ಹೊಸ ಸಿನಿಮಾ ಒಪ್ಪಿಕೊಳ್ಳದೆ ಇರಲು ಕಾರಣ ಬಿಚ್ಚಿಟ್ಟ ಲೈಗರ್ ಸ್ಟಾರ್ ವಿಜಯ್ ದೇವರಕೊಂಡ

By Shruiti G Krishna  |  First Published Aug 13, 2022, 4:18 PM IST

ವಿಜಯ್ ದೇವರಕೊಂಡ ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ ಯಾಕೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಈ ಬಗ್ಗೆ ಸ್ವತಃ ವಿಜಯ್ ದೇವರಕೊಂಡ ಅವರೆ ಉತ್ತರ ನೀಡಿದ್ದಾರೆ. 


ಟಾಲಿವುಡ್  ಸ್ಟಾರ್ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಅಂದಹಾಗೆ ಲೈಗರ್ ಸಿನಿಮಾ ಹಿಂದಿ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ವಿಜಯ್ ದೋವರಕೊಂಡ ಹಿಂದಿಗೂ ಕಾಲಿಡುತ್ತಿದ್ದಾರೆ. ಈಗಾಗಲೇ ಲೈಗರ್ ಸಿನಿಮಾ ಟೀಸರ್ ಮತ್ತು ಹಾಡಿನ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ. ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಅನನ್ಯಾ ಮತ್ತು ವಿಜಯ್ ಒಟ್ಟಿಗೆ ನಟಿಸಿದ್ದು ಈ ಜೋಡಿಯನ್ನು ತೆರೆಮೇಲೆ ನೋಡಲು ಕಾತರರಾಗಿದ್ದಾರೆ. ಈ ನಡುವೆ ವಿಜಯ್ ದೇವರಕೊಂಡ ಯಾವುದೇ ಹೊಸ ಸಿನಿಮಾಗೆ ಸಹಿ ಮಾಡಿಲ್ಲ ಯಾಕೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. 

ಲೈಗರ್ ಬಳಿಕ ವಿಜಯ್ ದೇವರಕೊಂಡ ಅವರಿಗೆ ಹಿಂದಿಯಲ್ಲಿ ಸಿಕ್ಕಾಪಟ್ಟೆ ಆಫರ್ ಬಂದಿದೆ. ವಿಜಯ್ ಇನ್ಮುಂದೆ ಹಿಂದಿಯಲ್ಲಿ ಬ್ಯುಸಿಯಾಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದುವರೆಗೂ ಯಾವುದೇ ಹಿಂದಿ ಸಿನಿಮಾಗೂ ಸಹಿ ಮಾಡಿಲ್ಲ. ಹಾಗಾಗಿ ವಿಜಯ್ ಯಾಕೆ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿದೆ. ಇದೀಗ ಈ ಬಗ್ಗೆ ಸ್ವತಃ ವಿಜಯ್ ದೇವರಕೊಂಡ ಅವರೆ ಉತ್ತರ ನೀಡಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ ವಿಜಯ್ ದೇವರಕೊಂಡ ಬಹಿರಂಗ ಪಡಿಸಿದ್ದಾರೆ. ಹಿಂದಿಯಲ್ಲಿ ತನಗೆ ಇಷ್ಟವಾದ ಯಾವುದೇ ಸ್ಕ್ರಿಪ್ಟ್ ಬಂದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಸದ್ಯ ಲೈಗರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಈ ಸಿನಿಮಾ ಸಕ್ಸಸ್ ಎಂಜಾಯ್ ಮಾಡಬೇಕು. ಬಳಿಕ ಹೊಸ ಸಿನಿಮಾ ಎಂದು ಹೇಳಿದ್ದಾರೆ. 

Tap to resize

Latest Videos

'ನಾನು ಈಗ ಯಾವುದೇ ಚಿತ್ರಕ್ಕೆ ಸಹಿ ಹಾಕಲು ಯೋಚಿಸಿಲ್ಲ. ನಾನು ಮೊದಲು ಈ ಚಿತ್ರವನ್ನು ಬಿಡುಗಡೆ ಮಾಡಿ ಅದರ ಯಶಸ್ಸನ್ನು ಎಂಜಾಯ್ ಮಾಡಲು ಬಯಸುತ್ತೇನೆ' ಎಂದು ವಿಜಯ್ ದೇವರಕೊಂಡ ಹೇಳಿದರು. ಇನ್ನು ಅವಸರದಲ್ಲಿ ಜಾಸ್ತಿ ಸಿನಿಮಾ ಮಾಡಲು ಬಯಸಲ್ಲ ಎಂದು ಹೇಳಿದರು.  'ನಾನು ಅವಸರದಲ್ಲಿ ಹೆಚ್ಚಿನ ಯೋಜನೆಗಳನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ನಾನು ಕೆಲವು ತಿಂಗಳ ನಂತರ ಸ್ಕ್ರಿಪ್ಟ್‌ಗಳನ್ನು ಕೇಳುತ್ತೇನೆ ಮತ್ತು ಆಯ್ಕೆ ಮಾಡುತ್ತೇನೆ' ಎಂದು ವಿಜಯ್ ಸಂದರ್ಶನದಲ್ಲಿ ಹೇಳಿದರು.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಂಬಂಧ: ಸತ್ಯ ಕೊನೆಗೂ ಬಹಿರಂಗ

ಅಂದಹಾಗೆ ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಸಹಿ ಮಾಡದೇ ಇರಲು ಬಹುಮುಖ್ಯ ಕಾರಣ ಲೈಗರ್ ಸಿನಿಮಾದ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಈ ಸಿನಿಮಾ ಮೂಲಕ ದೊಡ್ಡ ಸಕ್ಸಸ್ ನ ಕನಸಿನಲ್ಲಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ವಿಜಯ್ ಬೇಡಿಕೆ ಮತ್ತು ಮಾರುಕಟ್ಟೆ ಮತ್ತಷ್ಟು ಬೆಳೆಯಲಿದೆ. ಹಾಗಾಗಿ ಲೈಗರ್ ರಿಲೀಸ್ ಗಾಗಿ ವಿಜಯ್ ಕಾಯುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ವಿಜಯ್ ಬಾಲಿವುಡ್ ಯಾವ ಸ್ಟಾರ್ ಹೀರೋಗಳಿಗೂ ಕಮ್ಮಿ ಇಲ್ಲದ ಹಾಗೆ ಆಫರ್ ಬಂದರು ಅಚ್ಚರಿ ಪಡಬೇಕಾಗಿಲ್ಲ. 

ಹಾಗಾಗಿ ಚಿತ್ರ ಬಿಡುಗಡೆಯಾಗುವವರೆಗೂ ಕಾದು ನಂತರ ಹೊಸ ಆಫರ್‌ಗಳನ್ನು ಒಪ್ಪಿಕೊಳ್ಳಲು ವಿಜಯ್ ಪ್ಲಾನ್ ಮಾಡಿದ್ದಾರೆ. ಅಂದಹಾಗೆ ವಿಜಯ್ ಲೈಗರ್ ಸಿನಿಮಾ ಜೊತೆಗೆ ಜನಗಣಮನ ಮತ್ತು ಖುಷಿ ಸಿನಿಮಾಗಳಿವೆ. ಈಗಾಗಲೇ ಈ ಎರಡು ಸಿನಿಮಾಗಳ ಚಿತ್ರೀಕರಣ ಬಹುತೇಕ ಮುಗಿಸಿದ್ದಾರೆ. ಈ ಸಿನಿಮಾ ಬಳಿಕ ವಿಜಯ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದುನೋಡಬೇಕು. 

ಕಾರಲ್ಲಿ ಸೆಕ್ಸ್ ಮಾಡಿದ್ದಾರಾ ವಿಜಯ್ ದೇವರಕೊಂಡ? ಕರಣ್ ಮುಂದೆ ಸೆಕ್ಸ್ ಲೈಫ್ ತೆರೆದಿಟ್ಟ ಅರ್ಜುನ್ ರೆಡ್ಡಿ ಸ್ಟಾರ್

ಸದ್ಯ ಲೈಗರ್ ಸಿನಿಮಾದ ಕ್ರೇಜ್ ನಲ್ಲಿದ್ದಾರೆ. ನಟಿ ಅನನ್ಯಾ ಜೊತೆ  ವಿಜಯ್ ಪ್ರಮೋಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ವಿಜಯ್ ಮತ್ತು ಅನನ್ಯಾ ಹೋದಲೆಲ್ಲ ಅಭಿಮಾನಿಗಳ ದಂಡೆ ಸೇರುತ್ತಿದೆ. ಅಭಿಮಾನಿಗಳ ಕ್ರೇಸ್ ಜನೋಡಿ ವಿಜಯ್ ಕೂಡ ಫುಲ್ ಖುಷ್ ಆಗಿದ್ದಾರೆ. ಇನ್ನು ಸಿನಿಮಾವನ್ನು ಹೇಗೆ ಸ್ವಾಕರಿಸುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಬಹುನಿರೀಕ್ಷೆಯ ಲೈಗರ್ ಸಿನಿಮಾ ಆಗಸ್ಟ್ 25ಕ್ಕೆ ರಿಲೀಸ್ ಆಗುತ್ತಿದೆ.  

click me!