ಜ್ಯೋತಿಕಾ ಸ್ಟಾರ್ ನಟಿಯಾಗಿರುವ ಕಾರಣಕ್ಕೆ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಹಲವಾರು ಕಡೆ ಜ್ಯೋತಿಕಾ ಬಳಿ ಅವರ ಗಂಡ ಸೂರ್ಯನ ಬಗ್ಗೆ ಕೇಳಿದಾಗ ಜ್ಯೋತಿಕಾ 'ಮನೆಯಲ್ಲಿ ಅವರೊಬ್ಬ ಬೋರಿಂಗ್ ಗಂಡ' ಎಂದಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣವನ್ನೂ ಕೊಟ್ಟಿದ್ದಾರೆ.
ನಟಿ ಜ್ಯೋತಿಕಾ ಸದ್ಯ ಮತ್ತೆ ಟ್ರೆಂಡ್‌ನಲ್ಲಿ ಇದ್ದಾರೆ. ಕಾರಣ, ಬಹಳ ವರ್ಷಗಳ ಬಳಿಕ ನಟಿ ಜ್ಯೋತಿಕಾ ಅವರು ಮಲಯಾಳಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ನಾಯಕತ್ವದ 'ಕಾಥಲ್' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಜ್ಯೋತಿಕಾ, ಮದುವೆ ಬಳಿಕ ತೆರೆಯ ಮೇಲೆ ಕಾಣಿಸಿಕೊಳ್ಳುತ್ತರುವ ಬೆರಳೆಣಿಕೆ ಚಿತ್ರಗಳಲ್ಲಿ ಇದೂ ಒಂದು. ತಮಿಳು ಸ್ಟಾರ್ ನಟ ಸೂರ್ಯ ಹೆಂಡತಿಯಾಗಿರುವ ನಟಿ ಜ್ಯೋತಿಕಾ ಮದುವೆ ಬಳಿಕ ಸಿನಿಮಾ ನಟನೆಗೆ ಬ್ರೇಕ್ ತೆಗೆದುಕೊಂಡಿದ್ದರು.
ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ 2006ರಲ್ಲಿ ಮದುವೆಯಾಗಿದ್ದಾರೆ. ಅವರಿಗೆ ದಿಯಾ ಎಂಬ ಮಗಳಿದ್ದಾಳೆ. ಮದುವೆ ಬಳಿಕ ನಟಿ ಜ್ಯೋತಿಕಾ ಸಿನಿಮಾ ನಟನೆ ಬಿಟ್ಟು ಮನೆಯಲ್ಲಿಯೇ ಇರಲು ಸೂರ್ಯ ತಂದೆ ಕಾರಣ ಎನ್ನಲಾಗಿದೆ. 'ಮಗ-ಸೊಸೆ ನಮ್ಮೊಟ್ಟಿಗೇ ಇರಲಿ, ಇರಬೇಕು' ಎಂದು ಸೂರ್ಯ ತಂದೆ ಹೇಳಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಮದುವೆ ಬಳಿಕ ಕೂಡ ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ದಂಪತಿಗಳು ಹುಟ್ಟಿದ ಮನೆಯಲ್ಲೇ ಇದ್ದರು. ಇತ್ತೀಚೆಗೆ ಈ ಜೋಡಿ ಬೇರೆ ಮನೆ ಮಾಡಿಕೊಂಡು ವಾಸವಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಸಂಗೀತಾ; ಊಸರವಳ್ಳಿ ಆಗಿದ್ದು ಇದಕ್ಕೇನಾ?
ಜ್ಯೋತಿಕಾ ಸ್ಟಾರ್ ನಟಿಯಾಗಿರುವ ಕಾರಣಕ್ಕೆ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಸಂದರ್ಶನಗಳಲ್ಲಿ ಭಾಗಿಯಾಗಿದ್ದಾರೆ. ಹಲವಾರು ಕಡೆ ಜ್ಯೋತಿಕಾ ಬಳಿ ಅವರ ಗಂಡ ಸೂರ್ಯನ ಬಗ್ಗೆ ಕೇಳಿದಾಗ ಜ್ಯೋತಿಕಾ 'ಮನೆಯಲ್ಲಿ ಅವರೊಬ್ಬ ಬೋರಿಂಗ್ ಗಂಡ' ಎಂದಿದ್ದಾರೆ. ಅದಕ್ಕೆ ಅವರು ತಮ್ಮದೇ ಆದ ಕಾರಣವನ್ನೂ ಕೊಟ್ಟಿದ್ದಾರೆ. 'ನಟ ಸೂರ್ಯ, ಅಂದರೆ ನನ್ನ ಗಂಡ ಶೂಟಿಂಗ್ ಇಲ್ಲದೇ ಮನೆಯಲ್ಲಿ ಇದ್ದರೆ ಹೆಚ್ಚು ಮಾತೇ ಆಡುವುದಿಲ್ಲ. ಅವರೇನಾದರೂ ಮಾತು ಆಡಿದರೆ ಅದು ಜಗತ್ತಿನ ಯಾವುದೋ ಸುದ್ದಿಗೆ ಸಂಬಂಧಪಟ್ಟಿರುತ್ತದೆ. ನನಗೆ ಅಂಥ ಸುದ್ದಿಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ. ಹೀಗಾಗಿ ತುಂಬಾ ಬೋರಿಂಗ್ ಎನಿಸುತ್ತದೆ' ಎಂದಿದ್ದಾರೆ ಜ್ಯೋತಿಕಾ.
ಶ್ರೀದೇವಿ ಜತೆ ಡಿಂಗ್ ಡಾಂಗ್; ಮಧ್ಯೆ ವಿಲನ್ ಆಗಿದ್ದವರ ಗುಟ್ಟು ಬಿಚ್ಚಿಟ್ಟ ನಟ ಮಿಥುನ್ ಚಕ್ರವರ್ತಿ
ಅಂದಹಾಗೆ, ನಟ ಸೂರ್ಯ ಹಾಗೂ ನಟಿ ಜ್ಯೋತಿಕಾ ಅವರು ಹಲವಾರು ತಮಿಳು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಒಟ್ಟಿಗೇ ನಟಿಸುತ್ತಲೇ ಅವರಿಬ್ಬರಲ್ಲಿ ಲವ್ ಮೂಡಿದೆ. 2006ರಲ್ಲಿ ಕುಟುಂಬಗಳ ವಿರೋಧದ ನಡುವೆಯೇ ಅವರಿಬ್ಬರೂ ಮದುವೆ ಆಗಿದ್ದಾರೆ ಎನ್ನಲಾಗಿದೆ. ಮದುವೆ ಬಳಿಕ ನಟಿ ಜ್ಯೋತಿಕಾ ಸಿನಿಮಾಗಳ ನಟನೆಯಲ್ಲಿ ತುಂಬಾ ಚೂಸಿಯಾಗಿದ್ದಾರೆ. ಆದರೆ, ನಟ ಸೂರ್ಯ ತಮ್ಮ ವೃತ್ತಿ ಜೀವನವನ್ನು ಮೊದಲಿನಂತೆ ಮುಂದುವರೆಸಿಕೊಂಡು ಹೋಗಿದ್ದಾರೆ.