ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ವೈಷ್ಣವಿ, ವೈಭವಿ ಹಾಗೂ ಎಂಎಸ್ ಪಾಳ್ಯದ ಗಂಗಮ್ಮ ಸರ್ಕಲ್‌ನಲ್ಲಿ ಇರುವ ವೈನಿಧಿ ಚಿತ್ರಮಂದಿರಗಳ ಮಾಲೀಕ. ಸಿನಿಮಾ ನಿರ್ಮಾಣ, ವಿತರಣೆ, ಪ್ರದರ್ಶನ ಈ ಮೂರೂ ವಲಯಗಳಲ್ಲಿ ಗುರುತಿಸಿಕೊಂಡಿದ್ದೇನೆ.
ಆರ್. ಕೇಶವಮೂರ್ತಿ
ನಿಮ್ಮ ಹಿನ್ನೆಲೆ ಹೇಳಬಹುದಾ?
ನಾನು 40 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ವೈಷ್ಣವಿ, ವೈಭವಿ ಹಾಗೂ ಎಂಎಸ್ ಪಾಳ್ಯದ ಗಂಗಮ್ಮ ಸರ್ಕಲ್‌ನಲ್ಲಿ ಇರುವ ವೈನಿಧಿ ಚಿತ್ರಮಂದಿರಗಳ ಮಾಲೀಕ. ಸಿನಿಮಾ ನಿರ್ಮಾಣ, ವಿತರಣೆ, ಪ್ರದರ್ಶನ ಈ ಮೂರೂ ವಲಯಗಳಲ್ಲಿ ಗುರುತಿಸಿಕೊಂಡಿದ್ದೇನೆ. ನನ್ನ ಮಗ ವೈಭವ್ ‘ತಾರಕಾಸುರ’ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬಂದು, ಈಗ ಆರನೇ ಸಿನಿಮಾ ಮಾಡುತ್ತಿದ್ದಾನೆ.
undefined
ಚಿತ್ರರಂಗಕ್ಕೆ ನೀವು ಬಂದಿದ್ದು ಹೇಗೆ?
ನಾನು ಮೂಲತಃ ಬಿಲ್ಡರ್. ಕಾಮಾಕ್ಯ ಚಿತ್ರಮಂದಿರ ಕಟ್ಟುವ ಗುತ್ತಿಗೆ ತೆಗೆದುಕೊಂಡಾಗ ಆ ಚಿತ್ರಮಂದಿರದ ಮಾಲೀಕನ ಜತೆಗೆ ಸ್ನೇಹ ಆಯಿತು. ಚಿತ್ರಮಂದಿರ ನಿರ್ಮಾಣದ ಹಂತದಲ್ಲಿ ನಾನು ಅವರ ಜತೆಗೆ ಓಡಾಡುತ್ತಿದ್ದಾಗ ಸಿನಿಮಾ ಮಂದಿ ಪರಿಚಯ ಆಯಿತು. ಈ ಪರಿಚಯದ ಕಾರಣ ಮುಂದೆ ನಾನೊಂದು ಚಿತ್ರಮಂದಿರ ಲೀಸ್‌ಗೆ ತೆಗೆದುಕೊಳ್ಳುವ ಮೂಲಕ ನಾನೂ ಕೂಡ ಚಿತ್ರರಂಗದ ಭಾಗವಾದೆ. ನಂತರ ಮೂರು ಚಿತ್ರಮಂದಿರಗಳ ಮಾಲೀಕನಾದೆ.
ಎಐ ತಂತ್ರಜ್ಞಾನದ ಮೂಲಕ ಎಲ್ಲಾ ಭಾಷೆಗಳಲ್ಲೂ ನನ್ನದೇ ಧ್ವನಿ ಅಳವಡಿಕೆ: ಧ್ರುವ ಸರ್ಜಾ ಹೇಳಿದ್ದೇನು?
ಎಷ್ಟು ಚಿತ್ರಗಳನ್ನು ನಿರ್ಮಿಸಿದ್ದೀರಿ ಇಲ್ಲಿವರೆಗೂ?
ನಿರ್ಮಾಣ ಮಾಡಿದ್ದು ಕಡಿಮೆ. ಆಗಿನಂತೆ ಈಗ ಸಿನಿಮಾ ನಿರ್ಮಾಣ ಅಷ್ಟು ಸುಲಭ ಅಲ್ಲ. ಆ ಕಾಲಕ್ಕೆ 1.5 ಕೋಟಿ ವೆಚ್ಚದಲ್ಲಿ ‘ಕನಸಿನ ಲೋಕ’ ಚಿತ್ರವನ್ನು ನಿರ್ಮಿಸಿದ್ದೇನೆ. ನಿರ್ಮಾಪಕನಾಗಿ ನಾನು ಸಾಕಷ್ಟು ಕಳೆದುಕೊಂಡಿದ್ದೇನೆ. ಆದರೂ ನನಗೆ ಚಿತ್ರರಂಗದ ಮೇಲಿನ ಪ್ರೀತಿ, ಅಭಿಮಾನ, ಆಸಕ್ತಿ ದೂರವಾಗಿಲ್ಲ. ಇದೇ ನನ್ನ ವಾಣಿಜ್ಯ ಮಂಡಳಿಯ ಅಧ್ಯಕ್ಷನನ್ನಾಗಿಸಿದೆ.
ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ನಿಮ್ಮ ಮುಂದಿರುವ ಸವಾಲುಗಳೇನು?
ಚಿತ್ರರಂಗದ ಸಮಸ್ಯೆಗಳೇ ನನ್ನ ಮುಂದಿರುವ ಸವಾಲುಗಳು. ಚಿತ್ರರಂಗದ ಸಮಸ್ಯೆಗಳು ಏನೆಂಬುದು ಎಲ್ಲರಿಗೂ ಗೊತ್ತು. ಹಾಗಂತ ಎಲ್ಲವನ್ನೂ ತಕ್ಷಣ ಬಗೆಹರಿಸುತ್ತೇನೆ, ಬದಲಾವಣೆ ಮಾಡುತ್ತೇನೆ ಎಂದು ಹೇಳುತ್ತಿಲ್ಲ. ಆದರೆ, ಯಾರೇ ಸಮಸ್ಯೆ ಅಂತ ಬಂದರೆ ಪ್ರಾಮಾಣಿಕವಾಗಿ ಅವರಿಗೆ ಸ್ಪಂದಿಸುತ್ತೇನೆ. ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ.
ದಿನೇ ದಿನೇ ಚಿತ್ರಮಂದಿಗಳು ಬಾಗಿಲು ಹಾಕಿಕೊಳ್ಳುತ್ತಿವೆಯಲ್ಲ?
ಚಿತ್ರಮಂದಿರಗಳ ಮಾಲೀಕನಾಗಿ ಈ ಬಗ್ಗೆ ನನಗೆ ತಿಳಿವಳಿಕೆ ಇದೆ. ಒಂದು ಕಾಲದಲ್ಲಿ ರಾಜ್ಯದಲ್ಲಿ 1600 ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿದ್ದವು. ಈಗ 600 ಇವೆ. ಇದರಲ್ಲೂ ಶೇ.25 ರಿಂದ 30ರಷ್ಟು ಚಿತ್ರಮಂದಿರಗಳು ಮಾತ್ರ ಉತ್ತಮವಾಗಿ ನಡೆಯುತ್ತಿವೆ.
ಚಿತ್ರಮಂದಿರಗಳನ್ನು ಉಳಿಸಲು ಏನು ಮಾಡಬೇಕು?
ಒಳ್ಳೆಯ ಸಿನಿಮಾಗಳು ಬರಬೇಕು. ಪ್ಯಾನ್ ಇಂಡಿಯಾ ಹೆಸರಿನಲ್ಲಿ ಎರಡ್ಮೂರು ವರ್ಷಕ್ಕೊಂದು ಸಿನಿಮಾಗಳನ್ನು ಮಾಡುತ್ತಿರುವ ಸ್ಟಾರ್ ನಟರು ಹೆಚ್ಚು ಹೆಚ್ಚು ಸಿನಿಮಾಗಳನ್ನು ಮಾಡಬೇಕು. ಆ ಮೂಲಕ ನಿರಂತರವಾಗಿ ಚಿತ್ರಮಂದಿರಗಳಿಗೆ ಸಿನಿಮಾಗಳನ್ನು ಕೊಡಬೇಕು. ಒಳ್ಳೆಯ ಸಿನಿಮಾಗಳು ಬಂದಾಗ ಟಿವಿ, ಓಟಿಟಿಗಾಗಿ ಕಾಯದೆ ಪ್ರೇಕ್ಷಕರು ಥಿಯೇಟರ್‌ಗಳಿಗೆ ಬಂದು ಸಿನಿಮಾ ನೋಡಬೇಕು.
ಅಧ್ಯಕ್ಷರಾಗಿ ನಿಮ್ಮ ತಕ್ಷಣದ ಕಾರ್ಯಕ್ರಮಗಳೇನು?
ಆರ್ಥಿಕ ಸಂಕಷ್ಟದಲ್ಲಿರುವ ನಿರ್ಮಾಪಕ, ಪ್ರದರ್ಶಕ ಹಾಗೂ ವಿತರಕ ಈ ಮೂರು ವಲಯದವರಿಗೆ ಎರಡು ತಿಂಗಳಿಗೊಮ್ಮೆ ಉಚಿತ ಆರೋಗ್ಯ ತಸಾಣೆ ಮಾಡಿ, ಅವರಿಗೆ ಔಷಧಿಗಳನ್ನು ವಿತರಿಸುವುದು. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಶುರುವಾಗಿರುವ ಉದ್ಯಮದ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗುವುದು.
ಮಗನಿಗೋಸ್ಕರ ನಟಿ ಸಮಂತಾಗೆ ಫಾರ್ಮ್‌ಹೌಸ್ ಗಿಫ್ಟ್ ಕೊಟ್ಟ ಸ್ಟಾರ್ ನಿರ್ಮಾಪಕ: ಯಾಕೆ?
ನೀವು ಚಿತ್ರರಂಗದಲ್ಲಿ ಇದ್ದಿದ್ದಕ್ಕೆ ನಿಮ್ಮ ಮಗನನ್ನು ಹೀರೋ ಮಾಡಿದ್ದಾ?
ಖಂಡಿತಾ ಇಲ್ಲ. ಯಾಕೆಂದರೆ ಅದು ನನ್ನ ಮಗನ ಆಸಕ್ತಿ. ಜತೆಗೆ ನಾನು ದೊಡ್ಡ ನಟರೊಬ್ಬರ ಜತೆಗೆ ಸಿನಿಮಾ ಮಾಡಲು ಅವರಿಗೆ ಅಡ್ವಾನ್ಸ್ ಕೊಟ್ಟೆ. ಯಾರೇ ನಿರ್ದೇಶಕರನ್ನು ನಾನು ಅವರ ಬಳಿ ಕರೆದುಕೊಂಡು ಹೋಗಿ ಕತೆ ಹೇಳಿಸಿದಾಗ ಏನೋ ಒಂದು ಹೇಳಿ ರಿಜೆಕ್ಟ್ ಮಾಡುತ್ತಿದ್ದರು. ಆಗಲೇ ನನ್ನ ಮಗನನ್ನೇ ಯಾಕೆ ನಾನು ಹೀರೋ ಮಾಡಬಾರದು ಅನಿಸಿತು. ಈಗ ಅವನೇ ಬೇರೆ ನಿರ್ಮಾಪಕರ ಚಿತ್ರಗಳಲ್ಲಿ ನಟಿಸುತ್ತಿದ್ದಾನೆ.