ಈ ನಟರೇನು ಮೂರು ತಿಂಗಳ ಮಗುನಾ? ನಟಿ Ratna Pathak Shah ಹೀಗೆ ಹೇಳಿದ್ದೇಕೆ?

By Suvarna News  |  First Published Mar 23, 2023, 5:05 PM IST

ವಿಮಾನದಲ್ಲಿ ಇಂದಿನ ಕೆಲ ನಟ-ನಟಿಯರು ನಡೆದುಕೊಳ್ಳುವ ರೀತಿಯ ಬಗ್ಗೆ ಹಿರಿಯ ನಟಿ ರತ್ನಾ ಪಾಠಕ್​ ಷಾ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ಅವರು?
 


ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿಯೂ ಕೊಡೆ ಹಿಡಿಸಿಕೊಂಡ ಎನ್ನುವ ಮಾತು ತಲೆ ತಲಾಂತರಗಳಿಂದ ಬಂದಿದೆ. ಇದು ಇಂದಿನ ಕಾಲದಲ್ಲಿಯೂ ಅಕ್ಷರಶಃ ಸತ್ಯವೇ. ಮನುಷ್ಯ ಶ್ರೀಮಂತನಾಗುತ್ತಾ (Rich) ಹೋದಷ್ಟು ಬೇರೆಯವರ ಮೇಲೆ ಅವಲಂಬಿತನಾಗುವುದೇ ಹೆಚ್ಚು.  ಇದು ಎಲ್ಲರಿಗೂ ಅನ್ವಯ ಆಗುವುದಿಲ್ಲವಾದರೂ ಬಹುತೇಕರಿಗೆ ಇದು ಅನ್ವಯವೇ.  ಕ್ರಮೇಣ ಕೈಗೊಂದು, ಕಾಲಿಗೊಂದು ಆಳು ಕಾಳುಗಳು ಬೇಕಾಗುತ್ತವೆ. ತಮ್ಮ ಮನೆಯಲ್ಲಿ ಹೆಚ್ಚೆಚ್ಚು ಕೆಲಸದವರು ಇದ್ದಷ್ಟೂ ಹೆಚ್ಚೆಚ್ಚು ಪ್ರೆಸ್ಟೀಜ್​. ಇನ್ನು ಸೆಲೆಬ್ರಿಟಿಗಳಾದ ಮೇಲೆ ಕೇಳಬೇಕೆ? ಅದರಲ್ಲಿಯೂ ಚಿತ್ರ ನಟ-ನಟಿಯಾದರಂತೂ ಮುಗಿದೇ ಹೋಯ್ತು. ಒಂದು ಹಂತಕ್ಕೆ ತಲುಪಿದ ತಕ್ಷಣ ತಮ್ಮ ಕೆಲಸ ತಾವೇ ಮಾಡಿಕೊಂಡರೆ ಜನರು ಏನನ್ನುತ್ತಾರೋ ಎನ್ನುವ ಮುಜುಗರ. ಅದರಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ಕೆಲಸ ತಾವೇ ಮಾಡಿಕೊಳ್ಳುವುದನ್ನು ಅವರು ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಇವೆಲ್ಲಾ  ಲೋ ಕ್ಲಾಸ್​ ಜನರು ಮಾಡುವ ಕೆಲಸ ಎಂದುಕೊಳ್ಳುತ್ತಾರೆ.  ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಅರ್ಧಂಬರ್ಧ ತಿಂದು ಆಹಾರ ಹಾಳು ಮಾಡುವುದು, ಪಾನೀಯಗಳನ್ನು ಸ್ವಲ್ಪವೇ ಕುಡಿದು ಗ್ಲಾಸ್​ನಲ್ಲಿ ಉಳಿಸುವುದು, ಕಾರಿನ ಬಾಗಿಲು ತೆರೆಯುವುದರಿಂದ ಹಿಡಿದು ತಮ್ಮ ಕೈಯಲ್ಲಿ ಇರುವ ವಸ್ತುಗಳನ್ನು ಹಿಡಿದುಕೊಳ್ಳಲೂ ಕೆಲಸದವರನ್ನು ಅವಲಂಬಿಸುವುದು... ಇವೆಲ್ಲವೂ ಪ್ರೆಸ್ಟೀಜ್​ ಸಂಕೇತ. ಇದರ ವಿರುದ್ಧ ಖುದ್ದು ಹಿರಿಯ ನಟಿ ರತ್ನಾ ಪಾಠಕ್​ ಷಾ (Ratna Pathak Shah) ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಈ ಕೆಟ್ಟ ಪದ್ಧತಿಯ ಕುರಿತು ಅವರು ಬೋಲ್ಡ್​ ಆಗಿ ಉತ್ತರಿಸಿದ್ದಾರೆ.  

ವಿಮಾನದಲ್ಲಿ ಹೋಗುವಾಗ ಹಲವಾರು ನಟರು, ತಮಗೆ ಕಾಫಿ ಬೇಕು ಎಂದಾಗ ಅದನ್ನು ಅವರ ಸಹಾಯಕರು ತಂದುಕೊಡುತ್ತಾರೆ, ನಂತರ ಸಹಾಯಕರೇ ಅದನ್ನು ತೆರೆದು ಕೊಡಬೇಕು. ನಟರು ಅದನ್ನು ಸಿಪ್​  ಮಾಡಿ ಪುನಃ  ಸಹಾಯಕರಿಗೆ ವಾಪಸ್​ ಕೊಡುತ್ತಾರೆ. ಇದೆಂಥ ಅಸಭ್ಯ ವರ್ತನೆ ಎನಿಸುವುದಿಲ್ಲವೆ? ನೀವೇನು ಮೂರು ತಿಂಗಳ ಮಗುನಾ? ಒಂದು ಕಪ್​ ಕಾಫಿ ಕುಡಿಯುವುದಿದ್ದರೂ ನಿಮಗೆ ಕೆಲಸಗಾರರು ಬೇಕೆ? ಇದು ಅಸಹ್ಯ ಎನಿಸುವುದಿಲ್ಲವೆ ಎಂದು ರತ್ನಾ ಪಾಠಕ್​ ಷಾ ಪ್ರಶ್ನಿಸಿದ್ದಾರೆ. ಇಷ್ಟು ಚಿಕ್ಕ ವಿಷಯಕ್ಕೂ ಬೇರೆಯವರ ಮೇಲೆ ಅವಲಂಬನೆಯಾಗುವಂಥ ಅವಶ್ಯಕತೆ ಏನಿದೆ ಎಂದು ಎನಿಸುವುದಿಲ್ಲವೆ? ಇದು ನಟರ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ನಾನು ಈಗಾಗಲೇ ಹಲವಾರ ನಟ-ನಟಿಯರನ್ನು ನೋಡಿದ್ದೇನೆ. ಈ ಪರಿಯ ಅವಲಂಬನೆ ನಿಜಕ್ಕೂ ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಬಹುತೇಕ ನಟ ಮತ್ತು ನಟಿಯರ ವರ್ತನೆಗೆ ಅಸಮಾಧಾನ ಹೊರಹಾಕಿದ್ದಾರೆ. 

Tap to resize

Latest Videos

undefined

ಮಹಿಳೆ, ಪುರುಷ ಎನ್ನೋದು ಬಾತ್‌ರೂಮ್‌ಗೆ ಸೀಮಿತವಾಗಲಿ ಸಾಕು ಎಂದ Sadhguru

ಇವರ ಈ ಹೇಳಿಕೆಗೆ ಹಲವಾರು ಮಂದಿ ಪ್ರತಿಕ್ರಿಯೆ ನೀಡಿದ್ದು, ಇಷ್ಟು ಬೋಲ್ಡ್​ ಆಗಿ ಮಾತನಾಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ  ರತ್ನಾ ಪಾಠಕ್​ ಷಾ ಅವರ ಕೆಲವೊಂದು ಒಳ್ಳೆಯ ಗುಣಗಳ ಬಗ್ಗೆಯೂ ಮಾತನಾಡಿದ್ದಾರೆ. 'ಒಮ್ಮೆ ವಿಮಾನದಲ್ಲಿ ನಾನು ಇವರ ಪಕ್ಕದಲ್ಲಿ ಕುಳಿತಿದ್ದೆ. ಏರ್ಲೈನ್ಸ್ ಸಿಬ್ಬಂದಿಯೊಂದಿಗೆ ಮಾತನಾಡುವಾಗ ಅವರು ನಿಜವಾಗಿಯೂ ವಿನಮ್ರ ಮತ್ತು ಗೌರವಾನ್ವಿತ ವ್ಯಕ್ತಿಯಾಗಿ ಕಾಣಿಸಿಕೊಂಡರು. ಇನ್​ಫ್ಯಾಕ್ಟ್​ ನಾನು ಇವರನ್ನು   ಎರಡನೆಯ ಬಾರಿ ನೋಡಿದ್ದೇನೆ. ತುಂಬಾ ಉತ್ತಮ ನಡತೆಯ ನಟಿ ಎಂದು ಅಭಿಜಿತ್​ ಎನ್ನುವವರು ಶ್ಲಾಘಿಸಿದ್ದಾರೆ. 

ಇನ್ನು ಕೆಲವರು ನಟರೆಂದರೆ ಅವರಿಗೇ ಆದ ಘನತೆ ಇರುತ್ತದೆ. ಇದೇ ಕಾರಣಕ್ಕೆ, ಅವರಾಗಿಯೇ ಕಾಫಿ ಕಪ್​ ಅನ್ನು ಹಿಡಿದು ಕುಡಿಯುವುದು ಮಿಡ್ಲ್​ ಕ್ಲಾಸ್​ ಜನರ ಕೆಲಸ ಅಂದುಕೊಳ್ಳುತ್ತಾರೆ. ಇದರಲ್ಲಿ ಅವರದ್ದೇನೂ ತಪ್ಪಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ. ರುಬಿ ಎನ್ನುವವರು ಕಮೆಂಟ್ (Comment) ಮಾಡಿದ್ದು, ನನ್ನ ಸ್ನೇಹಿತೆಯೊಬ್ಬಳು ಪ್ರತಿಯೊಂದನ್ನು ಕೆಲಸಗಾರರ ಮೇಲೆ ಡಿಪೆಂಡ್​ ಆಗಿದ್ದಾಳೆ. ಇದೇ  ಕಾರಣಕ್ಕೆ ಅವಳು ದೈಹಿಕವಾಗಿ ಸಿಕ್ಕಾಪಟ್ಟೆ ವೀಕ್​  ಆಗಿದ್ದು, ಆಗಾಗ್ಗೆ ಅನಾರೋಗ್ಯಪೀಡಿತಳಾಗುತ್ತಿರುತ್ತಾಳೆ ಎಂದಿದ್ದಾರೆ. 

Salman Khan ಮನೆಗೆ ಫುಲ್‌ ಸೆಕ್ಯುರಿಟಿ: ಎಲ್ಲಾ ಕಾರ್ಯಕ್ರಮ ಸ್ಥಗಿತ!

 

click me!