Hindhutva ಬೆಳೆಸಲು ಸಿನಿಮಾ ಮಾಡುವೆ- ಪ್ರಶಾಂತ್‌ ಸಂಬರಗಿ

By Suvarna News  |  First Published Dec 15, 2021, 5:38 PM IST

ಇತ್ತೀಚೆಗೆ ಕೋಣನಕುಂಟೆ ಕ್ರಾಸ್‌ ಬಳಿಯಿರುವ ಮಾನಸ ಚಿತ್ರಮಂದಿರದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರೇ ತುಂಬಿದ್ದರು. ಕಾರಣ ಪ್ರಶಾಂತ್‌ ಸಂಬರಗಿ ನೇತೃತ್ವದಲ್ಲಿ ʻಅಖಂಡʼ ಚಿತ್ರದ ವಿಶೇಷ ಪ್ರದರ್ಶನ. ಅದರ ಬಳಿಕ ಸಂಬರಗಿ ಆಡಿರುವ ಮಾತುಗಳು ಇಲ್ಲಿವೆ.


ಪ್ರಶಾಂತ್‌ ಸಂಬರಗಿ ಬಿಗ್‌ ಬಾಸ್‌ ಮೂಲಕ ಜನಪ್ರಿಯರಾದವರು.. ಆದರೆ ಅದಕ್ಕೂ ಮೊದಲೇ  ಸಿನಿಮಾ ಕ್ಷೇತ್ರದಲ್ಲಿ ಕೂಡ ವಿತರಕರಾಗಿ ಗುರುತಿಸಿಕೊಂಡವರು. ಡ್ರಗ್ಸ್‌ ವಿಚಾರದಲ್ಲಿ ಕೆಲವು  ಕಲಾವಿದರ ಮೇಲೆ ನೇರ ಆರೋಪ ಮಾಡಿ ಸುದ್ದಿಯಾದವರು. ಇಂಥ ಪ್ರಶಾಂತ್‌ ಇದೀಗ ಹಿಂದುಗಳು ನೋಡಲೇಬೇಕಾದ ಸಿನಿಮಾ ತೆಲುಗಿನ ʻಅಖಂಡʼ ಚಿತ್ರ ಎಂದು ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ತಾವು ಕೂಡ ಹಿಂದುತ್ವದ ಸಿನಿಮಾ ನಿರ್ಮಿಸುವ ಯೋಜನೆ ಹಾಕಿರುವುದಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ .ಕಾಮ್‌ ಜೊತೆಗೆ ಪ್ರಶಾಂತ್‌ ಸಂಬರಗಿ ಹೇಳಿದ್ದಾರೆ.‌

- ಶಶಿಕರ ಪಾತೂರು

Latest Videos

undefined

ನಂದಮೂರಿ ಬಾಲಕೃಷ್ಣರವರ ಅಖಂಡ ಸಿನಿಮಾದ ಉಚಿತ ಪ್ರದರ್ಶನ ಏರ್ಪಡಿಸಿದ್ದರ ಕಾರಣವೇನು?
ಇದು ಬಜರಂಗದಳ, ಹಿಂದೂ ರಾಷ್ಟ್ರೀಯ ಪಡೆ  ಸೇರಿದಂತೆ ಹಿಂದೂ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಕೈ ಸೇರಿಸಿ ನಾವು ಮಾಡಿರುವಂಥ ಪ್ರಯತ್ನ. ಆಂಧ್ರದ ಹಿಂದೂಪರ ಸ್ನೇಹಿತರು ಅಖಂಡ ಚಿತ್ರದ ಬಗ್ಗೆ ಕ್ರಿಶ್ಚಿಯನ್ಸ್‌ ನಡೆಸಿರುವ ಅಪಪ್ರಚಾರದ ಬಗ್ಗೆ ಹೇಳಿದ್ದಾರೆ. ನಮಗೆ ಅವರಿಂದ ವಾಟ್ಸ್ಯಾಪ್‌ ಸಂದೇಶ ಬಂದಿದೆ. ಹಾಗಾಗಿ ಇದು ಬಾಲಯ್ಯನ ಅಭಿಮಾನಿಗಳನ್ನು ಮಾತ್ರ ತಲುಪಬೇಕಾದ ಸಿನಿಮಾವಲ್ಲ, ಸಮಸ್ತ ಹಿಂದೂಗಳನ್ನುಕೂಡ ತಲುಪಬೇಕಾದ ಚಿತ್ರ. ಅದಕ್ಕಾಗಿ ಸಿನಿಮಾದ ಒಂದು ಉಚಿತ ಪ್ರದರ್ಶನದ ಮೂಲಕ ಚಿತ್ರಕ್ಕೆ ಪ್ರಚಾರ ಒದಗಿಸಲು ಪ್ರಯತ್ನ ಮಾಡಿದ್ದೇವೆ. ಚಿತ್ರಕ್ಕೆ  ನಮ್ಮ ಒಂದು ನೈತಿಕ ಬೆಂಬಲ ತೋರಿಸೋ ಮೂಲಕ ಈ ಪ್ರಯತ್ನದಲ್ಲಿ ನಾವು ಜಯಶಾಲಿಗಳಾಗಿದ್ದೇವೆ ಎಂದು ತೋರಿಸಿದ್ದೇವೆ.

ಮನಸೆಳೆವ ಪೋಷಕ ನಟಿ ಮಧುಮತಿ

ಕನ್ನಡದಲ್ಲಿ ಇಂಥ ಸಿನಿಮಾಗಳು ಬಂದೇ ಇಲ್ಲವೇ?
ಅಖಂಡ ಚಿತ್ರದಲ್ಲಿ ನಮ್ಮ ಹಿಂದೂ ಧರ್ಮದ, ದೇವಾಲಯಗಳ ಶ್ರೇಷ್ಠತೆಯನ್ನು ತೋರಿಸಲಾಗಿದೆ. ಅಖಂಡ ಚಿತ್ರ ಬರೋ ಮೊದಲೇ ಸಿನಿಮಾ ಮೂಲಕ  ಧರ್ಮದಲ್ಲಿ ಜಾಗೃತಿ ಮೂಡಿಸಬೇಕು ಎನ್ನುವುದರ ಬಗ್ಗೆ ನಾನು ಹೇಳಿದ್ದೆ. ಅದಕ್ಕಾಗಿ ೨೦೨೦ರ ಮಾರ್ಚ್‌ ನಲ್ಲೇ ಒಂದು ಘೋಷಣೆಯನ್ನೂ ಮಾಡಿದ್ದೆ. ಆ ಪ್ರಕಾರ ಹಿಂದೂ ದೇವತೆಗಳಾದ ಲಕ್ಷ್ಮಿ ಅಥವಾ ಗಣೇಶನ ಕುರಿತಾದ ಒಂದು ಹಾಡು ಇರೋ ಸಿನಿಮಾ ಮಾಡಿದ್ರೆ ಆ ಚಿತ್ರದಲ್ಲಿ ಹಿಂದೂ ಧರ್ಮದ ಬಗ್ಗೆ ಒಳ್ಳೆಯ ವಿಚಾರಗಳನ್ನು ತೋರಿಸೋದಾದ್ರೆ  ಒಂದು ಆಫರ್‌ ನೀಡುವುದಾಗಿ ಹೇಳಿದ್ದೆ. ಅದರ ಪ್ರಕಾರ  ಅಂಥ ಚಿತ್ರ ಸೆನ್ಸಾರ್‌  ಆಗಿ ಬಿಡುಗಡೆಗೆ ತಯಾರಾದಾಗ ಅದನ್ನು ವೀಕ್ಷಿಸಿದ ನಮಗೆ ನಾವು ಹೇಳಿದ ಹಾಗೆಯೇ ಚಿತ್ರ  ಮಾಡಲಾಗಿದೆ ಅಂತ ಕಂಡು ಬಂದರೆ  ಆ ಚಿತ್ರಕ್ಕೆ ಐದು ಲಕ್ಷ ಕ್ಯಾಶ್‌ ಕೊಡೋದಾಗಿ ಹೇಳಿದ್ದೆ. ಆದರೆ ಕೊರೊನಾ ಕಾರಣ ಯಾವುದೇ ಹೊಸ ಸಿನಿಮಾಗಳು ನಿರ್ಮಾಣವಾಗಿಲ್ಲ. ಅಂಥ ಸಂದರ್ಭದಲ್ಲಿ ತೆರೆಗೆ ಬಂದಿರೋ ಅಖಂಡ ಸಿನಿಮಾ ನಮ್ಮ ನಿರೀಕ್ಷೆಗೆ ತಕ್ಕಂಥ ಸಿನಿಮಾವಾಗಿ ಮೂಡಿ ಬಂದಿದೆ.

ಶಿವನ ಪಾತ್ರದಲ್ಲಿ ತಲ್ಲೀನನಾಗಿದ್ದಾಗ ಕಂಟ್ರೋಲ್‌ ಕಳೆದುಕೊಂಡಿದ್ದೆ- ರಾಜ್‌ ಬಿ ಶೆಟ್ಟಿ

ಅಂಥ ಚಿತ್ರಗಳಿಗೆ ಸಹಾಯಧನ ಘೋಷಿಸಿ ಕಾಯುವ ಬದಲು ನೀವೇ ಯಾಕೆ ಚಿತ್ರ ನಿರ್ಮಿಸಬಾರದು?
ಖಂಡಿತವಾಗಿಯೂ ಚಿತ್ರ ನಿರ್ಮಾಣದ ಯೋಚನೆಯೂ ಇದೆ. ಐದು ಲಕ್ಷದ ಯೋಜನೆ ತಡವಾಗಿರೋ ಕಾರಣ ಸದ್ಯದಲ್ಲೇ ಸ್ವತಃ ಅಖಂಡದಂಥ ಚಿತ್ರ ನಿರ್ಮಿಸುವ . ಅದರಲ್ಲಿ  ಹೇಗೆ ಭಾರತದಲ್ಲಿ ಇತರ ಧರ್ಮಗಳು ಕೂಡ ಹಿಂದೂ ಧರ್ಮದ ಪ್ರಭಾವದಲ್ಲಿವೆ.. ರಥೋತ್ಸವ, ಪ್ರಸಾದ ನೀಡುವುದು, ಚರ್ಚ್‌ ಮುಂದೆ ಗರುಡಗಂಭ, ಪಲ್ಲಕ್ಕಿ ಉತ್ಸವ, ಸುಪ್ರಭಾತದ ಮಾದರಿಯಲ್ಲಿರೋ ಏಸುವಿನ ಶ್ಲೋಕ ಹಾಡೋದು, ಪಾದ್ರಿಗಳು ರುದ್ರಾಕ್ಷಿ ಧರಿಸೋದು.. ಇವೆಲ್ಲವನ್ನೂ ಕ್ರಿಶ್ಚಿಯನ್ಸ್‌ ಅನುಕರಣೆ ಮಾಡ್ತಿದ್ದಾರೆ.. ಈ ಬಗ್ಗೆ ವಿಡಿಯೋ ದಾಖಲೆಗಳೇ ನನ್ನಲ್ಲಿವೆ.. ಇವೆಲ್ಲವನ್ನು ಕಾಪಿ ಮಾಡಿಯಾದ್ರೂ ತಮ್ಮ ಧರ್ಮದ ಕಡೆಗೆ ಆಕರ್ಷಿಸೋ ಕಾರಣ ಏನು? ಎಲ್ಲದಕ್ಕೂ ನನ್ನಲ್ಲಿ ದಾಖಲೆಗಳಿವೆ.. ಇವೆಲ್ಲವನ್ನು ಇರಿಸಿಕೊಂಡು ಸಿನಿಮಾ ಮಾಡಲಿದ್ದೇನೆ.

click me!