ಸೋಲಿನ ಸುಳಿಯಲ್ಲಿ ಬಾಲಿವುಡ್; ಚಿತ್ರಮಂದಿರಗಳು ಖಾಲಿ, ಲಾಲ್ ಸಿಂಗ್ ಚಡ್ಡಾ1300, ರಕ್ಷಾ ಬಂಧನ್ 1000 ಶೋಗಳು ರದ್ದು

By Suvarna News  |  First Published Aug 13, 2022, 5:38 PM IST

 ಲಾಲ್ ಸಿಂಗ್ ಚಡ್ಡಾ ಸಿನಿಮಾದ 1300 ಶೋಗಳನ್ನು ರದ್ದು ಮಾಡಲಾಗಿದೆಯಂತೆ. ಅನೇಕ ಕಡೆ ಲಾಲ್ ಸಿಂಗ್ ಚಡ್ಡಾ ವಾಶ್ ಔಟ್ ಆಗಿದೆ. ಆಮೀರ್ ಖಾನ್ ಸಿನಿಮಾಗೆ ಇಂಥ ಪರಿಸ್ಥಿತಿ ಬಂದಿರುವುದು ದೊಡ್ಡ ದುರಂತ. 
 


ಬಾಲಿವುಡ್ ಸ್ಟಾರ್ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ರಿಲೀಸ್ ಆಗಿದೆ. ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ದೇಶ- ವಿದೇಶಗಲ್ಲಿ ತೆರೆಗೆ ಬಂದಿದೆ. ಭಾರಿ ನಿರೀಕ್ಷೆಯೊಂದಿಗೆ ರಿಲೀಸ್ ಆದ ಲಾಲ್ ಸಿಂಗ್ ಚಡ್ಡಾ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ವಿಫಲವಾಗಿದೆ. ಬಾಕ್ಸ್ ಆಫೀಸ್ ನಲ್ಲೂ ಆಮೀರ್ ಖಾನ್ ಕಮಾಲ್ ಮಾಡಿಲ್ಲ. ಒಂದು ಕಾಲದಲ್ಲಿ ಆಮೀರ್ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಆ ಕ್ರೇಸ್ ಬೇರೆ ಲೆವೆಲ್‌ನಲ್ಲೇ ಇರುತ್ತಿತ್ತು. ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದರು. ಮೊದಲ ದಿನದ ಕಲೆಕ್ಷನ್ 50ಕೋಟಿ ರೂಪಾಯಿ ಇರುತ್ತಿತ್ತು. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಆಮೀರ್ ಖಾನ್  ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ.  ವರ್ಷಕೊಂದು ಸಿನಿಮಾ ಮಾಡಿದ್ರು ಬ್ಲಾಕ್ ಬಸ್ಟರ್ ಸಿನಿಮಾ ಆಗಿರುತ್ತಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಮಾಯಿ ಮಾಡುತ್ತಿತ್ತು. ಆದರೀಗ ಹಾಗಿಲ್ಲ. ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು ಕಂಡಿದೆ. 

ಲಾಲ್ ಸಿಂಗ್ ಚಡ್ಡಾ ಸುಮಾರು 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಮೊದಲ ದಿನ ಲಾಲ್ ಸಿಂಗ್ ಚಡ್ಡಾ ಕೇವಲ11 ರಿಂದ 12 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಆಮೀರ್ ಖಾನ್ ಸಿನಿಮಾ ಮೇಲೆ ನಿರೀಕ್ಷೆ ಜಾಸ್ತಿ, ಹಾಗಾಗಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಆದರೆ ರಿಲೀಸ್ ಆಗಿ ಎರಡೇ ದಿನಕ್ಕೆ ಚಿತ್ರಮಂದಿರಗಳ ಕಡೆ ಜನ ಬರುತ್ತಿಲ್ಲ. ಆಮೀರ್ ನೋಡಲು ಜನ ಬರದ ಕಾರಣ ಪ್ರದರ್ಶಕರು ಅನೇಕ ಶೋಗಳನ್ನು ರದ್ದು ಮಾಡಲು ನಿರ್ಧರಿಸಿದ್ದಾರೆ. ಶುಕ್ರವಾರ ಚಿತ್ರಮಂದಿರಗಳಲ್ಲಿ ಜನ ಇಲ್ಲದೆ ಅನೇಕ ಶೋಗಳನ್ನು ಕ್ಯಾನ್ಸಲ್ ಮಾಡಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಲಾಲ್ ಸಿಂಗ್ ಚಡ್ಡಾ ಸಿನಿಮಾದ 1300 ಶೋಗಳನ್ನು ರದ್ದು ಮಾಡಲಾಗಿದೆಯಂತೆ. ಅನೇಕ ಕಡೆ ಲಾಲ್ ಸಿಂಗ್ ಚಡ್ಡಾ ವಾಶ್ ಔಟ್ ಆಗಿದೆ. ಆಮೀರ್ ಖಾನ್ ಸಿನಿಮಾಗೆ ಇಂಥ ಪರಿಸ್ಥಿತಿ ಬಂದಿರುವುದು ದೊಡ್ಡ ದುರಂತ. 

ಲಾಲ್ ಸಿಂಗ್ ಚಡ್ಡಾ ಹೀನಾಯ ಸೋಲು; 13 ವರ್ಷಗಳಲ್ಲೇ ಇಂಥ ಸೋಲು ಕಂಡಿರಲಿಲ್ಲ ಆಮೀರ್ ಖಾನ್

Tap to resize

Latest Videos

ಆಮೀರ್ ಸಿನಿಮಾಗೆ ಬಾಯ್ಕಟ್ ಅಭಿಯಾನ 

ಆಮೀರ್ ಖಾನ್ ಈ ಸಿನಿಮಾ ಅನೌನ್ಸ್ ಮಾಡಿದಾಗಿನಿಂದ ಬಾಯ್ಕಟ್ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಆಮೀರ್ ಖಾನ್ ಈ ಹಿಂದೆ ನೀಡಿದ್ದ ಹೇಳಿಕೆ. ಮಾಜಿ ಪತ್ನಿ ಕಿರಣ್ ರಾವ್ ಜೊತೆ ಈ ದೇಶದಲ್ಲಿ ಅಸಹಿಷ್ಣುತೆ  ಜಾಸ್ತಿಯಾಗಿದೆ ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದೆ ಎಂದು ಹೇಳಿದ್ದರು. ಇದು ಆಮೀರ್ ಖಾನ್ ಗೆ ಭಾರಿ ಹಿನ್ನಡೆಯಾಗಿತ್ತು. ಆಮೀರ್ ಖಾನ್‌ಗೆ ದೇಶ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಲಾಯಿತು. ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ವೇಳೆ ಬಾಯ್ಕಟ್ ಅಭಿಯಾನ ಜೋರಾಯ್ತು. ಆದರೆ ಆಮೀರ್ ಖಾನ್ ಬಹಿರಂಗವಾಗಿ ಕ್ಷಮೆ ಕೇಳಿದರು. 'ನಾನು ದೇಶ ವಿರೋಧಿ ಅಲ್ಲ, ಸಿನಿಮಾ ಬಾಯ್ಕಟ್ ಮಾಡಬೇಡಿ, ಎಲ್ಲರೂ ಸಿನಿಮಾ ನೋಡಿ'  ಕೇಳಿಕೊಂಡಿದ್ದರು. ಆದರೂ ಬಾಯ್ಕಟ್ ಅಭಿಯಾನ ನಿಂತಿರಲಿಲ್ಲ, ಲಾಲ್ ಸಿಂಗ್ ಚಡ್ಡಾ ಸಿನಿಮಾ ಹೀನಾಯ ಸೋಲು ಅನುಭವಿಸಿದೆ. ಸದ್ಯ 1300 ಶೋಗಳು ರದ್ದಾಗಿವೆ. ಸದ್ಯದಲ್ಲೇ ಸಿನಿಮಾ ಚಿತ್ರಮಂದಿರಗಳಿಂದನೆ ಎತ್ತಂಗಡಿಯಾಗುವ ಸಾಧ್ಯತೆ ಇದೆ. 

ವಿಶೇಷ ಅಭಿಮಾನಿ ಜೊತೆ ಅಕ್ಷಯ್ ಕುಮಾರ್ ಮಸ್ತ್ ಡಾನ್ಸ್; ವಿಡಿಯೋ ವೈರಲ್

ರಕ್ಷಾ ಬಂಧನ್ 1000 ಶೋಗಳು ರದ್ದು 

ಇನ್ನು ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಸಿನಿಮಾ ಕೂಡ ಹೀನಾಯ ಸೋಲು ಕಂಡಿದೆ. ಅಕ್ಷಯ್ ಕುಮಾರ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದ್ದವು. ಆದರೀಗ ಕಾಲ ಬದಲಾಗಿದೆ. ಅಕ್ಷಯ್ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗುತ್ತಿವೆ. ಆಗಸ್ಟ್ 11ರಂದು ಲಾಲ್ ಸಿಂಗ್ ಚಡ್ಡಾ ದಿನವೇ ಬಂದ ರಕ್ಷಾ ಬಂಧನ್ ಸಿನಿಮಾ ಕೂಡ ಹೀನಾಯ ಸೋಲು ಕಂಡಿದೆ. ಮೊದಲ ದಿನ ಅಕ್ಷಯ್ ಕುಮಾರ್ ಸಿನಿಮಾ ಕೇವಲ 8 ಕೋಟಿ ಕಲೆಕ್ಷನ್ ಮಾಡಿತ್ತು. ರಕ್ಷಾಬಂಧನ್ ಸಿನಿಮಾ ಕೂಡ ಬರೋಬ್ಬರಿ 10 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿತ್ತು. ಆದರೀಗ ಚಿತ್ರಮಂದಿರಗಳತ್ತ ಜನರೇ ಬರುತ್ತಿಲ್ಲ. ಹಾಗಾಗಿ ಪ್ರದರ್ಶಕರು ಶೋಗಳನ್ನು ರದ್ದು ಮಾಡುತ್ತಿದ್ದಾರೆ. ರಕ್ಷಾ ಬಂಧನ್ ಸಿನಿಮಾ ಸುಮಾರು 1000 ಶೋಗಳು ರದ್ದಾಗಿವೆ. ಇನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ರಕ್ಷಾ ಬಂಧನ್ ಶೋಗಳಿಲ್ಲ ಎನ್ನಲಾಗುತ್ತಿದೆ. ಸಿನಿಮಾತಂಡಕ್ಕೆ ಮತ್ತಷ್ಟು ದೊಡ್ಡ ಹೊಡೆತ ಬಿದ್ದಿದೆ.   

click me!