ಸಿನಿಮಾಗಳಲ್ಲಿ ಡಾಕ್ಟರ್ನಿಂದ ಮಿನಿಸ್ಟರ್ ತನಕ ಪಾತ್ರಗಳನ್ನು ಮಾಡುವವರಿದ್ದಾರೆ. ಒಂದು ವೇಳೆ ಮಿನಿಸ್ಟರ್ ಆದವರೇ ಒಂದೆರಡು ಚಿತ್ರಗಳಲ್ಲಿ ನಟಿಸಲೂಬಹುದು. ಆದರೆ ವೈದ್ಯಕೀಯ ವಿಭಾಗದಲ್ಲಿದ್ದುಕೊಂಡೇ ನಟಿಯಾಗಿ ಕೂಡ ಹೆಸರು ಮಾಡಿದವರು ಇಲ್ಲ ಎಂದೇ ಹೇಳಬಹುದು. ಅದಕ್ಕೆ ಅಪವಾದ ಎನ್ನುವಂತೆ ಲ್ಯಾಬ್ ಟೆಕ್ನಿಶಿಯನ್ಸ್ ಒಬ್ಬರು ನಟಿಯಾಗಿಯೂ ಸಕ್ರಿಯವಾಗಿದ್ದಾರೆ. ಅವರೇ ಶ್ವೇತಾ ಧಾರವಾಡ. ಕೊರೋನ ವಿಚಾರ ಸೇರಿದಂತೆ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
ಸಿನಿಮಾಗಳಲ್ಲಿ ಡಾಕ್ಟರ್ನಿಂದ ಮಿನಿಸ್ಟರ್ ತನಕ ಪಾತ್ರಗಳನ್ನು ಮಾಡುವವರಿದ್ದಾರೆ. ಒಂದು ವೇಳೆ ಮಿನಿಸ್ಟರ್ ಆದವರೇ ಒಂದೆರಡು ಚಿತ್ರಗಳಲ್ಲಿ ನಟಿಸಲೂಬಹುದು. ಆದರೆ ವೈದ್ಯಕೀಯ ವಿಭಾಗದಲ್ಲಿದ್ದುಕೊಂಡೇ ನಟಿಯಾಗಿ ಕೂಡ ಹೆಸರು ಮಾಡಿದವರು ಇಲ್ಲ ಎಂದೇ ಹೇಳಬಹುದು. ಅದಕ್ಕೆ ಅಪವಾದ ಎನ್ನುವಂತೆ ಲ್ಯಾಬ್ ಟೆಕ್ನಿಶಿಯನ್ಸ್ ಒಬ್ಬರು ನಟಿಯಾಗಿಯೂ ಸಕ್ರಿಯವಾಗಿದ್ದಾರೆ. ಅವರೇ ಶ್ವೇತಾ ಧಾರವಾಡ. ಕೊರೋನ ವಿಚಾರ ಸೇರಿದಂತೆ ಅವರೊಂದಿಗೆ ಸುವರ್ಣ ನ್ಯೂಸ್.ಕಾಮ್ ನಡೆಸಿರುವ ವಿಶೇಷ ಮಾತುಕತೆ ಇದು.
- ಶಶಿಕರ ಪಾತೂರು
undefined
ನಿಮ್ಮ ಕಾರ್ಯವ್ಯಾಪ್ತಿಯ ಸ್ಥಳದಲ್ಲಿ ಕೊರೋನಾದ ಬಗ್ಗೆ ಜನರ ಪ್ರತಿಕ್ರಿಯೆ ಹೇಗಿದೆ?
ನಾನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿದ್ದೀನಿ. ಮಂಗಳೂರನ್ನು ಬುದ್ಧಿವಂತರ ಜಿಲ್ಲೆ ಎಂದು ಹೇಳುತ್ತಾರಾದರೂ ಇಲ್ಲಿನ ಮಂದಿ ಕೂಡ ಕೊರೋನದ ಬಗ್ಗೆ ಆರಂಭದಲ್ಲಿ ಹೆಚ್ಚು ತಲೆಕೆಡಿಸಿಕೊಂಡ ಹಾಗೆ ಇರಲಿಲ್ಲ. ಬಹುಶಃ ಬುದ್ಧಿವಂತಿಕೆ ಹೆಚ್ಚಾಗಿರುವುದರಿಂದಲೇ ಇರಬಹುದು; ಸೋಂಕು ಬಂದರೇನು ಹಾಗೆ ಗುಣವೂ ಆಗುತ್ತದಲ್ಲ ಎನ್ನುವ ಮನೋಭಾವ ಅವರಲ್ಲಿದ್ದಂತಿತ್ತು. ಚಿಕ್ಕ ಮಕ್ಕಳನ್ನೆಲ್ಲ ಹೊರಗೆ ಕರೆದು ತರುವಾಗ ಮಾಸ್ಕ್ ಹಾಕುತ್ತಿರಲಿಲ್ಲ ಎನ್ನುವುದೇ ಆತಂಕವಾಗಿತ್ತು. ಆದರೆ ಪಕ್ಕದ ಕಾಸರಗೋಡಿನದೇ ಪರಿಸ್ಥಿತಿ ಕಂಡಮೇಲೆ ಮತ್ತು ಸ್ಥಳೀಯವಾಗಿಯೂ ಕೊರೋನ ಸೋಂಕಿತರ ಬಗ್ಗೆ ಅರಿವಾದ ಮೇಲೆ ಹೆಚ್ಚಿನ ಎಚ್ಚರಿಕೆ ಮೂಡಿಸಿಕೊಂಡಿದ್ದಾರೆ. ಆದರೆ ಈಗಾಗಲೇ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.
ಕೊರೋನ ವಿಚಾರದಲ್ಲಿ ನಿಮಗೆ ಜಾಗೃತಿ ಮೂಡಿಸಲು ಸಾಧ್ಯವಾಗಿದೆಯೇ?
ವೈದ್ಯಕೀಯ ವಿಭಾಗದ ಫೈನಲೀಯರ್ ವಿದ್ಯಾರ್ಥಿ ಟಾಮ್ ಅವರನ್ನು ಕೂಡ ಇನ್ಸ್ಟಾಗ್ರಾಂನಲ್ಲಿ ಲೈವ್ ಕರೆತಂದು ಮಾಹಿತಿ ಹಂಚಿಕೊಂಡಿದ್ದೆ. ಕೋವಿಡ್ 19 ಹೇಗೆ ವೇಗವಾಗಿ ಹರಡುತ್ತಿದೆ ಮತ್ತು ನಾವು ಎಚ್ಚರಿಕೆ ವಹಿಸಬೇಕಾದ ವಿಚಾರಗಳು ಯಾವುವು ಎನ್ನುವ ಬಗ್ಗೆ ಮಾತನಾಡಿದ್ದೆವು. ನಿಜ ಹೇಳಬೇಕೆಂದರೆ ನಮಗೂ ಸಮಸ್ಯೆಗಳಿವೆ. ಇತ್ತೀಚೆಗಷ್ಟೇ ನಮ್ಮ ಸೀನಿಯರ್ ಲ್ಯಾಬ್ ಟೆಕ್ನಿಶಿಯನ್ ಮಂಜುನಾಥ ಸರ್ ಅವರು ಉಲ್ಲೇಖಿಸಿರುವ ಹಾಗೆ ನಮ್ಮ ಕೆಲಸವನ್ನು ಕೂಡ ಸರ್ಕಾರ ಗುರುತಿಸಬೇಕಾಗಿದೆ. ಯಾಕೆಂದರೆ ಎಲ್ಲ ರೀತಿಯ ರೋಗಿಗಳು ಅವರ ಮೇಲಿನ ಚಿಕಿತ್ಸೆಗೆ ಮೊದಲ ಪ್ರಯೋಗಕ್ಕಾಗಿ ನಮ್ಮನ್ನೇ ಸಂಪರ್ಕಿಸಿರುತ್ತಾರೆ. ಆದರೆ ಸೆಕ್ಯುರಿಟಿಯ ವಿಷಯ ಮತ್ತು ಸರ್ಕಾರದ ಬಜೆಟ್‌ನಲ್ಲಿ ಸರ್ಕಾರಿ ಮತ್ತು ಖಾಸಗಿ ಲ್ಯಾಬ್ ಟೆಕ್ನಾಲಜೀಸ್‌ಗಳಿಗೆ ಫಂಡ್ ಮೀಸಲಿಡಬೇಕಾದ ಅಗತ್ಯವಿದೆ.
ಮದ್ವೆಯಾಗದೇ ತಾಯಿಯಾದ ನಟಿ
ನೀವು ವೈದ್ಯ ವೃತ್ತಿ ಮತ್ತು ಸಿನಿಮಾ ಎರಡನ್ನು ಹೇಗೆ ನಿಭಾಯಿಸುತ್ತೀರಿ?
ಸದ್ಯಕ್ಕೆ ಎರಡನ್ನು ಕೂಡ ನಾನು ಚೆನ್ನಾಗಿ ನಿಭಾಯಿಸುತ್ತಿದ್ದೀನಿ. ಅದು ಸಾಧ್ಯವಾಗಿರುವುದು ಡಾ.ಎಂ ಎ ಆರ್ ಕುಡ್ವ ಅವರ ಸಹಕಾರದಿಂದ ಎನ್ನುವುದನ್ನು ಮರೆಯುವಂತಿಲ್ಲ. ಯಾಕೆಂದರೆ ನನಗೆ ಅಗತ್ಯ ಬಿದ್ದಾಗ ರಜೆ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ನನ್ನನ್ನು ಮೆಂಟಲಿ ಸ್ಟ್ರಾಂಗ್ ಮಾಡಿರುವ ತಂದೆ ಸಮಾನ ವ್ಯಕ್ತಿ ಅವರು. ಒಂದು ರೀತಿಯಲ್ಲಿ ಗಾಡ್ ಫಾದರ್ ಎಂದೇ ಹೇಳಬಹುದು. ಮಾತ್ರವಲ್ಲ, ನನಗೆ ಹಾಸ್ಪಿಟಲ್ ಸ್ಟಾಫ್ ಕೂಡ ತುಂಬ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ. ಜತೆಗೆ ವೈದ್ಯಕೀಯ ವಿಭಾಗ ಕೂಡ ನಾನು ಇಷ್ಟಪಟ್ಟು ಆಯ್ಕೆ ಮಾಡಿರುವಂಥದ್ದು. ಒಂದು ರೀತಿಯಲ್ಲಿ ಸಿನಿಮಾರಂಗ ಪ್ರವೇಶಿಸಿದ್ದೇ ಅನಿರೀಕ್ಷಿತ. ಹಾಗಾಗಿ ಸಿನಿಮಾ ಆಫರ್ ಬಂದಾಕ್ಷಣ ಹಿಂದೆ ಮುಂದೆ ಯೋಚಿಸದೆ ನಾನು ಒಪ್ಪುವುದಿಲ್ಲ. ಎಲ್ಲವೂ ಇಷ್ಟವಾದರೆ ಒಪ್ಪಿ ನಟಿಸುತ್ತೇನೆ.
ರಾಹುಲ್ ಜೊತೆಗಿನ ಸಂಬಂಧ ಬಹಿರಂಗಗೊಳಿಸಿದ ಸುನೀಲ್ ಶೆಟ್ಟಿ ಮಗಳು
ಇದುವರೆಗೆ ಎಷ್ಟು ಸಿನಿಮಾಗಳಲ್ಲಿ ನಟಿಸಿದ್ದೀರಿ?
ನಾನು ಮೂಲತಃ ಧಾರವಾಡದವಳು. ಆದರೆ ಮಂಗಳೂರಿನಲ್ಲಿ ವೃತ್ತಿಯಲ್ಲಿರುವ ಕಾರಣ, ಮೊದಲ ಆಫರ್ ಬಂದಿದ್ದು ಇಲ್ಲಿನ ತುಳು ಚಿತ್ರರಂಗದಿಂದ. `ಕೋರಿ ರೊಟ್ಟಿ’ ಎನ್ನುವ ಆ ಚಿತ್ರದಲ್ಲಿ ಒಂದು ಬೋಲ್ಡ್ ಆಗಿರುವ ಪಾತ್ರ ಮಾಡಿದೆ. ಅದರಲ್ಲಿ ನಿರೂಪಕಿ ಅನುಶ್ರೀಯವರು ನಾಯಕಿಯಾಗಿದ್ದರು. ಆಮೇಲೆ ಉತ್ತರ ಕರ್ನಾಟಕದ ತಂಡದ ಜತೆಗೆ `ಲೈಟ್ ಆಗಿ ಲವ್ವಾಗಿದೆ’ಚಿತ್ರ ಮಾಡಿದೆ. ಕಿರಣ್ ಕುಮಾರ್ ನಾಯಕರಾಗಿರುವ `ಗೋರಿ', ವಿನೋದ್ ಪಾಟೀಲ್ ನಾಯಕರಾಗಿರುವ `ರಿಯಾ, ವಿಕಾಶ್ ಶೆಟ್ಟಿ ಜತೆಗಿನ `ಗ್ರಂಥಾಲಯ’ಮೊದಲಾದ ಚಿತ್ರಗಳು ಬಿಡುಗಡೆಯಾಗಬೇಕಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟನೆಯ`ಯುವರತ್ನ’ಸಿನಿಮಾದಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಮೆಡಿಕಲ್ ಪ್ರೊಫೆಸರ್ ಆಗಿ ಕಾಣಿಸಿಕೊಂಡಿದ್ದೇನೆ. ಹೀಗೆ ಎಲ್ಲ ಸೇರಿದರೆ ಒಟ್ಟು ಐದಾರು ಸಿನಿಮಾಗಳಲ್ಲಿ ನಟಿಸಿದ್ದೇನೆ.
ಧಾರವಾಡದ ಹುಡುಗಿಯಾಗಿ ಮಂಗಳೂರು ಸೇರಿಕೊಂಡಿದ್ದು ಹೇಗೆ?
ನಾನು ಉತ್ತರ ಕನ್ನಡದ ಹುಡುಗಿಯಾದರೂ, ನನಗೆ ಮೊದಲಿನಿಂದಲೂ ಮಂಗಳೂರು ಅಂದರೆ ತುಂಬ ಇಷ್ಟ! ನನಗೆ ಬೆಂಗಳೂರಲ್ಲೇ ಇಂಟನ್ಷಿಪ್ ದೊರಕಿದರೂ ಬದಲಾಯಿಸಿಕೊಂಡು ಮಂಗಳೂರಿಗೆ ಬಂದೆ! ಮೊದಲನೆಯದಾಗಿ ನನಗೆ ಮಂಗಳೂರು ಸಮುದ್ರ ಅಂದರೆ ತುಂಬ ಇಷ್ಟ. ಲಾಕ್ಡೌನ್‌ಗಿಂತ ಮುಂಚೆ ಬೆಳಿಗ್ಗೆಇಲ್ಲಿನ `ತಣ್ಣೀರು ಬಾವಿ’ ಎನ್ನುವ ಬೀಚ್ ಪಕ್ಕ ಹೋಗಿ ಯೋಗಾಸನ ಮಾಡುವುದು, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದೇ ಪ್ರಮುಖ ದಿನಚರಿ ಆಗಿತ್ತು. ಇದುವರೆಗೆ ಟಿಕ್ಟಾಕ್, ಡಬ್ಸ್ಮಾಶ್ ಮಾಡಿರದ ನನ್ನನ್ನು ನಟಿಯಾಗಿಸಿದ್ದು ಕೂಡ ಇದೇ ಮಂಗಳೂರು. ಆದರೆ ಇದೀಗ ಬೆಂಗಳೂರು ಕಲಾವಿದೆಯಾಗಿ ನನಗೆ ಹೆಚ್ಚಿನ ಅವಕಾಶ ನೀಡುತ್ತಿದೆ. ನನಗೂ ಸಿನಿಮಾರಂಗದಲ್ಲಿ ಉತ್ತಮ ನಟಿಯಾಗಿ ಹೆಸರು ಮಾಡುವ ಆಸೆ ಇದೆ. ಹಾಗಾಗಿ ಕಲಾವಿದರಿಗೆ ಕರ್ನಾಟಕವೇ ಊರು ಎನ್ನುವಂತೆ ನನಗೆ ಈಗ ಒಟ್ಟು ರಾಜ್ಯವೇ ನನ್ನದು ಎನ್ನುವ ಭಾವನೆ ತುಂಬಿಕೊಂಡಿದೆ.