ಗಾಳಿಪಟ ಮೊದಲ ಪಾರ್ಟ್‌ಗೆ ನಾನೇ ನಾಯಕಿ ಆಗಬೇಕಿತ್ತು: ಶರ್ಮಿಳಾ ಮಾಂಡ್ರೆ

Published : Aug 08, 2022, 08:57 AM ISTUpdated : Aug 08, 2022, 09:43 AM IST
ಗಾಳಿಪಟ ಮೊದಲ ಪಾರ್ಟ್‌ಗೆ ನಾನೇ ನಾಯಕಿ ಆಗಬೇಕಿತ್ತು: ಶರ್ಮಿಳಾ ಮಾಂಡ್ರೆ

ಸಾರಾಂಶ

ಯೋಗರಾಜ್‌ ಭಟ್‌ ನಿರ್ದೇಶಿಸಿ, ಗಣೇಶ್‌, ಪವನ್‌ ಕುಮಾರ್‌, ಶರ್ಮಿಳಾ ಮಾಂಡ್ರೆ, ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಕಾಂಬಿನೇಶನ್‌ನ ‘ಗಾಳಿಪಟ 2’ ಇದೇ ಆಗಸ್ಟ್‌ 12ಕ್ಕೆ ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ರಮೇಶ್‌ ರೆಡ್ಡಿ ನಿರ್ಮಾಣದ ಈ ಚಿತ್ರವನ್ನು ಕೆವಿಎನ್‌ ಸಂಸ್ಥೆ ವಿತರಣೆ ಮಾಡುತ್ತಿದ್ದು, ಈ ಚಿತ್ರದ ನಾಯಕಿ ಶರ್ಮಿಳಾ ಮಾಂಡ್ರೆ ಅವರ ಮಾತುಗಳು ಇಲ್ಲಿವೆ.

ಆರ್‌ ಕೇಶವಮೂರ್ತಿ

ತುಂಬಾ ವರ್ಷಗಳ ನಂತರ ಸ್ಕ್ರೀನ್‌ ಮೇಲೆ ಬರುತ್ತಿದ್ದೀರಿ ಹೇಗನಿಸುತ್ತಿದೆ?

ನಿಜ, ತೆರೆ ಮೇಲೆ ನನ್ನ ನಾನೇ ನೋಡಿಕೊಂಡು ತುಂಬಾ ವರ್ಷಗಳಾಗಿವೆ. ಹೀಗಾಗಿ ತುಂಬಾ ಎಕ್ಸೈಟ್‌ ಆಗಿದ್ದೇನೆ. ಮತ್ತೆ ಹೊಸದಾಗಿ ಶುರು ಮಾಡಿದ್ದೇನೆ ಎನ್ನುವ ಭಾವನೆಯಲ್ಲಿದ್ದೇನೆ. ಅಲ್ಲದೆ ತುಂಬಾ ನಿರೀಕ್ಷೆ ಇಟ್ಟುಕೊಂಡು ಮಾಡಿರುವ ಸಿನಿಮಾ. ಕೋವಿಡ್‌ ಇಲ್ಲದೆ ಹೋಗಿದ್ದರೆ ಇನ್ನೂ ಬೇಗ ಬರುತಿದ್ವಿ. ಪ್ರೇಕ್ಷಕರು ಹೇಗೆ ಸ್ವೀರಿಸುತ್ತಾರೆ ಎನ್ನುವ ಕುತೂಹಲದಲ್ಲಿದ್ದೇನೆ.

ಗಾಳಿಪಟ 2ಗೆ ನಾಯಕಿ ಅಂದಾಗ ನಿಮಗೆ ಅನಿಸಿದ್ದೇನು?

ನಾನು ಲಕ್ಕಿ ನಾಯಕಿ ಅಂತ ಅನಿಸಿತು. ಯಾಕೆಂದರೆ ಯೋಗರಾಜ್‌ ಭಟ್‌ ಅವರಂತಹ ವೃತ್ತಿಪರ ನಿರ್ದೇಶಕರ ಚಿತ್ರದಲ್ಲಿ ನಟಿಸುವುದು ಅಂದರೆ ಅದೃಷ್ಟ. ನಾನು ಅಂಥ ಅದೃಷ್ಟವಂತ ನಟಿ. ಇನ್ನೂ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ಹೇಳಿದಾಗ ಮತ್ತಷ್ಟುಉತ್ಸಾಹದಿಂದ ಈ ಚಿತ್ರದಲ್ಲಿ ನಟಿಸುವ ತಯಾರಿ ಮಾಡಿಕೊಂಡೆ.

ಶೆಡ್ಯೂಲ್‌ ಇಲ್ಲದೆ 2008ರಲ್ಲಿ ಗಾಳಿಪಟ ಒಪ್ಪಿರಲಿಲ್ಲ, ಈಗ ಭಾಗ 2 ಮಾಡುವುದಕ್ಕೆ ಖುಷಿ ಇದೆ: ಶರ್ಮಿಳಾ ಮಾಂಡ್ರೆ

ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿದೆ?

ನನ್ನದು ಟೀಚರ್‌ ಪಾತ್ರ. ಹಾಗಂತ ತುಂಬಾ ವಯಸ್ಸಾಗಿರುವ ಟೀಚರ್‌ ಅಲ್ಲ. ಆದರೆ, ನಾನು ಪವನ್‌ ಕುಮಾರ್‌ ಅವರಿಗೆ ಜೋಡಿ ಎಂದಾಗ ಅಚ್ಚರಿ ಆಯಿತು. 40 ವರ್ಷದ ನಟಿ ಮಾಡಬೇಕಾದ ಪಾತ್ರವನ್ನು ನಾನು ಒಪ್ಪಿಕೊಂಡಿದ್ದೇನಲ್ಲ ಅನಿಸಿತು. ಕೊನೆಗೂ ತೆರೆ ಮೇಲೆ ಬಂದಾಗ ಆ ವ್ಯತ್ಯಾಸ ಕಾಣಲಿಲ್ಲ. ಇಲ್ಲಿ ಪವನ್‌ ಕುಮಾರ್‌ ಅವರು ನನ್ನ ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದಾರೆ.

ಹಾಗಾದರೆ ಇದು ಸ್ಟೂಡೆಂಟ್‌ ಹಾಗೂ ಟೀಚರ್‌ ಪ್ರೇಮ ಕತೆನಾ?

ಅಯ್ಯೋ ಹಾಗೇನು ಇಲ್ಲ. ನನ್ನ ಕಡೆಯಿಂದ ಯಾವುದೇ ಲವ್‌ ಇರಲ್ಲ. ಪವನ್‌ ಕುಮಾರ್‌ ಅವರ ಪಾಯಿಂಟ್‌ನಲ್ಲಿ ಪ್ರೇಮ ಕತೆ ಶುರುವಾಗುತ್ತದೆ. ನಮ್ಮ ಜೋಡಿ ಕತೆ ಬೇರೆ ರೀತಿನೇ ಇದೆ. ವಿಶೇಷ ಎಂದರೆ ಗಾಳಿಪ 2 ಮಾಡಬೇಕು ಎಂದುಕೊಂಡಾಗ ಯೋಗರಾಜ್‌ ಭಟ್‌ ಅವರು ಮೊದಲು ಬರೆದಿದ್ದೇ ಟೀಚರ್‌ ಹಾಗೂ ಸ್ಟೂಡೆಂಟ್‌ ಕತೆಯಂತೆ. ಓದುವ ದಿನಗಳಲ್ಲಿ ಟೀಚರ್‌ ಮೇಲೆ ಪ್ರತಿಯೊಬ್ಬರಿಗೂ ಕ್ರಶ್‌ ಇರುತ್ತದೆ. ಅದನ್ನು ತುಂಬಾ ಲವಲವಿಕೆಯಿಂದ ತೆರೆ ಮೇಲೆ ತಂದಿದ್ದಾರೆ.

ಮಾಲ್ಡೀವ್ಸ್‌ನಲ್ಲಿ ನಟಿ ಶರ್ಮಿಳಾ ಮಾಂಡ್ರೆ ಶೇರ್ ಮಾಡಿಕೊಂಡ ಹಾಟ್ ಫೋಟೋ!

ಟೀಚರ್‌ ಆದರೂ ತುಂಬಾ ಗ್ಲಾಮರ್‌ ಆಗಿ ಕಾಣಿಸಿಕೊಂಡಿದ್ದೀರಿ ಅಲ್ಲವೇ?

ನಾನು ಆಗಲೇ ಹೇಳಿದಂತೆ ವಯಸ್ಸಾದ ಟೀಚರ್‌ ಅಲ್ಲ ನಾನು. ಈಗಿನ ಹೊಸ ಜನರೇಷ್‌ ಮೇಡಮ್‌. ಪಾತ್ರ ಮತ್ತು ಕತೆಗೆ ಯಾವ ರೀತಿ ಬೇಕೋ ಹಾಗೆ ಕಾಣಿಸಿಕೊಂಡಿದ್ದೇನೆ. ತುಂಬಾ ಗ್ಲಾಮರ್‌ ಇಲ್ಲ.

ಟ್ರೇಲರ್‌ನಲ್ಲಿ ಬಿಟ್ಟಿರುವ ನಿಮ್ಮ ಫಿಶ್‌ ಡೈ ಬಗ್ಗೆ ನಿರ್ಮಾಪಕರು ತುಂಬಾ ಮೆಚ್ಚಿಕೊಂಡಿದ್ದಾರಲ್ಲ?

ಟ್ರೇಲರ್‌ ಬಿಡುಗಡೆ ಆದ ಮೇಲೆ, ನಿರ್ಮಾಪಕರು ಪದೇ ಪದೇ ಆ ದೃಶ್ಯದ ಬಗ್ಗೆ ಹೇಳಿದ ಮೇಲೆ ಎಲ್ಲೇ ಹೋದರೂ ಅದರ ಬಗ್ಗೆಯೇ ಕೇಳುತ್ತಾರೆ. ಸ್ವಿಮ್ಮಿಂಗ್‌ ಫäಲ್‌ನಲ್ಲಿ ಆ ಫಿಶ್‌ ಡೈ ಸೀನ್‌ ಮಾಡಕ್ಕೆ ಎರಡು ದಿನ ತೆಗೆದುಕೊಂಡ್ವಿ. ಇಡೀ ಚಿತ್ರದಲ್ಲಿ ನನಗೆ ತುಂಬಾ ಸವಾಲು ಅನಿಸಿದ್ದು ಅದೇ ದೃಶ್ಯ.

ಗಾಳಿಪಟ1 ಹಾಗೂ 2ರ ನಡುವೆ ನೀವು ಕಂಡ ವ್ಯತ್ಯಾಸಗಳೇನು?

ನಾನು ಫಸ್ಟ್‌ ಪಾರ್ಚ್‌ ನೋಡಿದ್ದೇನೆ. ಆ ಚಿತ್ರದ ಹಾಡು ಮತ್ತು ಸಂಭಾಷಣೆಗಳಿಗೆ ನಾನು ಫಿದಾ ಆಗಿದ್ದೆ. ಕತೆಯಲ್ಲಿ ಕನೆಕ್ಟ್ ಇರುತ್ತದೆ. ತಾಂತ್ರಿಕವಾಗಿ ತುಂಬಾ ವ್ಯತ್ಯಾಸಗಳು ಇವೆ. 15 ವರ್ಷದಳ ಹಿಂದಿನ ಮೇಕಿಂಗ್‌, ಈಗಿನ ಮೇಕಿಂಗ್‌ ಬೇರೆ. ಕತೆ ಹೇಳುವ ರೀತಿಯೇ ಬೇರೆ.

ಮೊದಲ ಭಾಗದ ಕತೆಗೂ ನೀವೇ ನಾಯಕಿ ಆಗಬೇಕಿತ್ತಲ್ಲವೇ?

ಹೌದು, ಆಗ ನನಗೆ ಡೇಟ್ಸ್‌ ಹೊಂದಾಣಿಕೆ ಮಾಡಿಕೊಳ್ಳಲು ಆಗದೆ ಪಾರ್ಚ್‌ 1ನಲ್ಲಿ ನಟಿಸುವ ಅವಕಾಶವನ್ನು ತಪ್ಪಿಸಿಕೊಂಡೆ. ಕೊನೆಗೂ ಆ ಹೆಸರಿನ ಚಿತ್ರದಲ್ಲಿ ನಟಿಸುವ ಅವಕಾಶ ಈಗ ಬಂದಿದ್ದಕ್ಕೆ ಖುಷಿ ಆಗುತ್ತಿದೆ.

ಗಾಳಿಪಟ 2 ಚಿತ್ರದ ಮೇಲೆ ನಿಮಗಿರೋ ನಿರೀಕ್ಷೆಗಳೇನು?

ನಾವು ತುಂಬಾ ಹಾರ್ಡ್‌ ವರ್ಕ್ ಮಾಡಿದ್ದೇವೆ. ನಮ್ಮ ಈ ಪ್ರಾಮಾಣಿಕ ಕೆಲಸವನ್ನು ಪ್ರೇಕ್ಷಕರು ತೆರೆ ಮೇಲೆ ನೋಡಿ ಮೆಚ್ಚಿಕೊಳ್ಳುತ್ತಾರೆಂಬ ನಿರೀಕ್ಷೆ ಇದೆ.

ನಿಮ್ಮದೇ ನಿರ್ಮಾಣದ ಸಿನಿಮಾ ದಸರಾ ಚಿತ್ರ ಎಲ್ಲಿವರೆಗೂ ಬಂದಿದೆ?

ಶೂಟಿಂಗ್‌ ಮುಗಿದೆ. ಈಗ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಆದರೆ, ಮತ್ತೆ ಸಿನಿಮಾ ನಿರ್ಮಾಣ ಎಂದರೆ ನೂರು ಸಲ ಯೋಚನೆ ಮಾಡಬೇಕು ಅಷ್ಟುಅನುಭವ ಆಗಿದೆ. ನಿರ್ಮಾಣ ಎನ್ನುವುದು ಅಂದುಕೊಂಡಷ್ಟುಸುಲಭ ಅಲ್ಲ. ಜತೆಗೆ ನಟನೆ ಬೇರೆ ಮಾಡಿದ್ದೇನೆ. ನಿರ್ಮಾಣ, ನಟನೆ ಎರಡೂ ನಿಭಾಯಿಸುವುದು ತುಂಬಾ ಕಷ್ಟ.

ಈ ಚಿತ್ರಗಳ ಜತೆಗೆ ಬೇರೆ ಯಾವ ಚಿತ್ರಗಳಿವೆ?

ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದೇನೆ. ಈ ಪೈಕಿ ಒಂದು ಮಂಡೇಲಾ. ಮತ್ತೊಂದು ಸ್ಕಿ್ರಪ್‌್ಟನಡೆಯುತ್ತಿದೆ. ಕನ್ನಡದ ಜತೆಗೆ ತಮಿಳುನಲ್ಲೂ ಸಿನಿಮಾ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದೇನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು