ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬ್ಯಾಕ್‌ಗ್ರೌಂಡ್‌ ಇದ್ದರೆ ಸಾಲದು: ನಿರಂಜನ್‌ ಸುಧೀಂದ್ರ

By Kannadaprabha News  |  First Published Aug 21, 2020, 9:48 AM IST

ಸೂಪರ್‌ಸ್ಟಾರ್‌ ಸಿನಿಮಾದ ಮೂಲಕ ಹೊಸ ಗೆಟಪ್‌ನಲ್ಲಿ ಆಗಮಿಸುತ್ತಿರುವ ನಿರಂಜನ್‌ ಸುಧೀಂದ್ರ ಜತೆ ಮಾತುಕತೆ.


ಸುದ್ದಿ ಆಗಲಿ ಅಂತಲೇ ಈ ‘ಸೂಪರ್‌ಸ್ಟಾರ್‌’ ಟೈಟಲ್‌ ಇಟ್ಟಿದ್ದಾ?

ಬರೀ ಸುದ್ದೀಗಾಗಿ ಸಿನಿಮಾ ಟೈಟಲ್‌ ಇಡಕ್ಕೆ ಆಗಲ್ಲ ಎನ್ನುವುದು ನನ್ನ ಅಭಿಪ್ರಾಯ. ಚಿತ್ರದ ಕತೆಗೆ ಸೂಕ್ತವಾಗಿತ್ತು. ಚಿತ್ರದ ಕ್ಯಾರೆಕ್ಟರ್‌ ಟ್ರಾವಲ್‌ ಹೇಳುವುದಕ್ಕೆ ಈ ಹೆಸರು ಒಳ್ಳೆಯದು ಅನಿಸಿತು. ಹೀಗಾಗಿ ‘ಸೂಪರ್‌ ಸ್ಟಾರ್‌’ ಎನ್ನುವ ಟೈಟಲ್‌ ಇಟ್ಟಿದ್ದೇವೆ.

Tap to resize

Latest Videos

ಸೂಪರ್‌ಸ್ಟಾರ್‌ ಚಿತ್ರದ ಟೀಸರ್‌ಗೆ ರಾಕಿಂಗ್ ಸ್ಟಾರ್ ಧ್ವನಿ 

ಈ ಚಿತ್ರದಲ್ಲಿ ಅಂಥ ಕ್ಯಾರೆಕ್ಟರ್‌ ಏನಿದೆ?

ಇಲ್ಲಿ ಚಿತ್ರದ ನಾಯಕನಿಗೆ ಹಲವು ರೀತಿಯ ಶೇಡ್‌ಗಳಿವೆ. ಈ ಪೈಕಿ ಆತ ಇಂಟರ್‌ನ್ಯಾಷನಲ್‌ ಡ್ಯಾನ್ಸರ್‌ ಆಗಿರುತ್ತಾನೆ. ಈ ಡ್ಯಾನ್ಸರ್‌ ಪಾತ್ರವನ್ನು ಚಿತ್ರದ ಟೈಟಲ್‌ ಪ್ರತಿನಿಧಿಸುತ್ತದೆ. ಮಾಸ್‌ನಿಂದ ಕ್ಲಾಸ್‌ ಹೋಗುವ ನಾಯಕ. ಹೀಗೆ ಹತ್ತಾರು ತಿರುವುಗಳನ್ನು ಒಳಗೊಂಡ ಈ ಕತೆಗೆ ‘ಸೂಪರ್‌ಸ್ಟಾರ್‌’ ಟೈಟಲ್‌ ಸೂಕ್ತ ಅನಿಸಿದೆ.

 

ಈ ಟೈಟಲ್‌ ಒಂದಿಷ್ಟುಚರ್ಚೆಗೆ ಕಾರಣವಾಗಿದೆಯಲ್ಲ?

ಆಗಿರಬಹುದು. ನಾನು ಯಾವುದನ್ನೂ ನೆಗೆಟಿವ್‌ ಆಗಿ ತೆಗೆದುಕೊಳ್ಳುವುದಿಲ್ಲ. ಹಾಗಂತ ಇದು ನನ್ನ ಚಿಕ್ಕಪ್ಪ ಉಪೇಂದ್ರ ಅವರು ನಟಿಸಿದ ಹೆಸರು ಎನ್ನುವ ಕಾರಣಕ್ಕೂ ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಎನ್ನುವ ಭಾವನೆಯೂ ಇಲ್ಲ. ಎಲ್ಲ ಚರ್ಚೆ, ವಿವಾದಗಳನ್ನೂ ಪಾಸಿಟೀವ್‌ ಆಗಿ ತೆಗೆದುಕೊಂಡಿರುವೆ. ಜತೆಗೆ ಇದರಿಂದ ನಮ್ಮ ಜವಾಬ್ದಾರಿ ಮತ್ತಷ್ಟುಹೆಚ್ಚಿದೆ.

ಸೂಪರ್‌ಸ್ಟಾರ್‌ ಹೆಸರು ಕೇಳಿದಾಗ ಉಪೇಂದ್ರ ಅವರು ಹೇಳಿದ್ದೇನು?

ನಿಮ್ಮ ಧೈರ್ಯವನ್ನು ಮೆಚ್ಚಬೇಕು. ಚಿತ್ರದ ಬಗ್ಗೆ ನಿನಗೆ ಇರುವ ವಿಶ್ವಾಸ ಸೂಚಿಸುತ್ತದೆ ಎಂದು ಖುಷಿಯಿಂದ ಒಪ್ಪಿಕೊಂಡರು. ಜತೆಗೆ ನಾವು ಮಾಡಿದ್ದ ಟೈಟಲ್‌ ಟೀಸರ್‌ ನೋಡಿ ಗ್ರೇಟ್‌ ಅಂದ್ರು. ಈ ಟೈಟಲ್‌ನಲ್ಲಿ ಚಿತ್ರ ಮಾಡುತ್ತಿರುವುದು ನನ್ನ ಅದೃಷ್ಟ.

ಧೋನಿ ನಿವೃತ್ತಿ ಬಗ್ಗೆ ಕಿಚ್ಚ ಸುದೀಪ್‌ ಮಾತು; 'ಸೂಪರ್‌ ಸ್ಟಾರ್' ವೈರಲ್!

ಈಗ ಟೀಸರ್‌ ಬಿಡುಗಡೆ ಆಗಿದೆ. ಇದಕ್ಕೆ ಯಶ್‌ ಅವರ ವಾಯ್‌್ಸ ಯಾಕೆ ಬೇಕಿತ್ತು?

ಇದು ಹೀರೋ ಕ್ಯಾರೆಕ್ಟರ್‌ ಟೀಸರ್‌. ನಟ ಶ್ರೀಮುರಳಿ ಬಿಡುಗಡೆ ಮಾಡಿದ್ದಾರೆ. ಇಲ್ಲೊಂದು ಡೈಲಾಗ್‌ ಬರುತ್ತದೆ. ಅದನ್ನು ಹೇಳಕ್ಕೆ ತೂಕವಾದ ಪವರ್‌ಫುಲ್‌ ವಾಯ್‌್ಸ ಬೇಕಾಗಿತ್ತು. ಹೀಗಾಗಿ ಯಶ್‌ ಅವರ ಬಳಿ ಕೇಳಿದಾಗ ಖುಷಿಯಿಂದ ಒಪ್ಪಿ ವಾಯ್‌್ಸ ಕೊಟ್ಟಿದ್ದಾರೆ. ಚಿಕ್ಕಂದಿನಿಂದಲೂ ನನ್ನ ನೋಡಿದ್ದಾರೆ. ನಿನಗೆ ಯಾವ ರೀತಿ ಸಪೋರ್ಟ್‌ ಬೇಕೋ ಹೇಳು ನಾವು ಇದ್ದೇವೆ ಎನ್ನುವ ಭರವಸೆ ಕೊಟ್ಟಿದ್ದಾರೆ. ಜತೆಗೆ ಚಿತ್ರದ ಮೇಕಿಂಗ್‌ ನೋಡಿ ಮೆಚ್ಚಿಕೊಂಡರು.

ಬಾಲ ನಟರಾಗಿ ಬಂದವರು. ಹೀಗಾಗಿ ನಟನೆ ಸುಲಭ ಅನಿಸುತ್ತಾ?

ಎ ಚಿತ್ರದಲ್ಲಿ ಬರುವ ಮೊದಲ ದೃಶ್ಯದಲ್ಲಿರುವುದು ನಾನೇ. ಆ ಮಗು ಪಾತ್ರದಲ್ಲಿ. ಆ ನಂತರ ಡಾ ವಿಷ್ಣುವರ್ಧನ್‌ ಅವರ ಜತೆಗೆ ಬಳ್ಳಾರಿ ನಾಗ ಚಿತ್ರದಲ್ಲಿ ನಟಿಸಿದ್ದೇನೆ. ನನ್ನ ಚಿಕ್ಕಮ್ಮ ಪ್ರಿಯಾಂಕ ಉಪೇಂದ್ರ ನಟನೆಯ ಸೆಕೆಂಡ್‌ ಹಾಫ್‌ ಚಿತ್ರದಲ್ಲಿ ಹದಿಹರೆಯದ ಹುಡುನಾಗಿ ನಟಿಸಿರುವೆ. ತುಂಬಾ ದೊಡ್ಡ ಅನುಭವ ಇಲ್ಲ. ಆದರೆ, ಸಿನಿಮಾ ನೆರಳು ಒಂಚೂರು ಹಳೆಯದು ಎನ್ನುವುದು ಒಂದೇ ಪ್ಲಸ್‌ ಪಾಯಿಂಟ್‌.

 

ಫ್ಯಾಮಿಲಿ ಬ್ಯಾಕ್‌ಗ್ರೌಂಡ್‌ ಇದ್ದರೆ ಹೀರೋ ಆಗೋದು ಸುಲಭನಾ?

ಖಂಡಿತ ಇಲ್ಲ. ಯಾಕೆಂದರೆ ಹೀರೋ ಆಗುವ ದಾರಿ ತೋರಿಸಬಹುದು ಅಷ್ಟೆ. ಆದರೆ, ನನ್ನ ಚಿಕ್ಕಪ್ಪ ನಿರ್ದೇಶಕ, ಹೀರೋ, ಚಿಕ್ಕಮ್ಮನೂ ನಾಯಕಿ, ನನ್ನದು ಸಿನಿಮಾ ಕುಟುಂಬ ಎನ್ನುವ ಐಡಿ ಕಾರ್ಡ್‌ ಇಟ್ಟುಕೊಂಡು ಬಂದರೆ ಚಿತ್ರರಂಗದಲ್ಲಿ ನೆಲೆ ನಿಲ್ಲಕ್ಕೆ ಸಾಲದು. ಸ್ವಂತ ಪರಿಶ್ರಮ, ಆಸಕ್ತಿ ಮತ್ತು ಪೂರ್ವ ತಯಾರಿಯಿಂದ ಕೂಡಿದ ಪ್ರತಿಭೆ ಮುಖ್ಯ. ಇಲ್ಲಿಗೆ ಬಂದ ಮೇಲೆ ಎಲ್ಲರಂತೆ ನಾವೂ ಕೂಡ ಸ್ಟ್ರಗಲ್‌ ಮಾಡಬೇಕು, ನಾವೇನು ಅಂತ ಪ್ರೂವ್‌ ಮಾಡಬೇಕು. ನೀವು ಹೇಳಿದಂತೆ ಸುಲಭವಾಗಿ ಬರಬಹುದು. ಬಂದ ಮೇಲೆ ನಿಲ್ಲಕ್ಕೆ ಬ್ಯಾಕ್‌ಗ್ರೌಂಡ್‌ ಇದ್ದರೆ ಸಾಲದು.

ಬೇರೆ ಯಾವುದಾದರೂ ಸಿನಿಮಾ ಒಪ್ಪಿಕೊಂಡಿದ್ದೀರಾ?

ಇಲ್ಲ. ಆದರೆ ಸೂಪರ್‌ ಸ್ಟಾರ್‌ಗೂ ಮೊದಲು ಒಂದು ಸಿನಿಮಾ ಮಾಡಿದ್ದು, ಅದು ಬಿಡುಗಡೆಗೆ ಸಿದ್ಧವಾಗಿದೆ. ‘ನಮ್‌ ಹುಡುಗ್ರ ಕತೆ’ ಎಂಬುದು ಚಿತ್ರದ ಹೆಸರು ತುಂಬಾ ಚೆನ್ನಾಗಿ ಬಂದಿದೆ. ಮಂಡ್ಯ ಬೇಸ್‌ ಸಿನಿಮಾ.

click me!