ಕೊರೋನಾ ಬಗ್ಗೆ ಮೊದಲೇ ಕಲ್ಪಿಸಿಕೊಂಡಿದ್ದ ವಿ ಮನೋಹರ್‌!

By Suvarna News  |  First Published Apr 28, 2020, 1:23 PM IST

'ಕೊರೋನಾ ವೈರಸ್ ಎನ್ನುವ ಕಾಯಿಲೆ ಬರುತ್ತದೆ. ದೇಶಕ್ಕೆ ದೇಶವೇ ಲಾಕ್ಡೌನ್ ಆಗಲಿದೆ' ಎನ್ನುವ ಕಲ್ಪನೆ ಯಾರೊಬ್ಬರಿಗೂ ಬಂದಿರಲಿಲ್ಲ. ಆದರೆ ಅದು ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟಿದ್ದು ಎನ್ನುವ ಬಗ್ಗೆ ತಮಗೆ ಮೊದಲೇ ಸಂದೇಹವಿತ್ತು ಎಂದಿದ್ದಾರೆ ಸಂಗೀತ ನಿರ್ದೇಶಕ ವಿ ಮನೋಹರ್. ಅವರು ತಮಗೆ ಈ ಸಂದೇಹ ಮೂಡಲು ಕಾರಣವಾದ ಅಂಶ ಮತ್ತು ಇತರ ವಿಷಯಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
 


ಕೊರೋನಾ ಎನ್ನುವ ಕಾಯಿಲೆ ಬರುತ್ತದೆ. ದೇಶಕ್ಕೆ ದೇಶವೇ ಲಾಕ್ಡೌನ್ ಆಗಲಿದೆ ಎನ್ನುವ ಕಲ್ಪನೆ ಯಾರೊಬ್ಬರಿಗೂ ಬಂದಿರಲಿಲ್ಲ. ಆದರೆ ಅದು ಪ್ರಯೋಗಾಲಯದಲ್ಲಿ ಸೃಷ್ಟಿಸಲ್ಪಟ್ಟಿದ್ದು ಎನ್ನುವ ಬಗ್ಗೆ ತಮಗೆ ಮೊದಲೇ ಸಂದೇಹವಿತ್ತು ಎಂದಿದ್ದಾರೆ ಸಂಗೀತ ನಿರ್ದೇಶಕ ವಿ ಮನೋಹರ್. ಅವರು ತಮಗೆ ಈ ಸಂದೇಹ ಮೂಡಲು ಕಾರಣವಾದ ಅಂಶ ಮತ್ತು ಇತರ ವಿಷಯಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.

- ಶಶಿಕರ ಪಾತೂರು

Latest Videos

undefined

ಎಲ್ಲ ಜನರು ಮನೆಯೊಳಗೇ ಇರಬೇಕಾದಂಥ ಸಂದರ್ಭ ಬರಬಹುದೆನ್ನುವ ಕಲ್ಪನೆ ನಿಮಗಿತ್ತೇ?
ಇಂಥದೊಂದು ಕಾಯಿಲೆ ಬರುತ್ತದೆ ಎನ್ನುವ ಕಲ್ಪನೆ ನಿಜಕ್ಕೂ ನನಗೆ ಇರಲಿಲ್ಲ. ಆದರೆ ಈ ಕಾಯಿಲೆ ಭಾರತಕ್ಕೆ ಪ್ರವೇಶಿಸುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ನಾನು ಒಂದು ಮಾತು ಹೇಳಿದ್ದೆ. ಇದು ಬಯೋವೈರಸ್ ಅಲ್ಲ. ಅಟಾಮಿಕ್ ವೈರಸ್. ಇದು ಸಹಜವಾಗಿ ಉಂಟಾಗಿರುವಂಥದ್ದಲ್ಲ, ಲ್ಯಾಬ್‌ನಲ್ಲಿ ಸೃಷ್ಟಿಯಾಗಿರುವಂಥದ್ದು. ಯಾಕೆಂದರೆ ಇದಕ್ಕೆ ಹರಡಲು ಇಂಥದೇ ಒಂದು ವಾತಾವರಣ ಬೇಕು ಎನ್ನುವ ಅಗತ್ಯ ಇಲ್ಲ. ಎಲ್ಲ ಕಡೆಯೂ ಹರಡಬಲ್ಲದು. ಈ ವಿಚಾರವನ್ನು ನಮ್ಮಲ್ಲಿ ಲಾಕ್ಡೌನ್‌ ನಡೆಯುವ ಮುನ್ನವೇ ವಾಹಿನಿಯೊಂದಕ್ಕೆ ನೀಡಿದ ಜಾಗೃತಿ ಸಂದೇಶದಲ್ಲಿ ಹೇಳಿದ್ದೆ. ಆದರೆ ಅವರು ಅದನ್ನು ಪ್ರಸಾರ ಮಾಡಿರಲಿಲ್ಲ. ಇದೀಗ ಜಪಾನ್ ವಿಜ್ಞಾನಿಗಳೇ ಕೋವಿಡ್ 19 ಲ್ಯಾಬ್‌ನಲ್ಲಿ ಸೃಷ್ಟಿಸಲ್ಪಟ್ಟಿದೆ ಎಂದು ಹೇಳುತ್ತಿದ್ದಾರೆ. ಆದುದರಿಂದ ಎಲ್ಲೋ ಒಂದು ಕಡೆ ನನ್ನ ಅನುಮಾನ ನಿಜವಾದ ಹಾಗಿದೆ.

ಮಾಧ್ಯಮಗಳಿಗೊಂದು ಓಪನ್ ಲೆಟರ್ ಬರೆದ ಕತ್ರೀನಾ

ಮನೆಯೊಳಗಿರುವ ಈ ಸಮಯ ಹೇಗೆ ಅನಿಸುತ್ತಿದೆ?
ನನಗೆ ಭಕ್ತಿಗೀತೆಗಳನ್ನು ರಚಿಸುವ ಕೆಲಸವೊಂದು ದೊರಕಿದೆ. ಅದನ್ನು ಕೆಲಸವಾಗಿ ಅಲ್ಲ ಭಕ್ತಿಯಿಂದ ಮಾಡುತ್ತಿದ್ದೇನೆ. ಇನ್ನು ಇದುವರೆಗೆ ನೋಡಲಾಗದೇ ಹೋದಂಥ ಚಿತ್ರಗಳನ್ನು ನೋಡುತ್ತಿದ್ದೇನೆ. ಪ್ರಾಣಿಗಳ ಕುರಿತಾದ ಕತೆ ಹೊಂದಿರುವ `ಬ್ಯೂಟಿಫುಲ್ ಪೀಪಲ್' ಚಿತ್ರ ನೋಡಿದೆ. ಚೆನ್ನಾಗಿತ್ತು. ಅದೇ ರೀತಿ ಆಸ್ಕರ್ ಬಂದಿರುವಂಥ ಯುದ್ಧದ ಚಿತ್ರ`ಲೈಫ್ ಈಸ್ ಬ್ಯೂಟಿಫುಲ್' ಎನ್ನುವ ಸಿನಿಮಾ ಕೂಡ ನೋಡಿದೆ. ಎರಡು ಕೂಡ ಇಂಗ್ಲಿಷ್ ಚಿತ್ರಗಳು. ಕನ್ನಡದಲ್ಲಿ ನಾನು ಕಾಶೀನಾಥ್ ಸರ್‌ ಅವರ `ಹಳೆಯ ಸಿನಿಮಾವೊಂದನ್ನು ಮತ್ತೆ ನೋಡಿದೆ. ಅದರ ಹೆಸರು ಅಪರಿಚಿತ. ಈ ಹಿಂದೆ ಆ ಸಿನಿಮಾವನ್ನು 1978ರಲ್ಲಿ ನೋಡಿದ್ದೆ! ಆದರೆ ಈ ಕಾಲಘಟ್ಟದಲ್ಲಿ ನೋಡುವಾಗಲೂ ಚಿತ್ರದ  ವಸ್ತು ತುಂಬ ಹೊಸತಾಗಿರುವಂತೆ ಅನಿಸಿತು. ಚಿತ್ರದ ಸ್ಕ್ರೀನ್ ಪ್ಲೇಯಂತೂ ಎಲ್ಲರೂ ಕಲಿಯಬೇಕಾಗಿರುವಂಥದ್ದು. ಸಸ್ಪೆನ್ಸ್‌, ಹಾಸ್ಯ ಎಲ್ಲವನ್ನು ಹದವಾಗಿ ಮಿಶ್ರವಾಗಿಸಿರುವಂಥ ಚಿತ್ರ ಅದು.

ನಿಖಿಲ್ ಪತ್ನಿ ರೇವತಿ ಲುಕ್ ನೋಡಿ

ಬಿ. ಆರ್ ಛಾಯಾ ಅವರೊಂದಿಗಿನ ಕಾರ್ಯಕ್ರಮ ಏನಾಯಿತು?
ಆ ಕಾರ್ಯಕ್ರಮದ ಹೆಸರು ಗಾನಚಂದನ. ಅದರ ಚಿತ್ರೀಕರಣವಾಗಿದ್ದಂಥ 24ರಷ್ಟು ಸಂಚಿಕೆಗಳು ಪ್ರಸಾರವಾದವು. ಕೊರೊನಾ ಕಾರಣ ಚಿತ್ರೀಕರಣ ನಿಂತಿರುವುದರಿಂದ ಹಳೆಯ ಎಪಿಸೋಡ್‌ಗಳನ್ನೇ ಮರು ಪ್ರಸಾರ ಮಾಡಲಾಗುತ್ತಿದೆ. ಐವತ್ತು ಎಪಿಸೋಡ್‌ಗಳ ಯೋಜನೆ ಇತ್ತು. ಅದರ ಭವಿಷ್ಯ ಏನಾಗುತ್ತದೆ ಎನ್ನುವುದನ್ನು ಲಾಕ್ಡೌನ್ ಮುಗಿಯದೆ ಹೇಳುವುದು ಕಷ್ಟ. ಆ ಕಾರ್ಯಕ್ರಮ ಉಳಿದ ಕಾರ್ಯಕ್ರಮಗಳಿಗಿಂತ ವಿಭಿನ್ನವಾಗಿತ್ತು. ಯಾಕೆಂದರೆ ಅದರಲ್ಲಿ ಸ್ಪರ್ಧಿಗಳು ಹಾಡುವಾಗ ತಪ್ಪಿದರೆ ಮತ್ತೊಮ್ಮೆ ಹಾಡುವ ಅವಕಾಶ ಇತ್ತು. ಪ್ರತಿ ಸಂಚಿಕೆಗೂ  ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್‌, ಕಾದಂಬರಿಗಾರ್ತಿ ತ್ರಿವೇಣಿಯವರ ಮಗಳು ಮೊದಲಾದ ಚಿತ್ರರಂಗ ಮತ್ತು ಇತರ ರಂಗದ ಪ್ರಮುಖರು ವಿಶೇಷ ಅತಿಥಿಗಳಾಗಿ ಆಗಮಿಸುತ್ತಿದ್ದರು.   ವೇದಿಕೆ ಮೇಲೆ ಹಾಡಿದ ಒಬ್ಬ ಸ್ಪರ್ಧಿಗೆ ಉಳಿದ ಏಳು ಮಂದಿ ಸಹ ಸ್ಪರ್ಧಿಗಳು  ಅಂಕ ನೀಡುವ ಅವಕಾಶ ಒದಗಿಸಲಾಗಿತ್ತು. ಆದರೆ ಎಲ್ಲ ವಿಶೇಷತೆಗಳನ್ನು ಲಾಕ್ಡೌನ್ ನುಂಗಿ ಹಾಕಿತು.

ಮುದ್ದು ಮಾತಲ್ಲೇ ಮದ್ದು ನೀಡುವ ನಟಿ ಶ್ವೇತಾ

ಲಾಕ್ಡೌನ್ ಮುಗಿದ ಮೇಲೆ ಸಿನಿಮಾರಂಗದ ಪರಿಸ್ಥಿತಿ ಏನಾಗಿರಬಹುದು?
ಎಲ್ಲ ವಿಭಾಗಗಳಲ್ಲಿಯೂ ಕಷ್ಟ ಕಾಡಿದೆ. ಕನ್ನಡ ಚಿತ್ರರಂಗದ ವಿಚಾರಕ್ಕೆ ಬಂದರೆ ಜನವರಿಯಿಂದಲೇ ಸಿನಿಮಾದವರಿಗೆ ವರಿ ಶುರುವಾಗಿದೆ. ಅದಕ್ಕೆ ಕಾರಣ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯಾಗಿದ್ದು. ಕೋಡ್ಲು ರಾಮಕೃಷ್ಣ ಅವರ ನಿರ್ದೇಶನದ `ಮತ್ತೆ ಉದ್ಭವ' ಚಿತ್ರಕ್ಕೆ ನಾನೇ ಸಂಗೀತ ನೀಡಿದ್ದೆ. ಅದಕ್ಕೂ ಸೇರಿದಂತೆ  `ಜಂಟಲ್ ಮ್ಯಾನ್', ` 'ಮಾಲ್ಗುಡಿ ಡೇಸ್' ಮೊದಲಾದ ಒಳ್ಳೆಯ, ನಿರೀಕ್ಷೆ ಮೂಡಿಸಿದ್ದ ಚಿತ್ರಗಳಿಗೆ ಪ್ರೇಕ್ಷಕರು ಬರುವುದೇ ಕಾಣಿಸುತ್ತಿರಲಿಲ್ಲ. ಲಾಕ್ಡೌನ್ ಸಂದರ್ಭದಲ್ಲಂತೂ ಜನ ಮನೆಯಲ್ಲೇ ಕುಳಿತು ನೆಟ್ ಫ್ಲಿಕ್ಸ್, ಅಮೆಜಾನ್, ಉದಯ ಟಿವಿಗಳಲ್ಲಿ ಬೇಕಾದ ಹಾಗೆ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇದೀಗ  ಬಹಳ ಮಂದಿಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುವ ಆಸಕ್ತಿ ಇಲ್ಲವಾಗಿರುತ್ತದೆ. ಎಲ್ಲೋ ಸ್ಟಾರ್ ಸಿನಿಮಾಗಳಿಗಷ್ಟೇ ಅಭಿಮಾನಿಗಳು ಬರಬಹುದೇನೋ. ಆದರೆ ಸಾಮಾನ್ಯರ ಸಿನಿಮಾಗಳಿಗೆ ಪ್ರೇಕ್ಷಕರು ಥಿಯೇಟರ್ ಕಡೆಗೆ ಕಾಲಿಡುವುದೇ ಸಂದೇಹ ಎನ್ನುವಂತಾಗಿದೆ.

click me!