ಸೆಲೆಬ್ರಿಟಿ ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಅವರ ರಿಚ್ಚಿ ಗ್ರಿಲ್‌ಸ್ ರೆಸ್ಟೋರೆಂಟ್ ಉದ್ಘಾಟನೆಗೆ ಬಂದಿದ್ದ ನಟ ಯಶ್ ಅವರು ಮಾಧ್ಯಮಗಳ ಜತೆ ಮಾತನಾಡಿ ತಮ್ಮ ಮುಂದಿನ ಚಿತ್ರಗಳ ಬಗ್ಗೆ ಹೇಳಿಕೊಂಡಿದ್ದಾರೆ. ಯಶ್ ಅವರ ಜತೆಗಿನ ಪ್ರಶ್ನೋತ್ತರ ಮಾತುಗಳು ಇಲ್ಲಿವೆ.
ನೀವು ಗಡ್ಡ (Breard) ಯಾವಾಗ ತೆಗೆಯುತ್ತೀರಿ?
ಗೊತ್ತಿಲ್ಲ. ಯಾಕೋ ನನಗೆ ಗಡ್ಡ ಇಷ್ಟ ಆಗಿಬಿಟ್ಟಿದೆ. ಅದಕ್ಕೆ ಹಾಗೆ ಇದ್ದುಬ್ಟಿದ್ದೇನೆ. ನೋಡೋಣ ಬೇರೆ ಚಿತ್ರಕ್ಕೆ ಹೊಸ ಗೆಟಪ್ ಬೇಕು ಅಂದಾಗ ಗಡ್ಡಕ್ಕೆ ಕೈ ಹಾಕೋಣ.
ಅಂದ್ರೆ, ಕೆಜಿಎಫ್ 2 (KGF 2) ಶೂಟಿಂಗ್ ಬಾಕಿ ಇದ್ದಕ್ಕೆ ಗಡ್ಡ ಉಳಿಸಿಕೊಂಡಿದ್ರಿ ಅಂತಾರಲ್ಲ?
ಅಯ್ಯೋ ಹಾಗೇನು ಇಲ್ಲ. ಚಿತ್ರದ ಶೂಟಿಂಗ್ ಸಂಪೂರ್ಣವಾಗಿ ಮುಗಿದೆ. ಡಬ್ಬಿಂಗ್ ಕೂಡ ಮುಕ್ತಾ ಆಗಿದೆ. ಆದರೂ ಗಡ್ಡದ ಗುಂಗಿನಿಂದ ನಾನು ಆಚೆ ಬಂದಿಲ್ಲ ಅಷ್ಟೆ.
ಹೌದು, ಎಲ್ಲ ಭಾಷೆಗಳಲ್ಲೂ ನಿಮ್ಮ ಪಾತ್ರಕ್ಕೆ ನೀವೇ ಡಬ್ (Dubbing) ಮಾಡಿದ್ದೀರಾ?
ಖಂಡಿತ ಇಲ್ಲ. ಯಾಕೆಂದರೆ ಪಾರ್ಟ್ 1ನಲ್ಲಿ ಬೇರೆ ಭಾಷೆಯಲ್ಲಿ ಬೇರೆಯವರ ವಾಯ್‌ಸ್ ಇತ್ತು. ಈಗ ನಾನು ವಾಯ್‌ಸ್ ಕೊಟ್ಟರೆ ಅದು ಬೇರೆ ರೀತಿ ಕೇಳಿಸುತ್ತದೆ. ಹೀಗಾಗಿ ಮುಂದಿನ ಚಿತ್ರಗಳಿಗೆ ಎಲ್ಲ ಭಾಷೆಗಳಲ್ಲೂ ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಕ್ಕೆ ಪ್ರಯತ್ನಿಸುತ್ತೇನೆ.
ನಿಮ್ಮ ಹುಟ್ಟು ಹಬ್ಬಕ್ಕೆ (Birthday) ಕೆಜಿಎಫ್ 2 ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತದೆಯೇ?
ಖಂಡಿತ ಇಲ್ಲ. ಯಾಕೆಂದರೆ ಈ ಬಾರಿಯೂ ನಾನು ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಿಮಗೇ ಗೊತ್ತಿದೆ, ನಾವು ಯಾವ ಪರಿಸ್ಥಿತಿಯಲ್ಲಿ ಇದ್ದೇವೆ ಅಂತ. ಈಗಷ್ಟೆ ಚೇತರಿಸಿಕೊಳ್ಳುತ್ತಿದ್ದೇವೆ. ಇಂಥ ಹೊತ್ತಿನಲ್ಲಿ ಅದ್ದೂರಿ ಹುಟ್ಟು ಹಬ್ಬ ಅಗತ್ಯವಿಲ್ಲ. ಇನ್ನೂ ಟ್ರೇಲರ್ ಬಿಡುಗಡೆ ಮಾಡುವ ಯಾವ ಪ್ಲಾನು ಇಲ್ಲ.
ಮುಂದಿನ ಸಿನಿಮಾ (Film Projects) ಯಾವಾಗ, ಯಾರದ್ದು?
ಈಗಲೇ ಎಲ್ಲ ಹೇಳಿಕೊಂಡು ಕೂರೋದು ಬೇಡ. ಯಾಕೆಂದರೆ ಎಲ್ಲರು ತಿರುಗಿ ನೋಡುವಂತಹ ಸಿನಿಮಾ ಕೊಟ್ಟಿದ್ದೇವೆ. ಮುಂದೆ ಬರುವ ಚಿತ್ರ ಕೂಡ ಅದೇ ರೀತಿ ಇರಬೇಕು. ಹೀಗಾಗಿ ಯಾರೋ ಒತ್ತಡಕ್ಕೋ, ದುಡ್ಡಿಗಾಗಿಯೋ, ಸಂಖ್ಯೆಗಾಗಿಯೋ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ನನ್ನ ಮನೆಯಲ್ಲೂ ನನಗೆ ಅಂಥ ಒತ್ತಡಗಳು ಇಲ್ಲ.
ಆದರೆ, ನರ್ತನ್ ಸಿನಿಮಾ ಒಪ್ಪಿದ್ದೀರಲ್ಲ?
ದೊಡ್ಡದಾಗಿ ಏನೋ ಮಾಡುವ ಪ್ಲಾನ್ ಇದೆ. ಅದು ಈಗಲೇ ಹೇಳೋದು ಬೇಡ. ಎಲ್ಲವೂ ಪಕ್ಕಾ ಆದರೆ ಮಾತನಾಡಕ್ಕೆ ಸರಿ ಆಗುತ್ತದೆ. ತುಂಬಾ ಜೋರಾಗಿಯೇ ಘೋಷಣೆ ಮಾಡುತ್ತೇನೆ. ಕೆಜಿಎಫ್ 2 ಹೇಗಿದೆ ಅಂತ ನನಗೆ ಗೊತ್ತುದ. ನಿಮಗೆ ಗೊತ್ತಿಲ್ಲ. ಹೀಗಾಗಿ ಚಾಪ್‌ಟ್ 2 ಹೇಗಿದೆ ನನಗೆ ಗೊತ್ತು. ಹೀಗಾಗಿ ನನ್ನ ಮುಂದಿನ ಸಿನಿಮಾ ಯಾವ ರೀತಿ ಇರಬೇಕು ಅಂತ ಯೋಚನೆ ಮಾಡುತ್ತಿದ್ದೇನೆ.
ಬಾಲಿವುಡ್‌ನ (Bollywood) ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ನಿಮಗೆ ಚಿತ್ರ ಮಾಡಲು ಮುಂದೆ ಬಂದಿವೆಯಂತಲ್ಲ?
ಅದನ್ನು ನಾನು ಟೈಮ್ ಬಂದಾಗ ಹೇಳುತ್ತೇನೆ. ಇಲ್ಲಿವರೆಗೂ ಏನೆಲ್ಲ ಸುದ್ದಿಗಳು ಬಂದಿವೆಯೋ ಅದೆಲ್ಲವೂ ಬರೀ ಸುದ್ದಿ ಅಷ್ಟೆ. ಜವಾಬ್ದಾರಿಯಿಂದ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಸವಾಲಿನ ಕತ್ತಿ ಮೇಲೆ ನಾನು ನಿಂತಿರುವೆ.