ಬಿಗ್ ಬಾಸ್ ಖ್ಯಾತಿಯ ಸಂತೋಷ್ 'ಡಿಯರ್ ಸತ್ಯ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಸಂತೋಷ್‌ಗೆ ಜೋಡಿಯಾಗಿ ಅಭಿನಯಿಸಿರುವ ಅರ್ಚನಾ ಕೊಟ್ಟಿಗೆ ಜೊತೆ ನಡೆದ ಸಣ್ಣ ಮಾತಕತೆ ಇದು...
ಅಲ್ಲಲ್ಲಿ ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಅರ್ಚನಾ, 'ಡಿಯರ್ ಸತ್ಯ'ಕ್ಕೆ ನಟಿಯಾಗಿ ಆಡಿಷನ್ ಮೂಲಕವೇ ಸೆಲೆಕ್ಟ್ ಆಗಿದ್ದು. ಓದಿದ್ದು ಬಿ.ಕಾಂ. ಅಂದು ಕೊಂಡಿದ್ದು ಸಿಎ ಆಗಬೇಕೆಂದು. ಇದೀಗ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಲು ಸಜ್ಜಾಗುತ್ತಿದ್ದಾರೆ. ಅವರು ಸುವರ್ಣನ್ಯೂಸ್.ಕಾಮ್ ಜೊತೆ ನಡೆಸಿದ ಮಾತು ಕತೆ
ವೈಷ್ಣವಿ ಚಂದ್ರಶೇಖರ್
undefined
- ನಿಮ್ಮ ಹಿನ್ನೆಲೆ ಏನು?
ಮಯ್ಯಾಸ್, ಉಬರ್ ಸೇರಿ ಅನೇಕ ಕಾರ್ಪೋರೆಟ್ ಹಾಗೂ ಪ್ರಿಂಟ್ ಜಾಹೀತಾರುಗಳನ್ನು ಮಾಡಿದ್ದೀನಿ. ರಂಗಭೂಮಿಯ 'ಅನಾಮಿಕ' ತಂಡದ ಜೊತೆ ಸೇರೆ 'ನೀನ್ ನಾನ್ ಆದರೆ ನಾನ್ ನೀನೇನಾ' ಎಂಬ ನಾಟದಲ್ಲಿ ಅಭಿನಯಿಸಿದೆ. 2017ರಲ್ಲಿ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ ರೆಡ್ ಕಾರ್ಪೆಟ್ ಕಾರ್ಯಕ್ರಮ, ಕಿರಿಕ್ ಪಾರ್ಟಿ ಶೋ ಹಾಗೂ LOL ಬಾಗ್ ಹೋಸ್ಟ್ ಮಾಡಿದ್ದೀನಿ. ಇದರ ಜೊತೆಗೆ ಹಲವು ಸಿನಿಮಾ ಆಡಿಷನ್‌ಗಳಲ್ಲಿ ಭಾಗಿಯಾಗುತ್ತಿದ್ದೆ. ಡಿಯಲ್ ಸತ್ಯ ಸಿನಿಮಾ ಸಿಕ್ಕಿದ್ದು ಆಡಿಷನ್‌ನಿಂದಲೇ.
- ಡಿಯರ್ ಸತ್ಯ ಚಿತ್ರಕ್ಕೆ ನೀವು ಆಯ್ಕೆ ಆಗಿದ್ದು ಹೇಗೆ? ನಿಮ್ಮ ಪಾತ್ರ ಏನು?
'ಡಿಯರ್ ಸತ್ಯ' ಚಿತ್ರದಲ್ಲಿ ಪೊಲೀಸ್ ಪಾತ್ರಧಾರಿ ಅರವಿಂದ್ ರಾವ್ ಅವರ ಪರಿಚಯದಿಂದ ನಾನು ಆಡಿಷನ್‌ನಲ್ಲಿ ಭಾಗಿಯಾಗಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿತ್ತು. ಆದರೆ ನಟಿಯ ಪಾತ್ರಕ್ಕೆ ಇನ್ನು ಆಡಿಷನ್ ನಡೆಯುತ್ತಿತ್ತು. ಆಗ ನಾನು ಆಡಿಷನ್ ಕೊಟ್ಟು ಆಯ್ಕೆಯಾದೆ.ನಿ ಮರು ದಿನವೇ ಚಿತ್ರೀಕರಣ ಪ್ರಾರಂಭವಾಯ್ತು. ನಾನು ಚಿತ್ರದಲ್ಲಿ ಅಂಜಲಿ ಹೆಸರಿನ ಪಾತ್ರ ಮಾಡಿದ್ದೀನಿ. ಸಾವಿರಾರು ಕನಸುಗಳನ್ನು ಹೊತ್ತಿಕೊಂಡಿರುವ ಮಿಡಲ್ ಕ್ಲಾಸ್ ಕುಟುಂಬಗ ಹುಡುಗಿ. ಸತ್ಯನ ಲೈಫ್ ಮೇಲೆ ಸಿಕ್ಕಾಪಟ್ಟೆ ಪ್ರಭಾವ ಬೀರುವಂಥ ಗಟ್ಟಿ ಹುಡುಗಿ ಇವಳು.
'Dear Sathya'ಚಿತ್ರದಲ್ಲಿ ಮಿಂಚುತ್ತಿರುವ ರಂಗಭೂಮಿ ಕಲಾವಿದೆ ಅರ್ಚನಾ!- ನಟಿಯಾಗಿ ಇದು ನಿಮ್ಮ ಮೊದಲ ಸಿನಿಮಾ, ಹೇಗಿದೆ ಸಂಭ್ರಮ?
ನಿಜ ಹೇಳಬೇಕಂದರೆ ವೀಕ್ಷಕರು ಈ ಸಿನಿಮಾ ಹಾಗೂ ನನ್ನ ಪಾತ್ರವನ್ನು ಹೇಗೆ ಸ್ವೀಕರಿಸುತ್ತಾರೆಂದು ತುಂಬಾ ನರ್ವಸ್ ಆಗುತ್ತಿದ್ದೇನೆ. ಯಾವ ಸನ್ನಿವೇಶ ಸರಿ ಮಾಡಿದ್ದೀನಿ, ಯಾವುದು ಮಿಸ್ ಮಾಡಿದ್ದೀನಿ ಎಂಬ ಯೋಚನೆ ನನಗೆ ಸದಾ ಇರುತ್ತದೆ. ಒಂದೊಳ್ಳೆ ಟೀಮ್ ಜೊತೆ ಕೆಲಸ ಮಾಡಿದೆ ಎಂಬ ಖುಷಿ ತುಂಬಾ ಇದೆ.
- ಸಿನಿಮಾದಲ್ಲಿ ನಟಿಸಲು ನೀವು ಏನೆಲ್ಲಾ ತಯಾರಿ ಮಾಡಿಕೊಂಡಿದ್ರಿ?
ಆಡಿಷನ್ ಆದ ಮರು ದಿನವೇ ಚಿತ್ರೀಕರಣ ಆರಂಭಗೊಂಡ ಕಾರಣ ಹೆಚ್ಚಿನ ತಯಾರಿ ಮಾಡಿಕೊಳ್ಳಲೇನೂ ಸಾಧ್ಯವಾಗಲಿಲ್ಲ. ಒಂದು ವರ್ಕ್‌ಶಾಪ್ ಇತ್ತು. ಅಲ್ಲಿ ನಡೆದ ತಯಾರಿ ಸಹಾಯ ಮಾಡಿತು. ಅದರಲ್ಲೂ ಅರವಿಂದ್ ರಾವ್ ಹಾಗೂ ನಮ್ಮ ನಿರ್ದೇಶಕ ನನಗೆ ಕ್ಯಾಮೆರಾ ಎದುರಿಸಲು ತುಂಬಾನೇ ಸಹಾಯ ಮಾಡಿದರು, ವೀಕ್ಷಕರು ಗಮನಿಸುವ ಪ್ರತಿಯೊಂದೂ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೊಟ್ಟು ಚಿತ್ರತಂಡ ಸಹಕರಿಸಿತು.
- ನಿಮ್ಮನ್ನು ನೀವು ಸ್ಕ್ರೀನ್ ಮೇಲೆ ನೋಡಿಕೊಂಡಾಗ ಏನನಿಸುತ್ತದೆ?
ನಾನು ನನ್ನ ವಿಚಾರದಲ್ಲಿ ತುಂಬಾ ಕ್ರಿಟಿಕಲ್ ವ್ಯಕ್ತಿ. 'ಹೇ ನಾನು ಇದನ್ನ ಚೆನ್ನಾಗಿ ಮಾಡಿದ್ದೀನಿ, ಇದು ಸೂಪರ್ ಆಗಿ ಬಂದಿದೆ' ಅಂತ ಅನ್ಸೋದೆ ಇಲ್ಲ. ನಾನು ನನ್ನಲ್ಲಿ ಇರುವ ನೆಗೆಟಿವ್ ವಿಚಾರಗಳನ್ನು ಗಮನಿಸಿ ಬದಲಾಯಿಸಿಕೊಳ್ಳುವ ವಿಚಾರದ ಬಗ್ಗೆ ಥಿಂಕ್ ಮಾಡ್ತಾ ಇರ್ತಿನಿ. ವೀಕ್ಷಕರು ನೋಡಿ ಹೇಳಬೇಕು ಹೇಗಿದೆ ಅಂತ.
- ಓದಿದ್ದು ಬಿಕಾಂ, ನಟಿಯಾಗುವ ಕನಸು ಬಂದದ್ದು ಹೇಗೆ?
ನಮ್ಮ ಮನೆಯಲ್ಲಿ ನಾನು CA ಮಾಡಬೇಕು ಅಂತ ಹೇಳ್ತಿದ್ರು. ಅದಕ್ಕೆ ಬಿಕಾಂ ಮಾಡಿದೆ. ಆದರೆ ವಿದ್ಯಾಭ್ಯಾಸದ ಅರ್ಧದಲ್ಲಿಯೇ ನಾನು ಸಿಎಂ ಮಾಡೋಲ್ಲವೆಂದು ನಿರ್ಧರಿಸಿದೆ. ಈ ಸಮಯದಲ್ಲಿ ನಾನು ಪಬ್ಲಿಕ್ ಸ್ಪೀಕಿಂಗ್ ಕ್ರಾಷ್ ಕೋರ್ಸ್ ಮಾಡಿದ್ದೀನಿ. ಎಂಬಿಎ ಮಾಡಬೇಕಿತ್ತು. ಆದರೆ ನನ್ನ ಆಸಕ್ತಿ ಸಿನಿಮಾ ಇದ್ದ ಕಾರಣ 6 ತಿಂಗಳ ಕಾಲ ನಾನು ಡಿಜಿಟಲ್ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಿದೆ. ಸಿನಿಮಾ ಹೇಗೆ ಮಾಡುತ್ತಾರೆ, ಎಂಬ ವಿಚಾರಗಳಲ್ಲಿ ಫರ್ಸ್ಟ್ ಹ್ಯಾಂಡ್ ಇನ್‌ಫಾರ್ಮೇಷನ್ ಸಿಕ್ತು. ಬಿಕಾಂ ಆದ ಮೇಲೆ ನಾನು ಆರ್‌ಜೆ ಪ್ರದೀಪ್ ಅವರ ಸಖತ್ ಸ್ಟುಡಿಯೋದಲ್ಲಿ 6 ತಿಂಗಳು ಇನ್‌ಟರ್ನ್‌ಶಿಪ್ ಮಾಡಿದೆ. ಇದೆಲ್ಲಾ ನನಗೆ ಚಿತ್ರದಲ್ಲಿ ನಟಿಸಲು ಸಹಕರಿಸಿತು.
- ನಿಮಗೆ ಯಾವ ರೀತಿಯ ಪಾತ್ರಗಳು ಇಷ್ಟ?
ನನಗೆ ಕಾಮಿಡಿ ಪಾತ್ರ ಎಕ್ಸಪ್ಲೋರ್ ಮಾಡಬೇಕು ಎಂಬ ಆಸೆ ತುಂಬಾನೇ ಇದೆ. ನನ್ನ ತುಂಟತನ ಕಾಮಿಡಿ ಸ್ಕ್ರಿಪ್ಟ್‌ಗೆ ಸಹಾಯ ಮಾಡುತ್ತದೆ. ಸದ್ಯಕ್ಕೆ ನಾನು ಟ್ರಯಲ್ ಆ್ಯಂಡ್ ಎರರ್ ಮಾಡ್ತಿದ್ದೀನಿ. ಈ ಹಿಂದೆ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದಲ್ಲೂ ಪಾತ್ರ ಡಿಫರೆಂಟ್ ಆಗಿತ್ತು. ಸೋ ಈಗ ಎಲ್ಲಾ ಟ್ರೈ ಮಾಡುತ್ತಿರುವೆ.
- ನಿಮಗೆ ಬೇರೆ ಭಾಷಾ ಸಿನಿಮಾ ಆಫರ್ಸ್ ಬಂದರೆ ಒಪ್ಪಿಕೊಳ್ಳುತ್ತೀರಾ?
ನನ್ನ ತಾಯಿ ಮೂಲತಃ ಕುಂಭಕೋಣಂನವರು. ನಮ್ಮ ಕುಟುಂಬದ ಬಹುತೇಕ ಸದಸ್ಯರು ಅಲ್ಲೇ ಇರುವ ಕಾರಣ ನನಗೆ ತಮಿಳು ಚನ್ನಾಗಿ ಬರುತ್ತದೆ. ತಮಿಳು ನಾಡಿನಲ್ಲಿದ್ದರೂ ನಮ್ಮ ಮಾತೃಭಾಷೆ ಕನ್ನಡ. ತಮಿಳು ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕರೆ ನಾನು ನಟಿಸಲು ಕಂಫರ್ಟಬಲ್ ಆಗಿರುತ್ತೀನಿ.