ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಾತ್ರವಾಗಿರುವ ‘ದೊಡ್ಡಟ್ಟಿಬೋರೇಗೌಡ’ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಈ ಚಿತ್ರದ ನಿರ್ದೇಶಕ ಕೆ ಎಂ ರಘು ಮಾತುಗಳು ಇಲ್ಲಿವೆ.
ನಿಮ್ಮ ಹಿನ್ನೆಲೆ ಏನು?
ಹಾಸನದ ಕಾಳೇನಹಳ್ಳಿಯವನು. ಸೋಮನಹಳ್ಳಿಯಲ್ಲಿ ಹೈಸ್ಕೂಲ್ ಓದಿ, ಮೈಸೂರಿನಲ್ಲಿ ಅರ್ಧಂಬರ್ಧ ಡಿಗ್ರಿ ಮುಗಿಸಿಕೊಂಡು ಚಿತ್ರರಂಗಕ್ಕೆ ಬಂದೆ. ಬೆಂಗಳೂರಿನ ಎಂಜಿ ರಸ್ತೆ ಹೋಟೆಲ್, ಲಾರಿ ಕ್ಲೀನರ್, ಡ್ರೈವರ್ ಕೆಲಸ ಮಾಡಿದ್ದೇನೆ.
ಚಿತ್ರರಂಗಕ್ಕೆ ಹೇಗೆ ಬಂದಿದ್ದು?
ಕೋಟಗಾನಹಳ್ಳಿ ರಾಮಯ್ಯ ಪರಿಚಯ ಆದರು. ಅವರ ಜತೆ ಕೆಲಸ ಮಾಡುವಾಗ ನಿರ್ದೇಶಕ ಮಹೇಶ್ ಸುಖಧರೆ ಸಂಪರ್ಕ ಸಿಕ್ಕಿ ಅವರ ಮೂಲಕ ಚಿತ್ರರಂಗಕ್ಕೆ ಬಂದೆ.
ಶರಣ್, ಶ್ರುತಿ ಕೃಷ್ಣ ಆದ್ಮೇಲೆ ಸೋದರಿ ಪುತ್ರಿ ಕೀರ್ತಿ ಎಂಟ್ರಿ; ಡೊಡ್ಡಮ್ಮ, ಮಾವನೇ ಸ್ಫೂರ್ತಿ ಎಂದ ಸುಂದರಿ
ನಿಮ್ಮ ಸ್ವತಂತ್ರ ನಿರ್ದೇಶನ ಶುರುವಾಗಿದ್ದು?
‘ತರ್ಲೆ ವಿಲೇಜ್’ ಸಿನಿಮಾ ಮೂಲಕ. ಆ ನಂತರ ‘ಪರಸಂಗ’. ಈಗ ‘ದೊಡ್ಡಟ್ಟಿಬೋರೇಗೌಡ’. ಬಿಡುಗಡೆಗೆ ಸಜ್ಜಾಗಿರುವ ‘ಜಸ್ಟ್ ಪಾಸ್’. ಜನರಿಗೆ ಗೊತ್ತಿರುವ ಕತೆಗಳನ್ನು ತೆರೆ ಮೇಲೆ ಹೇಳಬೇಕು. ಆದಷ್ಟುನೈಜವಾಗಿರಬೇಕು. ನಮ್ಮ ನಡುವೆ ಇರುವ ಕತೆಗಳನ್ನು ಪ್ರೇಕ್ಷಕರಿಗೆ ಸಿನಿಮಾ ಮೂಲಕ ಹೇಳಬೇಕು ಎನ್ನುವುದು ನನ್ನ ಆಲೋಚನೆ.
ದೊಡ್ಡಟ್ಟಿಬೋರೇಗೌಡ ಸಿನಿಮಾ ಕತೆ ಹೊಳೆದಿದ್ದು ಹೇಗೆ?
ನಾನು ಕೂಡ ಹಳ್ಳಿಯವನೇ. ನಾಲ್ಕು ಅಕ್ಷರ ಓದಿಕೊಂಡಿರುವುದರಿಂದ ಸರ್ಕಾರ, ಗ್ರಾಮ ಪಂಚಾಯಿತಿಗಳಲ್ಲಿ ಸೌಲಭ್ಯ ಪಡೆಯಲು ನಮ್ಮೂರಿನ ಬಹಳಷ್ಟುಜನರಿಗೆ ನಾನೇ ಅರ್ಜಿ ಬರೆದುಕೊಟ್ಟಿದ್ದೇನೆ. ಕೆಲವರಿಗೆ 10 ವರ್ಷ ಆದರೂ ಮನೆ ಸಿಕ್ಕಿರಲ್ಲ. ಯಾಕೆ ಹೀಗೆ ಅಂತ ನಾನು ಕೆದಕಲು ಹೋದಾಗ ಹುಟ್ಟಿಕೊಂಡಿದ್ದೇ ದೊಡ್ಡಟ್ಟಿಬೋರೇಗೌಡ.
ಹಾನಗಲ್‌ನ ಶಿವಯೋಗಿ ಕುಮಾರ ಸ್ವಾಮಿಗಳ ಕಥೆ;ವಿರಾಟಪುರ ವಿರಾಗಿ ಎಲ್ಲರ ಸಿನಿಮಾ ಎಂದ ಬಿ ಎಸ್ ಲಿಂಗದೇವರು
ದೊಡ್ಡಟ್ಟಿಬೋರೇಗೌಡ ಎಷ್ಟುಕಡೆ ತೆರೆಗೆ ಬಂದಿದೆ?
50 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂದಿರುವುದು ನಮಗೆ ಹೆಚ್ಚಿನ ಖುಷಿ ಕೊಟ್ಟಿದೆ. ಶಿವಣ್ಣ ಬೀರುಂಡಿ, ಸೀತಾ, ಕಲರಟ್ಟಿಮಹದೇವ್, ಸಂಪತ್, ಅಭಿ, ಲಾವಣ್ಯ, ಪ್ರೀತಿ, ಶಿವಲಿಂಗೌಡ್ರು ಹೀಗೆ ಇಡೀ ಚಿತ್ರದ ಕಲಾವಿದರ ನಟನೆ ಮೆಚ್ಚಿಕೊಳ್ಳುತ್ತಿದ್ದಾರೆ.