ಬೆಂದ್ರೆ ಬೇಂದ್ರೆ ಆಗ್ತಾರೆ; 'ಭೀಮಸೇನ ನಳಮಹಾರಾಜ'ನ ಹಿಂದೆ ನಿಂತ ನಿರ್ದೇಶಕ ಹೇಮಂತ್!
'ಭೀಮಸೇನ, ನಳಮಹಾರಾಜರು ಗಂಡಸರಲ್ಲವೇ?'. ಅಡುಗೆ ಇಷ್ಟ ಪಡುವವರು, ಒಂದು ಅದ್ಭುತವಾದ ಅಡುಗೆ ಹೇಗೆ ತಯಾರಾಗುತ್ತದೆ ಎಂಬ ಕುತೂಹಲ ಉಳ್ಳವರಿಗೆ ನಿರ್ದೇಶಕ ಹೇಮಂತ್ ಹೇಳುವ ಮಾತು ಕೇಳಿ.....
ಅಡುಗೆ, ಅಡುಗೆ ಮನೆಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಸಾಕಷ್ಟು ಹಾಡುಗಳಿವೆ. ಹಲವು ದೃಶ್ಯಗಳು ಅಡುಗೆ ಮನೆಯಲ್ಲಿಯೇ ಚಿತ್ರೀಕರಣಗೊಂಡು ಕನ್ನಡ ಸಿನಿ ರಸಿಕರ ಹೃದಯ ಕದಿಯುವಲ್ಲಿಯೂ ಯಶಸ್ವಿಯಾಗಿದೆ. ಆದರೆ, ಅಡುಗೆಯನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿದ ಸಿನಿಮಾಗಳು ಕಡಿಮೆ. ಅಂಥ ಮಾಡಿರುವ ಕೆಲವೇ ಕೆಲವು ಪ್ರಯೋಗಗಳಲ್ಲಿ ಇದೀಗ ಹೊಸ ಸೇರ್ಪಡೆ 'ಭೀಮಸೇನ ನಳಮಹರಾಜ'. ಅಡುಗೆಯೊಂದಿಗೆ, ಸಸ್ಪೆನ್ಸ್ ಮೇಳೈಸಿರುವ ಚಿತ್ರವಿದು. ಅದ್ಭುತ ಮಲೆನಾಡಿನ ಸೌಂದರ್ಯದೊಂದಿಗೆ ಚಿತ್ರೀಕರಿಸಲ್ಪಟ್ಟ ಈ ಚಿತ್ರದ ನಿರ್ದೇಶಕ ಹೇಮಂತ್ ಅವರೊಂದಿಗೆ ಸುವರ್ಣನ್ಯೂಸ್.ಕಾಮ್ ನಡೆಸಿದ ಚಿಟ್ ಚಾಟ್ ಇಲ್ಲಿದೆ.
ಕೆಲವು ವರ್ಷಗಳ ಕಾಲ ಬೆಂಗಳೂರಿನ ಹೊಟೇಲ್ ಹೋಟೆಲ್‌ವೊಂದರಲ್ಲಿ ನೀವು ಕೆಲಸ ಮಾಡಿದ್ದೀರಾ. ಸ್ಯಾಂಡಲ್‌ವುಡ್‌ನಲ್ಲಿ ಅಡುಗೆ ಬಗ್ಗೆ ಸಿನಿಮಾಗಳು ತುಂಬಾ ಕಡಿಮೆ. ಈ ಕಾನ್ಸೆಪ್ಟ್ ಬರಲು ನೀವು ಮಾಡಿದ ಕೆಲಸವೂ ಸಹಕರಿಸಿತೇ?
ಈ ಸಿನಿಮಾ ಐಡಿಯಾ ಬಂದಿದ್ದು ಪುಷ್ಕರ್ ಹಾಗೂ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಿರ್ದೇಶಕ ಸುನಿ ಅವರಿಂದ. ಸಿನಿಮಾ ಬಗ್ಗೆ ಚರ್ಚೆ ಶುರು ಮಾಡಿದೆವು. ಮೊದಲು ನಾನ್ ವೆಜ್ ಬಗ್ಗೆ ಸಿನಿಮಾ ಮಾಡಬೇಕು ಅಂತ ಇತ್ತು. ನಾನು ನಾನ್ ವೆಜ್ ತಿನ್ನದ ಕಾರಣ ವೆಜ್ ಬಗ್ಗೆ ಮಾಡಿದೆ. ನಟ ಅರವಿಂದ್ ಅವರು ವೆಜಿಟೇರಿಯನ್. ಆದರೆ ನಟಿ ಆರೋಹಿ ಪಾಪ ಈ ಸಿನಿಮಾ ಮಾಡುತ್ತಾ ನಾನ್ ವೆಜ್ ತಿನ್ನೊದನ್ನ ಕಲಿತರು. ಕನ್ನಡದಲ್ಲಿ 'ಒಗ್ಗರಣೆ' ಸಿನಿಮಾ ಬಂತು. ಸೋ ಅದನ್ನು ಮೀರಿ ನಮ್ಮದೇ ಆದಂತ ಕಾನ್ಸೆಪ್ಟ್ ಪ್ಲಾನ್‌ನಲ್ಲಿ ಈ ಮೂವಿ ಮಾಡಿದ್ದೇವೆ. ವಿಶೇಷವೆಂದರೆ ನಮಗೆ ಅತಿ ಹೆಚ್ಚು ನುಡಿಗಟ್ಟು ಸಿಗುವುದು ನಮ್ಮ ಅಡುಗೆ ಮನೆಯಲ್ಲಿಯೇ. ಉದಾರಣೆಗೆ ಅಲ್ಲಿ ಬಳಸುವ ಒಂದೊಂದು ವಸ್ತುವಿಗೂ ಒಂದೊಂದು ಹೆಸರಿರುತ್ತೆ. ಮೊಗಚೆ ಕೈ, ಚಮಚ, ಇಕ್ಳ... ಹೀಗೆ. ಈ ವಸ್ತುಗಳು ಹಾಗೂ ಅದಕ್ಕಿರೋ ಹೆಸರು ಭಾಷೆ ಬೆಳೆಯಲು ಸಹಕರಿಸುತ್ತೆ. ಜನರ ಭಾವನೆ ಹಾಗೂ ಸಂಸ್ಕೃತಿಯೊಂದಿಗೆ ಸುಲಭವಾಗಿ ಕನೆಕ್ಟ್ ಮಾಡಲು ಆಹಾರಕ್ಕೆ ಮಾತ್ರ ಸಾಧ್ಯ. ಆದರೆ it is difficult to tell.ಯಾಕಂದ್ರೆ ವಿಶ್ಯುಯಲಿ ಶೂಟ್ ಮಾಡುವುದು ದೊಡ್ಡ ಚಾಲೆಂಜ್. ಹಿಂದೆ ನಮ್ಮ ಮನೆಯಲ್ಲಿ ನಾವು ಊಟ ಆದಮೇಲೆ ತಟ್ಟೆಯಲ್ಲಿ ಕೈ ತೊಳೆದರೆ ಅಯ್ಯೋ ಬಂಗಾರದ ಮನುಷ್ಯದಲ್ಲಿ ರಾಜ್‌ಕುಮಾರ್ ಕೈ ತೊಳ್ಕೊಂಡಂತೆ ತೊಳ್ಕೊಂಡ ಅಂತಿದ್ದರು. ಇನ್ನು ಫುಲ್ ಊಟ ಅಂದ್ರೆ ಭೂತಯ್ಯನ ಮಗ ಅಯ್ಯ ಚಿತ್ರದ ಅನ್ನ ಸೀನ್ ಜ್ಞಾಪಕ ಬರುತ್ತೆ. ಸೋ ಫುಡ್ ಇಟ್ಕೊಂಡು ಏನೇ ಮಾಡಿದರೂ ಜನರಿಗೆ ಕನೆಕ್ಟ್ ಆಗುತ್ತದೆ. ಅದು ಸುದೀರ್ಘದವರೆಗೂ ಮನದಲ್ಲಿ ಮಾಸದಂತೆ ಉಳಿಯುತ್ತೆ.
ನೀವು ರಿಲೀಸ್ ಮಾಡಿರುವ ಟೀಸರ್ ಹಾಗೂ ಟ್ರೈಲರ್‌ಗಳಲ್ಲಿ ಅಡುಗೆ ಮನೆ ತುಂಬಾ ಆಕರ್ಷವಾಗಿದೆ. ಎಲ್ಲೆಲ್ಲಿ ಚಿತ್ರೀಕರಣ ಮಾಡಿದ್ದೀರಿ?
ನಾವು ಶೂಟ್ ಮಾಡಿದ್ದು ಕೊಡಚಾದ್ರಿ ಹತ್ತಿರ ನಿಟ್ಟೂರು ಅಂತ ಒಂದು ಊರಿನಲ್ಲಿ. ಅಲ್ಲಿ ಮಂಜುನಾಥ್ ಹೆಗ್ಗಡೆ ಎಂಬುವರಿದ್ದಾರೆ ಪ್ರಕೃತಿ ಪ್ರಿಯರು ಮಾತ್ರ ಅವರಿರುವ ಜಾಗಕ್ಕೆ ಹೋಗಬಹುದು. ಅಲ್ಲಿ ರೆಸಾರ್ಟ್‌ಗೆ ಹೋದಂತೆ ಆರ್ಡರ್ ಮಾಡೋಕ್ಕೆ ಆಗಲ್ಲ. ಅವರು ಪ್ರೀತಿಯಿಂದ ಅಡುಗೆ ಮಾಡಿ ಕೊಡುತ್ತಾರೆ, ಅಷ್ಟೇ ರುಚಿ ರುಚಿಯಾಗಿರುತ್ತದೆ. ಅವರ ಅಡುಗೆ ಮನೆ ಹೇಗಿದ್ಯೋ ನಾವು ಹಾಗೆಯೇ ನಾವು ತೋರಿಸಿದ್ದೀವಿ. ಯಾವುದೇ ರೀತಿಯ ಬದಲಾವಣೆಯನ್ನೂ ಮಾಡಿಲ್ಲ.
ಅಡುಗೆ ಬಗ್ಗೆ ಸಿನಿಮಾ ನೋಡಿದಷ್ಟು, ಚಿತ್ರೀಕರಿಸುವುದು ಸುಲಭವಲ್ಲ. ಚಿತ್ರೀಕರಣದಲ್ಲಿ ಏನೆಲ್ಲಾ ಸಣ್ಣಪುಟ್ಟ ಅಡತಡೆಗಳು ಎದುರಾಯ್ತು?
ಸಣ್ಣಪುಟ್ಟ ಅಂತ ಹೇಳುವುದು ನಿಮ್ಮ ದೊಡ್ಡ ಮನಸ್ಸು. ಒಂದು ನಿಮಿಷದ ಶೂಟಿಂಗ್ ಮಾಡಬೇಕೆಂದರೂ ಬೇರೆ ಬೇರೆ ಸಿದ್ಧತೆ ಮಾಡಿಕೊಳ್ಳಬೇಕು. ನಟರು ರೆಡಿಯಾಗಿರಬೇಕು, ಪ್ರೊಡಕ್ಷನ್ ಟೀಂ, ಲೈಟಿಂಗ್ ಸೂಪರ್ ಆಗಿರಬೇಕು, ಮಳೆ ಬರಬಾರದು. ಅಂದುಕೊಂಡಂತೆ ಆಗಬೇಕೆಂದರೆ ಭಗವಂತನ ಆಶೀರ್ವಾದ ಇರಬೇಕು. ಎರಡೂವರೆ ಗಂಟೆ ಸಿನಿಮಾ ಶೂಟಿಂಗ್ ಮಾಡಬೇಕೆಂದರೆ ಹರ್ಡಲ್ಸ್ ಇದ್ದೇ ಇರುತ್ತೆ.
ಥೇಟರ್ ಯಾರಿಗೆ ಬೇಕು? ಓಟಿಟಿ ಟಾಕೀಸ್ ಸಾಕು!
ಥಿಯೇಟರ್‌ನಲ್ಲಿ ರಿಲೀಸ್ ಮಾಡಬೇಕೆಂದು ಮಾಡಿದ ಸಿನಿಮಾ ಇದು. ಆದರೆ ಓಟಿಟಿಯಲ್ಲಿ ರಿಲೀಸ್ ಏಕೆ?
ಒಂದು ಕೌಟುಂಬಿಕ ಚಿತ್ರವನ್ನು ಕುಟುಂಬದವರೆಲ್ಲಾ ಬಂದು ಥಿಯೇಟರ್‌ನಲ್ಲಿ ನೋಡಿ ಅಂತ ಕುಟುಂಬದ ಸದಸ್ಯನಾಗಿ ಈ ಅಂತ ಕೊರೋನಾ ಟೈಂನಲ್ಲಿ ನಾನು ಹೇಳುವುದಕ್ಕೆ ಆಗೋಲ್ಲ. ಇಂಗ್ಲೀಷ್‌ನಲ್ಲಿ ತುಂಬಾ ಒಳ್ಳೆ ಗಾದೆ ಇದೆ ' 'Every one wants to go to heaven but nobody wants to die' ಅಂತ. ನನ್ನ ಕೈಯಲಿ ಮಾಡೋಕೆ ಆಗದೇ ಇರುವಂತ ಕೆಲಸವನ್ನು ನಾನು ನನ್ನ ಪ್ರೇಕ್ಷಕರಿಗೆ ರಿಸ್ಕ್ ತೆಗೆದುಕೊಳ್ಳಿ ಅಂತ ಹೇಳೋಕೆ ಆಗಲ್ಲ. ಈಗಿನ ಜನರೇಷನ್‌ಗೆ ಗೊತ್ತಿಲ್ಲ ಹಿಂದೆ ಒಂದು ಟಿವಿಯಲ್ಲಿ ಇಡೀ ಊರ್ ನೋಡುತ್ತಾ ಇತ್ತು ಎನ್ನುವ ಕಾನ್ಸೆಪ್ಟೇ ಗೊತ್ತಿಲ್ಲ. ಫೈನಲ್ ಕ್ರಿಕೆಟ್ ಮ್ಯಾಚ್, ರಾಮಾಯಣ ಮಹಾಭಾರತ ಹಾಗೂ ಮಾಲ್ಗುಡಿ ಡೇಸ್ ಇಡೀ ಊರು 14 ಇಂಚಿನ ಟೀವಿಯಲ್ಲಿ ನೋಡಿ ಸಂಭ್ರಮಿಸುತ್ತಿದ್ದೆವು. ಆ ತರದ್ದೇ ಅವಕಾಶ ಈ ಸಿನಿಮಾ ಮೂಲಕ ಜನರಿಗೆ ಸಿಗುತ್ತದೆ. ಒಂದು ಇಡೀ ಕುಟುಂಬ ಒಂದು ಟಿವಿಯಲ್ಲಿ ಒಟ್ಟಿಗೆ ಕುಳಿತು ಯಾವುದೇ ರೀತಿಯ ಮುಜುಗರವಿಲ್ಲದೇ, ನೋಡುವಾಗ, ನೀವು ಹೀಗೆ ಅಲ್ವಾ? ನಾನು ಹೀಗೆ ಮಾಡೋದು ಅಂತ ರೇಗಿಸಿಕೊಂಡು ನೋಡುವ ಅವಕಾಶ ಓಟಿಟಿಯಲ್ಲಿ ಸಿಗುತ್ತೆ.
ಅರವಿಂದ್ ಅವರಿಗೆ ಕುಕ್ಕಿಂಗ್, ಆರೋಹಿ ಫುಲ್ ರಗಡ್ ಜೊತೆಗೆ ಅಚ್ಯುತ್ ಸರ್. ಹೇಗೆ ನಡೆಯಿತು ಪಾತ್ರ ಆಯ್ಕೆ ಹಾಗೂ ಅದರ ತಯಾರಿ?
ಪಾತ್ರಗಳು ಸೃಷ್ಟಿ ಆಗಿರುತ್ತವೆ. ಅದಕ್ಕೆ ಜೀವ ತುಂಬುವಂತ ನಟರನ್ನು ಫಿಟ್ ಮಾ…