ಗುಡ್‌ ಫ್ರೆಂಡ್‌ ಜೊತೆಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಷ್ಟು ಖುಷಿ ಆಗಿದೆ: Manisha Kandkur Interview

Published : Oct 31, 2025, 11:47 AM IST
Manisha Kandkur

ಸಾರಾಂಶ

ಕನ್ನಡದಲ್ಲಿ ‘ಬ್ರ್ಯಾಟ್‌’ ನನಗೆ ಮೊದಲ ಸಿನಿಮಾ. ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ರಾಜ್‌ ತರುಣ್‌ ಅಭಿನಯದ ‘ಭಲೇ ಉನ್ನಾಡೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾ ಬಿಡುಗಡೆ ಆಗಿದೆ ಎಂದು ನಟಿ ಮನೀಶಾ ಕಂದಕೂರ್‌ ಸಂದರ್ಶನದಲ್ಲಿ ಹೇಳಿದರು.

ಕೇಶವ

* ನಿಮ್ಮ ಹಿನ್ನೆಲೆ ಏನು?
ನಾನು ಮೂಲತಃ ಬೆಂಗಳೂರು ಹುಡುಗಿ. ನಮ್ಮದು ಬ್ಯುಸಿನೆಸ್‌ ಕುಟುಂಬ. ಸೇಂಟ್‌ ಜೋಸೆಫ್ ಕಾಲೇಜಿನಲ್ಲಿ ಬಿಬಿಎ ಓದಿದ್ದೇನೆ. ಕಾಲೇಜಿನಲ್ಲಿ ಓದುವಾಗಲೇ ಸಿನಿಮಾಗಳಲ್ಲಿ ನಟಿಸುವ ಆಸಕ್ತಿ ಬೆಳೆಸಿಕೊಂಡಿದ್ದೆ. ಓದುವ ಜತೆಗೆ ನಟನೆಯ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದೆ. ಹೀಗೆ ಕಾಲೇಜು ದಿನಗಳ ಆಸಕ್ತಿ ನನ್ನ ಚಿತ್ರರಂಗಕ್ಕೆ ಕರೆದುಕೊಂಡು ಬಂತು.

* ಬ್ರ್ಯಾಟ್‌ ನಿಮ್ಮ ಮೊದಲ ಚಿತ್ರ ಅಲ್ಲವಾ?
ಕನ್ನಡದಲ್ಲಿ ‘ಬ್ರ್ಯಾಟ್‌’ ನನಗೆ ಮೊದಲ ಸಿನಿಮಾ. ತೆಲುಗಿನಲ್ಲಿ ಒಂದು ಸಿನಿಮಾ ಮಾಡಿದ್ದೇನೆ. ರಾಜ್‌ ತರುಣ್‌ ಅಭಿನಯದ ‘ಭಲೇ ಉನ್ನಾಡೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದೇನೆ. ಆ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ನಂತರ ನನಗೆ ‘ಬ್ರ್ಯಾಟ್‌’ ಸಿನಿಮಾ ಅವಕಾಶ ಸಿಕ್ಕಿದ್ದು.

* ಬ್ರ್ಯಾಟ್‌ ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರುತ್ತದೆ?
ಹೆಚ್ಚು ಮಾತನಾಡದ, ಸಿಂಪಲ್‌ ಹಾಗೂ ಸೈಲೆಂಟ್‌ ಹುಡುಗಿ ಪಾತ್ರ ನನ್ನದು. ತುಂಬಾ ಜನ ಹೆಣ್ಣು ಮಕ್ಕಳು ನನ್ನ ಪಾತ್ರವನ್ನು ಅವರಿಗೇ ಕನೆಕ್ಟ್‌ ಮಾಡಿಕೊಳ್ಳುತ್ತಾರೆ. ಅಷ್ಟು ಸಹಜವಾಗಿ ನನ್ನ ಪಾತ್ರ ಮೂಡಿ ಬಂದಿದೆ. ಇದಕ್ಕೆ ಕಾರಣ ನಿರ್ದೇಶಕ ಶಶಾಂಕ್‌ ಅವರು. ಅವರಿಗೆ ತಮ್ಮ ಕತೆ, ಪಾತ್ರಗಳು ಹಾಗೂ ಸನ್ನಿವೇಶಗಳು ಮತ್ತು ಆ ದಿನ ಯಾವುದನ್ನು ಶೂಟ್‌ ಮಾಡಬೇಕು ಎನ್ನುವ ತುಂಬಾ ಕ್ಲ್ಯಾರಿಟಿ ಇರುತ್ತದೆ.

* ಈ ಚಿತ್ರಕ್ಕೆ ನೀವು ಕನೆಕ್ಟ್‌ ಆಗಿದ್ದು ಹೇಗೆ?
ನಾನು ಕಾಲೇಜಿನಲ್ಲಿರುವಾಗಲೇ ಸಿನಿಮಾಗಳಿಗೆ ಹೋಗಿ ಆಡಿಷನ್‌ ಕೊಡುತ್ತಿದ್ದೆ. ಆ ಪ್ರಯತ್ನದಲ್ಲಿ ಶಶಾಂಕ್‌ ಅವರ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೂ ಆಡಿಷನ್ ಕೊಟ್ಟಿದ್ದೆ. ಆ ಚಿತ್ರದಲ್ಲಿ ಬೃಂದಾ ಆಚಾರ್ಯ ಮಾಡಿದ ಪಾತ್ರ ನಾನು ಮಾಡಬೇಕಿತ್ತು. ಆದರೆ, ನನಗೆ ಅವಕಾಶ ಸಿಗಲಿಲ್ಲ. ಈ ಆಡಿಷನ್‌ ನನ್ನ ‘ಬ್ರ್ಯಾಟ್‌’ಗೆ ಕನೆಕ್ಟ್‌ ಮಾಡಿತು.

* ನಿರ್ಮಾಪಕ ಮಂಜುನಾಥ್‌ ವಿ ಕಂದಕೂರ್‌ ನಿಮ್ಮ ಚಿಕ್ಕಪ್ಪ ಆಗಿದ್ದರಿಂದ ನಿಮಗೆ ಅವಕಾಶ ಸಿಕ್ಕಿತಾ?
ಅಯ್ಯೋ ಹಾಗೇನು ಇಲ್ಲ. ಈ ಚಿತ್ರದಲ್ಲಿನ ಪಾತ್ರಕ್ಕೆ ನಾನು ಸೂಟ್‌ ಆಗುತ್ತೇನೆ ಎಂದು ನಿರ್ದೇಶಕ ಶಶಾಂಕ್‌ ಹೇಳಿದ ಮೇಲೆ ನಾನು ‘ಬ್ರ್ಯಾಟ್‌’ ಚಿತ್ರಕ್ಕೆ ನಾಯಕಿ ಆಗಿದ್ದು. ಹೀಗಾಗಿ ನಾನು ನಾಯಕಿ ಆಗಿದ್ದರ ಹಿಂದೆ ಯಾವ ಶಿಫಾರಸ್ಸು, ರಿಯಾಯಿತಿಯೂ ಇಲ್ಲ.

* ಬ್ರ್ಯಾಟ್‌ ಕತೆ ಬಗ್ಗೆ ಹೇಳುವುದಾದರೆ?
ಇದು ಕಂಪ್ಲೀಟ್‌ ಆ್ಯಕ್ಷನ್‌ ಹಾಗೂ ಡ್ರಾಮಾ ಸಿನಿಮಾ. ಕ್ರಿಕೆಟ್‌, ಯಂಗ್‌ ಜನರೇಷನ್‌ ಸುತ್ತಾ ಸಿನಿಮಾ ಸಾಗುತ್ತದೆ. ಕತೆಗೆ ಕ್ರಿಕೆಟ್‌ ಹೇಗೆ ಸಂಬಂಧ ಎಂಬುದು ಸಿನಿಮಾ ನೋಡಿ ತಿಳಿಯಬೇಕು.

* ಡಾರ್ಲಿಂಗ್‌ ಕೃಷ್ಣ ಜೊತೆಗೆ ನಟಿಸಿದ ಅನುಭವ ಹೇಗಿತ್ತು?

ಈ ಚಿತ್ರದ ಮೊದಲ ದಿನ ಚಿತ್ರೀಕರಣ ಮಾಡಿದ್ದು ಕೆಫೆಯಲ್ಲಿ ಬರುವ ದೃಶ್ಯ. ಆಗ ನಾನು ತುಂಬಾ ನರ್ವಸ್‌ ಆಗಿದ್ದೆ. ಡಾರ್ಲಿಂಗ್‌ ಕೃಷ್ಣ ಅವರೇ ಕಂಫರ್ಟ್‌ ಮಾಡಿದರು. ಹೀಗೆ ಪ್ರತಿ ಹಂತದಲ್ಲೂ ಸಪೋರ್ಟ್‌ ಮಾಡುತ್ತಿದ್ದರು. ಗುಡ್‌ ಫ್ರೆಂಡ್‌ ಜೊತೆಗೆ ಸ್ಕ್ರೀನ್‌ ಶೇರ್‌ ಮಾಡಿಕೊಂಡಷ್ಟು ಖುಷಿ ಆಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

GST ಸಿನಿಮಾದಲ್ಲಿ ಪ್ರೇಕ್ಷಕರು ಏನನ್ನು ನೋಡಬಹುದು? ಕಂಟೆಂಟ್‌ ಮುಖ್ಯ ಎಂದಿದ್ಯಾಕೆ ಸೃಜನ್‌ ಲೋಕೇಶ್‌?
ಸುದೀಪ್‌ 12 ದಿನ ಕೂತು ಸಿನಿಮಾ ಎಡಿಟ್‌ ಮಾಡಿಸಿದ್ರು: ‘ಫ್ಲರ್ಟ್’ ಕುರಿತು ಚಂದನ್ ಕುಮಾರ್ ನೇರ ಮಾತು