Shiva 143 ಫ್ಯಾಮಿಲಿ ಭಾರ ಕಳಚಿ ನಟಿಸಿದ್ದೇನೆ: ಧೀರೆನ್ ರಾಮ್‌ಕುಮಾರ್

By Kannadaprabha News  |  First Published Aug 26, 2022, 9:49 AM IST

ಡಾ. ರಾಜ್‌ ಕುಟುಂಬದ ಕುಡಿ, ನಟ ರಾಮ್‌ಕುಮಾರ್‌ ಪುತ್ರ ಧೀರೇನ್‌ ರಾಮ್‌ಕುಮಾರ್‌ ಮೊದಲ ಚಿತ್ರ ‘ಶಿವ 143’ ಇಂದು ಬಿಡುಗಡೆಯಾಗುತ್ತಿದೆ. ಅನಿಲ್‌ ಕುಮಾರ್‌ ನಿರ್ದೇಶನದ, ಜಯಣ್ಣ-ಭೋಗೇಂದ್ರ ನಿರ್ಮಾಣದ ಈ ಚಿತ್ರಕ್ಕೆ ಮಾನ್ವಿತಾ ಕಾಮತ್‌ ನಾಯಕಿ. ಮೊದಲ ಚಿತ್ರದ ಕಷ್ಟಸುಖಗಳ ಬಗ್ಗೆ ಧೀರೇನ್‌ ಮಾತಾಡಿದ್ದಾರೆ.


ಪ್ರಿಯಾ ಕೆರ್ವಾಶೆ

ಮೊದಲ ಸಿನಿಮಾ ಬಿಡುಗಡೆಯ ಎಕ್ಸೈಟ್‌ಮೆಂಟ್‌?

Latest Videos

undefined

ಬಹಳ ನರ್ವಸ್‌ ಇದೆ. ಖುಷಿ, ಆತಂಕ, ಭಯ ಎಲ್ಲಾ ಇದೆ. ರಿಲೀಸ್‌ ಆಗುತ್ತೆ ಅಂತಿದ್ದದ್ದು ಆಗೇ ಬಿಡ್ತು ಅನ್ನುವಾಗ ಆಗೋ ಟೆನ್ಶನ್ನೇ ಬೇರೆ.

ಶಿವ 143 ಕತೆ ಕೇಳಿದಾಗ ಮನಸ್ಸಿಗೆ ಬಂದ ಮೊದಲ ಯೋಚನೆ?

ವ್ಹಾ ಎಂಥಾ ಕತೆ ಇದು. ಮರುಕ್ಷಣ ಅರಿವಿಲ್ಲದ ಹಾಗೆ ಆ ಪಾತ್ರದಲ್ಲಿ ನನ್ನನ್ನು ವಿಶುವಲೈಸ್‌ ಮಾಡಿಕೊಂಡು ಬಿಟ್ಟಿದ್ದೆ.

ಮೊದಲ ಸಿನಿಮಾವೇ ರೀಮೇಕ್ ಸಿನಿಮಾ ಏಕೆ? ಸ್ಟ್ರೈಟ್‌ ಸಬ್ಜೆಕ್ಟ್‌ ಯಾಕಿಲ್ಲ?

ಶಿವ 143 ಪಾತ್ರಕ್ಕೆ ನೀವು ರೆಡಿಯಾದ ರೀತಿ ಹೇಗಿತ್ತು?

ಅದೊಂದು ಕತೆ ಆಗಿತ್ತು. ಈ ಸಿನಿಮಾ ಕತೆ ಫೈನಲ್‌ ಆಗಿ ನಿರ್ದೇಶಕ ಅನಿಲ್‌ ಅವರನ್ನು ಮೊದಲ ಸಲ ಭೇಟಿಯಾದಾಗ ಅವರು ಕಕ್ಕಾಬಿಕ್ಕಿಯಾದರು. ಕ್ಲೀನ್‌ ಶೇವ್‌ನಲ್ಲಿ ನಾನವರ ಕಣ್ಣಿಗೆ ಚಾಕೊಲೇಟ್‌ ಹೀರೋ ಥರ ಕಂಡಿದ್ದೆ. ಇದಕ್ಕೆ ರಗಡ್‌ ಹೀರೋ ಬೇಕಿತ್ತು. ಗಡ್ಡ ಬೆಳೆಸೋದರಿಂದ ಹಿಡಿದು ಮಾನಸಿಕವಾಗಿಯೂ ಈ ಪಾತ್ರಕ್ಕೆ ಸಿದ್ಧವಾದ ರೀತಿ ನೆನೆಸಿಕೊಂಡರೆ ರೋಮಾಂಚನವಾಗುತ್ತೆ. ಸಿಕ್ಸ್‌ ಪ್ಯಾಕ್‌ ಮಾಡಿದೆ. ಗಡ್ಡ ಬೆಳೆಸಿದೆ. ವರ್ಕ್ಶಾಪ್‌ನಲ್ಲಿ ಡೈಲಾಗ್‌ ಡೆಲಿವರಿ ವ್ಯಾಕರಣ ಅರ್ಥ ಮಾಡಿಕೊಂಡೆ. ನನ್ನ ಬಗ್ಗೆ ನನಗೆ ಕಾನ್ಫಿಡೆನ್ಸ್‌ ಬಂದ ಮೇಲೆ ಶೂಟ್‌ಗೆ ಹೋದೆ. ಅಲ್ಲೂ ನಮ್ಮ ತಾತ, ಮಾವ, ಅಪ್ಪನ ಜೊತೆ ನಟಿಸಿದ್ದ ಪೋಷಕ ಕಲಾವಿದರಿದ್ದರು. ಎಷ್ಟೇ ತಯಾರಿ ಇದ್ದರೂ ಅವರೆದುರು ನಟಿಸುವಾಗ ನರ್ವಸ್‌ ಆಗುತ್ತಿತ್ತು. ಕ್ಲೈಮ್ಯಾಕ್ಸ್‌ ಶೂಟ್‌ ಸಖತ್‌ ಚಾಲೆಂಜಿಂಗ್‌ ಆಗಿತ್ತು.

ಮುಂದೆ ಇಂಥದ್ದೇ ಪಾತ್ರಗಳು ಬಂದರೆ?

ಮಾಸ್‌, ಕ್ಲಾಸ್‌, ಪ್ರಯೋಗಶೀಲ ಚಿತ್ರಗಳು, ಫ್ಯಾಮಿಲಿ ಸಬ್ಜೆಕ್ಟ್ ಯಾವ ಸಿನಿಮಾ ಬಂದರೂ ನಾನು ರೆಡಿ.

ನಿಮ್ಮ ಕುಟುಂಬದ ಹಿನ್ನೆಲೆ ಆಯ್ಕೆಯ ಸ್ವಾತಂತ್ರ್ಯಕ್ಕೆ ಅಡ್ಡಿ ಆಗಲ್ವಾ? ಗ್ರೇ ಶೇಡ್‌ ಇರುವ ಈ ಪಾತ್ರದ ಬಗ್ಗೆಯೇ ಕೆಲವರು ವಿರೋಧದ ಮಾತಾಡಿದ್ದಾರೆ..

ಜನ ಅರ್ಜುನ್‌ ರೆಡ್ಡಿಯಂಥಾ ಸಿನಿಮಾ ನೋಡಿ ಇಂಥಾ ಸಿನಿಮಾ ನಮ್ಮ ಕನ್ನಡದಲ್ಲಿ ಬರಬೇಕು ಅಂತಾರೆ. ಆದರೆ ನಾವು ಮಾಡಿದಾಗ ಹೀಗೆ ಮಾತಾಡ್ತಾರೆ, ಇದೆಷ್ಟುಸರಿ? ಟ್ರೆಂಡ್‌ಗೆ ತಕ್ಕಂತೆ ಸಿನಿಮಾ ನಾವು ಮಾಡಬೇಕು. ಸಿನಿಮಾ ಲ್ಯಾಂಗ್ವೇಜ್‌, ಸ್ಟೈಲ್‌ ಎಲ್ಲವೂ ಬದಲಾಗುತ್ತಿರುವಾಗ ನಾವೂ ಅಪ್‌ಡೇಟ್‌ ಆಗ್ಬೇಕು. ಹಳೆ ಕಾಲದ ಕೆಲವು ಸಂಗತಿಗಳಿಗೆ ಜೋತು ಬೀಳಬಾರದು.

ಜನರಿಗೆ ನಿಮ್ಮ ಸಿನಿಮಾ ಬಗ್ಗೆ ಇರೋ ನಿರೀಕ್ಷೆಗಳ ಬಗ್ಗೆ ಅರಿತುಕೊಂಡಿದ್ದೀರಾ?

ಹೌದು. ರಾಜ್‌ಕುಮಾರ್‌ ಮೊಮ್ಮಗನ ಸಿನಿಮಾ, ಶಿವಣ್ಣ, ಅಪ್ಪು, ರಾಘಣ್ಣ ಅವರ ಅಳಿಯನ ಸಿನಿಮಾ ಅಂತೆಲ್ಲ ತಿಳ್ಕೊಂಡಿದ್ದಾರೆ. ಆದರೆ ನಾವು ಅಂಥದ್ದನ್ನೆಲ್ಲ ಪಕ್ಕಕ್ಕಿಡಬೇಕು. ಕಷ್ಟಪಟ್ಟು, ಇಷ್ಟಪಟ್ಟು ಕೆಲಸ ಮಾಡಬೇಕು. ಈ ಲಗ್ಗೇಜ್‌ ಇಟ್ಕೊಂಡು ನಾವು ಶೂಟಿಂಗ್‌ಗೆ ಹೋದರೆ ನನಗೆ ಶೇ.100 ಶ್ರಮ ಹಾಕಿ ನಟಿಸೋದಕ್ಕಾಗಲ್ಲ. ಅದೇ ತಲೆಯಲ್ಲಿ ಕಾಡ್ತಾ ಇರುತ್ತೆ. ಖಾಲಿ ಕಾಗದದ ಥರ ಹೋಗಬೇಕು. ಆಗ ನಿರ್ದೇಶಕರಿಗೆ ಇವನಿಂದ ಏನು ತೆಗೆಸಬಹುದು ಅನ್ನೋ ಐಡಿಯಾ ಬರುತ್ತೆ. ನಾವು ಬ್ಯಾಗೇಜ್‌ ಜೊತೆ ಹೋದರೆ ಅವರ ಯೋಚನೆಗೆ ತಡೆ ಉಂಟಾಗುತ್ತೆ. ಇಷ್ಟೇ ಮಾಡಾಣ ಅಂದುಕೊಂಡು ಸುಮ್ಮನಾಗ್ತಾರೆ. ಆಗ ನಾವು ಪರಿಪೂರ್ಣ ನಟರಾಗೋದೂ ಸಾಧ್ಯವಾಗಲ್ಲ. ಇನ್ನೊಂದು, ಜನ ಸಿನಿಮಾದ ಗ್ಲಿಂಫ್ಸ್‌, ಹಾಡು ನೋಡಿ ಇದು ಹೀಗೆ ಅಂತೆಲ್ಲ ಜಡ್ಜ್‌ ಮಾಡಬಾರದು, ಬಂದು ಸಿನಿಮಾ ನೋಡಿ, ಆಗ ಆ ಸನ್ನಿವೇಶ ಯಾಕೆ ಬಂತು ಅಂತ ಗೊತ್ತಾಗುತ್ತೆ.

ಈ ಸಿನಿಮಾದಲ್ಲಿ ಕಾಮನ್‌ ಆಡಿಯನ್ಸ್‌ಗೆ ಕನೆಕ್ಟ್ ಆಗುವ ಅಂಶಗಳು?

ಮುಗ್ಧತೆ ಇದೆ. ಕಾಡುತ್ತೆ, ಪಾತ್ರದ ಗ್ರಾಫ್‌ ಕನೆಕ್ಟ್ ಆಗುತ್ತೆ. ಮುಗ್ಧ ಆಗಿದ್ದವನು ವೈಲೆಂಟ್‌ ಆಗ್ತಾನೆ, ಅವನಿಗೊಂದು ರಗಡ್‌ನೆಸ್‌ ಬರುತ್ತೆ, ಒರಟ ಆಗ್ತಾ ಹೋಗ್ತಾನೆ, ಒಂದು ಹಂತದಲ್ಲಿ ಮೆತ್ತಗಾಗ್ತಾನೆ. ಅಳಿಸ್ತಾನೆ, ನಗಿಸ್ತಾನೆ, ಕಾಡಿಸ್ತಾನೆ, ಕರುಣೆ ಉಕ್ಕಿಸುತ್ತಾನೆ.

ಚಿತ್ರದಲ್ಲಿ ನಿಮ್ಮ ಲಿಪ್‌ಲಾಕ್‌ ಸೀನ್‌ ವೈರಲ್‌ ಆಯ್ತು. ಫಸ್ಟ್‌ ಸಿನಿಮಾದಲ್ಲೇ ಈ ಥರ ದೃಶ್ಯದಲ್ಲಿ ನಟಿಸಿದ್ದು ಮುಜುಗರ ಅನಿಸಿತಾ?

ನಾರ್ಮಲ್‌ ಆಗಿ ತಗೊಂಡೆ. ಇದು ಜಸ್ಟ್‌ ಆ್ಯಕ್ಟಿಂಗ್‌ ಅನ್ನೋದು ತಲೆಯಲ್ಲಿತ್ತು. ಕೊಲೆ, ಫೈಟ್‌ ಸೀಕ್ವೆನ್ಸ್‌ ಥರನೇ ರೊಮ್ಯಾನ್ಸೂ ಒಂದು ಸೀಕ್ವೆನ್ಸ್‌. ಅಫ್‌ಕೋರ್ಸ್‌ ನಿರ್ದೇಶಕರು ಮಾನ್ವಿತಾಗೆ ಮುಜುಗರ ಆಗದಿರಲಿ ಅಂತ ಕಂಫರ್ಚ್‌ ಝೋನ್‌ ಸೆಟಪ್‌ ಮಾಡಿದರು. ನನಗೆ ಹಾಗೇನಿಲ್ಲ. ಅದು ಶಿವ ಮಾಡ್ತಿರೋದು ನಾನಲ್ಲ ಅಷ್ಟೇ.

click me!