ಕೆಲಸ ಹೋಗಿತ್ತು, ಎದೆಗುಂದಲಿಲ್ಲ ಬ್ಯುಸಿನೆಸ್ ಆರಂಭಿಸಿ ಯಶಸ್ವಿಯಾದ Love Mocktail 2 ನಟಿ ಸುಶ್ಮಿತಾ ಗೌಡ!

By Vaishnavi ChandrashekarFirst Published Mar 6, 2022, 10:34 AM IST
Highlights

ಕೆಲಸ ಹೋಗಿತ್ತು. ಏನು ಮಾಡಬೇಕೋ ಗೊತ್ತಿರಲಿಲ್ಲ. ತಮ್ಮ ಕೇಶ ಹಾಗೂ ತ್ವಚಾ ಸೌಂದರ್ಯವನ್ನೇ ಎನ್‌ಕ್ಯಾಶ್ ಮಾಡಿಕೊಂಡು, ಯಶಸ್ವಿ ಮಹಿಳಾ ಉದ್ಯಮಿಯಾದರು. ಒಂದಾದ ನಂತರ ಮತ್ತೊಂದು ಉತ್ಪನ್ನ ತಯಾರಿಸಿದರು. ಇದೀಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, 'Love Mocktail' 2ನ ಯಶಸ್ವಿ ನಟಿ ಸುಶ್ಮಿತಾ ಗೌಡ ರಿಯಲ್‌ ಲೈಫ್ ಹೇಗಿದೆ? ಉದ್ಯಮಿ ಆಗಿದ್ದು ಹೇಗೆ? ಇಲ್ಲಿದೆ ಸಣ್ಣ ಮಾತುಕತೆ...

ವೈಷ್ಣವಿ ಚಂದ್ರಶೇಖರ್

ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಉದ್ಯಮಿ, ಬೆಲ್ಲಿ ಡ್ಯಾನ್ಸರ್ ಸುಶ್ಮಿತಾ ಗೌಡ ತಮ್ಮ ಸಿನಿಮಾ ಜರ್ನಿ ಆರಂಭಿಸಿದ್ದು ಹೇಗೆ? ಸೋಷಿಯಲ್ ಮೀಡಿಯಾದಿಂದ ತಮ್ಮ ಬ್ಯುಸಿನೆಸ್‌ಗೆ ಎಷ್ಟು ಸಹಾಯವಾಗಿದೆ, ದಾಂಪತ್ಯ ಜೀವನ ಹೇಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌. ಕಾಮ್‌ ಜೊತೆ ಮಾತನಾಡಿದ್ದಾರೆ.

ಲವ್ ಮಾಕ್ಟೇಲ್ 2 ಸಿನಿಮಾ ಯಶಸ್ಸಿನ ಬಗ್ಗೆ ನಿಮ್ಮ ಮಾತು?
ತುಂಬಾ ಖುಷಿಯಾಗುತ್ತಿದೆ. ಲವ್ ಮಾಕ್ಟೇಲ್ ಪಾರ್ಟ್‌ 1 ತುಂಬಾ ಫೇಮಸ್ ಆಗಿತ್ತು. ಭಾಗ ಎರಡರ ಆಡಿಷನ್ ಶುರುವಾಗಿತ್ತು, ಆಡಿಷನ್ ಆಗಿ ನನಗೆ ಈ ಒಂದು ಪಾತ್ರ ಸಿಕಿದ್ದಕ್ಕೆ ತುಂಬಾ ಖುಷಿ ಆಯ್ತು. ಮಿಲನಾ ಮತ್ತು ಕೃಷ್ಣ ಸರ್‌ಗೆ ಧನ್ಯವಾದಗಳನ್ನು ಹೇಳಬೇಕು. ಸಿನಿಮಾ ನೋಡಲು ಹೋದರೆ, ಶುರುವಾಗುವ ಮೊದಲೇ ನನ್ನನ್ನು ಗುರುತು ಹಿಡಿಯುತ್ತಾರೆ. ಇಂಟರ್ವಲ್‌ ಇರುವಾಗಲೂ ಬಂದು ಮಾತನಾಡಿಸುತ್ತಾರೆ. ಮೈಸೂರಿಗೆ ಹೋದಾಗಲೂ ಬಂದು ಒಂದು ಸೆಲ್ಫೀ ಬೇಕು ಅಂತಾರೆ. ಈ ರೀತಿ ಜನರಿಂದ ಪ್ರತಿಕ್ರಿಯೆ ಪಡೆಯುತ್ತಿರುವುದಕ್ಕೆ ಖುಷಿ ಆಗುತ್ತದೆ. ನನ್ನ ಮದುವೆ ಈವೆಂಟ್‌ಗಳಿಂದ ಕೆಲವು ಪ್ರಮೋಷನ್‌ಗಳಲ್ಲಿ ಭಾಗಿಯಾಗುವುದಕ್ಕೆ ಆಗಲಿಲ್ಲ. ಆದರೆ ನನ್ನ ಅರಿಶಿಣ ಶಾಸ್ತ್ರ ಆದ ನಂತರ ನಾನು ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಪಾಲ್ಗೊಂಡಿದ್ದೆ. 

ಇನ್‌ಸ್ಟಾಗ್ರಾಂ ಜೀವನ ರೂಪಿಸಿಕೊಳ್ಳಲು ಹೇಗೆ ಸಹಾಯ ಮಾಡಿದೆ, ಕೂದಲು ಎಣ್ಣೆಯ ಬ್ಯುಸಿನೆಸ್ ಶುರು ಮಾಡಿದ್ದು ಹೇಗೆ?
ನಾನು ಇಲ್ಲಿ ತನಕ ಬರುವುದಕ್ಕೆ ಕಾರಣವೇ ಸೋಷಿಯಲ್ ಮೀಡಿಯಾ. ಇದನ್ನು ಒಂದು opportunity ಅಗಿ ನೋಡಿದ್ದೀನಿ. ನಾನು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಅವರು ನನ್ನನ್ನು ಟರ್ಮಿನೇಟ್ ಮಾಡಿದರು. ಆಗ ಏನು ಮಾಡಬೇಕೆಂಬುವುದೇ ಗೊತ್ತಿರಲಿಲ್ಲ. ಆದರೆ ತುಂಬಾ ಜನರು ನನ್ನನ್ನು ಫಾಲೋ ಮಾಡುತ್ತಿದ್ದರು. ಅದು ನನ್ನ ಕೂದಲಿಗೋಸ್ಕರ. ತುಂಬಾ ಜನರು ಕೇಳುತ್ತಿದ್ದರು, ನನ್ನ ಹೇರ್‌ಕೇರ್‌ ಏನು ಅಂತ. ಈ ಬ್ಯುಸಿ ಜೀವನದಲ್ಲಿ ಎಲ್ಲರಿಗೂ ಕೇರ್ ಮಾಡುವುದಕ್ಕೆ ಕಷ್ಟ ಆಗುತ್ತದೆ. ಅದಕ್ಕೆ ನಾನೇ ಯಾಕೆ ಒಂದು ಹೇರ್‌ಕೇರ್‌ ಬ್ರ್ಯಾಂಡ್ ಶುರು ಮಾಡಬಾರದು, ಎಂದುಕೊಂಡು ಶುರು ಮಾಡಿದೆ. ಇದು ನಮ್ಮ ಹಿರಿಯರು ಬಳಸುತ್ತಿದ್ದ ರೆಸಿಪಿ, ನನ್ನ ತಾಯಿ ಮನೆಯಲ್ಲಿಯೇ ಮಾಡಿ ನನಗೆ ಹಾಕುತ್ತಿದ್ದರು. ಇದು ಬಿಟ್ಟು ಬೇರೆ ಯಾವುದನ್ನೂ ನಾನು ಕೂದಲ ಪೋಷಣೆಗೆ ಬಳಸುತ್ತಿರಲಿಲ್ಲ. ನಾನು ಮತ್ತು ನನ್ನ ಬೆಸ್ಟ್‌ ಫ್ರೆಂಡ್ ಸೇರಿಕೊಂಡು ಈ ಬ್ರ್ಯಾಂಡ್‌ ನೋಡಿಕೊಳ್ಳುತ್ತಿದ್ದೇವೆ.

ಹೇರೆ ಕೇರ್ ಆಯಿತು, ಸ್ಕಿನ್ ಕೇರ್ ಬ್ರ್ಯಾಂಡ್ ಅನ್ನೂ ಶುರು ಮಾಡಿದ್ದೀರಾ? ಈ ಯೋಚನೆ ಹೇಗೆ ಬಂತು?
ಕೂದಲು ಎಣ್ಣೆ ಮಿರಾಕ್ಕಿ ಮತ್ತು ಸ್ಕಿನ್‌ ಕೇರ್‌ Entice ಎರಡೂ ಎಕ್ಸಪರಿಮೆಂಟ್. ಒಂದು ಪ್ರಾಡೆಕ್ಟ್‌ ಲಾಂಚ್ ಮಾಡುವುದಕ್ಕೂ ಮುಂಚೆ ನಾನೇ ಅದರ ಬಗ್ಗೆ ರೀಸರ್ಜ್ ಮಾಡಿದೆ. ಹೇಗೆ ಉಪಯೋಗ ಆಗುತ್ತೆ ಏನೆಲ್ಲಾ ಸಾಮಾಗ್ರಿಗಳು ಇರಬೇಕು, ಯಾವೆಲ್ಲಾ ದೇಶಗಳಲ್ಲಿ ಮ್ಯಾನುಫ್ಯಾಕ್ಚರ್ ಮಾಡುತ್ತಾರೆ ಅಂತ. ಮಿರಾಕ್ಕಿ ಹೆಸರು ಬಳಸಿಕೊಂಡು ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಇಷ್ಟ ಇರಲಿಲ್ಲ, ಹೀಗಾಗಿ ಬೇರೆ ಹೆಸರು ಬಳಸಿ ಸ್ಕಿನ್ ಕೇರ್ ಪ್ರೊಡಕ್ಟ್ ಶುರು ಮಾಡಿದೆ.

ನಿಮ್ಮ ಬ್ರ್ಯಾಂಡ್ ಜನಪ್ರಿಯತೆ ಪಡೆದುಕೊಳ್ಳಲು ಸೆಲೆಬ್ರಿಟಿಗಳು ಮುಖ್ಯ ಕಾರಣವೇ ?
ಖಂಡಿತ ಹೌದು. ಲವ್ ಮಾಕ್ಟೇಲ್ 2 ಸಿನಿಮಾ ಸಿಕ್ಕ ಮೇಲೆ ಮಿಲನಾ ಮೇಡಂ ತುಂಬಾ ಕ್ಲೋಸ್ ಆದರು. ಹೀಗಾಗಿ ಅವರ ಕಡೆಯಿಂದ ನಾನು ಸೆಲೆಬ್ರಿಟಿ ಎಂಡೋರ್ಸ್‌ ಮಾಡಿಸಿಕೊಂಡೆ. ಸಿನಿಮಾ ಎಂಟ್ರಿಯಿಂದ ನನ್ನ ಬ್ಯುಸಿನೆಸ್‌ಗೂ ಸಹಾಯ ಆಯ್ತು. ಇದು ಒಂದು ಖುಷಿಯೇ. 

ಇವೆಲ್ಲದರ ಮಧ್ಯೆಯೇ ಆಹಾ ಮೂಗುತಿ ಬೇರೆ ಶುರು ಮಾಡಿದ್ದೀರಿ. ಮದ್ವೆ ಆದ್ಮೇಲೆ ಎಲ್ಲವನ್ನೂ ಬ್ಯಾಲೆನ್ಸ್ ಹೇಗೆ ಮಾಡುತ್ತಿದ್ದೀರಿ?
ಈ ಮೂರು ಬ್ಯುಸಿನೆಸ್ ನೋಡಿಕೊಳ್ಳುವುದಕ್ಕೆ ಒಂದು ಟೀಂ ಇದೆ. ಹೀಗಾಗಿ ಸ್ವಲ್ಪ ಒತ್ತಡ ಕಡಿಮೆ ಅನ್ಸುತ್ತೆ. ಏನಾದರೂ ಒಂದು ಕೆಲಸ ಇದ್ದೇ ಇರುತ್ತೆ. ಮೂಗುತಿಯಿಂದಲೇ ನನಗೆ ಲವ್ ಮಾಕ್ಟೇಲ್ 2 ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು. ತುಂಬಾ ಡಿಫರೆಂಟ್ ಆಗಿರುವ ಡಿಸೈನ್‌ಗಳನ್ನು ಪ್ರಯೋಗ ಮಾಡುವುದಕ್ಕೆ ಕಷ್ಟ ಪಡ್ತೀನಿ, ನಂದೇ ಒಂದು ಡಿಸೈನ್ ಮಾಡಿ ಕೊಳ್ಳುತ್ತಿದ್ದೆ. ಅದನ್ನು ಮಾಡಿಸುವಾಗ ಅವರು ಸರಿಯಾದ ಫಿನಿಷಿಂಗ್ ಕೊಡುತ್ತಿರಲಿಲ್ಲ. ನನಗೆ ಗೊತ್ತಿರುವವರು ಒಬ್ಬರು ಸಿಕ್ಕರು. ಅವರೇ ನನ್ನ ಎಲ್ಲಾ ಡಿಸೈನ್‌ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ತುಂಬಾ ಜನರು ಕೇಳುವುದಕ್ಕೆ ಶುರು ಮಾಡಿದರೆ ಅದನ್ನೂ ಶುರು ಮಾಡಿದೆ. 

'ಲವ್‌ ಮಾಕ್ಟೇಲ್-2' ನಾಯಕಿ ಸುಶ್ಮಿತಾ ಗೌಡ ಸೀರೆ ಕಲೆಕ್ಷನ್ ನೋಡಿದ್ರೆ ಶಾಕ್ ಆಗ್ತೀರಾ!

ನಿಮ್ಮದೇ ಸಲೂನ್‌ ಬೇರೆ ಇದೆ, ಕಂಪ್ಲೀಟ್ ಬ್ಯುಸಿನೆಸ್ ವುವೆನ್‌ ಆಗಿದ್ದೀರಾ....
ನನ್ನ ಬೆಸ್ಟ್ ಫ್ರೆಂಡ್‌ ನನ್ನ ಪಾರ್ಟನರ್‌. ಗೌತಮಿ ಅಂತ ಅವರ ಹೆಸರು. ಅವರು ಡಾಲರ್ಸ್ ಕಾಲೋನಿಯಲ್ಲಿರುವ ನಮ್ಮ ಸಲೂನ್‌ನ ನೋಡಿಕೊಳ್ಳುತ್ತಾರೆ. ನಾನು ಮಲ್ಲೇಶ್ವರಂನಲ್ಲಿರುವ ಕಾರಣ ಇಲ್ಲಿರುವ ಕೂದಲು ಎಣ್ಣೆ ಆಫೀಸ್ ನೋಡಿಕೊಳ್ಳುವೆ.

ಲವ್ ಮಾಕ್ಟೇಲ್ ಮಧ್ಯೆಯೇ ದಾಂಪತ್ಯಕ್ಕೂ ಕಾಲಿಟ್ಟಿದ್ದೀರಿ. ನಿಮ್ಮ ಜೀವನ ಸಂಗಾತಿ ಸಿಕ್ಕಿದ್ದು ಹೇಗೆ?
ಫಸ್ಟ್‌ ಪಿಯುಸಿಯಲ್ಲಿ ಅಶ್ವಿನ್‌ ನನಗೆ ಪರಿಚಯವಾಗಿದ್ದು. ಅವರೇ ನನ್ನ ಫಸ್ಟ್‌ ಲವ್. ಆದರೆ ಬ್ರೇಕಪ್ ಮಾಡಿಕೊಂಡು, ಒಬ್ಬರಿಗೊಬ್ಬರೂ ಸಂಪರ್ಕದಲ್ಲಿಯೇ ಇರಲಿಲ್ಲ. 7 ವರ್ಷಗಳ ಕಾಲ ನಾವು ಮಾತನಾಡಿರಲಿಲ್ಲ. ಒಂದು ದಿನ ಇನ್‌ಸ್ಟಾಗ್ರಾಂನಲ್ಲಿ ಅಶ್ವಿನ್ ಮೆಸೇಜ್ ಮಾಡಿದ್ದರು. ಅವರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಯುಎಸ್‌ಗೆ ಪ್ರಯಾಣ ಮಾಡುತ್ತಿದ್ದರು. ಅಲ್ಲಿಂದ ನಾವಿಬ್ಬರೂ ಮತ್ತೆ ಮಾತನಾಡಲು ಶುರು ಮಾಡಿದ್ವಿ. ಆ 7 ವರ್ಷಗಳ ನಂತರ ನಾವು ಒಂದು ದಿನವೂ ಮೀಟ್ ಮಾಡಿಲ್ಲ. ಆನ್‌ಲೈನ್‌ನಲ್ಲಿ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ವಿ. ಒಂದು ವರ್ಷ ಕಳೆದು, ಅವರು ಬೆಂಗಳೂರಿಗೆ ಬಂದಾಗ ನಾನು ಪ್ಯಾರಿಸ್‌ಗೆ ಹೋಗಿದ್ದೆ. ಅವರು ಎರಡೇ ದಿನ ಇದ್ದಿದ್ದು. ಅವರು ಹೊರಡುವಾಗ ನಾನು ಲ್ಯಾಂಡ್‌ ಆಗುವ ಸಮಯ ಒಂದೇ ಆಗಿತ್ತು. ಆ ಗ್ಯಾಪಲ್ಲೇ ಮೀಟ್ ಆದ್ವಿ. ಅದು ಒಂದೇ ದಿನ ನಾವು ಭೇಟಿ ಮಾಡಿದ್ದು. ಮೂರು ತಿಂಗಳ ನಂತರ ಅಶ್ವಿನ್‌ನ ಭೇಟಿ ಮಾಡಲು ಯುಎಸ್ ವೀಸಾ ಮಾಡಿಸಿದೆ. ಹೋಗಿ ಒಮ್ಮೆ ಭೇಟಿಯಾಗಿದ್ದೆ. 5 ವರ್ಷಗಳ ಕಾಲ ನಮ್ಮದು ಲಾಂಗ್ ಡಿಸ್ಟೆನ್ಸ್‌ ರಿಲೇಷನ್‌ಶಿಪ್. ಆಮೇಲೆ ಮದುವೆ ಆದ್ವಿ.

ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ Love Mocktail 2 ನಟಿ ಸುಶ್ಮಿತಾ ಗೌಡ!

ನಿಮ್ಮ ಮದುವೆ ಫೋಟೋಗಳದ್ದೇ ಹವಾ ಜೋರಾಗಿದೆ ,ಡ್ರೆಸ್‌ಗಳ ಡಿಸೈನ್‌ ಹಿಂದೆ ಸ್ಟೋರಿ ಇದ್ಯಾ?
ನಮ್ಮ ಬಟ್ಟೆಗೆ ಡಿಸೈನರ್ ಅಂತ ಯಾರೂ ಇಲ್ಲ. ನಾನೇ ಸೆಲೆಕ್ಷನ್ ಮಾಡಿದ್ದು. ಪ್ರತಿಯೊಂದೂ ಸ್ಟೋರ್‌ಗೆ ಹೋಗಿ ಫೈನಲೈಸ್ ಮಾಡಿದ್ದು. ಅಶ್ವಿನ್‌ ಅವರದ್ದು ಕೂಡ ನಾನು ಸೆಲೆಕ್ಟ್ ಮಾಡಿದ್ದು. 

ಸುಶ್ಮಿತಾ ಡ್ರೆಸ್‌ ಕಲೆಕ್ಷನ್ ಮತ್ತು ಸೀರೆ ಕಲೆಕ್ಷನ್ ಸೂಪರ್ ಅಂತ ಕಾಮೆಂಟ್ ಬರುತ್ತೆ, ಎಲ್ಲಿಂದ ಸೆಲೆಕ್ಟ್ ಮಾಡ್ತೀರಾ? 
ನನಗೆ ಡಿಫರೆಂಟ್ ಆಗಿ ಕಲೆಕ್ಷನ್ ಮಾಡಬೇಕು. ಎಲ್ಲಾ ಒಂದೇ ತರ ಹಾಕಬಾರದು. ಹೀಗಾಗಿ ನಾನು ಬಟ್ಟೆ ಆಯ್ಕೆ ಮಾಡುವಾಗ ತುಂಬಾನೇ ಟೈಂ ತೆಗೆದುಕೊಳ್ಳುತ್ತೀನಿ. ಅಂದೊಂದು ಗುಣ ಇದೆ. ಒಂದೊಂದು ಕಡೆ ಒಂದೊಂದನ್ನು ತೆಗೆದುಕೊಳ್ಳುವೆ, ಪರ್ಟಿಕ್ಯೂಲರ್ ಆದ ಜಾಗ ಅಂತಿಲ್ಲ. ಇಷ್ಟ ಆಯ್ತು, ಡಿಫರೆಂಟ್ ಆಗಿದೆ ಅಂದ್ರೆ ಬ್ರ್ಯಾಂಡ್ ಎಲ್ಲಾ ಮ್ಯಾಟರ್ ಆಗುವುದಿಲ್ಲ.

ಯಾವ ಸಿನಿಮಾ ಪ್ರಾಜೆಕ್ಟ್‌ ಬಂದಿವೆ, ಒಪ್ಪಿಕೊಳ್ಳುತ್ತಿದ್ದೀರಾ? 
ಒಂದು ಕಥೆ ಬಂದಿತ್ತು. ಅದು ಮದ್ವೆ ಟೈಂ ಇತ್ತು. ನಾವು ಪ್ರಯಾಣ ಮಾಡ್ತಿದ್ವಿ. ಅದಕ್ಕೆ ಅದು ಆಗಲಿಲ್ಲ. ಅದು ಒಪ್ಪಿಕೊಂಡಿಲ್ಲ. ಎಲ್ಲರೂ ನಂಬರ್ ತೆಗೆದುಕೊಂಡಿದ್ದಾರೆ, ಆದರೆ ಯಾರೂ ಸಂಪರ್ಕ ಮಾಡಿಲ್ಲ. ಕಥೆ ಇಷ್ಟ ಆಯ್ತು ಅಂದ್ರೆ ಖಂಡಿತ ಸಿನಿಮಾ ಒಪ್ಪಿಕೊಳ್ಳುತ್ತೀನಿ.

click me!