‘ದಿ ಜಂಗಲ್ ಬುಕ್’ನಲ್ಲಿ ಮೋಗ್ಲಿಯನ್ನು ರಕ್ಷಿಸುವವನು ಬಘೀರ. ನಮ್ಮ ಚಿತ್ರದಲ್ಲಿ ಸಮಾಜವೇ ಮೋಗ್ಲಿ. ಬಘೀರ ಸಮಾಜವನ್ನು ರಕ್ಷಿಸುತ್ತಾನೆ’ ಹೀಗನ್ನುತ್ತಾರೆ ತಮ್ಮ ಬಹುನಿರೀಕ್ಷಿತ ‘ಬಘೀರ’ ಸಿನಿಮಾದ ಬಗ್ಗೆ ಒಂದು ಕಿಂಡಿ ತೆರೆಯುತ್ತಾರೆ ನಿರ್ದೇಶಕ ಡಾ. ಸೂರಿ. ಈ ಹಿಂದೆ ಇವರು ‘ಲಕ್ಕಿ’ ಸಿನಿಮಾ ನಿರ್ದೇಶಿಸಿದ್ದರು, ‘ಕ್ವಾಟ್ಲೆ ಸತೀಶ’ ಚಿತ್ರ ನಿರ್ಮಿಸಿದ್ರು. ಸದ್ಯ ಕೆಜಿಎಫ್ 2 ಟೀಮ್ ಜೊತೆಗಿದ್ದಾರೆ.
ಪ್ರಿಯಾ ಕೆರ್ವಾಶೆ
ಬಘೀರ ಅನ್ನೋ ರೋಚಕ ಪೋಸ್ಟರ್ ಅಷ್ಟೇ ಕಣ್ಣಿಗೆ ಬಿತ್ತು. ಈ ಟೈಟಲ್, ಅದನ್ನು ಸಿನಿಮಾವಾಗಿಸಲು ಹೊರಟ ನಿಮ್ಮ ಪ್ರಯತ್ನದ ಬಗ್ಗೆ ಹೇಳಬಹುದಾ?
ಒಂದು ವರ್ಷದ ಹಿಂದೆ ಮುರಳಿ, ನಾನು ಹಾಗೂ ಪ್ರಶಾಂತ್ ನೀಲ್ ಮುರಳಿಗಾಗಿ ಒಂದು ಸಿನಿಮಾ ಮಾಡ್ಬೇಕು ಅಂತ ಮಾತಿಗೆ ಕೂತಿದ್ವಿ. ಆಗ ಪ್ರಶಾಂತ್ ನೀಲ್ ವನ್ ಲೈನ್ ಸ್ಟೋರಿ ಹೇಳಿದ್ರು. ಅದನ್ನು ಕೇಳಿ ನಮ್ಗೆ ಎಕ್ಸೈಟ್ ಆಯ್ತು. ಆಮೇಲಿಂದ ಅದನ್ನು ಡೆವಲಪ್ ಮಾಡ್ತಾ ಬಂದ್ವಿ. ಈಗ ಒಂದು ವರ್ಷ ಆದ್ಮೇಲೆ ಇದು ಒಂದೊಳ್ಳೆ ಸಿನಿಮಾ ಆಗುತ್ತೆ ಅನ್ನುವ ಕಾನ್ಫಿಡೆನ್ಸ್ ಬಂತು, ವಿಷಯ ಬಹಿರಂಗ ಪಡಿಸಿದ್ವಿ.
ಏನಾಗಿತ್ತು ಪ್ರಶಾಂತ್ ನೀಲ್ ಹೇಳಿದ ಆ ವನ್‌ಲೈನ್?
ಅದೆಲ್ಲ ಸಿನಿಮಾ ನೋಡಿದ್ಮೇಲೆ ರಿವೀಲ್ ಆಗ್ಲಿ.
ಹೊಸ ದಾಖಲೆ ಬರೆದ 'ಮದಜಗ' ಫರ್ಸ್ಟ್ ಲುಕ್ ಟೀಸರ್!
ಬಘೀರ ಅನ್ನೋ ಟೈಟಲ್ ಹೊಳೆದಿದ್ದು ಹೇಗೆ?
(ನಗು) ಅದನ್ನೊಂದು ಬಿಟ್ಬಿಡಿ. ಅಟ್‌ಲೀಸ್ಟ್ ಟೈಟಲ್ ಬರುವವರೆಗಾದ್ರೂ ಅದು ರಹಸ್ಯವಾಗಿರಲಿ.
ಜಂಗಲ್‌ಬುಕ್‌ನಲ್ಲಿ ಕಂಡ ಬಘೀರ ಮೋಗ್ಲಿಯನ್ನು ಕೊನೇವರೆಗೂ ಕಾಯ್ತಾನೆ. ಈ ಬಘೀರ?
ಇಲ್ಲಿ ಸಮಾಜವನ್ನು ಮೋಗ್ಲಿ ಅಂದುಕೊಳ್ಳಿ. ಆ ಬಘೀರನ ಪಾತ್ರವನ್ನು ನಮ್ಮ ಹೀರೋ ಬಘೀರನಲ್ಲಿ ಕಾಣಿ. ಅಲ್ಲಿಗೆ ಸಮಾಜ ಅನ್ನೋ ಮೋಗ್ಲಿಯನ್ನು ನಮ್ಮ ಬಘೀರ ಕೊನೇವರೆಗೂ ಹೇಗೆ ಕಾಯ್ತಾನೆ ಅನ್ನೋ ಒಂದು ಹಿಂಟ್ ಕೊಡ್ತೀನಿ!
ಕಥೆ ಬರೆದ್ರು KGF ನಿರ್ದೇಶಕ: ಮತ್ತೊಂದು ಮಾಸ್ ಮೂವಿ ರೆಡಿ
‘ವೆನ್ ಸೊಸೈಟಿ ಬಿಕಮ್ಸ್ ಎ ಜಂಗಲ್.. ಆ್ಯಂಡ್ ಓನ್ಲಿ ವನ್ ಪ್ರಿಡೇಟರ್ ರೋರ್ಸ್ ಫಾರ್ ಜಸ್ಟಿಸ್’ ಬಘೀರದ ಈ ಟ್ಯಾಗ್‌ಲೈನ್ ಸಖತ್ತಾಗಿದೆ ಅನ್ನೋ ಪ್ರತಿಕ್ರಿಯೆ ಬರ್ತಿದೆ?
ಜನ ನಮ್ಮ ಸಿನಿಮಾ ಬಗ್ಗೆ, ಟ್ಯಾಗ್‌ಲೈನ್ ಬಗೆಗೆಲ್ಲ ಮಾತಾಡ್ಕೊಳ್ತಿದ್ದಾರೆ ಅನ್ನೋದನ್ನು ಕೇಳೋಕೇ ಬಹಳ ಖುಷಿಯಾಗುತ್ತೆ.
ಆ ಪೋಸ್ಟರ್‌ನಲ್ಲಿ ಮುರಳಿ ಪೊಲೀಸ್ ಇನ್ಸ್‌ಪೆಕ್ಟರ್ ಯುನಿಫಾಮ್‌ರ್‍ನಲ್ಲಿದ್ದಾರೆ. ಅಂದ್ರೆ ಸಿನಿಮಾದಲ್ಲಿ ಮುರಳಿ ಪೊಲೀಸ್ ಆಗಿರ್ತಾರಲ್ಲ?
ಹೌದು, ಮುರಳಿ ಇದ್ರಲ್ಲಿ ಪೊಲೀಸ್ ಅನ್ನೋದು ಪಕ್ಕಾ. ಅದನ್ನು ಪೋಸ್ಟರ್‌ನಲ್ಲೇ ನಿಮಗೆ ಹೇಳ್ಬಿಟ್ಟಿದ್ದೀನಿ. ಅದ್ರಲ್ಲಿ ಹೇಳಿದಷ್ಟನ್ನು ಬಿಟ್ಟು ಇನ್ನೇನೂ ಮಾಹಿತಿ ಕೊಡೋ ಸ್ಥಿತಿಯಲ್ಲಿಲ್ಲ ನಾನು.
ವರ್ಷಗಳ ಗ್ಯಾಪ್ ನಂತರ ಮತ್ತೆ ಬಂದಿದ್ದೀರಿ. ಹೊಂಬಾಳೆ ಫಿಲ್ಮ್$್ಸನಂಥಾ ಸಂಸ್ಥೆ ಜೊತೆಗೆ ಕನೆಕ್ಟ್ ಆಗಿದ್ದು ಹೇಗೆ?
ನಾನು ಯಶ್ ಬಹಳ ಒಳ್ಳೆ ಸ್ನೇಹಿತರು. ಯಶ್ ಅವರ ಮಾಸ್ಟರ್‌ಪೀಸ್ ಸಿನಿಮಾ ವೇಳೆಗೆ ಹೊಂಬಾಳೆ ಜೊತೆಗೆ ಕನೆಕ್ಟ್ ಆಯ್ತು. ಆದಾದ್ಮೇಲೆ ಪ್ರಶಾಂತ್ ನೀಲ್ ಕೆಜಿಎಫ್ ಕೈಗೆತ್ತಿಕೊಂಡಾಗ ಸಿನಿಮಾ ಕುರಿತ ಚರ್ಚೆಗಳಲ್ಲೆಲ್ಲ ನಾನೂ ಇದ್ದೆ. ಅಲ್ಲಿಂದ ಪ್ರಶಾಂತ್ ಹಾಗೂ ನಾನು ಬಹಳ ಕ್ಲೋಸ್ ಆದ್ವಿ. ಅದು ಹಾಗೇ ಮುಂದುವರಿದು ಒಂದು ಹೊತ್ತಲ್ಲಿ ನಾವೆಲ್ಲ ಸೇರಿ ಒಂದು ಸಿನಿಮಾ ಮಾಡ್ಬೇಕು ಅಂತ ನಿರ್ಧಾರ ಆದಾಗ ಸಿಕ್ಕಿದವನೇ ಬಘೀರ. ಹೊಂಬಾಳೆಯಂಥಾ ಸಂಸ್ಥೆ ಇದಕ್ಕೆ ಬಂಡವಾಳ ಹಾಕಲು ಹೊರಟಿದೆ. ಪ್ರಶಾಂತ್‌ನೀಲ್ ನಮ್ಮ ಜೊತೆಗಿದ್ದಾರೆ. ಎಲ್ಲಾ ಒಳ್ಳೆಯದಾಗುತ್ತೆ ಅನಿಸುತ್ತಿದೆ.
ಆಗ ಮುಗ್ಧ, ಈಗ ಪ್ರಬುದ್ಧ; ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟುಹಬ್ಬದ ವಿಶೇಷ!
ಲಕ್ಕಿಯಂಥಾ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿದ ನೀವು ಈಗ ಕಂಪ್ಲೀಟ್ ಆ್ಯಕ್ಷನ್ ಥ್ರಿಲ್ಲರ್ ಕಡೆ ಹೊರಳಿಕೊಂಡಿದ್ದೀರ. ಇದು ಈ ಕಾಲದ ಅಗತ್ಯವಾ?
ಬಹುಶಃ ಲಕ್ಕಿ ಸಿನಿಮಾದ ಜಾನರ್ ನಂದಲ್ವೇನೋ. ಬಘೀರದಂಥಾ ಆ್ಯಕ್ಷನ್ ಮೂವಿ ನನ್ನ ಜಾನರ್ ಅನಿಸುತ್ತೆ. ಈ ಕತೆಯ ಜೊತೆಗೆ ಬಹಳ ಕನೆಕ್ಟ್ ಆಗಿದ್ದೀನಿ. ನನಗಿದು ಖುಷಿ ಕೊಟ್ಟಿದೆ.
ಮುರಳಿ ಜೊತೆಗೆ ನಿಮ್ಮ ಕೆಮೆಸ್ಟ್ರಿ?
ಬಹಳ ವರ್ಷದಿಂದ ನಾವಿಬ್ಬರೂ ಸ್ನೇಹಿತರು. ನಾನು ಲಕ್ಕಿ ಆದ್ಮೇಲೆ ಅವರಿಗಾಗಿ ಒಂದು ಸಿನಿಮಾ ಮಾಡೋದು ಅಂತಾಗಿತ್ತು. ಕಾರಣಾಂತರಗಳಿಂದ ಅದಾಗಿಲ್ಲ. ಈಗ ಕಾಲ ಕೂಡಿಬಂದಿದೆ. ನಮ್ಮಿಬ್ಬರಿಗೂ ಇದು ಖುಷಿ, ಎಕ್ಸೈಟ್‌ಮೆಂಟ್.
ಶೂಟಿಂಗ್ ಡೇಟ್, ಸ್ಕಿ್ರಪ್ಟ್, ಲೊಕೇಶನ್ ಇತ್ಯಾದಿ?
ಈಗ ಬಘೀರದ ಡೈಲಾಗ್ ವರ್ಶನ್ ಕೆಲಸ ನಡೀತಿದೆ. ಮದಗಜ ಮುಗಿದ ಮೇಲೆ, ನಮ್ಮದೊಂದಿಷ್ಟುಕೆಲಸ ಮುಗಿಸಿ ಎಪ್ರಿಲ್‌ನಿಂದ ಶೂಟಿಂಗ್ ಹೊರಡೋ ಪ್ಲಾನ್ ಇದೆ.
ಬಘೀರನಿಗೆ ಕನ್ನಡದ ನಾಯಕಿ
ಕನ್ನಡದಲ್ಲೇ ಬಘೀರನಿಗೆ ನಾಯಕಿಯನ್ನು ಹುಡುಕ್ತೀವಿ. ನನಗೆ ಆಕೆಯ ಲುಕ್ ಸೆಕೆಂಡರಿ, ನಟನೆಗೆ ಮೊದಲ ಆದ್ಯತೆ. ಹಾಗೆಂದು ಲುಕ್ಕೂ ಚೆನ್ನಾಗಿರಬೇಕು. ಆದರೆ ನೋಡೋದಕ್ಕೆ ಚೆಂದ, ನಟನೆಯಲ್ಲಿ ಒಂಚೂರು ಕಡಿಮೆ ಅಂತಂದ್ರೆ ನಂಗೆ ಓಕೆ ಆಗಲ್ಲ. ಆದ್ರೆ ನಟನೆ ಚೆನ್ನಾಗಿದ್ದು, ಲುಕ್ ಸ್ವಲ್ಪ ಕಡಿಮೆ ಇದೆ ಅಂತ ಅನಿಸಿದರೆ ಓಕೆ, ನನಗಡ್ಡಿ ಇಲ್ಲ.