ಗೊತ್ತಿಲ್ಲದ ಜಗತ್ತನ್ನು ಬಿಚ್ಚಿಡುವುದರಲ್ಲಿ ತಪ್ಪೇನಿದೆ: ನಿವೇದಿತಾ

By Kannadaprabha News  |  First Published Mar 2, 2020, 2:25 PM IST

ನಟಿ ನಿವೇದಿತಾ ಮತ್ತೆ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಒಂದಷ್ಟುಗ್ಯಾಪ್‌ ನಂತರ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’ ಚಿತ್ರದೊಂದಿಗೆ ಪಾಪ್‌ ಕಾರ್ನ್‌ ದೇವಿಯಾಗಿ ತೆರೆ ಮೇಲೆ ಬಂದಿದ್ದಾರೆ. ಚಿತ್ರದ ನಿವೇದಿತಾ ಪಾತ್ರಕ್ಕೆ ಸಾಕಷ್ಟುಮೆಚ್ಚುಗೆ ಸಿಕ್ಕಿದೆ. ಸಿನಿ ದುನಿಯಾದಲ್ಲಿ ಮತ್ತೆ ನಿವೇದಿತಾ ಬ್ಯುಸಿ ಆಗುತ್ತಾರೆಯೇ ಎನ್ನುವ ಪ್ರಶ್ನೆ. ಆ ಕುರಿತು ಅವರೊಂದಿಗೆ ಮಾತುಕತೆ.


ದೇಶಾದ್ರಿ ಹೊಸ್ಮನೆ

ಚಿತ್ರದಲ್ಲಿನ ನಿಮ್ಮ ಪಾತ್ರಕ್ಕೆ ಸಿಕ್ಕ ರೆಸ್ಪಾನ್ಸ್‌ ಹೇಗಿದೆ?

Tap to resize

Latest Videos

undefined

ಸಿನಿಮಾ ನೋಡಿದವರೆಲ್ಲ ಚೆನ್ನಾಗಿ ಅಭಿನಯಿಸಿದ್ದೀರಿ, ನಿಮ್ಮ ಪಾತ್ರವೂ ಚೆನ್ನಾಗಿದೆ, ತುಂಬಾ ಕಾಡಿಸುತ್ತೆ ಅಂತೆಲ್ಲ ಹೇಳಿದ್ದಾರೆ. ಅದು ಸೂರಿ ಅವರು ಸೃಷ್ಟಿಸಿದ ಪಾತ್ರ. ಕಾಡುವ ಮಟ್ಟಿಗೆ ಅದು ಜನರಿಗೆ ಮುಟ್ಟಿದೆಯೆಂದರೆ, ಪಾತ್ರಕ್ಕೆ ನ್ಯಾಯ ಒದಗಿಸಿದ್ದೇನೆನ್ನುವ ವಿಶ್ವಾಸ ಮೂಡಿದೆ. ಅದರ ಕ್ರೆಡಿಟ್‌ ಎಲ್ಲವೂ ಸೂರಿ ಅವರಿಗೆ ಸಲ್ಲಬೇಕು.

ಇದು ನಿಮ್ಮ ಸಿನಿಜರ್ನಿಯ ಸೆಕೆಂಡ್‌ ಇನ್ನಿಂಗ್ಸ್‌ ಅಂತಂದುಕೊಳ್ಳಬಹುದಾ?

ಸೆಕೆಂಡ್‌ ಇನ್ನಿಂಗ್ಸ್‌ ಅನ್ನೋದಿಕ್ಕೆ ನಾನು ಯಾವಾಗ ಫೀಲ್ಡ್‌ ನಿಂದ ಆಚೆ ಹೋಗಿದ್ದೆ? ಇಲ್ಲಿಯೇ ಇದ್ದೇನೆ. ಅಲ್ಲಿ ಇಲ್ಲಿ ಕಾಣಿಸಿಕೊಂಡಿರಲಿಲ್ಲ ಅಷ್ಟೆಯೇ ಹೊರತು ಸಿನಿಮಾದಿಂದ ಆಚೆ ನಾನೆಲ್ಲಿಗೂ ಹೋಗಿಲ್ಲ. ಸಿನಿಮಾದಲ್ಲಿ ಅಕೌಂಟ್‌ ಮತ್ತೆ ಓಪನ್‌ ಮಾಡಿದ್ರಿ, ಅನ್ನೋದಿಕ್ಕೆ ನನ್ನ ಅಕೌಂಟ್‌ ಕ್ಲೋಸ್‌ ಆಗಿಯೇ ಇಲ್ಲ. ಕ್ರೆಡಿಟ್‌ ಮಾತ್ರ ತಡವಾಗುತ್ತಿದೆ. ಹಾಗಂತ ಇದು ಪ್ಲ್ಯಾನ್ಡ್‌ ಕೂಡ ಅಲ್ಲ.

'ಪಾಪ್‌ಕಾರ್ನ್‌ ಮಂಕಿ ಟೈಗರ್‌' ದೇವಿಕಾ ಅಸಲಿ ಜೀವನ ಹೇಗಿದೆ ನೋಡಿದ್ದೀರಾ?

ಪ್ಲ್ಯಾನ್ಸ್‌  ಅಲ್ಲ ಅಂತೀರಿ, ಮತ್ತೆ ಬರುತ್ತೀರಿ, ಒಂದಷ್ಟುದಿನ ಕಾಣೆಯಾಗುತ್ತೀರಿ, ಹಾಗಾದ್ರೆ ಇದು ಯಾಕೆ?

ಸದಾ ಚಾಲ್ತಿಯಲ್ಲಿ ಇರುವುದಕ್ಕೆ ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಥಿಯರಿ ಅಲ್ಲ. ಹಾಗೊಂದಷ್ಟುಸಿನಿಮಾ ಮಾಡಿಯೂ ಸಾಕಾಗಿದೆ. ಅದರಾಚೆ ನನ್ನ ಸ್ವಭಾವಕ್ಕೆ ಹೊಂದುವ, ಜನರಿಗೂ ಇಷ್ಟವಾಗುವ ಕತೆ ಮತ್ತು ಪಾತ್ರ ಸಿಗಬೇಕು ಅಂತ ಕಾಯುತ್ತೇನೆ, ಅಂತಹ ಸಿನಿಮಾ ಸಿಕ್ಕಾಗ ಸಿನಿಮಾ ಮಾಡುತ್ತಾ ಬರುತ್ತಿದ್ದೇನೆ. ಸೂರಿ ಅವರ ಸಿನಿಮಾದಲ್ಲಿ ಅಂತಹ ಕತೆ ಮತ್ತು ಪಾತ್ರ ಇತ್ತು. ಅದಕ್ಕಾಗಿ ಅಭಿನಯಿಸಿದ್ದೇನೆ. ಮತ್ತೆ ಇನ್ನಾವಾಗೋ ಮತ್ತೊಂದು ಸಿನಿಮಾ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುವುದು ಅದು ಕೂಡ ನಂಗೆ ಗೊತ್ತಿಲ್ಲ.

‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’ ಚಿತ್ರ ಬಂದ ನಂತರ ಯಾವುದಾದರೂ ಹೊಸ ಆಫರ್‌ ...

ನನ್ನ ಮಟ್ಟಿಗೆ ಹಾಗೆಲ್ಲ ಆಗಿದ್ದೇ ಇಲ್ಲ. ಒಂದು ಸಿನಿಮಾ ಬಂತು, ಆ ಸಿನಿಮಾ ಮೂಲಕ ಇನ್ನೊಂದು ಸಿನಿಮಾಕ್ಕೆ ಅವಕಾಶ ಸಿಕ್ಕಿತು ಅಂತ ಆಗಿಯೇ ಇಲ್ಲ. ಒಂದು ಸಿನಿಮಾ ಬಂದು ಹೋಗಿ ಎಷ್ಟೋ ದಿನಗಳಿಗೆ ಅಥವಾ ವರ್ಷಕ್ಕೆ ಮತ್ತೊಂದು ಸಿನಿಮಾ ಆಫರ್‌ ಬಂದಿದೆ. ಈಗ ಪಾಪ್‌ ಕಾರ್ನ್‌ ದೇವಿ ಪಾತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ ನಿಜ, ಆದರೆ ಹೊಸ ಸಿನಿಮಾಕ್ಕೆ ಅಂತ ಯಾವುದೇ ಆಫರ್‌ ಈ ತನಕ ಬಂದಿಲ್ಲ. ಬರುವುದು ಇನ್ನಾವಾಗೋ ಅದು ಕೂಡ ಗೊತ್ತಿಲ್ಲ. ಬರಲಿಲ್ಲ ಅಂತಲೂ ತಲೆ ಕೆಡಿಸಿಕೊಳ್ಳುವುದಿಲ್ಲ. ಬೇರೆ ಕೆಲಸ ನಡೆಯುತ್ತಲೇ ಇರುತ್ತವೆ.

'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ಲವರ್‌ ಬಗ್ಗೆ ಮಾಸ್‌ ಡೈಲಾಗ್‌ ಒಡೆದ ನಟಿ ಈಕೆ!

ಪಾಪ್‌ ಕಾರ್ನ್‌ ಮಂಕಿ ಟೈಗರ್‌ ಚಿತ್ರದಿಂದ ನೀವು ಕಲಿತಿದ್ದು ಏನು?

ಕಲಿತಿದ್ದು ತುಂಬಾ ಇದೆ. ಒಂದು ಸಿನಿಮಾ ಒಪ್ಪಿಕೊಂಡಾಗ ಬೌಂಡೆಡ್‌ ಸ್ಕ್ರೀಪ್ಟ್‌ ಬೇಕು ಅಂತಿದ್ದೆ. ಆದ್ರೆ ಈ ಸಿನಿಮಾದಲ್ಲಿ ಅದು ಬ್ರೇಕ್‌ ಆಯ್ತು. ಯಾಕಂದ್ರೆ, ಕಲಾವಿದರಿಗೆ ಬೌಂಡೆಡ್‌ ಸ್ಕ್ರೀಫ್ಟ್‌ ಕೊಟ್ಟು ಸಿನಿಮಾ ಮಾಡಿಸೋದು ಸೂರಿ ಅವರ ಸಿನಿಮಾ ಶೈಲಿ ಅಲ್ಲ. ಅವರು ನುರಿತ ನಿರ್ದೇಶಕರು. ಅಲ್ಲಿ ಅವರದೇ ಒಂದು ಶೈಲಿಯಿದೆ. ಆ ಪ್ರಕಾರ ಅವರು ಸಿನಿಮಾ ಮಾಡುತ್ತಾರೆ. ನೈಜತೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಕತೆಯಲ್ಲಿನ ಪಾತ್ರದಲ್ಲಿ ಇರೋ ಹಾಗೆ ಮಾಡು ಎನ್ನುವುದಕ್ಕಿಂತ ಕಲಾವಿದರಲ್ಲಿನ ಅಭಿನಯದ ಸತ್ವ ಅಥವಾ ಟ್ಯಾಲೆಂಟ್‌ಗೆ ಬೆಲೆ ಕೊಡುತ್ತಾರೆ. ಜತೆಗೆ ಅವರು ಕಲಾವಿದರು. ಬಣ್ಣಗಳ ಮೂಲಕ ಪಾತ್ರ ಸೃಷ್ಟಿಸುತ್ತಾರೆ. ಒಂದು ಚಿತ್ರಕ್ಕೆ ಬಣ್ಣ ತುಂಬಿ ಆಕೃತಿ ಮಾಡುವ ಹಾಗೆ ಪಾತ್ರಗಳನ್ನು ಸೃಷ್ಟಿಸುತ್ತಾರೆ. ಆ ಶೈಲಿ ನನಗೆ ತುಂಬಾ ಇಷ್ಟವಾಯಿತು.

ಧನಂಜಯ್‌ ಜತೆಗೆ ಫಸ್ಟ್‌ ಟೈಮ್‌ ಅಭಿನಯಿಸಿದ ಅನುಭವ ಹೇಗಿತ್ತು, ಪ್ರೇಕ್ಷಕರ ರೆಸ್ಪಾನ್ಸ್‌ ಹೇಗಿದೆ?

ನಾವಿಬ್ಬರು ಮೈಸೂರಿನವರು. ಇಬ್ಬರು ಮರಿಮಲ್ಲಪ್ಪ ಕಾಲೇಜು ಸ್ಟುಡೆಂಟ್ಸ್‌. ಜತೆಗೆ ಇನ್ಪೋಸಿಸ್‌ ಉದ್ಯೋಗಿಗಳು ಕೂಡ. ಹಾಗೆ ಒಂದಷ್ಟುಹೋಲಿಕೆ ಇದಿದ್ದು ಅವರು ನನಗೆ ಪರಿಚಯವಾದ ನಂತರ. ಅದಕ್ಕೂ ಮುಂಚೆ ಶುದ್ಧಿ ಸಿನಿಮಾ ಬಂದಾಗ ಮೆಚ್ಚುಗೆ ಸೂಚಿಸಿ, ಮಾತನಾಡಿದ್ದರು. ಅದು ಇನ್ನಷ್ಟುಆತ್ಮೀಯತೆ ಬೆಳೆಸಿತು. ಪಾತ್ರಕ್ಕೆ ತಕ್ಕಂತೆ ಪರಸ್ಪರ ಆತ್ಮೀಯತೆಯಲ್ಲಿ ಅಭಿನಯಿಸಲು ಸಾಧ್ಯವಾಯಿತು. ಪ್ರೇಕ್ಷಕರ ಕಡೆಯಿಂದ ಇಬ್ಬರ ಕಾಂಬಿನೇಷನ್‌ ಕುರಿತು ದೊಡ್ಡ ಪ್ರತಿಕ್ರಿಯೆ ಇನ್ನು ಬಂದಿಲ್ಲ. ಆದರೆ ಒಂದಷ್ಟುಜನ ಇಬ್ಬರ ಪಾತ್ರಗಳು ಚೆನ್ನಾಗಿವೆ ಎಂದಿದ್ದಾರೆ.

ಚಿತ್ರ ವಿಮರ್ಶೆ: ಪಾಪ್‌ಕಾರ್ನ್‌ ಮಂಕಿ ಟೈಗರ್

ಸಿನಿಮಾದೊಳಗಿನ ರಕ್ತಪಾತ, ಅಸಹ್ಯ ಎನಿಸುವ ಡೈಲಾಗ್‌ಗಳ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯ ಏನು?

ಅದು ನಾವು ನೋಡಿರದ ಒಂದು ಜಗತ್ತು. ಅಂಡರ್‌ವಲ್ಡ್‌ರ್‍ ಜಗತ್ತಿನಲ್ಲಿ ಅದೆಲ್ಲ ಇದೆ. ಅದು ನಮಗೆ ಗೊತ್ತಿಲ್ಲ. ಅದರ ಒಳನೋಟ ಗೊತ್ತಾಗಬೇಕಾದರೆ, ಇಂತಹ ಸಿನಮಾ ಬರುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಭಾವನೆ. ಸೂರಿ ಅವರು ಇಲ್ಲಿ ಹೇಳಲು ಹೊರಟಿದ್ದಾರೆ. ಇಂತಹದೊಂದು ಜಗತ್ತು ಇದೆ ಅನ್ನೋದು ನಮಗೂ ಗೊತ್ತಾಗಬೇಕು. ಅದನ್ನು ತಿಳಿದುಕೊಳ್ಳುವುದರಲ್ಲಿ ತಪ್ಪಿಲ್ಲ. ಮನಸ್ಸಿಗೆ ಹಿಡಿಸೋದಿಲ್ಲ ಎನ್ನುವವರು ನೋಡದಿರುವುದೇ ಒಳ್ಳೆಯದು.

click me!