ನಟಿಸುವ ಆಸೆ ಸದ್ಯಕ್ಕಿಲ್ಲ, ಹ್ಯಾಪಿನೆಸ್ ಅಷ್ಟೇ ಮುಖ್ಯ: ರಾಜ್ ಬಿ ಶೆಟ್ಟಿ

By Kannadaprabha NewsFirst Published May 15, 2021, 12:15 PM IST
Highlights

ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್‌ ಬಿ ಶೆಟ್ಟಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ನಂತರ ತಮ್ಮ ಮುಂದಿನ ಸಿನಿಮಾ'ಗರುಡ ಗಮನ ವೃಷಭ ವಾಹನ' ಜೂನ್‌ನಲ್ಲಿ ರಿಲೀಸ್ ಆಗಬೇಕಿತ್ತು. ಸಿನಿ ಪ್ಲಾನ್ ಬಗ್ಗೆ ಮಾತನಾಡಿದ್ದಾರೆ. 

ಪ್ರಿಯಾ ಕೆರ್ವಾಶೆ

ನಿಮ್ಮ ನಾಯಿ ಪ್ರೀತಿಗೂ ಚಾರ್ಲಿ 777 ಸಿನಿಮಾದ ಪಾತ್ರಕ್ಕೂ ಏನಾದ್ರೂ ಸಂಬಂಧ ಇದೆಯಾ?

ಚಾರ್ಲಿ 777 ಸಿನಿಮಾದ ನಿರ್ದೇಶಕ ಕಿರಣ್ ರಾಜ್ ಒಂಥರಾ ಪಾರ್ಲೆಜಿ ಬಿಸ್ಕೆಟ್‌ನ ಬ್ರಾಂಡ್ ಅಂಬಾಸಿಡರ್ ಇದ್ದ ಹಾಗೆ. ಯಾವಾಗ್ಲೂ ಬೀದಿ ಬದಿ ನಾಯಿಗಳಿಗೆ ಬಿಸ್ಕೆಟ್ ಹಾಕೋದು ಅವರ ಕ್ರಮ. ನನಗೂ ಇಂಡಿಯನ್ ನಾಯಿಗಳನ್ನು ಕಂಡರೆ ಬಹಳ ಪ್ರೀತಿ ಅನ್ನೋದು ಅವರಿಗೆ ಗೊತ್ತು. ಆ ಪಾತ್ರಕ್ಕೆ ನನ್ನಂಥಾ ಪ್ರಾಣಿ ಪ್ರಿಯರೇ ಬೇಕಿದ್ದ ಕಾರಣ, ನನ್ನ ಮ್ಯಾನರಿಸಂ ಅದಕ್ಕೆ ಸರಿಹೊಂದುತ್ತಿದ್ದ ಕಾರಣ ಆ ಪಾತ್ರ ನನ್ನಿಂದ ಮಾಡಿಸಿದರು.

ಏನು ಆ ಪಾತ್ರದ ವಿಶೇಷ?

ಹಾಸ್ಯದ ಲೇಪ ಇರುವ ವೆಟರ್ನರಿ ಡಾಕ್ಟರ್ ಪಾತ್ರ. ಆದರೆ ಅವನು ಹಾಸ್ಯ ಪಾತ್ರ ಅಲ್ಲ. ಅವನ ಬಾಡಿ ಲ್ವಾಂಗೇಜ್‌ನಿಂದಾಗಿ, ಅವನ ಮಾತಿಂದಾಗಿ ಕಾಮಿಡಿ ಕ್ರಿಯೇಟ್ ಆಗುತ್ತೆ.- ನಿಮ್ಮ ಗರುಡ ಗಮನ ವೃಷಭ ವಾಹನ ಜೂನ್‌ನಲ್ಲಿ ರಿಲೀಸ್ ಅಂದಿದ್ರಿ.

ಆ ಮಾತಿಗೆ ಇನ್ನೂ ಬದ್ಧರಾ?

ಖಂಡಿತಾ ಇಲ್ಲ. ನನ್ನ ಬದ್ಧತೆಗೆ ಕಟ್ಟುಬಿದ್ದು ಪ್ರೊಡ್ಯೂಸರ್‌ನ ಮುಳುಗಿಸೋ ಪ್ಲಾನ್ ಖಂಡಿತಾ ಇಲ್ಲ. ಸನ್ನಿವೇಶ ನೋಡಿಕೊಂಡು ಥಿಯೇಟರ್‌ನಲ್ಲೇ ಸಿನಿಮಾ ರಿಲೀಸ್ ಪ್ಲಾನ್ ಇದೆ. ಓಟಿಟಿ ಬಗ್ಗೆ ನನಗೆ ಅಂಥಾ ಒಲವಿಲ್ಲ.

ಲಾಕ್‌ಡೌನ್‌ನಲ್ಲಿ ಮನೆಯಲ್ಲೇ ಕೂತಿದ್ದಾಗ ಹೊಸ ಸಿನಿಮಾದ ಕತೆ ಹೊಳೆದದ್ದು, ಹೊಸ ಪ್ರಾಜೆಕ್‌ಟ್ ಬಂದದ್ದು?

ಇಲ್ಲ. ಚಟುವಟಿಕೆ ಸ್ಥಗಿತಗೊಳಿಸಿ ಮನೆಯಲ್ಲಿ ಕೂರುವುದು ನನಗೆ ಪಾಸಿಟಿವ್ ಅನಿಸ್ತಿದೆ. ನಾನು ಎಲ್ಲಿದ್ದೀನಿ, ಏನು ಮಾಡ್ತಾ ಇದ್ದೀನಿ ಅಂತ ನಮಗೆ ಗೊತ್ತಾಗಬೇಕಾದರೆ ಚಟುವಟಿಕೆ ನಿಲ್ಲಬೇಕು. ನನ್ನನ್ನು ನಾನೇ ಗಮನಿಸುತ್ತಿದ್ದೇನೆ. ಹಾಗಾಗಿ ಸಿನಿಮಾದ ಯಾವುದೇ ಯೋಚನೆಯಲ್ಲಿಲ್ಲ, ಸಿನಿಮಾ ಬರೀತಿಲ್ಲ, ಸಿನಿಮಾ ನೋಡ್ತಿಲ್ಲ. ಮುಂದೆ ನಟಿಸುವ ಯಾವ ಆಸೆಯೂ ಇಲ್ಲ. ನನ್ನ ನಾಯಿ ಆಯ್ತು, ಕುಕ್ಕಿಂಗ್ ಆಯ್ತು, ಅಷ್ಟೇ.

ರಾಜ್‌ ಬಿ ಶೆಟ್ಟಿಗೆ ಎದುರಾದ 'ಗರುಡಗಮನ ವೃಷಭವಾಹನ'; ರಿಷಬ್‌ ಶೆಟ್ಟಿ ಪಾತ್ರವೇನು? 

ಈ ವೈರಾಗ್ಯದಿಂದ ಹೊರಬಂದು ಮದುವೆ ಆಗೋ ಯೋಚನೆ?

ಸದ್ಯಕ್ಕಿಲ್ಲ. ಮುಂದೆಯೂ ಇಲ್ಲ. ಒಂದು ವೇಳೆ ಅವಕಾಶ ಸಿಕ್ಕಿದರೆ ಮದುವೆ ಆಗದೇ ಉಳೀಲಿಕ್ಕೆ ಬಹಳ ಇಷ್ಟ ಪಡ್ತೀನಿ. ಅವಕಾಶವೇ ಇಲ್ಲ ಅಂದರೆ ಮದುವೆ ಆಗ್ತೀನಿ.

click me!