ಲತಾ ಮಂಗೇಶ್ಕರ್ 'ಲಗ್‌ ಜಾ ಗಲೆ' ಹಾಡಿ ಇಂಟರ್‌ನೆಟ್‌ ಬ್ರೇಕ್ ಮಾಡಿದ 2 ವರ್ಷದ ಮಗು!

Published : Dec 04, 2019, 02:22 PM IST
ಲತಾ ಮಂಗೇಶ್ಕರ್ 'ಲಗ್‌ ಜಾ ಗಲೆ' ಹಾಡಿ ಇಂಟರ್‌ನೆಟ್‌ ಬ್ರೇಕ್ ಮಾಡಿದ 2 ವರ್ಷದ ಮಗು!

ಸಾರಾಂಶ

  2 ವರ್ಷದ ಪುಟ್ಟ ಮಗು ಲತಾ ಮಂಗೇಶ್ಕರ್ ಐಕಾನಿಕ್‌ 'Lag Jaa Gale' ಹಾಡನ್ನು ಹಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ..

ದಾದ ಸಾಹೇಬ್‌ ಫಾಲ್ಕೆ ಪುರಸ್ಕೃತೆ , ಸಂಗೀತ ಲೋಕದ ಗಾನ ಕೋಗಿಲೆ ಲತಾ ಮಂಗೇಶ್ಕರ್‌ ಮೋಸ್ಟ್‌ ಮೆಲೋಡಿಯಸ್ ಸಾಂಗ್‌ ಎಂದೇ ಹೆಸರು ಪಡೆದುಕೊಂಡಿರುವ Woh Kaun Thi ಚಿತ್ರದ 'ಲಗ್‌ ಜಾ ಗಾಲೆ' ಹಾಡನ್ನು ಎರಡು ವರ್ಷ ಪುಟ್ಟ ಬಾಲಕಿ ಹಾಡಿರುವ ವಿಡಿಯೋ ಇಂಟರ್‌ನೆಟ್‌ ಬ್ರೇಕ್ ಮಾಡಿದೆ. ಈ ಮಗುವಿನ ಪೋಷಕರು ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರಾಕಿಂಗ್ ಪ್ರಿನ್ಸಸ್ Ayra 'ಕ್ಯಾಂಡಿ' ಥೀಮ್ ಬರ್ತಡೇ ಫೋಟೋಗಳಿವು!

2 ವರ್ಷದ ಪುಟ್ಟ ಮಗು ಲತಾ ಮಂಗೇಶ್ಕರ್ ಹಾಡನ್ನು ಲಯಬದ್ಧವಾಗಿ, ಲಿರಿಕ್ಸ್ ತಪ್ಪಿಲ್ಲದಂತೆ ಹಾಡಿರುವುದು ಆಶ್ಚರ್ಯ. ಇದೊಂದು ಅಪರೂಪದ ಘಟನೆ ಎಂದೇ ಹೇಳಬಹುದು! ವಿಡಿಯೋ ವೈರಲ್ ಆಗುತ್ತಿದ್ದಂತೆ ಹೆಚ್ಚು ಹೆಚ್ಚು ಜನ ಶೇರ್ ಮಾಡಿಕೊಂಡಿದ್ದಾರೆ.

ತಾಯಿಯಾದ ನಂತರ ಗುರುತೇ ಸಿಗದಷ್ಟು ಬದಲಾಗಿದ್ದಾರೆ 'ಅಗ್ನಿಸಾಕ್ಷಿ' ಚಂದ್ರಿಕಾ?

'ಪ್ರಾಗ್ಯಾಮೇದ 11' ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜುಲೈ ತಿಂಗಳಿನಲ್ಲಿ ಆಕೆಯ ತಾಯಿ ಶೇರ್ ಮಾಡಿಕೊಂಡಿದ್ದರು. ಈಗ ವೈರಲ್ ಆಗುತ್ತಿದ್ದು ಪುಟ್ಟ ಕಂದಮ್ಮ ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ 9 ಸಾವಿರ ವೀಕ್ಷಣೆ ಮತ್ತು 2 ಸಾವಿರ ಲೈಕ್ ಪಡೆದುಕೊಂಡಿದೆ. ಅಷ್ಟೇ ಅಲ್ಲದೆ 'ಲಿಟಲ್ ಲತಾಜೀ' ಎಂದೆಲ್ಲಾ ಕಾಮೆಂಟ್‌ಗಳು ಬರುತ್ತಿದೆ.

 

ಕೆಲ ದಿನಗಳ ಹಿಂದೆ ಪ್ರಾಗ್ಯಾ ಮತ್ತು ತಾಯಿ ಇಬ್ಬರೂ ಬೆಂಗಾಲಿ ಹಾಡನ್ನು ಹಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದರು. ಅದಕ್ಕೆ ತಾಯಿ 'ಆಕೆ ಒಳ್ಳೆಯ ಮೂಡ್‌ನಲ್ಲಿ ಇದ್ದರೆ ಮಾತ್ರ ಹಾಡುತ್ತಾಳೆ' ಎಂದು ಬರೆದುಕೊಂಡಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!