‘ಜೊತೆ ಜೊತೆಯಲಿ’ ಸೀರಿಯಲ್‌ನ ಅನು ಸಿರಿಮನೆ ಎಂದೇ ಫೇಮಸ್ ಆಗಿರುವ ಮೇಘಾ ಶೆಟ್ಟಿಅವರು ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆಯ ನಟಿ. ಹೊಸವರ್ಷದ ಗುಂಗಲ್ಲಿ ಅವರ ಮಾತುಗಳು.
ಪ್ರಿಯಾ ಕೆರ್ವಾಶೆ
‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್‌ನ ಅನು ಸಿರಿಮನೆ ಎಂದೇ ಫೇಮಸ್ ಆಗಿರುವ ಮೇಘಾ ಶೆಟ್ಟಿ (Megha Shetty) ಅವರು ಸ್ಯಾಂಡಲ್‌ವುಡ್‌ನಲ್ಲಿ (Sandalwood) ಬೇಡಿಕೆಯ ನಟಿ. ಹೊಸ ವರ್ಷದ (New Year) ಗುಂಗಲ್ಲಿ ಅವರ ಮಾತುಗಳು.
* ಹೊಸ ವರ್ಷಕ್ಕೆ ಏನು ಪ್ಲಾನ್?
ಈ ವರ್ಷ ಫುಲ್ ಬ್ಯುಸಿ ಆಗಿರಬೇಕು ಅಂತ ಆಸೆ. ಒಳ್ಳೆ ಕೆಲಸ, ಒಳ್ಳೆ ಸಿನಿಮಾ, ಬೇರೆ ರೀತಿಯ ಅಡ್ವೆಂಚರ್, ಏನಾದರೂ ಹೊಸತನದ ಕಾರ್ಯ ಮಾಡಬೇಕು.
Kannada serial: ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ಹೀರೋನೆ ವಿಲನ್, ಜನ ಏನಂತಾರೆ?
* ಮೇಘಾ ಶೆಟ್ಟಿಅಂದರೆ ಬಬ್ಲೀ ಗರ್ಲ್ ಅನ್ನೋ ಇಮೇಜ್ ಇದೆ. ಅದನ್ನು ಬದಲಿಸೋ ಥರದ ಪಾತ್ರಗಳು ಸಿಕ್ಕಿದ್ಯಾ?
ಹೌದು. ಸಡಗರ ರಾಘವೇಂದ್ರ ನಿರ್ದೇಶನದ ಹೊಸ ಸಿನಿಮಾದಲ್ಲಿ ಹೊಸ ಬಗೆಯ ಡಿಫರೆಂಟ್ ಪಾತ್ರ ಇದೆ. ಕವೀಶ್ ಶೆಟ್ಟಿ ಚಿತ್ರದ ಹೀರೋ. ಸೀರಿಯಲ್ ಸಿನಿಮಾಗಳಲ್ಲಿ ಈವರೆಗೆ ಮುಗ್ಧೆ, ಬಬ್ಲಿ ಹುಡುಗಿ ಪಾತ್ರ ಮಾಡಿದ್ದೀನಿ. ಇದ್ರಲ್ಲಿ ಭಲೇ ಜೋರಿನ ಬಜಾರಿಯಾಗಿ ನಟಿಸುತ್ತಿದ್ದೇನೆ. ಕನ್ನಡ, ಮರಾಠಿಗೆ ನನ್ನದೇ ಡಬ್ಬಿಂಗ್ ಇದೆ.
* 2021ರ ಸ್ಮರಣೀಯ ಗಳಿಗೆ?
ಜೊತೆ ಜೊತೆಯಲಿ ಸೆಟ್‌ನಲ್ಲಿ ಬೆಸ್ಟ್ ಮೆಮೊರಿ ಇದೆ. ಅನು ಪಾತ್ರದ ಮೂಲಕ ಜನರ ಮನಸ್ಸಲ್ಲಿ ಇಳೀತಾ ಹೋದೆ. ಹೊಸ ಸಿನಿಮಾಗಳಿಗೆ ಸೈನ್ ಮಾಡಿದ್ದು ಮತ್ತೊಂದು ಖುಷಿ. ತಾಯಿಗೆ ಹುಷಾರಿಲ್ಲದಂತಾಗಿದ್ದು ಬೇಸರ ಕೊಟ್ಟಿತು. ನನ್ನ ಸ್ವಂತ ಗಳಿಕೆಯಲ್ಲಿ ಕಾರು ತಗೊಂಡಿದ್ದು ಖುಷಿ ವಿಚಾರ.
Jothe Jotheyali ಧಾರಾವಾಹಿಯಲ್ಲಿ ದೊಡ್ಡ ಬದಲಾವಣೆ; ಆರ್ಯವರ್ಧನ್ ಪ್ಲ್ಯಾನ್ ಏನು?
* ಜೊತೆ ಜೊತೆಯಲಿ ಸೀರಿಯಲ್ ಟರ್ನ್ ಮೇಲೆ ಟರ್ನ್ ತಗೊಳ್ತಿದೆ, ಆರ್ಯವರ್ಧನ್ ವಿಲನ್ ಆಗ್ತಿದ್ದಾರೆ. ಜನ ಈ ಬಗ್ಗೆ ಕಂಪ್ಲೇಂಟ್ ಮಾಡಿಲ್ವಾ?
ಆರ್ಯ ವಿಲನ್ ಅಂತ ಅನುಗೆ ಗೊತ್ತೇ ಇರಲ್ಲ. ಆರ್ಯ ಆಕೆ ಪಾಲಿಗೆ ಹಳೇ ಆರ್ಯನೇ. ಆರ್ಯ ಅವ್ರನ್ನ ಹೀಗೆ ನೋಡೋದಕ್ಕೆ ನಮಗೆ ಇಷ್ಟಇಲ್ಲ ಅಂತ ಜನ ಹೇಳಿದ್ದುಂಟು. ಆದರೆ ಕತೆ ಅಂದ್ಮೇಲೆ ತಿರುವು, ಟ್ವಿಸ್ಟ್ ಇದ್ದರೇನೇ ಚಂದ. ಈಗ ಇಂಟರೆಸ್ಟಿಂಗ್ ಎಪಿಸೋಡ್‌ಗಳು ಬರ್ತಿವೆ. ಜನರಿಗೆ ಈಗ ಇಷ್ಟಆಗದೇ ಇರಬಹುದು. ಹೋಗ್ತಾ ಹೋಗ್ತಾ ಇಷ್ಟಪಡ್ತಾರೆ. ಇನ್ನು ನನ್ನ ಪಾತ್ರಕ್ಕೆ ಬಂದರೆ ಮದುವೆ ಆಗಿದೆ, ಕತ್ತಿಗೆ ತಾಳಿ ಬಂದಿದೆ, ಜವಾಬ್ದಾರಿ ಹೆಚ್ಚಾಗಿದೆ, ವಿಲನ್‌ಗಳ ಬಗ್ಗೆ ನಾನು ಪತ್ತೇದಾರಿ ಕೆಲಸವನ್ನೂ ಮಾಡಬೇಕು ಅನ್ನೋದು ಬಿಟ್ಟರೆ ಅನು ಹಿಂದಿನಂತೇ ಮುಗ್ಧಳಾಗಿ ಇರ್ತಾಳೆ. ಈ ಪಾತ್ರವನ್ನು ಅಕ್ಷರಶಃ ಎನ್‌ಜಾಯ್ ಮಾಡ್ತಿದ್ದೀನಿ.