Gandhada Gudi ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

By Govindaraj S  |  First Published Oct 27, 2022, 3:49 AM IST

ಇದೇ ಮೊದಲ ಬಾರಿಗೆ ಗಂಧದ ಗುಡಿ ಸಾಕ್ಷ್ಯ ಚಿತ್ರ ಹಾಗೂ ಪುನೀತ್​ ಪಯಣದ ಬಗ್ಗೆ ಮನಬಿಚ್ಚಿ ನಿರ್ಮಾಪಕಿ ಅಶ್ವಿನಿ ಮಾತನಾಡಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಶ್ವಿನಿ ಪುನೀತ್​ ರಾಜ್‌ಕುಮಾರ್ ಅವರ ಸಂದರ್ಶನವನ್ನು ಮಾಡಿದ್ದಾರೆ. 


ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ ಕುಮಾರ್ ಅವರ ಡ್ರೀಮ್‌ ಪ್ರಾಜೆಕ್ಟ್​ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಅಕ್ಟೋಬರ್​ 28 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಅ.27ರಂದು ಹಲವು ಕಡೆಗಳಲ್ಲಿ ಪ್ರೀಮಿಯರ್​ ಶೋ ಆಯೋಜನೆಗೊಂಡಿದೆ. ಈ ನಡುವೆ ಪುನೀತ್ ರಾಜ್​ಕುಮಾರ್​ ಧರ್ಮಪತ್ನಿ ಹಾಗೂ ಗಂಧದ ಗುಡಿ ಸಾಕ್ಷ್ಯಚಿತ್ರದ ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್‌ಕುಮಾರ್ ಇದೇ ಮೊದಲ ಬಾರಿಗೆ ಗಂಧದ ಗುಡಿ ಸಾಕ್ಷ್ಯ ಚಿತ್ರ ಹಾಗೂ ಪುನೀತ್​ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಅಶ್ವಿನಿ ಅವರ ಸಂದರ್ಶನವನ್ನು ಮಾಡಿದ್ದಾರೆ. ಈ ಸಂದರ್ಶನ ವೀಡಿಯೋವನ್ನ ಪಿ.ಆರ್‌.ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ರಿಲೀಸ್‌ ಮಾಡಲಾಗಿದೆ.

ಹೌದು! ಪುನೀತ್​ ರಾಜ್​ಕುಮಾರ್​ ನಿಧನದ ಬಳಿಕ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಯಾವುದೇ ಮಾಧ್ಯಮದ ಮುಂದೆಯೂ ಹಾಗೂ ಕ್ಯಾಮೆರಾ ಮುಂದೆ ಬಂದು ಮಾತಾಡಿಲ್ಲ. ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರೂ ಸಹ ಎಲ್ಲೂ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿಲ್ಲ. ಇದೀಗ ಅಶ್ವಿನಿ ಅವರು ಪುನೀತ್ ರಾಜ್​ಕುಮಾರ್​ ಕನಸನ್ನು ನನಸಾಗಿಸಲು ಮುಂದಾಗಿದ್ದು, ಗಂಧದ ಗುಡಿ ಸಾಕ್ಷ್ಯಚಿತ್ರವನ್ನು ಅಪ್ಪು ಅಭಿಮಾನಿಗಳ ಮುಂದೆ ತರಲು ಅಶ್ವಿನಿ ಸಾಕಷ್ಟು ಶ್ರಮಪಟ್ಟಿದ್ದಾರೆ. ಈ ಗಂಧದ ಗುಡಿ ಚಿತ್ರದ ಕುರಿತು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ಮಾಪಕಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರನ್ನು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಸಂದರ್ಶನದಲ್ಲಿ ಅಶ್ವಿನಿ ಅವರು ಗಂಧದ ಗುಡಿ ಸಾಕ್ಷ್ಯಚಿತ್ರ ಹಾಗೂ ಪತಿ ಪುನೀತ್​ ಬಗ್ಗೆ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

ಬೆಂಗಳೂರಿನಲ್ಲಿ ವೈಭವದ ‘ಪುನೀತ ಪರ್ವ’: ಹರಿದು ಬಂದ ಜನ ಸಾಗರ, ಚಿತ್ರೋದ್ಯಮದ ಗಣ್ಯರು

ಪುನೀತ ಪರ್ವ ಕುರಿತಂತೆ ಸಂತೋಷ್ ಆನಂದ್ ರಾಮ್ ಪ್ರಶ್ನೆ ಕೇಳಿದಾಗ ಪುನೀತ ಪರ್ವ ಮಾಡಿದ್ದೆ ಅಭಿಮಾನಿಗಳಿಗಾಗಿ ಅವರ 1 ಲಕ್ಷಕ್ಕೂ ಅಧಿಕ ಮಂದಿ ಬಂದಿದ್ರು. ಅಪ್ಪು ಲಾಸ್ಟ್ ಇವೆಂಟ್ ಸಕ್ಸಸ್​ ಆಗಿದ್ದು ನನಗೆ ತೃಪ್ತಿ ಕೊಟ್ಟಿದೆ. ಬೇರೆ ಇಂಡಸ್ಟ್ರಿಗಳಿಂದಲೂ ತುಂಬಾ ಜನ ಬಂದಿದ್ರು. ನಮ್ಮ ಇಡೀ ಕುಟುಂಬ ಅಭಿಮಾನಿಗಳಿಗೆ ಚಿರಋಣಿಯಾಗಿರುತ್ತೆ. ಮಾತ್ರವಲ್ಲದೇ ಕಳೆದ ಒಂದು ವರ್ಷದಿಂದಲೂ ಸರ್ಕಾರ ನಮ್ಮ ಬೆಂಬಲಕ್ಕೆ ನಿಂತಿದೆ ಹಾಗೂ ಪೊಲೀಸರಿಗೂ ಧನ್ಯವಾದಗಳು ಎಂದು ಅಶ್ವಿನಿ ಅವರು ಹೇಳಿದರು. 

ಗಂಧದಗುಡಿ ಎಂಬ ಟೈಟಲ್ ಯಾಕಿಡಬೇಕು: ಗಂಧದಗುಡಿ ಅಪ್ಪಾಜಿ ಮತ್ತು ಶಿವಣ್ಣ ಮಾಡಿದ್ರು ಅದರಲ್ಲಿ ಒಂದು ಕತೆ ಇತ್ತು. ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು ಹಾಗೂ ಜರ್ನಿಯಾಗಿದೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಮೂಲಕ ಈ ಸಿನಿಮಾವನ್ನು ಕನ್ನಡ ಜನತೆಗೆ ತೋರಿಸ್ಬೇಕು ಎಂದು ಅಪ್ಪು ಅವರೇ ನಿರ್ಧರಿಸಿದ್ದರು. ಚಿತ್ರದಲ್ಲಿ ಅವರಿಗೆ ಮೇಕಪ್​ ಇಲ್ಲ, ಹೆಚ್ಚು ಜನ ಇಲ್ಲ. ಇದರಲ್ಲಿ ಪುನೀತ್​ ಅವರನ್ನು ಅವರನ್ನಾಗಿಯೇ ನೋಡಬಹುದಾಗಿದೆ, ಪ್ರತಿ ಶೆಡ್ಯೂಲ್‌ಗೆ ಹೋಗುವಾಗಲೂ ಖುಷಿಯಾಗಿ ಹೋಗುತ್ತಿದ್ದೆ ಎಂದು ಅಶ್ವಿನಿ ಹೇಳಿದ್ದಾರೆ. 

Puneeth Parva ಪುನೀತ್ ಅಭಿಯನದ ಗಂಧದ ಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ!

ಗಂಧದಗುಡಿಯ ಎಷ್ಟು ಪೋರ್ಷನ್ಸ್‌ ಚಿತ್ರೀಕರಣಕ್ಕೆ ಹೋಗಿದ್ದೀರಾ ಎಂಬ ಸಂತೋಷ್ ಆನಂದ್ ರಾಮ್ ಪ್ರಶ್ನೆಗೆ, ನಾನು ಕಾಳಿ ರಿವರ್‌ನಲ್ಲಿ ನಡೆದ ಶೂಟಿಂಗ್​ಗೆ ಹೋಗಿದ್ದೆ. ಅಲ್ಲಿ ಶೂಟಿಂಗ್ ಇದ್ದಾಗ ಇಡೀ ದಿನ ಮಾತನಾಡಿರಲಿಲ್ಲ. ಒಂದು ಬೆಟ್ಟ ಹತ್ತಿ ನನಗೆ ಕಾಲ್ ಮಾಡಿದ್ದರು. ನಿನಗೆ ಕಾಲ್ ಮಾಡೊಕೆ ಬೆಟ್ಟ ಹತ್ತಿದ್ದೀನಿ ಎಂದು ಹೇಳಿದ್ದರು. ನೀನು ಇಲ್ಲಿಗೆ ಬರಲೇಬೇಕು ಅಂತ ಹೇಳಿದ್ದರು. ನಾನು ಎರಡು ದಿನ ಬಿಟ್ಟು ಅಲ್ಲಿಗೆ ಹೋದೆ. ಟ್ರಕ್ಕಿಂಗ್ ಮಾಡಿದ್ದು ನನಗೆ ಖುಷಿಯಾಯ್ತು ಎಂದು ಅಶ್ವಿನಿ ಅವರು ಮನಬಿಚ್ಚಿ ಮಾತಾಡಿದ್ದಾರೆ. ಇನ್ನು ಗಂಧದಗುಡಿ ಸಾಕ್ಷ್ಯಚಿತ್ರ ರಿಲೀಸ್ ಹಾಗೂ ಟಿಕೆಟ್ ಕುರಿತಂತೆ ಮಾತನಾಡಿದ ಅಶ್ವಿನಿ ಅವರು, ಈ ಗಂಧದ ಗುಡಿ ಚಿತ್ರ ನನಗೆ ಹೆಮ್ಮೆ ತಂದಿದೆ. ಒಂದು ಕಡೆ ಅವರಿಲ್ಲದ ಬೇಸರ ಕೂಡ ಇದೆ. ಇನ್ನು ಇದೇ 28ನೇ ತಾರೀಖು ಎಲ್ಲರೂ ಗಂಧದಗುಡಿ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ನಮಗೆ ಆಶೀರ್ವಾದ ಮಾಡಿ ಎಂದು ಇದೇ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮನವಿಯನ್ನು ಸಹ ಮಾಡಿದ್ದಾರೆ. 
 

click me!