ನಟ ರಾಕೇಶ್ ಮಯ್ಯಗೆ ಶಿವಣ್ಣ ಬಗ್ಗೆ ಇರೋ ವಿಭಿನ್ನ ಅಭಿಪ್ರಾಯವಿದು

By Suvarna News  |  First Published May 17, 2021, 8:43 AM IST

ಲಾಕ್ಡೌನ್ ಮುಗಿಯಲು ಎಲ್ಲರೂ ಕಾಯುತ್ತಿರುವವರೇ. ಆದರೆ ನಟ ರಾಕೇಶ್ ಮಯ್ಯ ಅವರಿಗೆ ಸಂಬಂಧಿಸಿದಂತೆ ಸಾಕಷ್ಟು ವಿಶೇಷ ವಿಚಾರಗಳು ಕಾರ್ಯರೂಪಗೊಳ್ಳಲಿವೆ. ಅವುಗಳ ಬಗ್ಗೆ ಇಲ್ಲಿ ಅವರು ಮಾತನಾಡಿದ್ದಾರೆ.
 


ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರನ್ನು ನೇರವಾಗಿ ಪರಿಚಯ ಮಾಡಿಕೊಂಡವರೆಲ್ಲ ಹೇಳೋದು 'ಅವರು ತುಂಬ ಎನರ್ಜೆಟಿಕ್ ಆಗಿರುತ್ತಾರೆ; ಜೊತೆಗೆ ತುಂಬ ಸಿಂಪಲ್ ಮನುಷ್ಯ' ಎಂದು. ಎಲ್ಲರೂ ಒಂದೇ ಮಾತನ್ನೇ ಯಾಕೆ ಹೇಳ್ತಾರೆ? ಒಂದು ದಿನದ ಶೂಟಿಂಗ್ ನಲ್ಲಿ ಅವರ ಎನರ್ಜಿ, ಸಿಂಪ್ಲಿಸಿಟಿ ಬಗ್ಗೆ ಏನು ತಾನೇ ತಿಳಿಯುತ್ತೆ? ಯಾರೋ ಆತ್ಮೀಯರು, ಅಭಿಮಾನಿಗಳು ಹೇಳಿದ್ದಾರೆ ಎಂದು ಎಲ್ಲರೂ ಅದೇ ಇಮೇಜ್ ಇರಲಿ ಎಂದು ಅಷ್ಟನ್ನೇ ಹೇಳ್ತಿರ್ತಾರೆ ಎನ್ನುವ ನಂಬಿಕೆ ಹಲವರಲ್ಲಿದೆ. ಆದರೆ ಮೊದಲ ಬಾರಿ ಅವರ ಜೊತೆಗೆ ಕೆಲಸ ಮಾಡಿದ ರಾಕೇಶ್ ಮಯ್ಯ ಅವರಿಗೂ ಒಂದು ಅನುಭವ ಆಗಿದೆ. ಬೇರೆಯವರ ಬಾಯಿ ಮಾತಿನಿಂದ ಕೇಳಿಸಿಕೊಂಡಿದ್ದಕ್ಕಿಂತ ಇದು ಹೇಗೆ ವಿಭಿನ್ನ ಎನ್ನುವುದನ್ನು ಅವರದೇ ಮಾತುಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಮಯ್ಯ ಅವರು ತಮ್ಮ ಲಾಕ್ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದಾರೆ ಎನ್ನುವ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ ಜೊತೆಗೆ ಹೇಳಿಕೊಂಡಿದ್ದಾರೆ.

- ಶಶಿಕರ ಪಾತೂರು

Tap to resize

Latest Videos

undefined

ನಾದಕೆ ಮನಸೋತ ನಟ,ನಿರ್ದೇಶಕ ನಾಗೇಂದ್ರ ಶಾನ್

ಚಿತ್ರೀಕರಣ ನಿಂತು ಹೋದಾಗ ಅನಿಸಿದ್ದೇನು?
ಒಂದು ಲಾಕ್ಡೌನ್ ಬಳಿಕ ಚೇತರಿಸುತ್ತಿದ್ದ ಚಿತ್ರರಂಗಕ್ಕೆ ಖಂಡಿತವಾಗಿ ಇದು ಕಷ್ಟದ ದಿನಗಳೇ ನಿಜ. ಆದರೆ ಒಂದು ರೀತಿಯಲ್ಲಿ ಎಲ್ಲೆಡೆ  ಚಿತ್ರೀಕರಣ ನಿಲುಗಡೆಗೊಳಿಸಿದ್ದು ಕೂಡ ಒಳ್ಳೆಯದೇ ಆಯಿತು. ಯಾಕೆಂದರೆ ಕಲಾವಿದರಿಗೆ ಮಾಸ್ಕ್ ಧರಿಸುವ ಅವಕಾಶ ಇರುವುದಿಲ್ಲ. ಹಾಗಾಗಿ ಅದು ನಿಜಕ್ಕೂ ಚಿತ್ರೀಕರಣ ಮುಂದುವರಿಸುವುದು ರಿಸ್ಕ್‌ ಎಂದೇ ಹೇಳಬಹುದು. ನಾನು ನಟಿಸುತ್ತಿದ್ದ ಕಿರುತೆರೆ ಧಾರಾವಾಹಿ `ಸಂಘರ್ಷ'ದಲ್ಲಿನ ನನ್ನ ಪಾತ್ರದ ಚಿತ್ರೀಕರಣಕ್ಕೆ ಎರಡು ತಿಂಗಳ ಹಿಂದೆಯೇ ಬ್ರೇಕ್ ನೀಡಲಾಗಿತ್ತು. `ಸಂಘರ್ಷ' ಧಾರಾವಾಹಿಯಲ್ಲಿ ನಾನು ನಟಿಸುತ್ತಿದ್ದ ಪಾತ್ರಕ್ಕೆ ಒಂದು ಅಲ್ಪ ವಿರಾಮ ನೀಡಿದ್ದಾರೆ. ಇದರ ನಡುವೆ`ಲವ್ ಇನ್‌ ದ ಟೈಮ್ಸ್  ಆಫ್ ಕೋವಿಡ್' ಎನ್ನುವ ಸಿನಿಮಾ ಪೂರ್ತಿಯಾಗಲು ಮೂರು ದಿನಗಳ ಚಿತ್ರೀಕರಣ ಬಾಕಿ ಇತ್ತು. ಭಾಸ್ಕರ್ ನೀನಾಸಂ ನಿರ್ದೇಶನದ `ಸದ್ದು ವಿಚಾರಣೆ ನಡೆಯುತ್ತಿದೆ' ಚಿತ್ರ ಡಬ್ಬಿಂಗ್ ಹಂತದಲ್ಲಿತ್ತು. `ಶುಭಮಂಗಳ' ಬಿಡುಗಡೆಗೆ ತಯಾರಾಗಿದೆ. ಚಿತ್ರ ಕಳೆದ ವರ್ಷವೇ ತೆರೆಕಾಣಬೇಕಿತ್ತು. ದುಃಖದ ವಿಚಾರ ಏನೆಂದರೆ ನಿರ್ದೇಶಕರ ತಂದೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಕೊನೆಯದಾಗಿ ನಾನು ಜಾಹೀರಾತೊಂದರಲ್ಲಿ ನಟಿಸಿದ್ದೆ. ಅದರಲ್ಲಿ ಶಿವರಾಜ್‌ ಕುಮಾರ್ ಪ್ರಧಾನವಾಗಿದ್ದರು ಎನ್ನುವುದು ಅವಿಸ್ಮರಣೀಯವೆನಿಸಿತ್ತು.

ಬಿಗ್ ಬಾಸ್ ನನ್ನ ಮುಖವಾಡ ಕಳಚಿದೆ- ಪ್ರಶಾಂತ್ ಸಂಬರ್ಗಿ

ಶಿವರಾಜ್ ಕುಮಾರ್ ಅವರ ಜೊತೆಗೆ ನಟಿಸುವಾಗಿನ ಅನುಭವ ಹೇಗಿತ್ತು?
ಎಲ್ಲರಿಗೂ ಅವರಲ್ಲಿ ವಿಶೇಷ ಅನಿಸಿದಂಥ ಎನರ್ಜಿಯ ಮಟ್ಟವೇ ನನಗೂ ವಿಶೇಷ ಅನಿಸಿತು. ಕೇಳುವವರಿಗೆ ಇದು ಸಹಜ ಉತ್ತರ ಎನಿಸಬಹುದು. ವಯಸ್ಸು ಅರವತ್ತರ ಗಡಿ ತಲುಪುವ ಹಂತದಲ್ಲಿ ಕೂಡ ಒಬ್ಬ ಯುವನಟನಷ್ಟೇ ಸರಾಗವಾಗಿ ನೃತ್ಯ, ಹೊಡೆದಾಟದ ದೃಶ್ಯಗಳಲ್ಲಿ ಪಾಲ್ಗೊಳ್ಳುವ ಒಬ್ಬ ಸ್ಟಾರ್ ಕನ್ನಡದಲ್ಲಿದ್ದರೆ ಅದು ಶಿವಣ್ಣ ಮಾತ್ರ. ಅದು ಬರಿಯ ಕ್ಯಾಮೆರಾ ಮುಂದಿನ ದೈಹಿಕ ಎನರ್ಜಿಯಷ್ಟೇ ಅಲ್ಲ, ಶೂಟಿಂಗ್ ಬ್ರೇಕ್‌ನಲ್ಲಿಯೂ ಸಹ ಕಲಾವಿದರೊಂದಿಗೆ ಸಹನೆಯಿಂದ ಮಾತನಾಡುವ, ತಮಾಷೆ ಮಾಡುವ, ಆರೋಗ್ಯಕರ ಚರ್ಚೆ ಮಾಡುವ, ತಮಗೆ ಹೊಸ ವಿಚಾರವೆನಿಸುವ ಸಂಗತಿ ಇದ್ದರೆ ಆ ಬಗ್ಗೆ ಮಗುವಿನಷ್ಟೇ ಕುತೂಹಲದಿಂದ ಅರಿತುಕೊಳ್ಳುವ ವಿಶಿಷ್ಟ ನಟ ಅವರು. ಒಟ್ಟಿನಲ್ಲಿ ಶಿವಣ್ಣ ತುಂಬಾ ಸಿಂಪಲ್ ಮತ್ತು ವೃತ್ತಿಯಲ್ಲಿ ಅಷ್ಟೇ ಎನರ್ಜೆಟಿಕ್. ಅದು ಹುಟ್ಟಿನಿಂದ ಅವರಿಗೆ ಅಭ್ಯಾಸವಾದಂತಿದೆ. ಹಾಗಾಗಿ ಆ ಇಮೇಜ್ ಪ್ರದರ್ಶನದ ವಸ್ತುವಲ್ಲ; ಪಾರದರ್ಶಕ ವಾಸ್ತವ.

ಬಿಗ್ ಬಾಸ್ ಸದಸ್ಯರ ಜೊತೆಗಿನ ಭೇಟಿಗೆ ನಾನು ಸಿದ್ಧ- ವೈಜಯಂತಿ ಅಡಿಗ

ಈ ಲಾಕ್ಡೌನ್ ದಿನಗಳನ್ನು ಹೇಗೆ ಕಳೆಯುತ್ತಿದ್ದೀರಿ?
ಓದು ನನ್ನ ಪ್ರಿಯ ಹವ್ಯಾಸಗಳಲ್ಲೊಂದು. ಸದ್ಯಕ್ಕೆ ಜೋಗಿಯವರ `ಅಶ್ವತ್ಥಾಮ' ಕಾದಂಬರಿ ಓದುತ್ತಿದ್ದೇನೆ. ನೆಟ್‌ಫ್ಲಿಕ್ಸ್‌ನಲ್ಲಿ `ಬ್ಲ್ಯಾಕ್‌ ಲಿಸ್ಟ್‌' ಎನ್ನುವ ವೆಬ್‌ ಸಿರೀಸ್‌ ನೋಡುತ್ತೇನೆ. ಹಾಗೆಯೇ ಮಲಯಾಳಂನಲ್ಲಿ ಮಮ್ಮುಟ್ಟಿ ನಟನೆಯ `ಒನ್' ಎನ್ನುವ ಸಿನಿಮಾ ಬಿಡುಗಡೆಯಾಗಿತ್ತು. ಅದನ್ನು ನೋಡಿದೆ. ಮಾಸ್‌ ಹೀರೋ ಆದರೂ ಬಿಲ್ಡಪ್‌ಗಳೇ ಇರದ ಪಾತ್ರ. ಸಣ್ಣದಾಗಿ ಮರೆವಿನ ರೋಗ ಇರುವ ಮುಖ್ಯಮಂತ್ರಿಯ ಕತೆ. ಸಣ್ಣ ಹುಡುಗನೊಬ್ಬನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿ ಕ್ರಾಂತಿ ಮೂಡಿಸುವ ಪ್ರಯತ್ನ ನಡೆಸುತ್ತಾನೆ. ಎಳೆ ಚೆನ್ನಾಗಿದೆ. ಕತೆ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದಂತಾಯಿತು. ಬಂದ್ ಹರತಾಳವನ್ನು ಜನರೇ ವಿರೋಧಿಸಿದರೆ ಹೇಗೆ ಎನ್ನುವ ಸಂದೇಶವೂ ಚಿತ್ರದಲ್ಲಿದೆ. ಹೊಸ ಸ್ಕ್ರಿಪ್ಟ್ ಬಗ್ಗೆ  ಆನ್ಲೈನ್ ಡಿಸ್ಕಶನ್ ನಡೆಯುತ್ತಿದೆ.

click me!