ಆಮೀರ್ ಖಾನ್ ಪುತ್ರಿ, ನಟಿ ಇರಾ ಖಾನ್ ತನ್ನ ಬಹುವರ್ಷಗಳ ಬಾಯ್ಫ್ರೆಂಡ್ ಜೊತೆ ಮದುವೆ ಮಾಡಿಕೊಳ್ಳಲಿದ್ದಾರೆ. ಅವರ ಪ್ರೀ ವೆಡ್ಡಿಂಗ್ ಕಾರ್ಯ ಶುರುವಾಗಿದ್ದು, ಫೋಟೋಗಳು ವೈರಲ್ ಆಗಿವೆ.
ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಮತ್ತು ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ಫಿಟ್ನೆಸ್ ಫ್ರೀಕ್ ನೂಪುರ್ ಶಿಖರೆ ಜೊತೆ ಮುಂಬೈನಲ್ಲಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬರುವ ಜನವರಿ 3ರಂದು ಮದುವೆ ನಿಗದಿಯಾಗಿದ್ದು, ಮದುವೆಗೆ ಮುಂಚಿನ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ಶುರುವಾಗಿದೆ. ಮುಂಬೈನಲ್ಲಿ ಕಳೆದ ನವೆಂಬರ್ನಲ್ಲಿ ನಿಶ್ಚಿತಾರ್ಥ ನಡೆದಿತ್ತು. ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಆಮೀರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್, ಅಳಿಯ ಇಮ್ರಾನ್ ಖಾನ್ ಹಾಗೂ ನಿರ್ದೇಶಕ ಅಶುತೋಷ್ ಗೌರೀಕರ್ ಹಾಗೂ ಕುಟುಂಬ ಸದಸ್ಯರು, ಸ್ನೇಹಿತರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಸೆಪ್ಟೆಂಬರ್ನಲ್ಲಿ, ನುಪೂರ್ ಶಿಖಾರೆ ಸೈಕ್ಲಿಂಗ್ ಈವೆಂಟ್ನಲ್ಲಿ ಭಾಗಿಯಾಗಿದ್ದರು. ಆ ಕಾರ್ಯಕ್ರಮಕ್ಕೆ ಪ್ರೇಯಸಿ ಇರಾ ಖಾನ್ ಕೂಡ ಭಾಗಿಯಾಗಿದ್ದರು. ಆಗ ನುಪೂರ್ ಪ್ರೇಯಸಿ ಇರಾಗೆ ಪ್ರಪೋಸ್ ಮಾಡಿದ್ದರು. ಎಲ್ಲರ ಮುಂದೆಯೇ ಮಂಡಿಯೂರಿ ಪ್ರಪೋಸ್ ಮಾಡಿ, ರಿಂಗ್ ಹಾಕಿ ಲವ್ ಯು ಹೇಳಿ, ಲಿಪ್ ಕಿಸ್ ಮಾಡಿದ್ದರು. ನುಪೂರ್, ಮಂಡಿಯೂರಿ ನೀವು ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿದರು. ಆಗ ಇರಾ ಮೈಕ್ ತೆಗೆದುಕೊಂಡು ಹೌದು ಎಂದು ಹೇಳಿದರು. ಬಳಿಕ ಇಬ್ಬರು ಹಗ್ ಮಾಡಿ ಪ್ರೀತಿ ವ್ಯಕ್ತಪಡಿಸಿದರು. ನವ ಜೋಡಿಗೆ ಕಾರ್ಯಕ್ರಮದಲ್ಲಿದ್ದ ಎಲ್ಲರೂ ಚಪ್ಪಾಳೆ ತಟ್ಟಿ ವಿಶ್ ಮಾಡಿದ್ದರು. ಇದಾದ ಬಳಿಕ ಎಂಗೇಜ್ಮೆಂಟ್ ಆಗಿತ್ತು. ನಿಶ್ಚಿತಾರ್ಥವಾಗಿ ವರ್ಷದ ಬಳಿಕ ಇದೀಗ ಮದುವೆಗೆ ಜೋಡಿ ಸಿದ್ಧವಾಗಿದೆ.
ಇದೀಗ ಮದುವೆ ಶಾಸ್ತ್ರದ ಫೋಟೋಗಳನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಗಂಡು ಮತ್ತು ಹೆಣ್ಣಿನ ಹೆತ್ತವರು ಪರಸ್ಪರ ಮದುವೆಗೆ ಆಹ್ವಾನ ನೀಡುವಂತಹ ಶಾಸ್ತ್ರ ಇದ್ದು, ಅದರ ಸಂಪ್ರದಾಯದಂತೆ ಮದುವೆಯ ಕೆಲ್ವನ್ ಸಮಾರಂಭ ನಡೆಯುತ್ತಿದೆ. ಈ ಶಾಸ್ತ್ರದ ಊಟ ಉಪಾಹಾರ, ಭೋಜನಗಳ ವಿಡಿಯೋಗಳನ್ನು ಇರಾ ಖಾನ್ ಹಂಚಿಕೊಂಡಿದ್ದಾರೆ. ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ, ಕುತೂಹಲ ಎಂದರೆ ಯಾವುದೇ ಫೋಟೋ ಮತ್ತು ವಿಡಿಯೋದಲ್ಲಿ ಅಮೀರ್ ಖಾನ್ ಕಾಣಿಸಿಕೊಂಡಿಲ್ಲ. ಇದು ಚರ್ಚೆಗೂ ಗ್ರಾಸವಾಗುತ್ತಿದೆ.
ಮಾಜಿ ಪತಿಯ ಮದ್ವೆ ಆಗ್ತಿದ್ದಂತೆಯೇ, ನಾಯಿ ಜೊತೆ ಪಾರ್ಟಿಗೆ ಹೋದ ಮಲೈಕಾ ಅರೋರಾ: ನೆಟ್ಟಿಗರು ಹೀಗೆಲ್ಲಾ ಹೇಳೋದಾ?
ಇನ್ನು ಇರಾ ಭಾವಿ ಪತಿ ನೂಪುರ್ ಶಿಖರೆ ಕುರಿತು ಹೇಳುವುದಾದರೆ, ಅವರು 17 ವರ್ಷದವರಾಗಿದ್ದಾಗಲೇ ಜಿಮ್ನಲ್ಲಿ ಟ್ರೈನರ್ ಆಗಿ ಕೆಲಸ ಮಾಡಲು ಶುರುಮಾಡಿದ್ರು. ಶಿಕ್ರೆ ಫಿಟ್ನೆಸ್ಗೆ ಇರಾ ತುಂಬಾ ಪ್ರಭಾವಿತರಾಗಿದ್ದರು ಮತ್ತು ಅವರನ್ನು ಸೂಪರ್ ಫಿಟ್ ಮನುಷ್ಯ ಎಂದು ಕರೆದಿದ್ದಾರೆ. ಜಿಮ್ನಲ್ಲಿ ಭೇಟಿಯಾದ ಈ ಜೋಡಿ ಸ್ನೇಹಿತರಾದರು ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರ ಲವ್ ಬಗ್ಗೆ ತಿಳಿದ ಬಳಿಕ ಆಮೀರ್ ಖಾನ್ ಮದುವೆಗೆ ಹಸಿರು ನಿಶಾನೆ ತೋರಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ಇರಾ ಖಾನ್ ಅವರು ಖಿನ್ನತೆಯೊಂದಿಗೆ ತಮ್ಮ ದೀರ್ಘಕಾಲದ ಹೋರಾಟದ ಬಗ್ಗೆ ಚರ್ಚಿಸಿದ್ದರು ಮತ್ತು ಕುಟುಂಬದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿವೆ ಎಂದು ಹೇಳಿದ್ದರು. ಇರಾ ಖಾನ್ ಖಿನ್ನತೆಯೊಂದಿಗಿನ ತನ್ನ ಅನುಭವಗಳ ಪರಿಣಾಮವಾಗಿ ತನ್ನ ನಡವಳಿಕೆಯು ಹೇಗೆ ಬದಲಾಯಿತು ಎಂಬುದನ್ನು ವಿವರಿಸಿದರು. ಅವರು ಆಗಾಗ್ಗೆ ಅಳುತ್ತಿದ್ದರು ಮತ್ತು ದಿನಗಟ್ಟಲೆ ಉಪವಾಸ ಇರುತ್ತಿದ್ದರು ಎಂದು ಹೇಳಿಕೊಂಡಿದ್ದರು. 'ನಾನು ಜೀವಂತವಾಗಿರಲು ಬಯಸುವುದಿಲ್ಲ ಎಂಬ ವಿಷಯವನ್ನು ನನ್ನ ತಾಯಿ ಕಂಡುಕೊಂಡರು.ದಿನದಲ್ಲಿ ಕಡಿಮೆ ಅವಧಿ ಜೀವಂತ ಇರಬಹುದು ಎಂದು ನಾನು ದಿನದ ಹೆಚ್ಚು ಕಾಲ ಮಲಗುತ್ತಿದ್ದೆ' ಎಂದು ಇರಾ ಖಾನ್ TOI ಜೊತೆಗಿನ ತನ್ನ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದರು.
ಹಾಯ್ ಬೇಬಿ.. ಏನಾದರೂ ಧರಿಸಿದ್ರೂ ಓಕೆ, ಆದ್ರೆ ಬಣ್ಣ ಕಪ್ಪು ಇರಲಿ... ಲವ್ ಯೂ ಸೋ ಮಚ್...