ಯಾವ ಮೋಹನ ಮುರಳಿ ಕರೆಯಿತು’, ‘ಡವ್ ಮಾಸ್ಟರ್’, ‘ಕ್ಲಾಂತ’ ಹಾಗೂ ‘ಬಿಂಗೋ’ ಚಿತ್ರಗಳಲ್ಲಿ ನಟಿಸಿ ಮಿಂಚುತ್ತಿರುವ ಸ್ಪಪ್ನ ಶೆಟ್ಟಿಗಾರ್ ಸಂದರ್ಶನ
ಆರ್. ಕೇಶವಮೂರ್ತಿ
ನಿಮ್ಮ ಹಿನ್ನೆಲೆ ಏನು?
undefined
ನಾನು ಮೂಲತಃ ಮಂಗಳೂರಿನ ಹುಡುಗಿ. ತಂದೆ ಮಂಗಳೂರಿನವರು. ತಾಯಿ ಉತ್ತರ ಕರ್ನಾಟಕದವರು. ಹುಬ್ಬಳ್ಳಿ ಸಮೀಪದ ನವಲಗುಂದದಲ್ಲಿ ಓದಿ ಬೆಳೆದವಳು.
ಚಿತ್ರರಂಗಕ್ಕೆ ಬಂದಿದು ಹೇಗೆ?
ಮಂಗಳೂರಲ್ಲಿ ಕೆಲಸ ಮಾಡುತ್ತಿರುವಾಗ ತುಳು ಚಿತ್ರವೊಂದರಲ್ಲಿ ನಟಿಸುವ ಅವಕಾಶ ಸಿಕ್ತು. ಆದರೆ, ಆ ಸಿನಿಮಾ ನಿಂತು ಹೋಯ್ತು. ಮುಂದೆ ಕನ್ನಡಕ್ಕೆ ಬಂದೆ. ‘ನಾನು ನನ್ನ ಹುಡುಗಿ’ ಚಿತ್ರದಲ್ಲಿ ನಟಿಸಿದೆ. ಆದರೆ ಈ ಚಿತ್ರವೂ ನಿಂತು ಹೋಯಿತು. ಇದೇ ಚಿತ್ರದ ನಿರ್ದೇಶಕರು ಮತ್ತೊಂದು ಸಿನಿಮಾ ಶುರು ಮಾಡಿದರು. ಅಲ್ಲಿಂದ ನನ್ನ ಸಿನಿಮಾ ಜರ್ನಿ ಶುರುವಾಯಿತು. ಆ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾ ನಂತರ ಸಿಕ್ಕಿದ್ದೇ ‘ಯಾವ ಮೋಹನ ಮುರಳಿ ಕರೆಯಿತು’.
ನಾನು ಕಾಸರವಳ್ಳಿ ಅಭಿಮಾನಿ, ನನಗೆ KGF 2 ಬಿಜಿಎಂ ಇಷ್ಟ: ರಿಕ್ಕಿಕೇಜ್
ಪ್ರತಿ ಸಲ ಸಿನಿಮಾ ನಿಂತು ಹೋದರೂ ನಟಿ ಆಗಬೇಕು ಅನಿಸಿದ್ದು ಯಾಕೆ?
ಸಿನಿಮಾಗೆ ಬರಬೇಕು ಎಂಬ ಯಾವ ಯೋಚನೆಯೂ ಇರಲಿಲ್ಲ. ಆದರೆ, ಸಿನಿಮಾ ವಿಚಾರದಲ್ಲೇ ಒಬ್ಬರು ನನಗೆ ಮನ ನೋಯಿಸಿದ್ದರು. ಆ ಕಾರಣಕ್ಕೆ ಚಾಲೆಂಜ್ ಮಾಡಿ ಪೂರ್ವ ತಯಾರಿ ಮಾಡಿಕೊಂಡು ಅವಮಾನವನ್ನು ಸವಾಲಾಗಿ ತೆಗೆದುಕೊಂಡು ಮತ್ತೆ ಮತ್ತೆ ಪ್ರಯತ್ನಿಸಿದೆ.
ಈಗ ನಟಿಸಿರುವ ಸಿನಿಮಾ ಎಲ್ಲಿಯವರೆಗೂ ಬಂದಿದೆ?
ಈ ಚಿತ್ರದ ಆಡಿಯೋ ಬಿಡುಗಡೆಗೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆಯಲ್ಲಿ ಆಡಿಯೋ ಈವೆಂಟ್ ನಡೆಯಲಿದೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದೆ. ನಾನಿಲ್ಲಿ ಅಂಗವಿಕಲ ಮಗಳ ತಾಯಿಯಾಗಿ ನಟಿಸಿದ್ದೇನೆ.
ಪೌಡರ್ ಮತ್ತು ಹಾರ್ಮೋನಲ್ ಟ್ಯಾಬ್ಲೆಟ್ ಬಳಸಿಲ್ಲ; ಸಿಕ್ಸ್ ಪ್ಯಾಕ್ ಮಾಡಿದ ಸಂಗೀತ ಶೃಂಗೇರಿ ಸ್ಪಷ್ಟನೆ
ಚಿತ್ರದ ವಿಶೇಷತೆ ಏನು?
ಈ ಚಿತ್ರದ ವಿಶೇಷತೆ ರಾಕಿ ಪಾತ್ರ. ಇದು ಶ್ವಾನದ ಹೆಸರು. ನಿರ್ಮಾಪಕ ಶರಣಪ್ಪ, ನಿರ್ದೇಶಕ ವಿಶ್ವಾಸ್ ಕೊಟ್ಟ ಸಹಕಾರ ಪ್ರೋತ್ಸಾಹದಿಂದ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
ಈ ನಿಮ್ಮ ಕೈಯಲ್ಲಿ ಎಷ್ಟು ಚಿತ್ರಗಳಿವೆ?
ಈಗ ಆರು ಸಿನಿಮಾಗಳಲ್ಲಿ ನಾಯಕಿಯಾಗಿದ್ದೇನೆ. ಈ ಪೈಕಿ ‘ಯಾವ ಮೋಹನ ಮುರಳಿ ಕರೆಯಿತು’, ‘ಡವ್ ಮಾಸ್ಟರ್’, ‘ಕ್ಲಾಂತ’ ಹಾಗೂ ‘ಬಿಂಗೋ’ ಚಿತ್ರಗಳಲ್ಲಿ ಗಮನ ಸೆಳೆಯುವಂತಹ ಪಾತ್ರ ಇದೆ.