1980 ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಜೊತೆಗೆ ಲೀಡ್ ಪಾತ್ರ ಮಾಡ್ತಿರೋರು ಶರಣ್ಯಾ ಶೆಟ್ಟಿ. ಸ್ಪೂಕಿ ಕಾಲೇಜ್, ರವಿ ಬೋಪಣ್ಣ ಚಿತ್ರಗಳಲ್ಲಿ, ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸಿರೋ ಶರಣ್ಯಾ ಇಂಜಿನಿಯರಿಂಗ್ ಸ್ಟೂಡೆಂಟ್. ಈ ಯುವ ನಟಿಗೆ ನಾಯಕಿಗಿಂತಲೂ ಆರ್ಟಿಸ್ಟ್ ಆಗಿ ಗುರುತಿಸಿಕೊಳ್ಳುವಾಸೆ.
ಪ್ರಿಯಾ ಕೆರ್ವಾಶೆ
ಬಿಗ್ ಸ್ಕ್ರೀನ್, ಸ್ಮಾಲ್ ಸ್ಕ್ರೀನ್, ಓದು ಈ ಮೂರರಲ್ಲಿ ನಿಮ್ಮ ಪ್ರಯಾರಿಟಿ?
undefined
ನಟನೆಯೇ ನನ್ನ ಮೊದಲ ಆಯ್ಕೆ. ಅದರ ಜೊತೆಗೆ ಓದನ್ನೂ ಮುಂದುವರಿಸುತ್ತಿದ್ದೇನೆ. ಫೈನಲ್ ಯಿಯರ್ ಇಂಜಿನಿಯರಿಂಗ್ ಓದುತ್ತಿರುವೆ. ಓದಿನಲ್ಲಿ ಮುಂದಿದ್ದೇನೆ. ಪಿಯುಸಿಯಲ್ಲಿ ರಾರಯಂಕ್ ಸ್ಟೂಡೆಂಟ್. ಇಷ್ಟೆಲ್ಲ ಆದ್ರೂ ಡೈಲಾಗ್ ಹೇಳಿದಾಗ ಸಿಗೋ ತೃಪ್ತಿ ಮತ್ತೆಲ್ಲೂ ಸಿಗಲ್ಲ.
ಮದುವೆಯಾಗು ಅಂತ ವೇದಾಂತ್ ಹಿಂದೆ ಬಿದ್ದಿರೋ ಗಟ್ಟಿಮೇಳದ ಬ್ಯೂಟಿ ಇವರೇ..!
ಇನ್ನೂ ಓದುತ್ತಿರುವಾಗಲೇ ಒಂದಿಷ್ಟುಸಿನಿಮಾಗಳು ಕೈಯಲ್ಲಿರೋ ಹಾಗಿದೆ?
ಹೌದು. ನನ್ನ ಮೊದಲ ಚಿತ್ರ ರವಿಚಂದ್ರನ್ ಅವರ ‘ರವಿ ಬೋಪಣ್ಣ’. ಇದರಲ್ಲಿ ರವಿಚಂದ್ರನ್ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಗಟ್ಟಿಮೇಳ ಸೀರಿಯಲ್‌ನಲ್ಲಿ ಸಾಹಿತ್ಯ ಅಂತ ನೆಗೆಟಿವ್ ರೋಲ್, ಆಮೇಲೆ ‘ಸ್ಪೂಕಿ ಕಾಲೇಜ್’ ಸಿನಿಮಾದಲ್ಲಿ ಸೆಕೆಂಡ್ ಲೀಡ್. ಅದಾಗಿ ನಟಿಸುತ್ತಿರೋದು 1980 ಸಿನಿಮಾದಲ್ಲಿ. ಪ್ರಿಯಾಂಕಾ ಉಪೇಂದ್ರ ಹಾಗೂ ನನ್ನದು ಲೀಡಿಂಗ್ ಪಾತ್ರ. ಈ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಾಗಿದೆ.
ನಟನೆಗೆ ಹೇಗೆ ಬಂದ್ರಿ? ಆಕಸ್ಮಿಕವಾ, ಪ್ರಯತ್ನ ಮಾಡಿ ಬಂದಿದ್ದಾ?
ಆಕಸ್ಮಿಕ ಅಂತಲ್ಲ. ಇಷ್ಟಇದ್ದೇ ಇತ್ತು. ಗಟ್ಟಿಮೇಳ ಸೀರಿಯಲ್‌ನಲ್ಲಿ ಅವಕಾಶ ಬಂದಾಗ ಮನೆಯವರು ಓದು ಫಸ್ಟ್, ಇದೆಲ್ಲ ನೆಕ್ಸ್ಟ್‌ಅಂದರು. ನಾನು ಓದಿನಲ್ಲೂ ಜಾಣೆಯಾಗಿರುವ ಕಾರಣ ಅವರನ್ನು ಒಪ್ಪಿಸೋದು ಕಷ್ಟಆಗಲಿಲ್ಲ. ಯಾವಾಗ ಗಟ್ಟಿಮೇಳ ಸೀರಿಯಲ್ ನೋಡಿ ಜನ ನನ್ನ ಗುರುತಿಸಲು ಶುರು ಮಾಡಿದರೋ ಆಗ ಆಸಕ್ತಿ ಹೆಚ್ಚಾಯ್ತು. ಸಿನಿಮಾದಲ್ಲಿ ಅವಕಾಶ ಬಂದಾಗ ಓದಿನ ಜೊತೆಗೇ ನಟನೆಯನ್ನೂ ಕಂಟಿನ್ಯೂ ಮಾಡಿದೆ. ಈ ಬ್ಯಾಲೆನ್ಸಿಂಗ್ ನನಗೇನೂ ಕಷ್ಟಆಗಲ್ಲ.
ಯಾವೂರಿನವ್ರು ನೀವು? ಆ್ಯಕ್ಟಿಂಗ್ ಬಿಟ್ಟು ಮತ್ತೇನು ಮಾಡ್ತೀರಿ?
ಶಿವಮೊಗ್ಗದ ಗರ್ತಿಕೆರೆಯವಳು. ಈಗ ಬೆಂಗಳೂರಲ್ಲಿದ್ದೀನಿ. ನಾನು ಕ್ಲಾಸಿಕ್ ಡ್ಯಾನ್ಸರ್, ಮಾಡೆಲಿಂಗ್ ಮಾಡ್ತೀನಿ. ಒಂದ್ರಾಶಿ ಜನ ಫ್ರೆಂಡ್ಸ್ ಇದ್ದಾರೆ.
ಬಂದ ಅವಕಾಶಗಳನ್ನೆಲ್ಲ ಒಪ್ಪಿಕೊಳ್ತೀರಾ ಅಥವಾ ಏನಾದ್ರೂ ಮಾನದಂಡಗಳಿವೆಯಾ?
ನನಗೆ ರಾಧಿಕಾ ಪಂಡಿತ್ ಥರ ನಟನೆಗೆ ಅವಕಾಶ ಇರುವ ಪಾತ್ರ ಮಾಡಲು ಇಷ್ಟ. ನಾನು ಒಪ್ಪಿಕೊಂಡ ಅಷ್ಟೂಸಿನಿಮಾಗಳಲ್ಲೂ ಡಿಫರೆಂಟ್ ಪಾತ್ರಗಳಿವೆ. ನನಗೆ ಹೀರೋಯಿನ್‌ಗಿಂತಲೂ ಆರ್ಟಿಸ್ಟ್ ಅನಿಸಿಕೊಳ್ಳಬೇಕು.
ನೆಗೆಟಿವ್ ಪಾತ್ರ ಆದರೂ ಓಕೆನಾ?
ಖಂಡಿತಾ. ನಟನೆಯನ್ನು ಒರೆಗೆ ಹಚ್ಚುವಂಥಾ ಯಾವ ಪಾತ್ರವಾದ್ರೂ ಸೈ.