ಬಾಕ್ಸಾಫೀಸ್ ಸುಲ್ತಾನ್‌ಗೆ ಕಿಚ್ಚ ಸುದೀಪ್ ಟಕ್ಕರ್ ಕೊಡುವ ದಿನ ಹತ್ತಿರ ಬಂದಿದೆ | ಬಹುನಿರೀಕ್ಷಿತ 'ದಬಾಂಗ್-3' ಸಿನಿಮಾ ತೆರೆಗೆ ಬರಲು ಸಿದ್ಧ | ಕಪಿಲ್ ಶರ್ಮಾ ಶೋನಲ್ಲಿ ದಬಾಂಗ್ ಟೀಂ ಭಾಗಿ
ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ದಬಾಂಗ್-3' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ.
ಬಾಲಿವುಡ್ ಪ್ರತಿ ಸಿನಿಮಾ ಪ್ರಮೋಶನ್‌ಗೂ ಖ್ಯಾತ ರಿಯಾಲಿಟಿ ಶೋ 'ದಿ ಕಪಿಲ್ ಶರ್ಮಾ' ಶೋ ವೇದಿಕೆಯನ್ನು ಬಳಸಿಕೊಳ್ಳುತ್ತಾರೆ. ಅದೇ ರೀತಿ ದಬಾಂಗ್-3 ಟೀಂ ಕಪಿಲ್ ಶರ್ಮಾ ಶೋಗೆ ಆಗಮಿಸಿತ್ತು. ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಕಿಚ್ಚ ಸುದೀಪ್, ಅರ್ಬಾಜ್ ಖಾನ್, ಪ್ರಭುದೇವ ಪಾಲ್ಗೊಂಡಿದ್ದಾರೆ. ತಮಾಷೆಗೆ ಹೆಸರಾಗಿರುವ ಕಪಿಲ್ ಶರ್ಮಾ ಎಲ್ಲರನ್ನು ನಕ್ಕು ನಗಿಸಿದ್ದಾರೆ. ಇಲ್ಲಿರುವವರೆಲ್ಲರೂ ಸಖತ್ ಸೆನ್ಸ್ ಆಫ್ ಹ್ಯೂಮರ್ ಇರುವವರು. ಹಾಗಾಗಿ ಸಖತ್ ಫನ್ನಿಯಾಗಿಯೇ ಇರುತ್ತದೆ.
Promotions starts with the . with 😊 pic.twitter.com/JWsc4A8k99
— sabina lamba (@SabinaLamba)ಕಿಚ್ಚ ಸುದೀಪ್ ಕಪಿಲ್ ಶರ್ಮಾ ಶೋನಲ್ಲಿ ಭಾಗವಹಿಸಿದ್ದು ಇದೇ ಮೊದಲಲ್ಲ. ಸಿಸಿಎಲ್ -ಟಿ10 ಶುರುವಾದಾಗ ಪ್ರಚಾರದ ನಿಮಿತ್ತ ಸುನೀಲ್ ಶೆಟ್ಟಿ ಜೊತೆ ಸುದೀಪ್ ಕಾಣಿಸಿಕೊಂಡಿದ್ದರು.
ಅಕ್ಷಯ್ ಜೊತೆ ಸಿನಿಮಾ ಮಾಡಲು ಯಾವ ನಿರ್ದೇಶಕರೂ ಮುಂದೆ ಬರ್ತಿಲ್ಲ?
ಕನ್ನಡಕ್ಕೆ ಡಬ್ ಆಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಕನ್ನಡ ವರ್ಷನ್ ಡೈಲಾಗ್‌ಗಳನ್ನು ಗುರುದತ್ತ್ ಗಾಣಿಗ ಬರೆಯುತ್ತಿದ್ದಾರೆ. ಮತ್ತೊಬ್ಬ ನಿರ್ದೇಶಕ ಅನೂಪ್ ಭಂಡಾರಿ ಅವರು ಚಿತ್ರದಲ್ಲಿರುವ ಆರು ಹಾಡಿಗೂ ಸಾಹಿತ್ಯ ಬರೆಯುತ್ತಿದ್ದಾರೆ. ಹಾಗಂತ ಇದು ಡಬ್ಬಿಂಗ್ ಅಲ್ಲ. ಸಂಭಾಷಣೆಗಳನ್ನು ಮಾತ್ರ ಹಿಂದಿಯಿಂದ ಕನ್ನಡೀಕರಣ ಮಾಡಲಾಗುತ್ತಿದೆ.
ಆದರೆ, ಹಾಡುಗಳ ವಿಚಾರದಲ್ಲಿ ಮಾತ್ರ ಹೊಸದಾಗಿ ಸಾಹಿತ್ಯಬರೆಸುವುದಕ್ಕೆ ಚಿತ್ರತಂಡ ಮುಂದಾಗಿದ್ದು, ಇದಕ್ಕೆ ಅನೂಪ್ ಭಂಡಾರಿ ಅವರಿಂದಲೇ ಎಲ್ಲ ಹಾಡುಗಳನ್ನು ಬರೆಸಲಾಗುತ್ತಿದೆ.
ಬಾತ್ ಟಬ್‌ನ ಬಿಸಿ ಬಿಸಿ ಪೋಟೋ ಶೇರ್ ಮಾಡಿದ ಬಿಗ್ ಬಾಸ್ ಚೆಲುವೆ!
ಈ ಚಿತ್ರದ ಕನ್ನಡ ಮತ್ತು ಹಿಂದಿ ಬಿಡುಗಡೆಯ ಹಕ್ಕುಗಳನ್ನು ತೆಗೆದುಕೊಂಡಿರುವುದು ನಿರ್ಮಾಪಕ ಜಾಕ್ ಮಂಜು ಅವರು. ಅವರೇ ಡಿ. 20ರಂದು ರಾಜ್ಯಾದ್ಯಾಂತ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.