ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ ನಟ ಸುಮಂತ್ ಶೈಲೇಂದ್ರ ಬಾಬು ನಟನೆಯ ‘ಗೋವಿಂದ ಗೋವಿಂದ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸುಮಂತ್, ಚಿತ್ರರಂಗದ ತಮ್ಮ ರೀ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ.
ಆರ್ ಕೇಶವಮೂರ್ತಿ
ನೀವು ಚಿತ್ರರಂಗದಲ್ಲಿ ದೂರ ಆಗಿದ್ದೀರಿ ಅಂದುಕೊಳ್ಳುತ್ತಿದ್ದರಲ್ಲ?
ಅಯ್ಯೋ ಹಾಗೇನು ಇಲ್ಲ. ನಾನು ಚಿತ್ರರಂಗದಲ್ಲೇ ಇದ್ದೀನಿ. ನಮ್ಮ ತಂದೆ ಕೂಡ ಸಿನಿಮಾ ನಿರ್ಮಾಣ, ವಿತರಣೆಯಲ್ಲೇ ತೊಡಗಿದ್ದಾರೆ. ನಾನು ಎಲ್ಲೂ ಹೋಗಿಲ್ಲ. ಆದರೆ, ನಟನೆ ಜತೆಗೆ ಬೇರೆ ಜವಾಬ್ದಾರಿಗಳೂ ಇದ್ದಿದ್ದರಿಂದ ಎರಡು ವರ್ಷ ಸಿನಿಮಾ ಮಾಡಲಿಲ್ಲ. ಕುಟುಂಬ ಹಾಗೂ ಬ್ಯುಸಿನೆಸ್ ಅಂತ ಸಮಯ ಕೊಟ್ಟಿದ್ದರಿಂದ ಸಿನಿಮಾ ಒಪ್ಪಿಕೊಳ್ಳಲು ಆಗಲಿಲ್ಲ.
ಈಗ ಗೋವಿಂದ ಗೋವಿಂದ ಸಿನಿಮಾ ಒಪ್ಪಿಕೊಂಡಿದ್ದು ಹೇಗೆ?
ತಿರುಪತಿ ಎಕ್ಸ್‌ಪ್ರೆಸ್ ಚಿತ್ರದ ನಂತರ ಮತ್ತೊಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಸಿನಿಮಾ ಮಾಡುವ ಆಸೆ ಇತ್ತು. ಆದರೆ, ಅಂಥ ಕತೆಗಾಗಿ ಎದುರು ನೋಡುತ್ತಿದ್ದೆ. ಅದು ‘ಗೋವಿಂದ ಗೋವಿಂದ’ ಮೂಲಕ ಸಿಕ್ಕಿತು. ಹೀಗಾಗಿ ಒಪ್ಪಿಕೊಂಡೆ. ಎಲ್ಲರನ್ನು ನಗಿಸುತ್ತಲೇ ತುಂಬಾ ಆಪ್ತವಾಗಿ ಕಾಡುವ ಸಿನಿಮಾ ಇದು.
ತಮಿಳು ಹಾಗೂ ಮಲಯಾಳಂಗೆ ಹೊರಟ ಕನ್ನಡದ ಗೋವಿಂದ
ಈ ನಡುವೆ ತೆಲುಗು ಚಿತ್ರರಂಗಕ್ಕೂ ಹೋಗಿ ಬಂದಿದ್ದೀರಲ್ಲ?
ಹೌದು. ‘ಬ್ರಾಂಡ್ ಬಾಬು’ ಎನ್ನುವ ಸಿನಿಮಾ ಮಾಡಿದ್ದೆ. ಈ ಸಿನಿಮಾ ನಂತರವೇ ನಾನು ಕೂಡ ಹಾಸ್ಯ ಪ್ರಧಾನ ಸಿನಿಮಾ ಮಾಡಬಹುದು ಅನಿಸಿತು. ಆರಂಭದ ದಿನಗಳಲ್ಲೇ ತೆಲುಗು ಚಿತ್ರರಂಗದಲ್ಲೂ ಹೋಗಿ ಸಿನಿಮಾ ಮಾಡಿ ಬಂದಿದ್ದು ನನ್ನ ಖುಷಿ. ಈ ಸಿನಿಮಾದಿಂದ ನಾನೂ ತೆಲುಗಿನಲ್ಲಿ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿತು. ಮುಂದೆ ಕೂಡ ಕನ್ನಡದ ಜತೆಗೆ ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡುವ ಆಸೆ ಇದೆ.
ಸಿನಿಮಾಗಿಂತ ರಿಲೆಷನ್‌ಶಿಪ್‌ಗೇ ಹೆಚ್ಚು ಫೇಮಸ್ ಕನ್ನಡದ ಈ ನಟಿ!ನಿರ್ಮಾಪಕರಾಗಿ ನಿಮ್ಮ ತಂದೆ ಗೆದ್ದವರು. ಅದೇ ಯಶಸ್ಸು ಅವರ ಪುತ್ರನಾಗಿರುವ ನಿಮಗೆ ಸಿಕ್ಕಿದೆಯೇ?
ನಿರ್ಮಾಪಕರ ಮಗ, ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವನು ಅಂತ ಯಾರೂ ಸಿನಿಮಾ ನೋಡಲ್ಲ. ಕತೆ ಚೆನ್ನಾಗಿರಬೇಕು. ಆ ಕತೆಯಲ್ಲಿ ನಾವು ಮಾಡುವ ಪಾತ್ರ ನೀಟಾಗಿರಬೇಕು. ಅದು ನೋಡುಗನಿಗೆ ಹತ್ತಿರವಾಗಬೇಕು. ಆಗ ಮಾತ್ರ ನಮ್ಮನ್ನು ಪ್ರೇಕ್ಷಕರು ಸ್ವೀಕರಿಸುತ್ತಾರೆ. ನಾನು ಇಲ್ಲಿಯವರೆಗೂ ಮಾಡಿದ ಚಿತ್ರಗಳು ಕೂಡ ಅಪ್ಪನ ಶಿಫಾರಸ್ಸಿನ ಕಾರ್ಡ್‌ನೊಂದಿಗೆ ಬಂದವನಲ್ಲ. ಅವರ ಮಾರ್ಗದರ್ಶನ, ಬೆಂಬಲ ಮಾತ್ರ ಜತೆಯಲ್ಲಿಟ್ಟುಕೊಂಡು ಸಿನಿಮಾ ಮಾಡಿದವನು.
‘ಗೋವಿಂದ ಗೋವಿಂದ’ ನಿಮಗೆ ರೀಎಂಟ್ರಿ ಚಿತ್ರನಾ?
ಒಂದು ರೀತಿಯಲ್ಲಿ ನನಗೆ ಹೊಸ ರೀತಿಯ ಸಿನಿಮಾ. ನಮ್ಮ ತಂದೆ ಜತೆಗೆ ರವಿ ಗರಣಿ ಹಾಗೂ ಕಿಶೋರ್ ಮಧುಗಿರಿ ನಿರ್ಮಾಣದಲ್ಲಿ ಜತೆಯಾಗಿದ್ದಾರೆ. ಈ ಚಿತ್ರ ಈಗಾಗಲೇ ತಮಿಳು ಹಾಗೂ ಮಲಯಾಳಂಗೂ ಡಬ್ ಆಗುತ್ತಿದೆ. ಜಾಕಿ ಭಾವನಾ ಅವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ಕತೆ ಮತ್ತು ನಿರೂಪಣೆ ಹೊಸದಾಗಿದೆ. ಈ ಹಿನ್ನೆಲೆಯಲ್ಲಿ ನನಗೆ ಇದು ಹೊಸ ರೀ ಎಂಟ್ರಿ ಸಿನಿಮಾ ಅಂದುಕೊಳ್ಳಬಹುದು.