
ನಿತ್ತಿಲೆ
ಲಾಕ್‌ಡೌನ್‌ನಲ್ಲಿ ಫಿಟ್‌ನೆಸ್ ಮೈಂಟೇನ್ ಮಾಡೋದು ಹೇಗೆ?
ಜಿಮ್ ಕ್ಲೋಸ್ ಆಗಿರಬಹುದು. ಆದರೆ ಫ್ರೀ ಸ್ಟೈಲ್ ಡ್ಯಾನ್‌ಸ್ ಮಾಡಿ. ಮನಸೋ ಇಚ್ಛೆ ಡ್ಯಾನ್‌ಸ್ ಮಾಡಿದ್ರೆ ಇಡೀ ದಿನ ಫುಲ್ ಝೂಮ್ ಇರುತ್ತೆ. ದೇಹವೂ ಹಗುರಾಗುತ್ತೆ. ಜಿಮ್ ಇಲ್ಲದ ಕಾರಣ ಬೆಳಗ್ಗೆ ಡ್ಯಾನ್‌ಸ್ ಮಾಡ್ತೀನಿ, ಮನೆ ಎದುರಿನ ಗಾರ್ಡನ್‌ನಲ್ಲಿ ವಾಕ್ ಮಾಡ್ತೀನಿ, ಸಂಜೆ ಯೋಗ. ನಡು ನಡುವೆ ಸಿನಿಮಾ.
ದಿನಕ್ಕೆಷ್ಟು ಸಿನಿಮಾ, ಇತ್ತೀಚೆಗೆ ನೋಡಿದ ಬೆಸ್‌ಟ್ ಮೂವಿ?
ದಿನಕ್ಕೆರಡು ಸಿನಿಮಾ ನೋಡ್ತೀನಿ. ಅದ್ರಿಂದ ನಟನೆಯ ಸೂಕ್ಷ್ಮ ಕಲೀತೀನಿ. ಇತ್ತೀಚೆಗೆ ನೋಡಿದ್ರಲ್ಲಿ ಹೀರೋ, ಇನ್‌ಸ್ಪೆಕ್ಟರ್ ವಿಕ್ರಂ ಚಿತ್ರ ಬಹಳ ಚೆನ್ನಾಗಿತ್ತು. ಮಲೆಯಾಳಂನಲ್ಲಿ ನಾಯಟ್ಟು ಮೂವಿ ಸಖತ್ ಇಷ್ಟ ಆಯ್ತು.
ನೀವು ಫುಡಿ ಅಂತ ಗೊತ್ತು. ಈ ಟೈಮ್‌ನಲ್ಲಿ ತಿನ್ನೋದನ್ನು ಕಂಟೊ್ರೀಲ್ ಮಾಡೋದು ಕಷ್ಟ ಅಲ್ವಾ?
ಹೌದು, ನಾನು ಬಹಳ ಫುಡಿ. ಆದರೆ ಈಗ ಅಮ್ಮನೇ ನನ್ನ ಕಂಟೊ್ರೀಲ್ ಮಾಡ್ತಾರೆ. ನನಗೆ ಇಷ್ಟ ಆಗುವ, ಆದರೆ ವೈಟ್ ಗೇನ್ ಆಗದಂಥಾ ಅಡುಗೆ ಮಾಡಿ ಬಡಿಸ್ತಾರೆ. ಈ ವರ್ಕಿಂಗ್ ಫ್ರಂ ಹೋಮ್‌ನಲ್ಲಿ ಇರುವವರಿಗೆ ತಿನ್ನೋ ಚಟ ಅಂಟಿಕೊಳ್ಳೋದು ಸಾಮಾನ್ಯ. ತರಕಾರಿ, ಹಣ್ಣುಗಳನ್ನು ಪಕ್ಕಕ್ಕಿಟ್ಟು ತಿನ್ನುತ್ತಿರಿ. ಜಂಕ್ ಫುಡ್ ಗೊಡವೆಗೇ ಹೋಗ್ಬೇಡಿ.
ಬಿಕಿನಿ ಹಾಕಲ್ಲ, ಟೂ ಪೀಸ್ ಒಪ್ಪಲ್ಲ: ಅಪೂರ್ವ
ಪುರುಷೋತ್ತಮ ಚಿತ್ರದಲ್ಲಿ ನಿಮ್ಮದು ತುಸು ಪ್ರೌಢ ಪಾತ್ರ ಅಲ್ವಾ?
ಹೌದು, ನನ್ನ ವಯಸ್ಸಿಗೆ ಮೀರಿದ ಪಾತ್ರ. ಆದರೆ ಫೀಮೇಲ್ ಓರಿಯೆಂಟೆಡ್ ಚಿತ್ರ ಇದು. ರಿವೆಂಜ್ ಥ್ರಿಲ್ಲರ್ ಸಿನಿಮಾ. ಈ ಪಾತ್ರದ ಬಗ್ಗೆ ಹೇಳಿದಾಗ ಸ್ವಲ್ಪ ಕನ್‌ಫ್ಯೂಶನ್ ಆಯ್ತು. ಇಂಥಾ ಪ್ರೌಢ ಪಾತ್ರ ಒಪ್ಕೊಳ್ಳೋದಾ ಬೇಡ್ವಾ ಅಂತ. ಆದ್ರೆ ಕತೆ ಕೇಳಿದ ಮೇಲೆ ಈ ಪಾತ್ರವನ್ನ ನಾನೇ ಮಾಡ್ಬೇಕು, ಯಾರಿಗೂ ಬಿಟ್ಕೊಡಬಾರದು ಅನಿಸಿತು. ಜಿಮ್ ರವಿ ಅವರು ಮೊದಲ ಬಾರಿ ಹೀರೋ ಆಗ್ತಿದ್ದಾರೆ. ಅವರ ಜೊತೆಗೆ ಅಭಿನಯಿಸೋದೂ ಕಂಫರ್ಟೇಬಲ್ ಅನಿಸಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.