೋರ್ಸ್ ಸುದ್ದಿ?

.ಕಾಲ ಅದೆಷ್ಟೇ ಬದಲಾದರೂ ಚಿತ್ರರಂಗದ ತಾರೆಯರ ವೈಯಕ್ತಿಕ ಬದುಕಿನ ಕುರಿತು ಹಲವರಲ್ಲಿ ಭಾರೀ ಕುತೂಹಲ ಇದ್ದೇ ಇರುತ್ತೆ. ಇದು ಒಂದುಕಡೆಯಾದರೆ, ಬಹಳಷ್ಟು ಸಿನಿಮಾ ಸ್ಟಾರ್‌ಗಳ ಬದುಕಿನಲ್ಲಿ ಅಲ್ಲೋಕಲ್ಲೋಲ ಆಗಿರುತ್ತೆ. ಆ ಬಗ್ಗೆ ಚರ್ಚೆ ಮಾಡುವುದು ಅಂದರೆ ಹಲವರಿಗೆ ಸಖತ್ ಖುಷಿ. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ತಾರೆಯರ ಮೇಲೆ ಸಮಾಜದ ಒಂದು ವರ್ಗ ಯಾವತ್ತೂ ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದುವೆ, ಪ್ರೀತಿ ಹಾಗೂ ಸಂಸಾರ ಎಂದರೆ ಬಟ್ಟೆ ಬದಲಿಸಿದಂತೆಯೇ ಎಂಬುದು ಹಲವರ ಅನಿಸಿಕೆ.

ಸೆಲೆಬ್ರಿಟಿಗಳ ಕುರಿತು ವಿಚ್ಛೇದನದ ವದಂತಿ

ಈ ಕಾರಣಕ್ಕೆ ಮದುವೆ ಆಗಿರುವ ಸಿನಿಮಾ ತಾರೆಯರ ಡಿವೋರ್ಸ್ ಸುದ್ದಿ ಯಾವ ಕ್ಷಣದಲ್ಲಾದರೂ ಹೊರ ಬರಬಹುದು ಎಂದು ಅನೇಕರು ಕಾಯುತ್ತಲೇ ಇರುತ್ತಾರೆ. ಕೆಲವರು ಚೆನ್ನಾಗಿರುವ ಸೆಲೆಬ್ರಿಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಸುಖಾಸುಮ್ಮನೇ ಹಬ್ಬಿಸುತ್ತಾರೆ. ಹೀಗೆ ಹಬ್ಬಿಸಲಾದ ಸುದ್ದಿಗಳನ್ನು ಕಂಡು, ಸಾಮಾನ್ಯವಾಗಿ ಕೆಲವು ತಾರೆಯರು ಸುಮ್ಮನಾಗುತ್ತಾರೆ, ಅದರೆ ಕೆಲವರು ಕೋಪಗೊಳ್ಳುತ್ತಾರೆ. ಹಲವರು ಸಮಯ ಸಂದರ್ಭ ಬಂದಾಗ ತಮ್ಮ ಕುರಿತು ಹಬ್ಬಿಸಲಾದ ಇಲ್ಲ ಸಲ್ಲದ ಸುದ್ದಿಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಅದು ದಿವ್ಯಾ ಖೋಸ್ಲಾ ಕುಮಾರ್.

ಹೌದು, ದಿವ್ಯಾ ಖೋಸ್ಲಾ ಕುಮಾರ್ (Divya Khosla Kumar) ಅವರು ಬಾಲಿವುಡ್‌ನ ನಾಯಕಿ, ನಿರ್ದೇಶಕಿ ಮತ್ತು ನಿರ್ಮಾಪಕಿ. "ಯಾರಿಯಾ 2", "ಅಬ್ ತುಮಾರೇ ಹವಾಲೇ ವತನ್ ಸಾತಿಯೋ"ಹಾಗು "ಸತ್ಯಮೇವ ಜಯತೇ 2" ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಈ ನಟಿ, ಹಲವಾರು ಆಲ್ಬಂ ಹಾಡುಗಳಿಗೆ ಹೆಜ್ಜೆ ಸಹ ಹಾಕಿದ್ದಾರೆ. "ಯಾರಿಯಾ" ಮತ್ತು "ಸನಮ್ ರೇ" ಚಿತ್ರಗಳನ್ನು ನಿರ್ದೇಶನ ಮಾಡಿರುವ ದಿವ್ಯಾ ಖೋಸ್ಲಾ ಕುಮಾರ್ ಹಲವು ಚಿತ್ರಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ.

ಇದೆಲ್ಲಕ್ಕೂ ಮಿಗಿಲಾಗಿ, ದಿವ್ಯಾ ಖೋಸ್ಲಾ ಕುಮಾರ್ ಅವರ ಗಂಡ ಸಾಮಾನ್ಯದವರಲ್ಲ. 10,000 ಕೋಟಿಗೂ ಮೀರಿದ ಆಸ್ತಿಯ ಸಾಮ್ರಾಜ್ಯದ ಒಡೆಯ. ಅಷ್ಟೇ ಅಲ್ಲ, ಅವರು 'ಟೀ ಸೀರಿಸ್' ಸಂಸ್ಥೆಯ ಮಾಲೀಕ ಭೂಷಣ್ ಕುಮಾರ್ (T Series Bhushan Kumar). ಕಳೆದ 20 ವರ್ಷಗಳಿಂದ ಈ ಇಬ್ಬರೂ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಇವರಿಬ್ಬರ ಪ್ರೀತಿಯ ಸಂಕೇತವಾಗಿ ಇವರಿಗೆ ವಯಸ್ಸಿಗೆ ಬಂದಿರುವ ಒಬ್ಬ ಮಗ ಕೂಡ ಇದ್ದಾರೆ.

ಮೌನ ಮುರಿದ ದಿವ್ಯಾ ಖೋಸ್ಲಾ

ಇಂಥ ದಿವ್ಯಾ ಖೋಸ್ಲಾ ಕುಮಾ‌ರ್ ಮತ್ತು ಭೂಷಣ್ ಕುಮಾರ್ ಅವರ ದಾಂಪತ್ಯಕ್ಕೆ ಸಂಬಂಧಿಸಿ ಆಗಾಗ ವಿಚ್ಛೇದನದ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇಷ್ಟು ದಿನ ಯಾವುದೇ ವದಂತಿಗಳಿಗೆ ಕಿವಿಗೊಡದೇ ತಮ್ಮ ಕೆಸಲವನ್ನು ತಾವು ಮಾಡಿಕೊಂಡಿದ್ದ ದಿವ್ಯಾ ಖೋಸ್ಲಾ ಕುಮಾರ್ ಈ ಬಾರಿ ಮೌನ ಮುರಿದಿದ್ದಾರೆ, ಈ ಬಗ್ಗೆ ಮಾತನಾಡಿದ್ದಾರೆ. ಸತ್ಯ ಸಂಗತಿ ಏನೆಂಬುದನ್ನು ಜಗತ್ತಿಗೇ ಹೇಳಿದ್ದಾರೆ. ಹಾಗಿದ್ದರೆ ಅದೇನು?

ದಿವ್ಯಾ ಖೋಸ್ಲಾ ಕುಮಾರ್ ಇತ್ತೀಚೆಗೆ "ರೆಡಿಟ್"ನಲ್ಲಿ ತಮ್ಮ ಅಭಿಮಾನಿಗಳ ಜೊತೆ ಪ್ರಶೋತ್ತರ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಮಯದಲ್ಲಿ ಒಬ್ಬರು ದಿವ್ಯಾ ಖೋಸ್ಲಾ ಕುಮಾ‌ರ್ ಅವರಿಗೆ ವಿಚ್ಚೇದನ ಕುರಿತು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರ ನೀಡಿರುವ ದಿವ್ಯಾ ಖೋಸ್ಲಾ ಕುಮಾರ್ 'ಇಲ್ಲ ನಾನು ಡಿವೋರ್ಸ್ ಕೊಡುತ್ತಿಲ್ಲ' ಎಂದು ಹೇಳಿದ್ದಾರೆ. ಆದರೆ.. 'ನಾನು ಭೂಷಣ್ ಕುಮಾರ್ ಅವರಿಂದ ದೂರವಾಗಬೇಕು, ಅವರಿಗೆ ವಿಚ್ಛೇದನ ನೀಡಬೇಕೆಂದು ಮಾಧ್ಯಮಗಳು ಬಯಸುತ್ತಿವೆ' ಎಂದು ಹೇಳಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರ ರೂಪವಾಗಿ ದಿವ್ಯಾ ಅವರು ಬಾಲಿವುಡ್ ಲಾಬಿ, ಒತ್ತಡ ಹಾಗೂ ವಾತಾವರಣದ ಕುರಿತು ಕೂಡ ಮಾತನಾಡಿದ್ದಾರೆ. 'ಬಾಲಿವುಡ್ ಎಂದರೆ ಸುತ್ತಲೂ ಮೊಸಳೆಗಳಿರುವ ಸ್ಥಳ.. ಅವುಗಳ ನಡುವೆ ನೀವು ದಾರಿ ಮಾಡಿಕೊಂಡು ಮುನ್ನಡೆಯಬೇಕು' ಎಂದು ಹೇಳಿದ್ದಾರೆ. ಸದ್ಯ ದಿವ್ಯಾ ಖೋಸ್ಲಾ ಕುಮಾ‌ರ್ ಅವರ ಈ ಮಾತುಗಳು ಬಾಲಿವುಡ್‌ನಲ್ಲಿ ಚರ್ಚೆಗೆ ಕಾರಣವಾಗಿವೆ. ಜೊತೆಗೆ, ಈ ಜೋಡಿ ವಿಚ್ಛೇಧದನ ನೀಡಲಿ ಎಂದು ಹಲವರು ಬಯಸುತ್ತಿದ್ದಾರೆ ಎಂಬುದು ಗುಟ್ಟಿನ ಸಂಗತಿಯೇನೂ ಅಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!