ಶ್ರುತಿ ಅವರ ಜೊತೆ ನಟನೆ ಮಾಡ್ತಾ ನನ್ನ ನಟನಾ ಶಕ್ತಿ ಹೆಚ್ಚಿದೆ; 'ವೀರಂ' ಬಗ್ಗೆ ಪ್ರಜ್ವಲ್ ದೇವರಾಜ್ ಮಾತು

By Suvarna News  |  First Published Apr 7, 2023, 3:52 PM IST

ಶ್ರುತಿ ಅವರ ಜೊತೆ ನಟನೆ ಮಾಡ್ತಾ ನನ್ನ ನಟನಾ ಶಕ್ತಿ ಹೆಚ್ಚಾಗಿದೆ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.


ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರ ಇಂದು ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಅಚ್ಚುತ್‌ ಕುಮಾರ್‌, ರಚಿತಾರಾಮ್‌, ಶ್ರುತಿ, ಶ್ರೀನಗರ ಕಿಟ್ಟಿ, ಶಿಷ್ಯ ದೀಪಕ್‌ ಹೀಗೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ. ನಟ ಪ್ರಜ್ವಲ್‌ ದೇವರಾಜ್‌ ಈ ಸಿನಿಮಾ ಕುರಿತು, ಸದ್ಯದ ಚಿತ್ರರಂಗದ ಸ್ಥಿತಿಗತಿಯ ಕುರಿತು ಮಾತನಾಡಿದ್ದಾರೆ.

ವೀರಂ ಒಂದು ಸುಂದರವಾದ ಭಾವನಾತ್ಮಕ ಕತೆಯನ್ನು ಹೊಂದಿರುವ ಸಿನಿಮಾ. ಟ್ರೇಲರ್‌ನಲ್ಲಿ ಇದೊಂದು ಆ್ಯಕ್ಷನ್‌ ಸಿನಿಮಾದಂತೆ ಭಾಸವಾಗುತ್ತದೆ. ಆ್ಯಕ್ಷನ್‌ ಜೊತೆಗೆ ಮಧ್ಯಮ ವರ್ಗದ ಕುಟುಂಬದ ಕತೆಯನ್ನು ಈ ಸಿನಿಮಾ ಹೇಳುತ್ತದೆ. ನನ್ನ ಅಕ್ಕನ ಪಾತ್ರದಲ್ಲಿ ಶ್ರುತಿ, ಅಣ್ಣನ ಪಾತ್ರದಲ್ಲಿ ಶ್ರೀನಗರ ಕಿಟ್ಟಿನಟಿಸಿದ್ದಾರೆ. ಕುಟುಂಬದ ಒಬ್ಬ ಸದಸ್ಯನಿಗೆ ಸಮಸ್ಯೆ ಎದುರಾದಾಗ ಎಲ್ಲರೂ ಹೇಗೆ ಒಟ್ಟಾಗುತ್ತಾರೆ ಎಂದು ಹೇಳುವ ಫೀಲ್‌ ಗುಡ್‌ ಸಿನಿಮಾ ಇದು. ಅದರ ಜೊತೆ ಕ್ಯೂಟ್‌ ಆಗಿರುವ, ಮೆಚ್ಯೂರ್ಡ್‌ ಪ್ರೇಮಕತೆ ಇದೆ.

Tap to resize

Latest Videos

undefined

ನಮ್ಮತನ ಇರುವ ಸಿನಿಮಾ. ಈ ಸಿನಿಮಾ ನೋಡುತ್ತಿದ್ದರೆ ಎಲ್ಲೋ ನಡೆಯುವ ಕತೆ ಎಂದು ಅನ್ನಿಸುವುದಿಲ್ಲ. ನಮ್ಮ ಸ್ನೇಹಿತನ ಲೈಫಲ್ಲಿ ನಡೆಯುವ ಕತೆ ಅಂತಲೋ, ನಮ್ಮ ಪಕ್ಕದ ಏರಿಯಾದಲ್ಲಿ ನಡೆಯುವ ಕತೆ ಎಂದೋ ಅನ್ನಿಸುತ್ತಿರುತ್ತದೆ. ವೀರಂ ಸಿನಿಮಾ ಹತ್ತಿರ ಇರುವವರನ್ನು ಮತ್ತಷ್ಟುಪ್ರೀತಿಸಲು ಕಲಿಸುತ್ತದೆ.

- ಸಿನಿಮಾ ಮೂರು ವರ್ಷದ ಶ್ರಮ. ಚಿತ್ರದ ಗೆಟಪ್‌ ಕಾಪಾಡಿಕೊಳ್ಳಬೇಕಿದ್ದುದರಿಂದ ಬೇರೆ ಚಿತ್ರದಲ್ಲಿ ನಟಿಸುವ ಹಾಗೆ ಇರಲಿಲ್ಲ. ಇಡೀ ತಂಡದವರು ಮೂರು ವರ್ಷ ಕೊಟ್ಟು ಒಂದು ಸಿನಿಮಾ ಮಾಡಿದ್ದೇವೆ.

- ಶ್ರುತಿಯವರ ಜೊತೆ ಭಾವನಾತ್ಮಕ ದೃಶ್ಯಗಳಲ್ಲಿ ನಟನೆ ಮಾಡುತ್ತಾ ನನ್ನ ನಟನಾ ಶಕ್ತಿ ಹೆಚ್ಚುತ್ತಾ ಹೋಗಿದೆ. ಶ್ರೀನಗರ ಕಿಟ್ಟಿ ಮತ್ತು ನನ್ನನ್ನು ತೆರೆ ಮೇಲೆ ನೋಡಿದವರಿಗೆ ಇವರು ನಿಜ ಬದುಕಿನಲ್ಲಿಯೂ ಅಣ್ಣ, ತಮ್ಮ ಎಂಬ ಭಾವ ಬರದೇ ಇರದು.

ವೀರಂ ಸಿನಿಮಾ ನೋಡಿ ಅಮ್ಮ ಕಣ್ಣೀರಿಟ್ಟರು: ಪ್ರಜ್ವಲ್‌ ದೇವರಾಜ್‌ ಭಾವುಕ

- ಆ್ಯಕ್ಷನ್‌ ಮಾಡುವಾಗ ನನ್ನ ಮೂಗು ಮುರಿಯುವ ಹಂತಕ್ಕೆ ಬಂದಿತ್ತು. ಆ್ಯಕ್ಷನ್‌ ಮಾಡುವಾಗ ಸ್ವಲ್ಪ ಜಾಸ್ತಿ ಹುಷಾರಾಗಿರಬೇಕು ಅನ್ನುವುದನ್ನು ಕಲಿತೆ. ಆ್ಯಕ್ಷನ್‌ನಲ್ಲಿ ಎರಡು ವಿಧ ಇರುತ್ತದೆ. ಒಂದು ಅಬ್ಬಾ ಅನ್ನಿಸುವ ಆ್ಯಕ್ಷನ್‌; ಹಾಡಿನಂತೆ ಎಂಜಾಯ್‌ ಮಾಡಬಹುದಾದ ಆ್ಯಕ್ಷನ್‌. ವೀರಂನಲ್ಲಿ ಎಂಜಾಯ್‌ ಮಾಡಬಹುದಾದ ಆ್ಯಕ್ಷನ್‌ ಇದೆ.

- ಕಂಟೆಂಟ್‌ ಬಹಳ ಮುಖ್ಯ ಆಗಿರುವ ಸಂದರ್ಭ ಇದು. ಎಲ್ಲರ ಬಳಿಯೂ ಈಗ ಮೊಬೈಲ್‌ ಇದೆ. ಓಟಿಟಿ ಮೂಲಕ ಜಗತ್ತಿನ ಸಿನಿಮಾ ನೋಡುತ್ತಿದ್ದಾರೆ. ನಾವು ಜಗತ್ತಿನ ಕಂಟೆಂಟ್‌ ಜೊತೆ ಸ್ಪರ್ಧೆ ಮಾಡಬೇಕಾಗಿದೆ.

ಪ್ರಜ್ವಲ್ ದೇವರಾಜ್‌ ಆ ದೃಶ್ಯ ಬೇಕೆಂದು ನೋಡಲ್ಲ, ನಾನು ಮತ್ತು ಅಮ್ಮ ಅಷ್ಟು ಅತ್ತಿದ್ದೀವಿ: ಪತ್ನಿ ರಾಗಿಣಿ

- ನನಗೆ ಒಂದೊ ಭಾರಿ ಒಳ್ಳೆಯ ಆ್ಯಕ್ಷನ್‌ ಡ್ರಾಮಾದಲ್ಲಿ ನಟಿಸುವ ಆಸೆ ಇದೆ. ಅದರ ಜೊತೆ ಮಲ್ಟಿಸ್ಟಾರರ್‌ ಸಿನಿಮಾ ಮಾಡಬೇಕು ಎಂಬ ಹಂಬಲವೂ ಇದೆ. ಆಗ ಮಲ್ಟಿಸ್ಟಾರ್‌ಗಳ ಎಲ್ಲಾ ಅಭಿಮಾನಿಗಳೂ ಸಿನಿಮಾ ನೋಡುತ್ತಾರೆ.

click me!