ಆಶಿಕಾ ರಂಗನಾಥ್ ಕೆಂಪು ತುಟಿಗಳ ರಹಸ್ಯ: ಪಟಾಕಿ ಪೋರಿಯ ಆನ್‌ಲೈನ್ ಮಾತುಕತೆ!

By Kannadaprabha News  |  First Published May 18, 2021, 10:39 AM IST

‘ಕೋಟಿಗೊಬ್ಬ 3’ ಚಿತ್ರದ ಪಟಾಕಿ ಪೋರಿಯೋ ಹಾಡಿನ ಮೂಲಕ ಪಡ್ಡೆಗಳ ನಿದ್ದೆಗೆಡಿಸಿರುವ ಆಶಿಕಾ ರಂಗನಾಥ್ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್‌ಸ್ ಪ್ರಶ್ನೆಗೆ ಉತ್ತರಿಸಿದ್ದಾರೆ.


ನಿಮ್ಮ ಲವಲವಿಕೆ ರಹಸ್ಯ? 

ಅದನ್ನ ಹೇಳಿದ್ರೆ ರಹಸ್ಯ ಹೇಗಾಗುತ್ತೆ?

Tap to resize

Latest Videos

undefined

ನಿಮ್ಮ ತುಟಿಗಳು ಅಷ್ಟು ಕೆಂಪಾಗಿರೋಕೆ ಕಾರಣ?

ಬೀಟ್‌ರೂಟ್ ಲಿಪ್ ಬಾಮ್

ನೀವು ರೊಮ್ಯಾಟಿಕ್ ಸೀನ್‌ಗಳಲ್ಲಿ ಸಹಜವಾಗಿ ಅದ್ಭುತವಾಗಿ ಅಭಿನಯಿಸ್ತೀರಿ, ಲವ್ವಲ್ಲಿ ಬಿದ್ದಿದ್ದೀರಾ ಹೇಗೆ?

ನಾವು ಒಂದು ಪಾತ್ರವನ್ನು ಒಪ್ಪಿಕೊಂಡು ಅದಕ್ಕೆ ಸಿದ್ಧತೆ ಮಾಡುವಾಗ ಆ ಪಾತ್ರದ ಜೊತೆಗೆ ಪ್ರೀತಿಯಲ್ಲಿ ಬಿದ್ದಿರುತ್ತೀವಿ. ನಾವು ಪ್ರೀತಿಸುವವರ ಮನೋಭಾವ ನಮಗೆ ಗೊತ್ತಿರುತ್ತಲ್ವಾ, ಅದೇ ನಮ್ಮ ಅಭಿನಯದಲ್ಲೂ ಹೊರಹೊಮ್ಮುತ್ತೆ. ಜೊತೆಗೊಂದಿಷ್ಟು ಕಲ್ಪನೆಯೂ ಬೆರೆತಿರುತ್ತೆ ಅನ್ನಿ.

ಲಾಕ್‌ಡೌನ್‌ನಲ್ಲಿ ಫಿಟ್‌ನೆಸ್ ಹೇಗೆ ಮೈಂಟೇನ್ ಮಾಡ್ತೀರಿ?

ವಾರದಲ್ಲಿ ನಾಲ್ಕು ದಿನವಾದ್ರೂ ಮನೆಯಲ್ಲೇ ವರ್ಕೌಟ್ ಮಾಡ್ತೀನಿ. ಆರೋಗ್ಯವಾದದ್ದನ್ನೇ ತಿನ್ತೀನಿ, ಯಾವಾಗಲೂ ಸಂತೋಷವಾಗಿರುತ್ತೀನಿ ಅಷ್ಟೇ.

ಬೀಚ್‌ನಲ್ಲಿ ಬಿಯರ್ ಬಾಟಲ್ ಹಿಡಿದು ಹಾಟ್ ಪೋಸ್ ಕೊಟ್ಟ ಪಟಾಕಿ ಪೋರಿ! 

ನಿಮ್ಮ ಚರ್ಮ ಆ ಪಾಟಿ ಶೈನ್ ಆಗ್ತಿರುತ್ತಲ್ವಾ?

ನಗು ನಗ್ತಾ ಇರೋದು ಇದರ ಹಿಂದಿನ ರಹಸ್ಯ. ನಾವು ನಗ್ತಾ ಇದ್ರೆ ನಮ್ಮ ಮುಖದ ಸ್ನಾಯುಗಳಿಗೆ ವ್ಯಾಯಾಮ ಸಿಗುತ್ತೆ. ಇದರಿಂದ ಮುಖ ಆರೋಗ್ಯಪೂರ್ಣವಾಗಿ ಹೊಳಪು ಪಡೆಯುತ್ತೆ. ಯಾರು ಬೇಕಿದ್ರೂ ಪ್ರಯತ್ನಿಸಬಹುದು.

ಹಾಗಿದ್ರೆ ಬೆಳ್ಳಗಾಗೋದು ಹೇಗೆ?

ನಿಮ್ಮ ಮೈಬಣ್ಣವನ್ನು ನೀವು ಇಷ್ಟ ಪಡಿ. ಚರ್ಮದ ಬಣ್ಣ ಬೆಳ್ಳಗೋ, ಕಪ್ಪಗೋ ಹೇಗೇ ಇರಲಿ, ಆದರೆ ಪ್ರತಿಯೊಬ್ಬರ ಮೈ ಬಣ್ಣವೂ ಅನನ್ಯ. ಆ ಯುನಿಕ್‌ನೆಸ್‌ಅನ್ನು ಕಂಡು ನಾವು ಖುಷಿ ಪಡಬೇಕು.

ಕೆಟ್ಟ ಅಥವಾ ಬೇಸರದ ದಿನಗಳನ್ನು ಹೇಗೆ ಎದುರಿಸುತ್ತೀರಿ?

ಒಂದು ಫೇಮಸ್ ಮಾತಿದೆ, ‘ಕಷ್ಟ, ಕೆಟ್ಟ ದಿನಗಳನ್ನು ಹಾಗೇ ಹಾದುಹೋಗಲು ಬಿಟ್ಟು ಬಿಡಿ, ಅವು ಹೋದ ಮೇಲೆ ಒಳ್ಳೆಯ ದಿನಗಳು ಬರುತ್ತವೆ. ಕೊಂಚ ತಾಳ್ಮೆಯಿಂದ ಕಾಯೋಣ’ ಅಂತ. ಅದನ್ನು ಫಾಲೋ ಮಾಡ್ತೀನಿ.

ಸುದೀಪ್ ಜೊತೆಗೆ ನಟಿಸಿದ್ದೀರಿ. ಅವರ ಬಗ್ಗೆ ಹೇಳಿ?

ಅಷ್ಟು ಎತ್ತರದಲ್ಲಿರುವ ವ್ಯಕ್ತಿಗಳಲ್ಲಿ ವಿಶೇಷ ಗುಣ ಇದ್ದೇ ಇರುತ್ತದೆ. ಪ್ರತಿಭೆಯ ಜೊತೆಗೆ ಆ ಒಳ್ಳೆಯತನಗಳೂ ಅವರನ್ನು ಮೇಲಕ್ಕೆ ಒಯ್ದಿರುತ್ತವೆ.

click me!