
'ದೃಶ್ಯ' ಚಿತ್ರದ ಮುದ್ದು ಚೆಲವೆ ಆರೋಹಿ ನಾರಾಯಣ್, ರಕ್ಷಿತ್ ಶೆಟ್ಟಿ-ಪುಷ್ಕರ್ ನಿರ್ಮಾಣದ 'ಭೀಸಮೇನ ನಳಮಹಾರಾಜ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲಿ ಟಾಮ್ ಬಾಯ್ ಆಗಿ ಆರೋಹಿ ಕಾಣಿಸಿಕೊಂಡಿದ್ದು, ನಿಜ ಜೀವನಕ್ಕೆ ನಂಟಿಲ್ಲದ ಪಾತ್ರವಂತೆ ಇದು. ನಿಜ ಜೀವನದಲ್ಲಿ ಸಸ್ಯಾಹಾರಿಯಾಗಿದ್ದರೂ, ಚಿತ್ರಕ್ಕಾಗಿ ಮಾಂಸಹಾರ ತಿನ್ನುವ ದೃಶ್ಯಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ ಆರೋಹಿ. ಸಾಂಪ್ರಾದಾಯಿಕವಾಗಿ ಹೆಣ್ಣು ಹೀಗೇ ಇರಬೇಕೆಂಬ ಟಿಪಿಕಲ್ ಆಲೋಚನೆಗಳನ್ನು ಮುರಿದು ಬಾಳುವ ಪಾತ್ರದಲ್ಲಿ ಕಾಣಿಸಿಕೊಂಡ ಆರೋಹಿ ಭೀಮಸೇನ ನಳಮಹಾರಾಜ ಚಿತ್ರದ ಬಗ್ಗೆ ಏನು ಹೇಳುತ್ತಾರೆ? ಸುವರ್ಣನ್ಯೂಸ್.ಕಾಮ್ ಜೊತೆ ಅವರು ಮಾತನಾಡಿ, ಹೇಳಿದ್ದಿಷ್ಟು...
ಆರೋಹಿ ರಿಯಲ್ ಲೈಫ್‌ನಲ್ಲೂ ಪಾತ್ರದಷ್ಟೆ ಬೋಲ್ಡ್ ಕ್ಯಾರೆಕ್ಟರ್ ಆ?
ಇಲ್ಲ. ನಾನು ಪಾತ್ರ ಮಾಡುವಾಗ ಬೋಲ್ಡ್ ಕ್ಯಾರೆಕ್ಟರ್ ಆಗೋಗಿದ್ದೆ. ನಾನು ರಿಯಲ್ ಲೈಫ್‌ನಲ್ಲಿ ಅಷ್ಟೇನೂ ಬೋಲ್ಡ್ ಅಲ್ಲ. ಪಾತ್ರ ಮಾಡೋಷ್ಟು ದಿನ ನಾನು 'ವೇದವಲ್ಲಿ' ಆಗೋಗಿದ್ದೆ.
'ಭೀಮಸೇನ ನಳಮಹಾರಾಜ' ನಾಗಿ ಬರ್ತಿದ್ದಾರೆ ಅರವಿಂದ್ ಅಯ್ಯರ್; ಕುಕ್ಕಿಂಗ್ ಗೊತ್ತಾ ಇವರಿಗೆ?
ರಗಡ್ ಹುಡುಗಿ, ಬೈಯೋ ಡೈಲಾಗ್ ಜಾಸ್ತಿ ಇತ್ತು. ಹೇಗಿತ್ತು ಚಿತ್ರೀಕರಣ?
ಇದನ್ನು ನೀವು ನನ್ನ ನಿರ್ದೇಶಕ ಕಾರ್ತಿಕ್ ಸರ್‌ನ ಕೇಳಬೇಕು. ನನಗಿಂತ ಅವರೇ ಕರೆಕ್ಟ್ ಆಗಿ ಉತ್ತರಿಸುತ್ತಾರೆ ಈ ಪ್ರಶ್ನೆಗೆ. (ಕಾರ್ತಿಕ್: ಬೈಯ್ಯೋದೆಲ್ಲಾ ಒಂದೇ ಟೇಕ್‌ನಲ್ಲಿ ಮಾಡುತ್ತಿದ್ದರು). ನನಗೆ ಕಾರ್ತಿಕ್ ಸರ್ ಹೇಳಿದ್ದು ಒಂದೇ ನೀವು ಆರೋಹಿ ಅನ್ನೋದನ್ನು ಮರೆತುಬಿಡಿ ವೇದವಲ್ಲಿಯಾಗಿ ಸ್ವಲ್ಪ ದಿನ ಜೀವಿಸಿ ಅಂತ.
ಇದು ಪಕ್ಕಾ ಫುಡ್ ಬಗ್ಗೆ ಮಾಡಿರೋ ಸಿನಿಮಾ, ಕತೆಗೆ ನೀವೆಷ್ಟು ಕನೆಕ್ಟ್ ಆಗ್ತೀರಾ?
ನಾನು ವೈಯಕ್ತಿಕವಾಗಿ ತುಂಬಾನೇ ಫುಡಿ. ನಾನು ನಮ್ಮಮ್ಮ ಮಾಡೋ ಅಡುಗೆಯಿಂದ ದೂರ ಇರೋಕೆ ಅಗೋದೇ ಇಲ್ಲ. ಚಿಕ್ಕ ವಯಸ್ಸಿನಿಂದಲೂ ಹೆಚ್ಚು ಟೆಸ್ಟ್ ಮಾಡಿರೋ ಫುಡ್ ಅಂದ್ರೆ ಅವರದ್ದೇ. ನಾನು ಊರಿಗೆ ಹೋದಾಗ ಅಜ್ಜಿ ಅರಿಯೋ ಕಲ್ಲಿನಲ್ಲಿ ಅರೆದು, 20-30 ಜನಕ್ಕೆ ಚಟ್ನಿ ಮಾಡೋರು. ನನಗೆ ನನ್ನದೇ ಆದ ಪರ್ಸನಲ್ ಮೆಮೋರಿಗಳು ತುಂಬಾನೇ ಇವೆ. ಸಿನಿಮಾ ಫುಡ್ ಬಗ್ಗೆ ಇರೋದು ಅಂತ ಗೊತ್ತಾದ ತಕ್ಷಣ ನಾನು ಒಪ್ಪಿಕೊಂಡೆ.
ಬೆಂದ್ರೆ ಬೇಂದ್ರೆ ಆಗ್ತಾರೆ; 'ಭೀಮಸೇನ ನಳಮಹಾರಾಜ'ನ ಹಿಂದೆ ನಿಂತ ನಿರ್ದೇಶಕ ಹೇಮಂತ್!
ಆನ್ ಸ್ಕ್ರೀನ್‌ನಲ್ಲಿ ಅಚ್ಯುತ್ ಸರ್ ಜೊತೆ ಅಭಿನಯಿಸಿದ್ದು ಹೇಗಿತ್ತು?
ದೃಶ್ಯ ಮಾಡ್ಬೇಕಾದ್ರೆ ಅವರದ್ದು ಡಾಮಿನೇಟಿಂಗ್ ಪಾತ್ರ ಇತ್ತು. ಅವ್ರು ನನ್ನ ಮೇಲೆ ಕಿರಚಿ, ಅರಚಿ ಮಾಡೋರು. ನನ್ನ ಮೇಲೆ ಹಠ ಸಾಧಿಸೋರು. ಆದರೆ ಈ ಸಿನಿಮಾದಲ್ಲಿ ನನಗೆ ಟಿಟ್ ಫಾರ್ ಟ್ಯಾಟ್ ಅಂತಾರಲ್ಲ ಹಾಗೆ ಆಯ್ತು. ಈ ಸಿನಿಮಾದಲ್ಲಿ ನಾನು ಅವರ ಮೇಲೆ ತುಂಬಾ ಕಿರುಚುತ್ತೇನೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.