ಇತ್ತೀಚೆಗಷ್ಟೇ ತಮ್ಮ ನಿರ್ಮಾಣದ ಸಿನಿಮಾ `ಸ್ವೀಟಿ' ಚಿತ್ರವು ಪೈರಸಿಯಾಗಿ ಯೂಟ್ಯೂಬ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ ಎಂದು ಪೊಲೀಸರಿಗೆ ದೂರಿತ್ತಿದ್ದರು ರಾಧಿಕಾ ಕುಮಾರ ಸ್ವಾಮಿ. ಅದನ್ನು ಯೂಟ್ಯೂಬ್ ನಿಂದ ಕಿತ್ತು ಹಾಕಿದ ಮೇಲೆ ಮತ್ತೊಮ್ಮೆ ಬೇರೊಂದು ವಿಚಾರಕ್ಕಾಗಿ ಅವರು ಸ್ಟೇಷನ್‌ಗೆ ಹೋಗಲೇಬೇಕಾದ ಪರಿಸ್ಥಿತಿ ಬಂದಿದೆ.
ರಾಧಿಕಾ ಕುಮಾರಸ್ವಾಮಿ ಸ್ವತಃ ನಿರ್ಮಿಸಿ, ನಾಯಕಿಯಾಗಿ ನಟಿಸಿದ್ದ ಚಿತ್ರ `ಸ್ವೀಟಿ'. ಅದರ ಸ್ಯಾಟಲೈಟ್ ಹಕ್ಕುಗಳನ್ನು ತಮ್ಮ ಬಳಿ ಇರಿಸಿಕೊಂಡಿರುವಾಗಲೇ ಯಾರೋ ಕಿಡಿಗೇಡಿಗಳು ಚಿತ್ರದ ಕ್ಯಾಮೆರಾ ಪ್ರಿಂಟ್ ಕಾಪಿಯನ್ನು ಯೂಟ್ಯೂಬಲ್ಲಿ ಅಪ್ಲೋಡ್ ಮಾಡಿದ್ದರು. ರಾಧಿಕಾ ಅದನ್ನು ಸ್ವತಃ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ತೆಗೆಸಿದ್ದರು. ಆದರೆ ಈಗ ಅವರ ಫೇಸ್ಬುಕ್ ಅಕೌಂಟ್ ಬಳಸುತ್ತಿರುವ ಯಾರೋ ಪುಂಡರು ರಾಜಕೀಯದ ಆಟಗಳನ್ನಾಡುತ್ತಿರುವುದಾಗಿ ತಿಳಿದು ಬಂದಿದೆ. ಈ ಹಿಂದೆಯೂ ಇಂಥ ಅನುಭವಕ್ಕೆ ಒಳಗಾಗಿರುವ ರಾಧಿಕಾ ಈ ಬಾರಿ ಅಂಥವರ ಪ್ರಯತ್ನವನ್ನು ಬೇರು ಸಮೇತ ಕಿತ್ತು ಹಾಕಲು ನಿರ್ಧಾರ ಮಾಡಿದ್ದಾರೆ. ಈ ಎಲ್ಲ ವಿಚಾರದ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಅವರು ಹಂಚಿಕೊಂಡಿರುವ ಮಾಹಿತಿ ಇಲ್ಲಿದೆ.
ಶಶಿಕರ ಪಾತೂರು
undefined
ಸಾಧಕರಿಗೆ ಸಂಗೀತವೇ ನಶೆ ಎಂದ ಅನುರಾಧ ಭಟ್
ಸಾಮಾಜಿಕ ಜಾಲತಾಣದಿಂದ ನಿಮಗೆ ಮತ್ತೊಮ್ಮೆ ಕಾಡಿರುವಂಥ ಸಮಸ್ಯೆ ಏನು?
ಸೋಶಿಯಲ್ ಮೀಡಿಯಾದಲ್ಲಿ ನಾನು ಇನ್ಸ್ಟಾಗ್ರಾಮಲ್ಲಿ ಮಾತ್ರ ಇದ್ದೇನೆ. ಆದರೆ ನನ್ನ ಹೆಸರಲ್ಲಿ ಎಲ್ಲ ಕಡೆ ಫೇಕ್ ಅಕೌಂಟ್‌ಗಳಿವೆ. ಒಮ್ಮೆ ದೂರು ನೀಡಿ ತೆಗೆಸಿದ್ದೇನೆ. ಆದರೆ ಮತ್ತೆ ಮತ್ತೆ ಫೇಕ್ ಸೃಷ್ಟಿಯಾಗುತ್ತಲೇ ಇರುತ್ತದೆ. ನನಗೆ ನನ್ನ ಅಣ್ಣ ತಂದು ತೋರಿಸಿದ್ದಾರೆ ಅದನ್ನು. ಆಗಲೇ ನನಗೆ ಗೊತ್ತಾಗಿದ್ದು. ಅದರ ಬಗ್ಗೆ ದೂರು ನೀಡುವವಳಿದ್ದೇನೆ. ಈ ಹಿಂದೆ ನನ್ನ ಹೆಸರಲ್ಲಿರುವ ಫೇಸ್ಬುಕ್ ಅಕೌಂಟ್ ಮೂಲಕ ಮಾಟ, ಮಂತ್ರದ ವಿಚಾರಗಳನ್ನು ಹಂಚಿಕೊಂಡಿದ್ದರು. ಅದನ್ನು ನಾವು ದೂರು ನೀಡಿ ತೆಗೆಸಿದ್ದೇವೆ. ಇದೀಗ ಇನ್ನೊಂದೇನೋ ಕ್ರಿಯೇಟ್ ಮಾಡಿದ್ದು, ಬಿಜೆಪಿ ಪಕ್ಷದ ಬಗ್ಗೆ ತಪ್ಪಾಗಿ ಬರೆದಿದ್ದಾರಂತೆ! ನಾನು ಯಾವ ಪಕ್ಷದ ಬಗ್ಗೆ ಕೂಡ ಇದುವರೆಗೆ ಮಾತನಾಡಿದವಳೇ ಅಲ್ಲ. ನನ್ನ ಕೆಲಸವಾಯಿತು, ನಾನಾಯಿತು ಎಂದು ಇರುವವಳು. ಆದರೆ ಅದಕ್ಕೂ ಬಿಡದೇ ಏನಾದರೂ ಕಿರಿಕ್ ಮಾಡುತ್ತಲೇ ಇರುತ್ತಾರೆ. ಸಾಮಾನ್ಯವಾಗಿ ನಾನು ಈ ಆನ್ಲೈನ್ ಆಪಾದನೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಕಡಿಮೆ. ಆದರೆ ಇಂಥ ದೊಡ್ಡ ಸಾಮಾಜಿಕ ಪರಿಣಾಮ ಬೀರುವಂಥ ಗಂಭೀರವಾದ ವಿಚಾರಗಳು ಪ್ರಕಟವಾದಾಗ ಅವುಗಳ ಬಗ್ಗೆ ಆಕ್ಷನ್ ತೆಗೆದುಕೊಳ್ಳಲೇ ಬೇಕಾಗಿದೆ.
ಡ್ರಗ್ಸ್ ಮಾದಕತೆಯ ಬಗ್ಗೆ ಸೂರಿ ಜತೆ ಮಾತುಕತೆ
ಸಿನಿಮಾ ಸಮಸ್ಯೆ ಪರಿಹಾರವಾದಂತೆ ಇದು ಕೂಡ ಬಗೆ ಹರಿಸಲ್ಪಡುವುದೆಂಬ ಭರವಸೆ ಇದೆಯೇ?
ಹೌದು. ಸ್ವೀಟಿ ಸಿನಿಮಾ ಪೈರಸಿಯಾಗಿರುವ ಬಗ್ಗೆ ಕಳೆದ ಶನಿವಾರ ದೂರು ನೀಡಿದ್ದೆವು. ಸೋಮವಾರದ ಹೊತ್ತಿಗೆ ಚಿತ್ರವನ್ನು ಯೂಟ್ಯೂಬ್‌ನಿಂದ ತೆಗೆಸಲಾಗಿದೆ. ನಾನು ಸಮಾಜದಲ್ಲಿ ಒಬ್ಬಳು ಕಲಾವಿದೆಯಾಗಿ ಗುರುತಿಸಿಕೊಂಡಿದ್ದೇನೆಯೇ ಹೊರತು, ರಾಜಕಾರಣಿಯಾಗಿ ಅಲ್ಲ. ಹಾಗಾಗಿ ಜನ ನನ್ನನ್ನು ಪಕ್ಷಾತೀತವಾಗಿ ಇಷ್ಟಪಡುತ್ತಾರೆ. ನನ್ನದಲ್ಲದ ರಾಜಕೀಯ ನಿಲುವುಗಳ ಮೂಲಕ ಯಾವುದಾದರು ಒಂದು ಪಕ್ಷದ ಬಗ್ಗೆ ಆರೋಪಿಸಿದರೆ ಆ ಪಕ್ಷದಲ್ಲಿರುವ ನನ್ನ ಅಭಿಮಾನಿಗಳಿಗೆ ನೋವಾಗುವುದು ಖಚಿತ. ಹಾಗೆ ಆಗಬಾರದು. ಅಂಥ ಸಂದರ್ಭದಲ್ಲಿ ನಾವು ಹೊರಗೆ ಬಂದು ಹೇಳಲೇಬೇಕಾಗುತ್ತದೆ. ಇತ್ತೀಚೆಗೆ ನಾನು ಇನ್ಸ್ಟಾಗ್ರಾಮಲ್ಲಿಯೂ ಸಹ ಹೆಚ್ಚು ಆಕ್ಟಿವ್ ಆಗಿಲ್ಲ. ಕೊನೆಯದಾಗಿ ವರಮಹಾಲಕ್ಷ್ಮಿ ಹಬ್ಬದ ದಿನದ ಫೊಟೋ ಹಾಕಿದ್ದು ಬಿಟ್ಟರೆ ಆನಂತರ ಯಾವುದೇ ಪೋಸ್ಟ್ ಹಾಕಿಲ್ಲ. ಯಾಕೆಂದರೆ ಜನರೆಲ್ಲ ಇಷ್ಟು ಕಷ್ಟದಲ್ಲಿರುವಾಗ ನಾನು ಫೊಟೊ ಹಾಕಿ ಗುರುತಿಸಿಕೊಳ್ಳಲು ಇಷ್ಟಪಡಲಿಲ್ಲ ಎನ್ನುವುದು ನಿಜ.
ಬಾಡಿ ಬೆಳೆಸಲು ಡ್ರಗ್ಸ್ ಮೊರೆ ಹೋದವರಿದ್ದಾರೆ: ರಘು ರಾಮಪ್ಪ
ಸಿನಿಮಾಗಳ ಪೈರಸಿ ಪ್ರದರ್ಶನದ ಬಗ್ಗೆ ಒಬ್ಬ ನಟಿಯಷ್ಟೇ ಅಲ್ಲ, ನಿರ್ಮಾಪಕಿಯೂ ಆದ ನಿಮ್ಮ ಅಭಿಪ್ರಾಯವೇನು?
`ಸ್ವೀಟಿ' ಚಿತ್ರವನ್ನು ಯೂಟ್ಯೂಬ್‌ನಲ್ಲಿ ಹಾಕಿದ್ದರು. ಚಿತ್ರದ ಹಕ್ಕನ್ನು ಟಿವಿ ವಾಹಿನಿಗಳಿಗೂ ನೀಡಿರದ ಹೊತ್ತಲ್ಲಿ ಚಿತ್ರ ಯೂಟ್ಯೂಬಲ್ಲಿ ಪ್ರಸಾರ ಕಾಣತೊಡಗಿದರೆ ಎಷ್ಟು ಆಘಾತ ಆಗಿರಬೇಡ? ಅವರು ಅಪ್ಲೋಡ್ ಮಾಡಿದ ಕ್ಯಾಮೆರಾ ಪ್ರಿಂಟಲ್ಲೇ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ವ್ಯೂವ್ಸ್ ಬಿದ್ದಿತ್ತು! ನಾನು ಎನ್ನುವ ವಿಚಾರ ಪಕ್ಕಕ್ಕೆ ಇಡಿ. ಚಿತ್ರ ನಿರ್ಮಿಸಿದ ಒಬ್ಬ ನಿರ್ಮಾಪಕನ ಅಸ್ತಿತ್ವವೇ ಸಾಮಾನ್ಯವಾಗಿ ಆ ಸಿನಿಮಾದಿಂದ ಸಿಗುವ ಲಾಭವನ್ನು ಅವಲಂಬಿಸಿರುತ್ತದೆ. ಅಂಥ ಸಂದರ್ಭದಲ್ಲಿ ಚಿತ್ರಮಂದಿರಕ್ಕೆ ಬಂದ ಮರುದಿನವೇ ಆನ್ಲೈನಲ್ಲಿ ಸಿನಿಮಾಗಳು ಕಾಣಿಸುತ್ತವೆ. ಹಾಗಾದರೆ ಥಿಯೇಟರಲ್ಲಿ ಚಿತ್ರ ಓಡುವುದಾದರೂ ಹೇಗೆ? ಚಿತ್ರರಂಗದಲ್ಲಿ ಇಷ್ಟೊಂದು ವರ್ಷಗಳ ಕಾಲ ಅನುಭವ ಇದ್ದುಕೊಂಡು ನಾವು ನಿರ್ಮಿಸಿದ ಚಿತ್ರಕ್ಕೆ ಈ ಗತಿಯಾದರೆ ಹೊಸ ನಿರ್ಮಾಪಕರ ಪರಿಸ್ಥಿತಿ ಹೇಗಿರಬೇಡ? ಕಳೆದ ಮೊದಲ ಚಿತ್ರ ನಿರ್ಮಿಸುವವರು ಸಿನಿಮಾವನ್ನು ತುಂಬ ಕಷ್ಟದಲ್ಲಿ ಬಿಡುಗಡೆ ಮಾಡಿರುತ್ತಾರೆ. ಬಿಡುಗಡೆಯ ಬಳಿಕವೂ ಇಷ್ಟೆಲ್ಲ ಸಮಸ್ಯೆಗಳಿವೆ ಎಂದಾದಾಗ ಅವರಿಗೆ ಇನ್ನೊಂದು ಸಿನಿಮಾ ನಿರ್ಮಾಣದ ಆಸಕ್ತಿಯೇ ಹೊರಟು ಹೋಗುತ್ತದೆ.