'ಭೀಮಸೇನ ನಳಮಹಾರಾಜ' ನಾಗಿ ಬರ್ತಿದ್ದಾರೆ ಅರವಿಂದ್ ಅಯ್ಯರ್; ಕುಕ್ಕಿಂಗ್ ಗೊತ್ತಾ ಇವರಿಗೆ?

By Vaishnavi Chandrashekar  |  First Published Oct 29, 2020, 11:39 AM IST

ಪೋಸ್ಟರ್‌ ಲುಕ್ ಹಾಗೂ ಟೀಸರ್‌ ಮೂಲಕ ಸಿಕ್ಕಾಪಟ್ಟೆ ಕುತೂಹಲ ಹೆಚ್ಚಿಸಿದ 'ಭೀಮಸೇನ ನಳಮಹಾರಾಜ' ಪ್ರಮುಖ ಪಾತ್ರಧಾರಿ ಅರವಿಂದ್ ಅಯ್ಯರ್, ಆನ್‌ ಸಸ್ಕ್ರೀನ್ ಮಾತ್ರವಲ್ಲದೇ ಆಫ್‌ ಸ್ಕ್ರೀನ್‌ನಲ್ಲೂ ಅಡುಗೆ ಮಾಡುತ್ತಾರಂತೆ. ಚಿತ್ರದ ಬಗ್ಗೆ ಅವರ ಜೊತೆ ಮಾತುಕಥೆ...


ಬದಲಾದ ಕಾಲಘಟ್ಟದಲ್ಲಿ, ಕೊರೋನಾ ಸೋಂಕಿನ ಭಯದಿಂದ ಭೀಮಸೇನ ನಳಮಹಾರಾಜ ಚಿತ್ರ ಓಟಿಟಿಯಲ್ಲಿಯೇ ರಿಲೀಸ್ ಆಗುತ್ತಿದೆ. ವಿಭಿನ್ನ ಕಥಾವಸ್ತುವಿನ ಈ ಚಿತ್ರದಲ್ಲಿ ಅರವಿಂದ್ ಅಯ್ಯರ್ ನಟನೆ ಅದ್ಭುತವಾಗಿದೆ ಎಂದು ಟೀಸರ್‌ನಲ್ಲೇ ಗೊತ್ತಾಗುತ್ತೆ. ವಿಭಿನ್ನ ರೀತಿಯ ಚಿತ್ರದ ಬಗ್ಗೆ ಏನಂತಾರೆ ಅರವಿಂದ್? ಸುವರ್ಣನ್ಯೂಸ್.ಕಾಮ್‌ನೊಂದಿಗೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ...

ನಿಜ ಜೀವನದಲ್ಲೂ ಅಡುಗೆ ಮಾಡುತ್ತೀರಾ ಅಥವಾ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿರುವುದಾ?
ಸುಮಾರು ವರ್ಷಗಳಿಂದ ನಾನು ಅಡುಗೆ ಮಾಡುತ್ತಿದ್ದೆ. ಮನೆಯಿಂದ ಆಚೆ ಓದುತ್ತಿರಬೇಕಾದರೆ, ಸ್ನೇಹಿತರಿಗೆಲ್ಲಾ ದಿನ ಅಡುಗೆ ಮಾಡಿ ಬಡಿಸುತ್ತಿದ್ದೆ.  ಎಲ್ಲರೂ ಗಟ್ಮುಟ್ಟಾಗಿದ್ದಾರೆ.  ತಕ್ಕ ಮಟ್ಟಿಗೆ ನಾನು ಅಡುಗೆ ಮಾಡುತ್ತೇನೆ.

Latest Videos

undefined

ಬೆಂದ್ರೆ ಬೇಂದ್ರೆ ಆಗ್ತಾರೆ; 'ಭೀಮಸೇನ ನಳಮಹಾರಾಜ'ನ ಹಿಂದೆ ನಿಂತ ನಿರ್ದೇಶಕ ಹೇಮಂತ್! 

ಕಮರ್ಷಿಯಲ್ ಸಿನಿಮಾನೇ ಬೇಕು ಅಂತ ಆಯ್ಕೆ ಮಾಡುವ ಕಲಾವಿದರ ನಡುವೆ ನೀವು ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳಲು ಕಾರಣ?
ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಕ್ಲಾಸ್, ಮಾಸ್ ಎಲ್ಲಾವೂ ಚಿತ್ರದಲ್ಲಿದೆ. ನನಗೆ ಯಾವ genre ಅಂತೇನೂ ಇಲ್ಲ.  ಸಿನಿಮಾ ಅನ್ನೋದು ಸಿನಿಮಾ ಅಷ್ಟೆ. ಒಳ್ಳೆ ಪಾತ್ರ ಇರ್ಬೇಕು, ಆ ಪಾತ್ರದಿಂದ ಒಳ್ಳೆ ಇಂಪ್ಯಾಕ್ಟ್ ಕ್ರಿಯೇಟ್ ಮಾಡಬೇಕು ಇದು ನಾನು ಆಯ್ಕೆ ಮಾಡಿಕೊಳ್ಳುವ ರೀತಿ. ನಮ್ಮ ಚಿತ್ರದಲ್ಲಿ ಇರುವ ಎಲ್ಲಾ ಪಾತ್ರಗಳು ಜನರ ಮನಸ್ಸಿನಲ್ಲಿ ಚನ್ನಾಗಿ ಮನೆ ಮಾಡುತ್ತವೆ. ಇದು ಇಡೀ ಫ್ಯಾಮಿಲಿ ಜೊತೆ ಕೂತ್ಕೊಂಡು ನೋಡುವ ಸಿನಿಮಾ.

 

6 spices ಚಿತ್ರದ 6 ಪಾತ್ರಗಳನ್ನು ರಿವೀಲ್ ಮಾಡುತ್ತಂತೆ, ಹೌದಾ?
ಚಿತ್ರದಲ್ಲಿ ಒಂದೊಂದು ಪಾತ್ರನೂ ಒಂದೊಂದು ರಸ.  ವಿಭಿನ್ನ ಪಾತ್ರಗಳನ್ನು ಪರಿಚಯಿಸಲಾಗುತ್ತದೆ.

ಪಾತ್ರಕ್ಕೆ ತಯಾರಿ ಹೇಗಿತ್ತು?
ನಾನು ಅಡುಗೆ ಮಾಡ್ತಿದ್ದೆ ಬಟ್ ಫಾಸ್ಟ್‌ ಆಗಿ ಈರುಳ್ಳಿ ಹೆಚ್ಚುವುದು ಅಥವಾ ಜೋಳದ ರೊಟ್ಟಿ ತಟ್ಟೋದು ಚನ್ನಾಗಿ ಕಲಿಯುವುದಕ್ಕೆ ಒಳ್ಳೆ ಅವಕಾಶ ಸಿಗ್ತು. ಕೆಲವೊಂದು ಹೊಟೇಲ್‌ಗಳಿಗೆ ಹೋಗಿ ಕಲಿತೆ. ಆಮೇಲೆ ಅಂಡರ್ ವಾಟರ್‌ ಹಾಗೂ rafting ಸೀನ್‌ಗಳಿದ್ದವು. ಅದಕ್ಕೆಲ್ಲಾ ಟ್ರೇನಿಂಗ್ ಮಾಡಿ ಶೂಟಿಂಗ್ ಮಾಡಲಾಗಿದೆ. ತುಂಬಾನೇ ಮಜಾ ಇತ್ತು. ಒಂದು ಸೀನ್‌ಗೆ ಒಂದು ಪಾತ್ರ ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕೋ ಅದೆಲ್ಲಾ ನಾವು ಮುಂಚೆನೇ ಪ್ಲಾನ್ ಮಾಡಿ ತರಬೇತಿ ಪಡೆದೆ.

ಥೇಟರ್‌ ಯಾರಿಗೆ ಬೇಕು? ಓಟಿಟಿ ಟಾಕೀಸ್‌ ಸಾಕು!

ತುಂಬಾ ಮೆಮೋರಬಲ್‌ ಸೀನ್ ಯಾವುದಾರೂ.......
ಎಲ್ಲವೂ ಚನ್ನಾಗಿತ್ತು. ಕುಮಟಾ, ಕಳಸಾ, ನಿಟ್ಟೂರು, ಕೊಡಚಾದ್ರಿ ನಮ್ಮ ಕರ್ನಾಟಕದ ಅಷ್ಟು ಜಾಗಗಳಿಗೆ ಹೋಗಿ ಶೂಟ್ ಮಾಡಿದ್ವಿ. ಅವೆಲ್ಲಾ ಸ್ಕ್ರೀನ್ ಮೇಲೆ ತುಂಬಾನೇ ಚನ್ನಾಗಿ ಕಾಣಿಸುತ್ತಿವೆ. ನನಗೆ ಇಷ್ಟೊಂದು ಪ್ರಕೃತಿ ತಾಣಗಳನ್ನು ನೋಡುವ ಒಳ್ಳೆ ಅವಕಾಶ ಸಿಗ್ತು. ಕೊಡಚಾದ್ರಿಯಲ್ಲಿ ಭಟ್ರು ಬಡಿಸಿದ ಅಡುಗೆಯನ್ನು ಖುಷಿ ಖುಷಿಯಾಗಿ ತಿಂದ್ವಿ. ಬಹಳ ತೃಪ್ತಿಯಿಂದ ಕೆಲಸ ಮಾಡಿದ್ದೀವಿ.

 

ಥಿಯೇಟರ್‌ ಬದಲು ಓಟಿಟಿಯಲ್ಲಿ ರಿಲೀಸ್ ಆಗ್ತಿದೆ.  ಹೇಗಿದೆ ಕ್ಯೂರಿಯಾಸಿಟಿ?
10ನೇ ಕ್ಲಾಸ್, 2nd ಪಿಯು ಬೋರ್ಡ್‌ ಎಕ್ಸಾಂ ಇರುತ್ತಲ್ಲ ಹಾಗೆ. ಚೆನ್ನಾಗಿ ಓದಿರ್ತೀವಿ. ಆದರೆ ಎಕ್ಸಾಂ ಬರೆಯೋಕೂ ಮುಂಚೆ ಸ್ವಲ್ಪ ಟೆನ್ಷನ್ ಇರುತ್ತೆ ಹಾಗೆ. ನಾವೆಲ್ಲರೂ ಬಹಳ ಇಷ್ಟ ಪಟ್ಟು, ಚೆನ್ನಾಗಿ ಕೆಲಸ ಮಾಡಿದ್ದೀವಿ. ಎಷ್ಟು ನರ್ವಸ್‌ನೆಸ್‌ ಇದ್ಯೂ ಅದಕ್ಕು ಜಾಸ್ತಿ ಕಾನ್ಫಿಡೆನ್ಸ್ ಇದೆ.

ಆನ್‌‌ಸ್ಕ್ರೀನ್‌ನಲ್ಲಿ ಮಗ ಅಡುಗೆ ಮಾಡುತ್ತಿರುವುದನ್ನು ನೋಡಿ ಮನೆಯಲ್ಲಿ ಹೇಗೆ ರಿಯಾಕ್ಟ್ ಮಾಡಿದ್ರು?
ಮನೆಯಲ್ಲಿ ತುಂಬಾ ಖುಷಿ ಪಟ್ಟರು. ಅಡುಗೆ ಅಂದ್ರೆ ಎಲ್ಲರ ಮನೆಯಲ್ಲೂ ಒಂದೊಂದು ರೀತಿಯ ಮೆಮೋರಿ ಇರುತ್ತೆ. ನನ್ನ ಅಜ್ಜಿ ಹಾಗೂ ತಾಯಿ ಮಾಡುತ್ತಿದ್ದ ಅಡುಗೆ ಮೆಮೋರಿಯನ್ನು ನಾನು ಉಪಯೋಗಿಸಿದ್ದೀನಿ. 

click me!