ಆಸ್ಕರ್​ ಅಂಗಳದಲ್ಲಿ ‘12th ಫೇಲ್​’: ಕನ್ನಡದಲ್ಲಿಯೂ ಡಬ್​ ಆಗಿರೋ ಈ ಚಿತ್ರಕ್ಕೆ ಸಿಗುವುದೇ ಪ್ರತಿಷ್ಠಿತ ಪ್ರಶಸ್ತಿ?

By Suvarna NewsFirst Published Nov 26, 2023, 12:19 PM IST
Highlights

 ಆಸ್ಕರ್​ ಪ್ರಶಸ್ತಿಗೆ ‘12th ಫೇಲ್​’ ಚಿತ್ರವನ್ನು ನಾಮಿನೇಟ್​ ಮಾಡಲಾಗಿದೆ. ಕನ್ನಡದಲ್ಲಿಯೂ ಡಬ್​ ಆಗಿರೋ ಈ ಚಿತ್ರಕ್ಕೆ ಸಿಗುವುದೇ ಪ್ರತಿಷ್ಠಿತ ಪ್ರಶಸ್ತಿ?
 

ಭಾರತದ ಆರ್​ಆರ್​ಆರ್​ ಚಿತ್ರದ ನಾಟು ನಾಟು ಆಸ್ಕರ್​ ಪ್ರಶಸ್ತಿ​ ಪಡೆದಿರುವ ಬೆನ್ನಲ್ಲೇ ಇದೀಗ ಮತ್ತೊಂದು ಭಾರತೀಯ ಚಿತ್ರ ಈ ಪ್ರಶಸ್ತಿಗಾಗಿ ಹವಣಿಸುತ್ತಿದೆ. ಈ ಚಿತ್ರ ‘12th ಫೇಲ್​’. ಕಳೆದ ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರವು  ಬಿಡುಗಡೆಯಾಗಿದ್ದು,  ಉತ್ತಮ ಗಳಿಕೆಯನ್ನು ಮಾಡುತ್ತಿದೆ. ಇದೀಗ ಬಾಕ್ಸ್ ಆಫೀಸ್​ನಲ್ಲಿಯೂ ಸದ್ದು ಮಾಡಿದ ಈ ಚಿತ್ರ,  ಹೊಸ ದಾಖಲೆ ಬರೆದಿದೆ. ಇದೀಗ ಆಸ್ಕರ್​ ಪ್ರಶಸ್ತಿ ಪಡೆಯಲು ಚಿತ್ರತಂಡ ರೆಡಿಯಾಗಿದೆ. ಚಿತ್ರವು  ಹಿಂದಿ, ಕನ್ನಡ ಮುಂತಾದ ಭಾಷೆಗಳಲ್ಲಿ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದರಲ್ಲಿ  ನಟ ವಿಕ್ರಾಂತ್​ ಮಾಸ್ಸಿ (Vikrant Massey) ನಟಿಸಿದ್ದಾರೆ. ಅವರೇ ಆಸ್ಕರ್​ ಪ್ರಶಸ್ತಿ ಕುರಿತು ಮಾಹಿತಿಯನ್ನೂ ನೀಡಿದರು. ಈಚೆಗೆ ನಡೆದ ‘ಸಾಹಿತ್ಯ ಆಜ್​ತಕ್​ 2023’ ಕಾರ್ಯಕ್ರಮದಲ್ಲಿ ವಿಕ್ರಾಂತ್​ ಮಾಸ್ಸಿ  ಈ ವಿಷಯ ತಿಳಿಸಿದರು.   ಭಾರತೀಯರು ಕೂಡ ಆಸ್ಕರ್​ ಪ್ರಶಸ್ತಿ ಗೆಲ್ಲಬಹುದು ಎಂಬುದಕ್ಕೆ ‘ಆರ್​ಆರ್​ಆರ್​’ ಸಿನಿಮಾವೇ ಸಾಕ್ಷಿ.  ಆ ಚಿತ್ರ ಕೂಡ ಸ್ವತಂತ್ರವಾಗಿ ನಾಮಿನೇಟ್​ ಆಗಿತ್ತು. ಈಗ ಇದೇ ಪ್ರಯತ್ನದಲ್ಲಿ ‘12th ಫೇಲ್​’ ಸಿನಿಮಾ ಕೂಡ ಇದೆ.  ಚಿತ್ರತಂಡವೇ ಸ್ವತಂತ್ರವಾಗಿ ನಾಮಿನೇಷನ್​ ಸಲ್ಲಿಸಿದೆ ಎಂದಿದ್ದಾರೆ.  ‘12th ಫೇಲ್​’ ಚಿತ್ರವನ್ನು  ವಿಧು ವಿನೋದ್​ ಚೋಪ್ರಾ ಅವರು ನಿರ್ದೇಶಿಸಿದ್ದಾರೆ.
 
‘12th ಫೇಲ್​’ ಚಿತ್ರವನ್ನು ಸ್ವತಂತ್ರವಾಗಿ ನಾಮಿನೇಟ್​ ಮಾಡಿದ್ದರೆ, ಭಾರತದಿಂದ ಅಧಿಕೃತವಾಗಿ ಮಲಯಾಳಂನ ‘2018’ ಚಿತ್ರ ಆಸ್ಕರ್​ ಸ್ಪರ್ಧೆಗೆ ಈಗಾಗಲೇ ಆಯ್ಕೆ ಆಗಿದೆ.  ಇನ್ನು ‘12th ಫೇಲ್​’  ಚಿತ್ರದ ಕುರಿತು ಹೇಳುವುದಾದರೆ, ಇದು ಸಾಹಿತಿ ಅನುರಾಗ್‍ ಪಾಠಕ್‍ ಅವರ ಕಾದಂಬರಿ ಆಧರಿತ ಕಥೆಯಾಗಿದೆ. ಜೀವನದಲ್ಲಿ ಹಲವು ಅಡೆತಡೆಗಳನ್ನು ಎದುರಿಸಿ, ಎಲ್ಲವನ್ನೂ ಮೀರಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಐಪಿಎಸ್ ಅ‍ಧಿಕಾರಿ ಮನೋಜ್‍ ಕುಮಾರ್ ಶರ್ಮಾ ಅವರ ಜೀವನ ಆಧರಿತ ಸಿನಿಮಾ ಇದಾಗಿದೆ.  ಮನೋಜ್‍ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ನಟ ವಿಕ್ರಾಂತ್​ ಮಾಸ್ಸಿ ಮಿಂಚಿದ್ದಾರೆ.  ಮಾಡಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಮೇಧಾ ಶಂಕರ್ ಅವರು ಸಿನಿಮಾದಲ್ಲಿ  ನಾಯಕಿಯಾಗಿದ್ದಾರೆ.

ಮದ್ವೆ ದಿನವೂ ಮೂವಿ ಹೆಂಡ್ತಿ ಫೋಟೋ ಹಾಕಿ ಅಭಿಮಾನಿಗಳನ್ನು ಕನ್​ಫ್ಯೂಸ್​ ಮಾಡಿದ ಪ್ರಥಮ್!
 
ವಿಧು ವಿನೋದ್ ಚೋಪ್ರಾ ಅವರ ಈ ಚಿತ್ರವು ವಿಶ್ವಾದ್ಯಂತ 53 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಭಾರತದಲ್ಲಿ ಚಿತ್ರವು ಒಟ್ಟು 42.6 ಕೋಟಿ ರೂಪಾಯಿ ಗಳಿಸಿದೆ. ಚಿತ್ರ ಬಿಡುಗಡೆಯಾಗಿ 4 ವಾರ ಕಳೆದರೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಪ್ರೇಕ್ಷಕರ ಕ್ರೇಜ್ ಕೂಡ ಎದ್ದು ಕಾಣುತ್ತಿದೆ. ಹಿಂದಿಯಲ್ಲಿ ನಿರ್ಮಾಣ ಆದ ಈ ಸಿನಿಮಾವನ್ನು ಕನ್ನಡಕ್ಕೂ ಡಬ್​ ಮಾಡಿ ಬಿಡುಗಡೆ ಮಾಡಲಾಯಿತು. ನಿರ್ದೇಶಕ ರೋಹಿತ್​ ಪದಕಿ ಅವರ ಸಾರಥ್ಯದಲ್ಲಿ ಕನ್ನಡದ ಡಬ್ಬಿಂಗ್ ಕೆಲಸ ನಡೆಯಿತು. ‘ಕೆಆರ್​ಜಿ ಸ್ಟುಡಿಯೋಸ್​’ ಮೂಲಕ ಕರ್ನಾಟಕದಲ್ಲಿ ಈ ಸಿನಿಮಾ ರಿಲೀಸ್ ಆಯಿತು. ವಿಧು ವಿನೋದ್​ ಚೋಪ್ರಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ.
 
ಕಳೆದ ತಿಂಗಳು, 2024 ರಲ್ಲಿ ಆಸ್ಕರ್‌ಗಾಗಿ ವಿನೋದ್ ಚೋಪ್ರಾ ಅವರ ‘12th ಫೇಲ್​’   ಚಿತ್ರವನ್ನು ಕಳುಹಿಸಲು ವಿಧು ತಯಾರಿ ನಡೆಸುತ್ತಿದ್ದಾರೆ ಎಂದು ವರದಿಯಾಗಿತ್ತು. ಅಂದಹಾಗೆ, ಚಿತ್ರದ ನಾಯಕ  ವಿಕ್ರಾಂತ್ ಮಾಸ್ಸೆ ಅವರು  ಕೇವಲ 15 ವರ್ಷದವರಾಗಿದ್ದಾಗ ನಟನೆಯನ್ನು ಪ್ರಾರಂಭಿಸಿದವರು. ಕಿರುತೆರೆ ಮೂಲಕ  ವೃತ್ತಿಜೀವನವನ್ನು  ಪ್ರಾರಂಭಿಸಿರುವ ಇವರು,  ನಂತರ ನಟ ಚಲನಚಿತ್ರಗಳಿಗೆ ಪ್ರವೇಶಿಸಿದ್ದಾರೆ. ಅವರ ಈ ಚಿತ್ರಕ್ಕೆ ಆಸ್ಕರ್​ ಪ್ರಶಸ್ತಿ ಲಭಿಸಲಿ ಎಂದು ಭಾರತೀಯರು ಹಾರೈಸುತ್ತಿದ್ದಾರೆ. 

Latest Videos

ಒದ್ದೆ ಕೂದಲಲ್ಲಿ ಬಂದು ಗಂಡನಿಗೆ ಟೀ ಕುಡಿಸಿ ನೋಡಿ... ಕೌನ್​ ಬನೇಗಾ ಕರೋರ್​ಪತಿಯಲ್ಲಿ ಅಮಿತಾಭ್​ ಸಲಹೆ!

click me!