‘ಪ್ರಿಮಿಯರ್ ಪದ್ಮಿನಿ’ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಮಿಂಚಿದ ಪ್ರಮೋದ್ ಜ.10ರಂದು ಹುಟ್ಟು ಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಟ ಪ್ರಮೋದ್ ಇಲ್ಲಿ ಮಾತನಾಡಿದ್ದಾರೆ.
ಆರ್ ಕೇಶವಮೂರ್ತಿ
ತುಂಬಾ ಸಿನಿಮಾಗಳು ಒಪ್ಪಿಕೊಂಡಿದ್ದೀರಿ ಅನಿಸುತ್ತದೆ?
undefined
ನಾನು ನಿರೀಕ್ಷೆ ಮಾಡಿರಲಿಲ್ಲ. ಎಂಟು ಚಿತ್ರಗಳು. ಈ ಪೈಕಿ ಒಂದು ಚಿತ್ರದಲ್ಲಿ ಸೆಕೆಂಡ್ ಲೀಡ್ ಪಾತ್ರ. ಉಳಿದಂತೆ ಎಲ್ಲಾ ಚಿತ್ರಗಳಲ್ಲೂ ನಾನೇ ಹೀರೋ. ಚಿತ್ರರಂಗ ನನ್ನ ಈ ಮಟ್ಟಕ್ಕೆ ಕೈ ಹಿಡಿಯುತ್ತದೆ, ಗುರುತಿಸುತ್ತದೆ ಎಂದುಕೊಂಡಿರಲಿಲ್ಲ.
ಹುಟ್ಟುಹಬ್ಬ ತುಂಬಾ ಜೋರಾಗಿಯೇ ಇರಬೇಕಲ್ಲ?
ಎರಡು ಹೊಸ ಚಿತ್ರಗಳ ಹೆಸರು ಮತ್ತು ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ನನ್ನಂಥ ಹೊಸ ನಟನ ಹುಟ್ಟುಹಬ್ಬವನ್ನು ಸಿನಿಮಾ ತಂಡದವರು ಆಚರಿಸುತ್ತಿರುವುದೇ ದೊಡ್ಡ ವಿಚಾರ.
'ರತ್ನನ್ ಪ್ರಪಂಚ'ದಲ್ಲಿ ಡಾಲಿ ಸೋದರನಾದ ಪ್ರಮೋದ್!
ನೀವು ನಟಿಸುತ್ತಿರುವ ಚಿತ್ರಗಳ ಯಾವುವು?
ಡಾಲಿ ಧನಂಜಯ್ ಜತೆ ‘ರತ್ನನ್‌ಪ್ರಪಂಚ’, ‘ಇಂಗ್ಲಿಷ್ ಮಂಜ’, ಸಂತೋಷ್ ನಾಯಕ್ ನಿರ್ದೇಶನದ ಚಿತ್ರ, ಸಿನಿಮಾ ಪೋಸ್ಟರ್‌ಗಳನ್ನು ವಿನ್ಯಾಸ ಮಾಡುವ ಮೂಲಕ ಗುರುತಿಸಿಕೊಂಡಿರುವ ಅವಿಸ್ ನಿರ್ದೇಶನದ ಸಿನಿಮಾ, ಸಿಂಪಲ್ ಸುನಿ ಜತೆ ಕೆಲಸ ಮಾಡಿದ ಕೇಶವ್ ನಿರ್ದೇಶನದ ‘ಅಲಂಕಾರ್ ವಿದ್ಯಾರ್ಥಿ’, ‘ಪ್ರೀಮಿಯರ್ ಪದ್ಮಿನಿ 2’ ಮತ್ತೆ ಎರಡು ಚಿತ್ರಗಳು ಇವೆ. ಇದರಲ್ಲಿ ಒಂದು ಮಹಿಳಾ ನಿರ್ದೇಶಕರ ಸಿನಿಮಾ.
ಆಗ ಅವಕಾಶಕ್ಕಾಗಿ ಅಲೆದೆ, ಈಗ ಸಿಕ್ಕ ಅವಕಾಶಗಳಿಗೆ ಜೀವ ತುಂಬುವ ಜವಾಬ್ದಾರಿ: ಪ್ರಮೋದ್
ಹುಟ್ಟುಹಬ್ಬಕ್ಕೆ ಸೆಟ್ಟೇರುತ್ತಿರುವ ಚಿತ್ರಗಳು ಹೇಗಿವೆ?
ಒಂದು ‘ಅಲಂಕಾರ್ ವಿದ್ಯಾರ್ಥಿ’. ಅಲಂಕಾರಕ್ಕೆ ಕಾಲೇಜಿಗೆ ಬರುವವರು ಎಂದು ಬೈಯುತ್ತಾರಲ್ಲ ಅದೇ ಹೆಸರು ಇಟ್ಟುಕೊಂಡು ಕತೆ ಮಾಡಿದ್ದಾರೆ. ‘ಮಾರ್ಕ್ಸ್ ಕಮ್ಮಿ, ಮಾರ್ಕ್ಸ್ ಕಾರ್ಡ್ ಜಾಸ್ತಿ’ ಎಂಬುದು ಚಿತ್ರದ ಟ್ಯಾಗ್‌ಲೈನ್. ಮತ್ತೊಂದು ಚಿತ್ರಕ್ಕೆ ಚಿತ್ರವೊಂದರ ಪ್ರಸಿದ್ಧ ಡೈಲಾಗ್ ಅನ್ನೇ ಟೈಟಲ್ ಮಾಡಿದ್ದಾರೆ.
ಯಶಸ್ಸಿನ ಸಂಭ್ರಮದಲ್ಲಿ ನೀವು ನೆನಪಿಸಿಕೊಳ್ಳುವ ಮೊದಲ ವ್ಯಕ್ತಿ ಯಾರು?
ನಿರ್ಮಾಪಕರಾದ ಶ್ರುತಿ ನಾಯ್ಡು ಹಾಗೂ ‘ಪ್ರೀಮಿಯರ್ ಪದ್ಮಿನಿ’ ಸಿನಿಮಾ.