ಉಸಿರಾಟದ ವ್ಯಾಯಾಮ ಮಾಡಿದರೆ ಒಳ್ಳೆಯದು; ರಾಗಿಣಿ ಚಂದ್ರನ್ ಸಂದರ್ಶನ!

By Kannadaprabha News  |  First Published May 24, 2021, 9:29 AM IST

ರಾಗಿಣಿ ಚಂದ್ರನ್ ಎಂಬ ‘ಲಾ’ ಸಿನಿಮಾ ಬೆಡಗಿ ಇದೀಗ ಲಾಕ್‌ಡೌನ್‌ನಲ್ಲೂ ಫುಲ್ ಬ್ಯುಸಿ. ಫ್ಯಾಮಿಲಿ, ನಟನೆ, ಫಿಟ್‌ನೆಸ್ ಟ್ರೈನಿಂಗ್ ಜೊತೆಗೆ ಬಿಸಿಬೆಲ್ಲಿ ಕಿಚನ್ ಅನ್ನೂ ನಿರ್ವಹಿಸುತ್ತಿದ್ದಾರೆ. ಚುರುಕಾದ ಅವರ ಮಾತುಗಳು ಇಲ್ಲಿವೆ.


ನಿತ್ತಿಲೆ

ನೀವು ಫಿಟ್‌ನೆಸ್ ಎಕ್‌ಸ್ಪರ್ಟ್. ಈ ಕೋವಿಡ್ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ಮಾಡಲೇಬೇಕಾದ ಕೆಲವು ಎಕ್ಸರ್‌ಸೈಸ್‌ಗಳು?

Tap to resize

Latest Videos

undefined

1. ಉಸಿರಾಟದ ಎಕ್ಸರ್‌ಸೈಸ್ ಮಾಡಲೇ ಬೇಕು. ಒಂದು ವೇಳೆ ಕೋವಿಡ್ ಅಟ್ಯಾಕ್ ಆದರೂ ಇದು ನಿಮ್ಮ ಸಹಾಯಕ್ಕೆ ಬರುತ್ತೆ.

2. ಮನೆಯಲ್ಲಿದ್ದುಕೊಂಡೇ ಕನಿಷ್ಠ ಸಾವಿರ ಸ್ಟೆಪ್‌ಸ್ ಓಡಬಹುದು. ಮನೆಯ ಪೀಠೋಪಕರಣ ಬಳಸಿ ಎಕ್ಸರ್‌ಸೈಸ್ ಮಾಡಬಹುದು, ಮೆಟ್ಟಿಲು ಹತ್ತಿಳಿಯಬಹುದು, ಇಂಥಾ ಎಕ್ಸರ್‌ಸೈಸ್ ಮಾಡಿ.

3. ಹೆಂಗಸರು ಬೆನ್ನುಮೂಳೆ ಗಟ್ಟಿಯಾಗುವಂಥಾ ವರ್ಕೌಟ್ ತಪ್ಪದೇ ಮಾಡಬೇಕು. ದೀರ್ಘಾವಧಿಯಲ್ಲಿ ಇದು ನಿಮ್ಮ ಪ್ರಯೋಜನಕ್ಕೆ ಬರುತ್ತೆ.

4. ಪಿಲಾಟೆಸ್ ಮಾಡೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ. ದೇಹದ ಪ್ರತೀ ಪಾಯಿಂಟ್‌ಗಳಿಗೂ ಅದು ವ್ಯಾಯಾಮ ಕೊಡುತ್ತೆ.

5. ಈ ಲಾಕ್‌ಡೌನ್‌ನಲ್ಲಿ ವೈಟ್ ಲಾಸ್ ಮಾಡ್ಬೇಕು ಅಂತ ಊಟ, ತಿಂಡಿ ಬಿಟ್ಟು ಕೂರೋದು ಅಪಾಯಕಾರಿ. ಇಮ್ಯುನಿಟಿ ಈ ಹೊತ್ತಿನ ಅಗತ್ಯ ಅನ್ನೋದು ಗೊತ್ತಿರಲಿ.

ಕೋವಿಡ್ ಬಂದವರು ಅಥವಾ ಚೇತರಿಸಿಕೊಂಡವರಿಗೆ?

ನಾನೂ ಆ ಸ್ಥಿತಿಯಲ್ಲಿದ್ದು ಬಂದವಳು. ಕೋವಿಡ್ ಬಂದಾಗ ಬಹಳ ವೀಕ್ ಆಗಿ ಬಿಡ್ತೀವಿ. ಯಾವ ಎಕ್ಸರ್‌ಸೈಸ್ ಮಾಡೋದೂ ಕಷ್ಟ. ಆದರೆ ಬ್ರೀಥಿಂಗ್ ಎಕ್ಸರ್‌ಸೈಸ್, ಸಿಂಪಲ್ ಯೋಗ ಮಾಡಬಹುದು. ನನಗೂ ಮೂವತ್ತು ದಿನಗಳ ಕಾಲ ಕೋವಿಡ್ ಬಂದಿತ್ತು. ಆಗ ನಾನೂ, ಪ್ರಜ್ವಲ್ ಇಬ್ರೂ ಮೊದಲಿಗೆ ಪ್ರಾಣಾಯಾಮ, ಆಮೇಲೆ ಧ್ಯಾನ, ಅದಾಗಿ ಉಸಿರಾಟಕ್ಕೆ ಅನುಕೂಲವಾಗುವಂಥಾ ಬಹಳ ಸಿಂಪಲ್ ಎಕ್ಸರ್‌ಸೈಸ್ ಮಾಡ್ತಿದ್ವಿ.

ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್‌! 

ಜನಕ್ಕೆ ತಿನ್ನೋ ಚಟ ಹೆಚ್ಚಾಗಿದೆಯಲ್ಲಾ, ಹೇಗೆ ಇದರಿಂದ ಪಾರಾಗೋದು?

ನಮ್ಮೊಳಗೆ ನಮಗೇ ತಿಳಿಯದ ಹಾಗೆ ಸ್ಟ್ರೆಸ್, ಭಯ ಇರುತ್ತೆ. ಈ ಸ್ಟ್ರೆಸ್ ಈಟಿಂಗ್, ಎಮೋಶನಲ್ ಈಟಿಂಗ್‌ಗೆ ಕಾರಣವೇ ಈ ಒತ್ತಡ. ಊಟ ತಿನ್ನೋದರಿಂದ ಒಂದು ತೃಪ್ತಿ, ಕಂಫರ್ಟ್ ಸಿಗುತ್ತಲ್ವಾ, ಅದಕ್ಕೇ ಹೀಗೆ ತಿನ್ನೋದು. ಮೊದಲು ಈ ಒತ್ತಡವನ್ನು ಕಡಿಮೆ ಮಾಡಬೇಕು. ಜೊತೆಗೆ ನಾನು ಇದನ್ನು ತಿನ್ನಲೇ ಬಾರದು ಅಂತ ಹೇಳಬಾರದು. ತಿನ್ನಿ. ಸಣ್ಣ ಭಾಗ ತಿನ್ನಿ. ಆಗ ನಿಮಗೆ ಖುಷಿ ಸಿಗುತ್ತೆ. ಎಲ್ಲಕ್ಕೂ ಲಿಮಿಟ್ ಇರಲಿ.

ಲಾ ಚಿತ್ರದಲ್ಲಿ ನಟಿಸಲು ಕತೆಯೇ ಕಾರಣ ಅಂತಾರೆ ಪ್ರಜ್ವಲ್‌ ಪತ್ನಿ ರಾಗಿಣಿ ಚಂದ್ರನ್! 

ನಟನೆ, ಡ್ಯಾನ್‌ಸ್, ಫಿಟ್‌ನೆಸ್ ಎಕ್‌ಸ್ಪರ್ಟ್, ಬಿಸಿಬೆಲ್ಲಿ ಕಿಚನ್ ನಿರ್ವಹಣೆ.. ಇದರಲ್ಲಿ ನಿಮ್ಮ ಪ್ರಯಾರಿಟಿ ಯಾವುದಕ್ಕೆ?

ನನ್ನ ಫ್ಯಾಮಿಲಿಗೆ ಮೊದಲ ಆದ್ಯತೆ. ಅದಾದ ಮೇಲೆಯೇ ಇವೆಲ್ಲ. ನನ್ನ ಅಮ್ಮ, ಅತ್ತೆ, ಗಂಡ ಪ್ರಜ್ವಲ್ ಅವರ ಸಪೋರ್ಟ್‌ನಿಂದಲೇ ಇದೆಲ್ಲ ಸಾಧ್ಯವಾಗಿದ್ದು.

ಬಿಸಿಬೆಲ್ಲಿ ಕಿಚನ್ ಬೇರೆ ಶುರು ಮಾಡಿದ್ದೀರಿ?

ಇದು ಐಸೊಲೇಶನ್‌ನಲ್ಲಿ ಇರುವವರಿಗೆ ಮನೆ ಊಟ ಪೂರೈಸೋಣ ಅಂತ ಒಂದು ತಿಂಗಳ ಹಿಂದೆ ಶುರು ಮಾಡಿದ್ದು. ನನ್ನ ಅಮ್ಮನ ತಮಿಳಿಯನ್ ರೆಸಿಪಿ, ಪ್ರಜ್ವಲ್ ತಾಯಿ ಅಂದ್ರೆ ನನ್ನ ಅತ್ತೆ ಹೇಳಿದ ನುಗ್ಗೆ ಸಾಂಬಾರ್, ಸಲಾಡ್‌ಸ್ ಇತ್ಯಾದಿ ಮನೆಊಟವನ್ನು ಈ ಕಿಚನ್‌ನಲ್ಲಿ ರೆಡಿ ಮಾಡ್ತೀವಿ. ಆನ್‌ಲೈನ್ ಆರ್ಡರ್ ತಗೊಂಡು ಪೂರೈಕೆ ಮಾಡ್ತೀವಿ.

ಮನೆಯವ್ರಿಗೆ ಫಿಟ್‌ನೆಸ್ ಹೇಳ್ಕೊಡಲ್ವಾ?

ತಲೆಮೇಲೆ ಕೂತು ಎಕ್ಸರ್‌ಸೈಸ್ ಮಾಡಿಸ್ತೀನಿ ಮನೇಲಿರೋ ಎಲ್ಲರಿಗೂ.. (ನಗು)

 

click me!